ಕಾರ್ಯಾಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೨ ನೇ ಸಾಲು:
 
== ಕಾರ್ಯಾಂಗದ ಹೊಣೆ ==
ತಾಂತ್ರಿಕವಾಗಿ ಈ ಅಂಗವು [[ಕಾನೂನು]]ಗಳನ್ನು ನಿಶ್ಚಯಿಸುವಂತಿಲ್ಲ (ಅದು [[ಶಾಸಕಾಂಗ]]ದ ಕರ್ತವ್ಯ) ಅಥವಾ ನಿಯಮಿತ ಕಾನೂನುಗಳನ್ನು ವ್ಯಾಖ್ಯಾಯನಿಸುವಂತಿಲ್ಲವ್ಯಾಖ್ಯಾಯಿಸುವಂತಿಲ್ಲ (ಅದು [[ನ್ಯಾಯಾಂಗ]]ದ ಕರ್ತವ್ಯ). ಆದರೆ ಸಾಮಾನ್ಯವಾಗಿ ಈ ವಿಭಾಜನೆವಿಭಜನೆ ಕಟ್ಟುನಿಟ್ಟಾಗಿ ಪಾಲಿತವಾಗುವುದಿಲ್ಲ. ಕಾರ್ಯಾಂಗದ ಮುಖ್ಯಸ್ಥರೆ [[ಸರಕಾರದ ಅಧ್ಯಕ್ಷ]]ರು.
 
ಸರ್ಕಾರದ ಅಧಿಕಾರಿಗಳುಅಧಿಕಾರಗಳು ಸಾಮಾನ್ಯವಾಗಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂದು ಮೂರು ವಿಭಾಗಗಳಲ್ಲಿ ವಿಂಗಡವಾಗಿರುತ್ತವೆ. ಮೂರುಪರಸ್ಪರವಾಗಿಮೂರೂಪರಸ್ಪರವಾಗಿ ಬಹಳಮಟ್ಟಿಗೆ ಸ್ವತಂತ್ರವಾಗಿರುತ್ತವೆ. ಆಳ್ವಿಕೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ರಚಿಸುವುದು ಶಾಸಕಾಂಗ ಕಾರ್ಯಭಾರ, ನ್ಯಾಯಾಂಗ ಕಾನೂನುಗಳನ್ನು ಅರ್ಥೈಸುತ್ತದೆ, ಅನ್ವಯಿಸುತ್ತದೆ. ಇವನ್ನು ಜಾರಿಗೆ ಕೊಡುವುದು ಅಥವಾ ಇವು ಕಾರ್ಯಗತವಾಗುವಂತೆ ಮಾಡುವುದು ಕಾರ್ಯಾಂಗದ ಹೊಣೆ, ರಾಯಭಾರ ಪ್ರಾತಿನಿಧ್ಯ, ಸಶಸ್ತ್ರ ಪಡೆಗಳ ಮಹಾದಂಡ ನಾಯಕತ್ವ, ಕಾನೂನುಗಳ ಜಾರಿಯ ಮೇಲ್ವಿಚಾರಣೆ ಅಧಿಕಾರಿಗಳ ನೇಮಕ ಇವೆಲ್ಲ ಕಾರ್ಯಾಂಗಮುಖ್ಯನ ಅಧಿಕಾರಗಳು. ಶಾಸನಾಕಾರ್ಯವನ್ನು ತೊಡಗಿಸುವುದು, ವಿಧಾನ ಮಂಡಲವನ್ನು (ಲೆಜಿಸ್ಲೇಚರ್) ವಿಸರ್ಜಿಸುವುದು ಮುಂತಾದವುಗಳ ಬಗ್ಗೆ ಆಯಾದೇಶಗಳ ಸಂವಿಧಾನಗಳಲ್ಲಿ ಮಾಡಿರುವ ವಿಧಿಗಳಿಗೆ ಅನುಗುಣವಾಗಿ ಹೆಚ್ಚು ಅಥವಾ ಕಡಿಮೆ ಅಧಿಕಾರಿಗಳು ಕಾರ್ಯಾಂಗಮುಖ್ಯನಿಗೆ ಇರುತ್ತವೆ. ಫಾನ್ಸ್ ಜರ್ಮನಿ ಮತ್ತು ಅಮೆರಿಕಗಳಲ್ಲಿ ಕಾರ್ಯಾಪಾಲಿಕಾಧಿಕಾರಗಳು (ಎಕ್ಸಿಕ್ಯೂಟಿವ್ ಪವರ್ಸ್) ಅಧ್ಯಕ್ಷನಲ್ಲೂ ಬ್ರೀಟನ್ನಿನಲ್ಲಿ ದೊರೆಯಲ್ಲೂ (ಅಥವಾ ರಾಣಿ) ನಿಹಿತವಾಗಿರುತ್ತವೆ. ಭಾರತದಲ್ಲಿ ಇವು ನೆಲಸಿರುವುದು ರಾಷ್ಟ್ರಪತಿಯಲ್ಲಿ. ರಾಷ್ಟ್ರಪತಿ ನೇರವಾಗಿ ಅಥವಾ ತನಗೆ ಅಧೀನರಾದ ಪದಾಧಿಕಾರಿಗಳ ಮೂಲಕ ಇವನ್ನು ಚಲಾಯಿಸುತ್ತಾನೆ. ರಾಜ (ರಾಣಿ), ಅಧ್ಯಕ್ಷ, ಅಥವಾ ರಾಷ್ಟ್ರಪತಿಯಾದಾತ ತನ್ನ ಅಧೀನದಲ್ಲಿ ಕಾರ್ಯಾನಿರ್ವಾಹಕ ಮಂಡಲ ಅಥವಾ ಮಂತ್ರಿ ಮಂಡಲವನ್ನು ರಚಿಸಬಹುದು. ಆಡಳಿತ ನಿರ್ವಹಣೆ ಇದರ ಹೊಣೆ.
 
ರಾಜ್ಯದ ಆಡಳಿತಾಂಗ ಕಾರ್ಯಾಂಗಗಳೆರಡೂ ಒಂದೇ ಎಂಬಂತೆನಿಸಿದರೂ ಇವೆರಡರ ಕಾರ್ಯಾಭಾರಗಳನ್ನೂ ಪ್ರತ್ಯೇಕಿಸುವುದು ಸಾಧ್ಯ ಮತ್ತು ಅವಶ್ಯ. ಸರ್ಕಾರ ಸುಗುಮವಾಗಿ ಕೆಲಸ ಮಾಡುವಂತೆ ನೋಡಿಕೂಳ್ಳುವುದು ಕಾರ್ಯಾಂಗದ ಹೊಣೆ.
 
 ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲ ಪ್ರಜಾಪ್ರಭುತ್ವಗಳಲ್ಲೂ ಕಾರ್ಯಾಂಗದ ಅಧಿಕಾರ ಹೆಚ್ಚುತ್ತಿದೆ. ಕೆಲವು ಸಂದರ್ಭಗಳಲ್ಲಿ ಅದು ಶಾಸಕಾಂಗದ ಅಧಿಕಾರವನ್ನು ವಹಿಸಿಕೊಳ್ಳುತ್ತದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಪ್ರಜಾಭಿಪ್ರಾಯವನ್ನು ಪ್ರತಿನಿಧಿಸುವ ಅಂಗವಾಗಿದ್ದು, ದೇಶದ ಎಲ್ಲ ಚಟುವಟಿಕೆಗಳ ಮೇಲೆ ಅದರ ಪ್ರಭಾವ ಬೀರುವ ಹಾಗಿದ್ದರೂ ಕಾರ್ಯಾಂಗ ಅದನ್ನು ಕೆಲವು ಸಾರಿ ನಿಸ್ತೇಜವನ್ನಾಗಿ ಮಾಡುತ್ತದೆ. ಕಾರ್ಯಾಂಗದ ಕರ್ತವ್ಯಗಳನ್ನು ರಾಜಕೀಯ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಎರಡು ವಿಧಗಳಾಗಿ ವಿಂಗಡಿಸಬಹುದು. ಸರ್ಕಾರದ ಇತರ ಅಂಗಗಳೊಡನೆ ಕಾರ್ಯಾಂಗ ಇಟ್ಟುಕೊಂಡಿರುವ ಸಂಬಂಧ, ಸರ್ಕಾರದ ಸಾಮಾನ್ಯ ನೀತಿ ಇವಕ್ಕೆ ಸಂಬಂಧಿಸಿದ ಪ್ರಶ್ನೆಗಳ ನಿರ್ಧಾರ-ಇವನ್ನು ಕಾರ್ಯಾಂಗಕ್ಕೆ ಸೇರಿಸಬಹುದು. ದೇಶದ ಆಡಳಿತದ ಎಲ್ಲ ವಿಚಾರಗಳೂ ಆಡಳಿತಾಂಕ್ಕೆಆಡಳಿತಾಂಗಕ್ಕೆ ಸೇರುತ್ತವೆ. ವಿದೇಶಾಂಗನೀತಿ, ರಕ್ಷಣೆ, ಕಾನೂನುರಚನೆ, ನ್ಯಾಯನಿರ್ವಹಣೆ, ಆಡಳಿತ ಮತ್ತು ಹಣಕಾಸು ಇವೆಲ್ಲ ಕರ್ತವ್ಯಗಳ ನಿರ್ವಹಣೆಯೂ ಸರಿಯಾಗಿ ಆಗಬೇಕಾದರೆ ಕಾರ್ಯಾಂಗದ ನಾಯಕತ್ವ ದಕ್ಷವಾದ್ದಾಗಿರಬೇಕುದಕ್ಷವಾದದ್ದಾಗಿರಬೇಕು
 
== ಕಾರ್ಯಾಂಗಗಳ ವಿಂಗಡಣೆ ==
"https://kn.wikipedia.org/wiki/ಕಾರ್ಯಾಂಗ" ಇಂದ ಪಡೆಯಲ್ಪಟ್ಟಿದೆ