ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೨೧೨ ನೇ ಸಾಲು:
* [[ಈದ್-ಉಲ್-ಅದಾ]] ([[ಬಕ್ರೀದ್]])
== ಜಿಹಾದ್ ==
'''[[ಇಸ್ಲಾಮ್]]''' ಧರ್ಮದಲ್ಲಿ '''[[ಜಿಹಾದ್]]''' ಅಂದರೆ ಹೋರಾಡು ಎಂದರ್ಥ. ತನ್ನ ಕಾಮನೆಗಳ ವಿರುದ್ಧ ಹೋರಾಡುವುದು ಒಂದು '''[[ಜಿಹಾದ್]]''' ಆಗಿದೆ. ಇದು ಅತಿ ದೊಡ್ಡ ಜಿಹಾದ್ ಎಂದು ಪ್ರವಾದಿ ವಚನ. ಈಗಿರುವಂತೆ ಭಯೋತ್ಪಾದನಾ ಕೃತ್ಯಗಳಿಗೂ ಜಿಹಾದಿಗೆ ಯಾವುದೆ ಸಂಬಂಧವಿಲ್ಲ. '''[[ಜಿಹಾದ್]]''' ಎಂಬ ಪದವು ಬಹಳ ಗಾಢವಾದ ಅರ್ಥವನ್ನು ಹೊಂದಿದೆ.
 
==ಇಸ್ಲಾಂ ತುಳಿದು ಬಂದ ಹಾದಿ==
ಸರಿಸುಮಾರು ೧೪೫೦ ವರ್ಷಗಳ ಹಿಂದೆ ಅರೇಬಿಯಾ ಮರುಭೂಮಿಯಲ್ಲಿರುವ ಮಕ್ಕಾನಗರಿಯ ಇತಿಹಾಸವು ಅತ್ಯದ್ಭುತ ತಿರುವನ್ನು ಕಂಡಿತು. ತನ್ನ ಬಾಲ್ಯದಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದವru ತನ್ನ ೪೦ನೇ ವಯಸ್ಸಿನಲ್ಲಿ ಮರಳುಗಾಡಿನಲ್ಲಿ ಕ್ರಾಂತಿಯ ಬಿರುಗಾಳಿಯನ್ನೆಬ್ಬಿಸಿದ ರೋಚಕ ಕಥೆಯಿದು. ಅಚ್ಚರಿ ಮೂಡಿಸುವ ಈ ಕ್ರಾಂತಿಯು ಬಿರುಗಾಳಿಯಂತೆ ಅಖಂಡ ಅರಬ್ ದೇಶ ಮಾತ್ರವಲ್ಲ ಇಡೀ ಜಗತ್ತನ್ನೇ ವ್ಯಾಪಿಸಿತು.ತಂದೆಯ ಮುಖವನ್ನು ನೋಡದ ಬಾಲ್ಯದಲ್ಲೇ ತಾಯಿಯ ವಿಯೋಗದ ವೇದನೆಯನ್ನನುಭವಿಸಿದ ಮತ್ತದರ ಬೆನ್ನಲ್ಲೇ ಪ್ರೀತಿಯ ತಾತರನ್ನೂ ಕಳಕೊಂಡು ಒಬ್ಬಂಟಿಗನಾಗಿ ಸಂಕಷ್ಟದಲ್ಲಿ ಸಿಲುಕಿದ ಓರ್ವ ನಿರಕ್ಷರಿ ಅನಾಥನ ಮೂಲಕ ಮಾನವ ಜಗತ್ತಿಗೆ ದೊರೆತ ಅನುಗ್ರಹೀತ ಹಾಗೂ ಅವಿಸ್ಮರಣೀಯ ಕ್ರಾಂತಿಯ ಕಥೆಯಿದು. ಈ ಕ್ರಾಂತಿಯ ಹೆಸರೇ'ಇಸ್ಲಾಂ'ಆಗಿದೆ. ಆದಿ ಮಾನವನೂ ಮೊತ್ತ ಮೊದಲ ಪ್ರವಾದಿಯೂ ಆದ ಹ. ಆದಮ್ (ಅ)ರಿಂದ ಹಿಡಿದು ಮಾನವ ಮಾರ್ಗದರ್ಶನಕ್ಕಾಗಿ ಹಂತ ಹಂತವಾಗಿ ಆಗಮಿಸುತ್ತಿದ್ದ ಪ್ರವಾದಿಗಳ ಸರಪಳಿಯ ಕೊನೆಯ ಕೊಂಡಿಯಾಗಿ ಈ ಮಹಾನ್ ಕ್ರಾಂತಿಕಾರಿ ಪ್ರವಾದಿಯು ಜಗತ್ತಿಗಾಗಮಿಸಿದರು. ಅವರೇನೂ ಹೊಸ ಸಂದೇಶವನ್ನು ನೀಡಲಿಲ್ಲ ಬದಲಾಗಿ ತನಗಿಂತ ಮುಂಚೆ ಪ್ರತ್ಯೇಕ ಕಾಲ ಮತ್ತು ಸಮುದಾಯಗಳಲ್ಲಿ ಆಗಮಿಸುತ್ತಿದ್ದ, ಪ್ರವಾದಿಗಳೆಂದು ಕರೆಯಲ್ಪಡುತ್ತಿದ್ದ ಸತ್ಪುರುಷರು ನೀಡಿದ "ಏಕ ಮತ್ತು ನೈಜ ಆರಾಧ್ಯನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ" ಎಂಬ ಸಂದೇಶವನ್ನೇ ಅವರೂ ಸಾರಿದರು. [[ಆಡಮ್]] ಎಂದು ನಾಮಾಂಕಿತರಾದ ಹ.ಆದಂ, ನೋಹಾ ಎಂದು ಕರೆಯಲ್ಪಡುವ ಹ.ನೂಹ್, ಅಬ್ರಹಾಂ ಎಂದು ಪ್ರಸಿದ್ಧರಾದ ಹ.ಇಬ್ರಾಹೀಂ, ಡೇವಿಡ್ ಎಂದು ಪ್ರಖ್ಯಾತ ರಾದ ಹ.ದಾವೂದ್, ಮೋಸೆಸ್ ಎಂದು ನಾಮಪಡೆದ ಹ.ಮೂಸಾ, ಏಸುಕ್ರಿಸ್ತ ಎಂದು ಆರಾಧ್ಯ ಪಟ್ಟಕ್ಕೇರಿ ಸಲ್ಪಟ್ಟ ಹ. [[ಈಸಾ]] ಈ ಏಲ್ಲಾ ಗತಕಾಲದ ಪ್ರವಾದಿಗಳೂ ಇದೇ ಸಂದೇಶವನ್ನು ತನ್ನ ತನ್ನ ಸಮುದಾಯಗಳ ಮುಂದಿಟ್ಟಿದ್ದರು.
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ