ಆಯುರ್ವೇದ ಚಿಕಿತ್ಸಾ ತತ್ತ್ವಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೫ ನೇ ಸಾಲು:
ತ್ರಿಕಟು, ತ್ರಿಫಲ, ಕಟುಕ ರೋಹಿಣಿ, [[ಬಜೆ]], [[ಒಂದೆಲಗ|ಬ್ರಾಹ್ಮಿ]], [[ಲವಣ]], [[ಜೀರಿಗೆ]], [[ವಾದಕ್ಕಿ]], [[ಚಿತ್ರಮೂಲ]], [[ಕೊತ್ತುಂಬರಿ|ಕೊತ್ತಂಬರಿ]], [[ಅರಿಸಿನ|ಅರಿಶಿಣ]], ಹೆಗ್ಗುಳ್ಳ, ನೆಲಗುಳ್ಳ, ಶಿಲಾಜಿತು ಎಂಬ ಔಷಧ ದ್ರವ್ಯಗಳೂ ಯವಧಾನ್ಯ, ಮಜ್ಜಿಗೆ, ಜೇನುತುಪ್ಪ ಮುಂತಾದ ಪದಾರ್ಥಗಳೂ ಲಂಘನಚಿಕಿತ್ಸೆಗೆ ಉಪಯುಕ್ತವಾದುವು. ಲಂಘನಚಿಕಿತ್ಸೆಯಿಂದ ಇಂದ್ರಿಯಗಳ ಶುದ್ಧಿ, ಮಲಮೂತ್ರಗಳ ಸರಿಯಾದ ವಿಸರ್ಜನೆ, ಶರೀರ ಲಾಘವ, [[ಹಸಿವು]] ಬಾಯಾರಿಕೆ ತೋರುವುವು. ಸರಿಯಾದ ಹೃದಯಕ್ರಿಯೆ, ಶುದ್ಧವಾಗಿ ತೇಗು ಬರುವುದು, ಉತ್ಸಾಹ ಉಂಟಾಗುವುದು, ತೂಕಡಿಕೆ ನಿವಾರಣೆಯಾಗುವುದು, ಹೃದ್ರೋಗ, ಕಾಮಾಲೆ, ಉಬ್ಬಸ, ಕಾಸ, ಗಳಗ್ರಹ ವ್ಯಾಧಿಗಳ ನಿವಾರಣೆಯೂ ಉಂಟಾಗುತ್ತವೆ. ಧಾರಣಾಶಕ್ತಿ, ಜ್ಞಾಪಕಶಕ್ತಿಗಳು ಉಂಟಾಗುತ್ತದೆ; ಮತ್ತು ಅಗ್ನಿದೀಪ್ತಿ ಉಂಟಾಗುತ್ತದೆ.
 
ಆಗಂತು ರೋಗಗಳಿಗೆ ಸದಸದ್ವಿವೇಕ, ಬುದ್ಧಿಯ ವಿರುದ್ಧ ಆಚರಣೆಯನ್ನು ತ್ಯಾಗ ಮಾಡುವುದು. ಇಂದ್ರಿಯಗಳ ವೈರಾಗ್ಯ, ದೇಶ ಕಾಲಗಳ, ಶಾಸ್ತ್ರ ಸ್ಮøತಿಗಳಸಂಸ್ಕ್ರತಿಗಳ, ಸಜ್ಜನರ ಆಚಾರಗಳನ್ನು ಅನುಸರಿಸುವುದು, [[ಗ್ರಹ|ಗ್ರಹಗಳ]] [[ಪೂಜೆ]], ಹಿರಿಯರು ಗುರುಗಳಲ್ಲಿ ಭಕ್ತಿ ಮತ್ತು ಪೂಜೆ--ಇವೇ ಮುಂತಾದ ರೀತಿಗಳಿಂದ ಮಾನಸಿಕ ಮತ್ತು ಆಗಂತುರೋಗಗಳನ್ನು ಚಿಕಿತ್ಸೆ ಮಾಡತಕ್ಕದ್ದು.
 
ಮೇಲೆ ಹೇಳಿದ ಚಿಕಿತ್ಸಾ ತತ್ತ್ವಗಳನ್ನು ಆರು ವಿಧಗಳಾಗಿ ವಿಂಗಡಿಸಿದೆ. 1. ಹೇತು ವಿಪರೀತ ಚಿಕಿತ್ಸೆ, 2. ವ್ಯಾಧಿ ವಿಪರೀತ ಚಿಕಿತ್ಸೆ, 3. ಹೇತು--ವ್ಯಾಧಿ ವಿಪರೀತ ಚಿಕಿತ್ಸೆ, 4. ಹೇತುತದರ್ಥಕಾರಿ ಚಿಕಿತ್ಸೆ, 5. ವ್ಯಾಧಿ ತದರ್ಥಕಾರಿ ಚಿಕಿತ್ಸೆ, 6. ಹೇತು-- ವ್ಯಾಧಿ ತದರ್ಥಕಾರಿ ಚಿಕಿತ್ಸೆ.<ref>http://veda-vijnana.blogspot.in/2013_11_01_archive.html</ref>
೪೮ ನೇ ಸಾಲು:
ಮೇಲ್ಕಂಡ ಆಯುರ್ವೇದ ರೀತ್ಯಾ ರೋಗ ನಿರ್ಣಯ ಮತ್ತು ಚಿಕಿತ್ಸಾ ಕ್ರಮಗಳು ಹೇಳಲ್ಪಟ್ಟಿವೆ. ಇವು ತ್ರಿದೋಷಗಳಿಂದ ಅವಲಂಬಿತವಾಗಿವೆ. ಈ ನಿರ್ಧಾರಕ್ರಮಗಳು ನಿಷ್ಕøಷ್ಟ ಜ್ಞಾನದಿಂದ ಕೂಡಿವೆ. ಆದ್ದರಿಂದ ಊಹೆಗಳಿಗೆ ಅವಕಾಶ ಕೊಡದೆ, ಸರಿಯಾಗಿ ರೋಗಗಳ ಲಕ್ಷಣ ಮತ್ತು ಕಾರಣಗಳನ್ನು ಅರಿತುಕೊಂಡು, ಅವಕ್ಕೆ ತಕ್ಕ ರೀತಿಯಲ್ಲಿ ದ್ರವ್ಯೌಷಧಿಗಳನ್ನು ಉಪಯೋಗಿಸಿ ಆಹಾರ ವಿಹಾರಗಳಲ್ಲಿ ಮಿತವಾಗಿದ್ದು ಚಿಕಿತ್ಸೆ ಮಾಡಿದರೆ ಬಾಹ್ಯ, ಶಾರೀರಿಕ ಮತ್ತು ಮಾನಸಿಕ ರೋಗಗಳು ಶಮನವಾಗುತ್ತವೆ. ದೀರ್ಘಕಾಲ ಆಯುಷ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಅಕಾಲಮರಣಗಳಿಂದ ಪಾರಾಗಿ ಬಹುಕಾಲ ಬದುಕಿ ದೇಶಗಳನ್ನು ಸಂಪದ್ಭರಿತವನ್ನಾಗಿ ಮಾಡಬಹುದು.
 
ವೈದ್ಯನ ಲಕ್ಷಣ, ವೈದ್ಯ ನೀತಿ: ಆಳವಾದ ಶಾಸ್ತ್ರಜ್ಞಾನ, ಉತ್ಕøಷ್ಟವಾದಉತ್ಕೃಷ್ಟವಾದ ಪ್ರತ್ಯಕ್ಷಾನುಭವ, ಹಸ್ತಶುದ್ಧಿ, ವೃತ್ತಿ ಪಾಲನೆಗೆ ಬೇಕಾಗುವ ಉಪಕರಣಾದಿಗಳನ್ನು ಹೊಂದಿರುವುದು, ಸರ್ವೇಂದ್ರಿಯ ಸಂಪನ್ನತೆ, ಶರೀರದ ಪ್ರಾಕೃತಜ್ಞಾನ, ವ್ಯಾಧಿ ಕಾಲದ ಅಪತ್ಸಂದರ್ಭಗಳಲ್ಲಿ ಧೈರ್ಯದಿಂದ ಯುಕ್ತಕರ್ಮಗಳನ್ನು ಮಾಡುವ ಶಕ್ತಿ, ಶುಚಿತ್ವ, ಕಾರ್ಯದಕ್ಷತೆ ಮತ್ತು ಭೂತದಯೆ-ಇವು ವೈದ್ಯನ ಲಕ್ಷಣಗಳು. ಈ ಲಕ್ಷಣಗಳನ್ನುಳ್ಳ ವೈದ್ಯ ರೋಗವನ್ನು ನಿವಾರಿಸಿ ಪ್ರಾಣವನ್ನು ಕಾಪಾಡುತ್ತಾನಾದ್ದರಿಂದ ಆತ ಪ್ರಾಣಾಭಿಸರ ವೈದ್ಯನೆನಿಸುತ್ತಾನೆ. ಇಂಥ ಕಲ್ಯಾಣಗುಣಗಳನ್ನು ಹೊಂದಿರದೆ ರೋಗವನ್ನು ಹಿಂಬಾಲಿಸಿ ಕೊನೆಗೆ ಪ್ರಾಣವನ್ನೇ ನಾಶಮಾಡುವ ರೋಗಾಭಿಸರ ವೈದ್ಯರೆಂಬುವರು ಮತ್ತೊಂದು ವಿಧ. ಇವರಲ್ಲಿ ಸಿದ್ಧಿ ಸಾಧಕರು ಮತ್ತು ಛದ್ಮಚರರೆಂಬುದಾಗಿ ಪುನಃ ಎರಡು ವಿಧ. ಜ್ಞಾನಿಗಳು, ಪ್ರಖ್ಯಾತಪುರುಷರು, ಸಿದ್ಧರು ಮುಂತಾದವರೊಡನೆ ತಮ್ಮ ಸಂಬಂಧವನ್ನು ಮೇಲಿಂದಮೇಲೆ ಹೇಳಿಕೊಳ್ಳುತ್ತ ತಾವೂ ಕುಶಲವೈದ್ಯರೆಂದು ಪ್ರಶಂಸೆ ಮಾಡಿಕೊಳ್ಳುವವರು - ಸಿದ್ಧಿಸಾಧಕರು. ದೊಡ್ಡ ದೊಡ್ಡ ಗ್ರಂಥಗಳು, ಔಷಧಗಳು ಮತ್ತು ಉಪಕರಣಗಳು- ಮುಂತಾದುವನ್ನು ಪ್ರದರ್ಶಿಸುತ್ತ ತಾವು ಶಾಸ್ತ್ರಜ್ಞರೆಂದು ನಟಿಸುವವರು ಛದ್ಮಚರರು. ಇವರಿಬ್ಬರೂ ಅಜ್ಞರೂ ಪ್ರಾಣಘಾತಕರೂ ಆಗಿರುತ್ತಾರೆ.
 
ಶಾಸ್ತ್ರದೃಷ್ಟಿ ಮತ್ತು ಪ್ರತ್ಯಕ್ಷದೃಷ್ಟಿಗಳೆರಡನ್ನೂ ಹೊಂದಿರುವ ವೈದ್ಯನ ಜ್ಞಾನ ಅಭಿವೃದ್ಧಿಯಾಗುತ್ತದೆ. ಒಂದೇ ಶಾಸ್ತ್ರವನ್ನು ಓದಿರುವವ ಅನೇಕವೇಳೆ ದೃಢ ನಿರ್ಧಾರವನ್ನು ಕೈಗೊಳ್ಳಲು ಅಸಮರ್ಥನಾಗುತ್ತಾನಾದ್ದರಿಂದ ವೈದ್ಯ ಅನೇಕ ಶಾಸ್ತ್ರಗಳನ್ನು ತಿಳಿದವನಾಗಿರಬೇಕು. ಉತ್ತಮ ಸ್ಮರಣಶಕ್ತಿಯುಳ್ಳವನೂ ರೋಗಗಳ ಕಾರಣ ಮತ್ತು ಸ್ವರೂಪವನ್ನು ತಿಳಿದವನೂ ಜಿತೇಂದ್ರಿಯನೂ ಆಪತ್ಕಾಲದಲ್ಲಿ ಧೃತಿಗೆಡದೆ ಚಿಕಿತ್ಸೆ ಮಾಡುವವನೂ ಉತ್ಕøಷ್ಟಉತ್ಕೃಷ್ಟ ಔಷಧ ಸಂಗ್ರಹವುಳ್ಳವನೂ ಆದ ವೈದ್ಯ ಮಾತ್ರ ಚಿಕಿತ್ಸೆ ಮಾಡಲು ಅರ್ಹನಾಗುತ್ತಾನೆ.
 
ರೋಗವೆಂಬ ಕೆಸರಿನಲ್ಲಿ ಬಿದ್ದು ನರಳುತ್ತಿರುವವರನ್ನು ಮೇಲೆತ್ತಲು ವೈದ್ಯ ಸಹಾಯಹಸ್ತ. ಜೀವದಾನಕ್ಕಿಂತ ಮಿಗಿಲಾದ ದಾನ ಬೇರೊಂದಿಲ್ಲ. ಭೂತ ದಯೆಯೇ ವೈದ್ಯವೃತ್ತಿಯ ತಿರುಳು.
೬೪ ನೇ ಸಾಲು:
ರೋಗಿಯ ಪರೀಕ್ಷೆ: ಈ ವಿಷಯದಲ್ಲಿ ಆಯುರ್ವೇದ ಶಾಸ್ತ್ರ ಎರಡು ಪದ್ಧತಿಗಳನ್ನು ತಿಳಿಸಿದೆ.
 
1. ತ್ರಿವಿಧ ಪರೀಕ್ಷಾಪದ್ಧತಿ-ಕ್ರಿ.ಪೂ. ಸುಮಾರು 6-7ನೆಯ ಶತಮಾನದಲ್ಲಿದ್ದನೆಂದು ಹೇಳಲಾಗುವ ಮಹರ್ಷಿ ಪುನರ್ವಸು ಆತ್ರೇಯನಿಂದ ಪ್ರತಿಪಾದಿಸಲ್ಪಟ್ಟ ಆರ್ಷ ಪದ್ಧತಿ. ಆಪ್ತೋಪದೇಶ, ಪ್ರತ್ಯಕ್ಷ ಮತ್ತು ಅನುಮಾನಗಳೆಂಬ ಮೂರು ಮುಖ್ಯ ಪ್ರಮಾಣಗಳನ್ನೇ ಆಧರಿಸಿ ರೋಗಿಯನ್ನು ಪರೀಕ್ಷಿಸುವುದು ಇದರ ಮುಖ್ಯ ಲಕ್ಷಣ. ಶಾಸ್ತ್ರಗ್ರಂಥಗಳ ಅಧ್ಯಯನ, ಗುರುಗಳು, ಪರಿಣತರು ಮತ್ತು ಆಪ್ತರುಗಳ (ರೋಗಕಾಲದಲ್ಲಿ ರೋಗಿಯೂ ಒಬ್ಬ ಆಪ್ತ) ಹೇಳಿಕೆಗಳಿಂದ ರೋಗಜ್ಞಾನವನ್ನು ಪಡೆಯುವುದು ಆಪ್ತೋಪದೇಶ; ವೈದ್ಯ ತನ್ನ ಪಂಚ ಜ್ಞಾನೇಂದ್ರಿಯಗಳನ್ನೇ ಉಪಯೋಗಿಸಿ ರೋಗಿಯ ಶರೀರವನ್ನು ವಿಶದವಾಗಿ ಪರೀಕ್ಷಿಸುವುದರ ಮೂಲಕ ರೋಗಜ್ಞಾನವನ್ನು ಹೊಂದುವುದು ಪ್ರತ್ಯಕ್ಷ ಪ್ರತ್ಯಕ್ಷ ಪರೀಕ್ಷೆಯ ವ್ಯಾಪ್ತಿಗೆ ಒಳಪಡದ ವಿಷಯಗಳನ್ನು, ತರ್ಕ, ಯುಕ್ತಿ, ಪ್ರಶ್ನೆಗಳಿಂದ ತಿಳಿದುಕೊಳ್ಳುವುದು ಅನುಮಾನ--ಈ ಮೂರರಲ್ಲಿ ಪ್ರತ್ಯಕ್ಷ ಪರೀಕ್ಷೆಗೆ ಹೆಚ್ಚು ಪ್ರಾಮುಖ್ಯ.
 
ಪ್ರತ್ಯಕ್ಷಪರೀಕ್ಞೆಯಲ್ಲಿ ಚಕ್ಷುರಿಂದ್ರಿಯದಿಂದ ಶರೀರದ ವರ್ಣ, ಅಂಗಾಂಗಗಳ ಆಕಾರ ಮತ್ತು ಪ್ರಮಾಣಗಳು ಶ್ರೋತ್ರೇಂದ್ರಿಯದಿಂದ ಸ್ವರ ಮತ್ತು ಅಂಗಾವಯವಗಳಲ್ಲಾಗುವ ಶಬ್ದಗಳೂ ಘ್ರಾಣೇಂದ್ರಿಯದಿಂದ ಗಂಧವೂ ಸ್ಪರ್ಶನೇಂದ್ರಿಯದಿಂದ ಶೀತೋಷ್ಣಾದಿಗುಣಗಳು, ಸ್ಪಂದನಾದಿ ಚೇಷ್ಟೆಗಳು, ರುಜಾ, ಸುಪ್ತಿ ಮುಂತಾದ ವೇದನೆಗಳು ತಿಳಿಯುತ್ತವೆ. ರಸವೇಂದ್ರಿಯವನ್ನೇ ನೇರವಾಗಿ ಪರೀಕ್ಷೆಯಲ್ಲಿ ಉಪಯೋಗಿಸುವುದು ಅನುಚಿತವಾದ ಕಾರಣ ರಸಜ್ಞಾನವನ್ನು ಅನುಮಾನದಿಂದ ತಿಳಿಯಬೇಕು.