"ತಮಿಳುನಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
'''ತಮಿಳುನಾಡು(தமிழ்நாடு)''' ಭಾರತದ ದಕ್ಷಿಣ ತುದಿಯಲ್ಲಿರುವ ರಾಜ್ಯ. ಭಾರತ ಗಣರಾಜ್ಯದ ದಕ್ಷಿಣದ ಒಂದು ರಾಜ್ಯ.ಚೆನ್ನೈ ತಮಿಳುನಾಡಿನ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ.
ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಂದರೆ [[ಪಾಂಡಿಚೆರಿಪಾಂಡಿಚೇರಿ]], [[ಕೇರಳ]], [[ಕರ್ನಾಟಕ]] ಮತ್ತು [[ಆಂಧ್ರ ಪ್ರದೇಶ]]. ದಕ್ಷಿಣಪೂರ್ವಕ್ಕೆ ಹಿಂದೂ ಮಹಾಸಾಗರದಲ್ಲಿ [[ಶ್ರೀಲಂಕಾ]] ರಾಷ್ಟ್ರವಿದೆ.
ತಮಿಳುನಾಡು ಉತ್ತರದಲ್ಲಿ ಪೂರ್ವ ಘಟ್ಟಗಳಿಂದ, ಪಶ್ಚಿಮದಲ್ಲಿ ನೀಲಗಿರಿ ಮಲೆಗಳು, ಆನಮಲೆ ಹಾಗು ಪಾಲಕ್ಕಾಡಿನಿಂದ, ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ, ಆಗ್ನೇಯದಲ್ಲಿ ಮನ್ನಾರ್ ಖಾರಿ, ಪಾಲ್ಕ್ ಜಲಸಂಧಿಯಿಂದ, ದಕ್ಷಿಣದಲ್ಲಿ [[ಹಿಂದು ಮಹಾಸಾಗರ]]ದಿಂದ ಸುತ್ತುವರೆಯಲ್ಪಟ್ಟಿದೆ. ತಮಿಳುನಾಡು ವಿಸ್ತೀರ್ಣದಲ್ಲಿ ಭಾರತದ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಏಳನೆಯ ಅತಿ ದೊಡ್ಡ ರಾಜ್ಯವಾಗಿದೆ. ತಮಿಳುನಾಡು ನಿವ್ವಳ ದೇಶೀಯ ಉತ್ಪನ್ನಕ್ಕೆ ಐದನೆಯ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ.ತಮಿಳುನಾಡು ಭಾರತದಲ್ಲಿ ಅತಿ ಹೆಚ್ಚು(೧೦.೫೬%) ವ್ಯಾಪಾರ ಉದ್ಯಮಗಳನ್ನು ಹೊಂದಿದೆ. ತಮಿಳುನಾಡು ಹಲವು ನೈಸರ್ಗಿಕ ಸಂಪನ್ಮೂಲಗಳಿಗೆ, ದ್ರಾವಿಡ ವಾಸ್ತುಶಿಲ್ಪ ಶೈಲಿಯ ಭವ್ಯವಾದ ಹಿಂದು ದೇವಾಲಯಗಳಿಗೆ, ಗಿರಿಧಾಮಗಳಿಗೆ, ಸಮುದ್ರತೀರದ ವಿಹಾರಧಾಮಗಳಿಗೆ, ತೀರ್ಥಯಾತ್ರಾ ಸ್ಥಳಗಳಿಗೆ ಹಾಗು ಐದು ಯುನೆಸ್ಕೋ ವಿಶ್ವ ಪಾರಂಪರಿಕ ನಿವೇಶನಗಳಿಗೆ ಬೀಡಾಗಿದೆ.
 
==ಭೌಗೋಳಿಕ ಸ್ಥಾನ==
ಪರ್ಯಾಯ ದ್ವೀಪದ ಆಗ್ನೇಯ ತುದಿಯಲ್ಲಿ, ಉ. ಅ 8o 5' —13o 3 ಪೂ. ರೇ. 76o 15 — 80o 20 ನಡುವೆ ಇದೆ. ಉತ್ತರದಲ್ಲಿ ಆಂಧ್ರಪ್ರದೇಶ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಸಾಗರ, ಪಶ್ಚಿಮದಲ್ಲಿ ಕೇರಳ, ವಾಯವ್ಯ ಮತ್ತು ಉತ್ತರದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಇವು ಇದರ ಮೇರೆಗಳು. ಪಶ್ಚಿಮದ ಅಂಚಿನಲ್ಲಿ ಪಶ್ಚಿಮ ಘಟ್ಟಗಳು ಹಬ್ಬಿವೆ. ತಮಿಳುನಾಡಿಗೆ ಪೂರ್ವದಲ್ಲಿ ಸು. 998 ಕಿ.ಮೀ ಉದ್ದದ ಸಮುದ್ರ ತೀರವಿದೆ.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/857544" ಇಂದ ಪಡೆಯಲ್ಪಟ್ಟಿದೆ