ಸೇವಾ ವಲಯ ಮತ್ತು ವ್ಯವಹಾರ(ವ್ಯಾಪಾರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೩೮ ನೇ ಸಾಲು:
೬. ರಾಷ್ಟ್ರದ ರಕ್ಷಣೆಗೆ ವಾಯು ಸಾರಿಗೆಯು ತೀರಾ ಅನಿವಾರ್ಯ.
==ಉಗ್ರಾಣ ವ್ಯವಸ್ಥೆ==
ಭವಿಷ್ಯದಲ್ಲಿ ಉಪಯೋಗಿಸುವ ಉದ್ದೇಶದಿಂದ ಸಂಗ್ರಹಿಸಿದ ಸಾಮಗ್ರಿ ಗಳನ್ನು ವ್ಯವಸ್ಥಿತವಾಗಿ ಶೇಖರಿಸಿಡುವ ಸ್ಥಳ, ಕೊಠಡಿ, [[ಕಟ್ಟಡ]] (ಸ್ಟೋರ್ಸ್, ಸ್ಟೋರ್-ರೂಂ, ಸ್ಟೋರ್-ಹೌಸ್). ವ್ಯವಸಾಯೋತ್ಪನ್ನಗಳನ್ನೂ ಮಾರಾಟದ ಉದ್ದೇಶದಿಂದ ಸಂಗ್ರಹಿಸಿದ ಸರಕುಗಳನ್ನೂ ಕೆಡದಂತೆ ಭದ್ರವಾಗಿ ದಾಸ್ತಾನು ಮಾಡುವ ಕ್ರಮ ಇಂದಿನ ವಾಣಿಜ್ಯ ವ್ಯವಸ್ಥೆಯಲ್ಲಿ ಬಲು ಅಗತ್ಯ. ದಾಸ್ತಾನಾಗುವ ಸರಕುಗಳ ಉಗಮ, ಸ್ವರೂಪ, ಉಪಯೋಗ, ದಾಸ್ತಾನಿನ ಉದ್ದೇಶ ಮುಂತಾದವುಗಳ ದೃಷ್ಟಿಯಿಂದ ದಾಸ್ತಾನು ಕೇಂದ್ರಗಳನ್ನು ವಿಂಗಡಿಸುವುದು ಸಾಧ್ಯ. ರೈತರೂ ಜಮೀನಿನ ಒಡೆಯರೂ ಇತರರೂ ಮಾರಾಟಕ್ಕೂ ಸ್ವಂತ ಉಪಯೋಗಕ್ಕೂ ದವಸಧಾನ್ಯ ಸಂಗ್ರಹಿಸಿಡಲು (ಸಾಮಾನ್ಯವಾಗಿ ಖಾಸಗಿಯಾಗಿ) ಏರ್ಪಡಿಸಿಕೊಂಡ ವಿಶಿಷ್ಟ ರಚನೆಯೇ ಕಣಜ, ಪಣತ ಅಥವಾ ಹಗೇವು (ಗ್ರ್ಯಾನರಿ). ರೈತ, ವರ್ತಕ ಮುಂತಾದವರ ಉಪಯೋಗಕ್ಕಾಗಿ ಸರ್ಕಾರವಾಗಲಿ ಖಾಸಗಿಯವರಾಗಲಿ ಸಂಘ ಸಂಸ್ಥೆಗಳಾಗಲಿ ನಿರ್ಮಿಸಿ ನಿರ್ವಹಿಸುವ ಸಾರ್ವಜನಿಕ ಕೇಂದ್ರಗಳು ದಾಸ್ತಾನುಮಳಿಗೆಗಳೆನ್ನಿಸಿಕೊಳ್ಳುತ್ತವೆ. (ವೇರ್ ಹೌಸ್).ಉಗ್ರಾಣ ವ್ಯವಸ್ಥೆಯ ಕಾರ್ಯಭಾರಗಳು ಇತರ ಇಲಾಖೆಗಳಷ್ಟೇ ಗುರುತರವಾದವು. ಇವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು: ೧. ಸಾಮಗ್ರಿಗಳ ಸ್ವೀಕಾರ, ದಾಸ್ತಾನು, ರಕ್ಷಣೆ; ೨. ಉತ್ಪಾದನ ಇಲಾಖೆಯ ಬೇಡಿಕೆಗೆ ಅನುಸಾರವಾಗಿ ನಿಖರ ಪರಿಮಾಣದಲ್ಲಿ ಸಾಮಗ್ರಿ ನೀಡಿಕೆ; ೩.[[ಉಗ್ರಾಣ]]ದಲ್ಲಿರುವ ಸಾಮಗ್ರಿಯೆಷ್ಟು, ಉಗ್ರಾಣಕ್ಕೆ ಬರಲಿರುವುದೆಷ್ಟು, ಅಲ್ಲಿಂದ ಕೊಟ್ಟಿರುವುದೆಷ್ಟು, ಮೀಸಲಾಗಿಟ್ಟಿರುವುದೆಷ್ಟು ಎಂಬುದರ ತಪಶೀಲಾದ ದಾಖಲೆ; ೪. ಪ್ರತಿ ಸಾಮಗ್ರಿಯ ಕನಿಷ್ಠಾವಶ್ಯಕತೆಯೆಷ್ಟೆಂಬುದನ್ನು ಖಚಿತಪಡಿಸಿಕೊಂಡು, ಅದು ಖರ್ಚಾದಂತೆ ಅದರ ಸರಬರಾಯಿಗಾಗಿಸರಬರಾಜಿಗಾಗಿ ಕ್ರಯಾಧಿಕಾರಿಗಳಿಗೆ ಸಕಾಲಿಕ ಕೋರಿಕೆಯ ಸಲ್ಲಿಕೆ. ಆಧುನಿಕ ಉತ್ಪಾದನಾಲಯಗಳಲ್ಲಿಉತ್ಪಾದನಾ ವಲಯಗಳಲ್ಲಿ ಉತ್ತಮ ಉಗ್ರಾಣ ವ್ಯವಸ್ಥೆಗೂ ದಾಖಲೆಗೂ ಹೆಚ್ಚಿನ ಗಮನ ನೀಡಲಾಗುತ್ತಿದೆ. ಉತ್ಪಾದನೆಯ ಒಟ್ಟು ವೆಚ್ಚವನ್ನು ನಿಖರವಾಗಿ ಕಂಡು ಹಿಡಿಯುವ ಯತ್ನವಾದ ಪರಿವ್ಯಯ ಲೆಕ್ಕ ವ್ಯವಸ್ಥೆಯ ಯಶಸ್ಸಿಗೆ ಉತ್ತಮ ಉಗ್ರಾಣ ವ್ಯವಸ್ಥೆಯೂ ಮುಖ್ಯ.
 
==ಉಲ್ಲೇಖ==