ಅಲ್ಯೂಮಿನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯೪ ನೇ ಸಾಲು:
* ಉತ್ತಮ ವಿದ್ಯುದ್ವಾಹಕತೆಯ ಪರಿಣಾಮವಾಗಿ, ದುಬಾರಿ ಬೆಲೆಯ ವಿರಳಲೋಹ ತಾಮ್ರದ ಬದಲು, ವಿದ್ಯುಚ್ಛಕ್ತಿಯ ಪ್ರಸರಣಕ್ಕೆ ಇತ್ತೀಚೆಗೆ ವಿಶೇಷವಾಗಿ ಅಲ್ಯೂಮಿನಿಯಂ ಲೋಹ ಉಪಯೋಗವಾಗುತ್ತಿದೆ. ಧಾಷ್ಟ್ರ್ಯ ಉಕ್ಕಿನ ತಂತಿಗಳ ಮೇಲೆ ಅಲ್ಯೂಮಿನಿಯಂ ಲೋಹವನ್ನು ಶೇಖರಿಸಿ ಬಲಾಢ್ಯ ಉತ್ತಮ ವಿದ್ಯುತ್ ಪ್ರಸರಣ ತಂತಿಗಳನ್ನು ತಯಾರಿಸುವರು.
* ಇತರ ಉಪಯೋಗಗಳಲ್ಲಿ ಉಕ್ಕಿನ ತಯಾರಿಕೆಯಲ್ಲಿ ಆಮ್ಲಜನಕವನ್ನು ಹೊರತೆಗೆಯಲು ಅಲ್ಯೂಮಿನಿಯಂ ಲೋಹದ ಬಳಕೆ ಮುಖ್ಯವಾದುದು. ಅಲ್ಯೂಮಿನಿಯಂ ಬಣ್ಣಗಳು, ಬೆಳಕಿನ ಕಿರಣಗಳನ್ನು ಪ್ರತಿಫಲಿಸುವ ಫಲಕಗಳ ತಯಾರಿಕೆ, ಗೃಹಾಲಂಕರಣ ವಸ್ತುಗಳ ಉತ್ಪಾದನೆ ಇವೇ ಮುಂತಾದ ಇತರ ಉಪಯೋಗಗಳೂ ಇವೆ.
* ಬಾಕ್ಸೈಟ್‍ಗೆ ಕುಲುಮೆಗಳಿಗಾಗಿ ಉಷ್ಣಸಹಿಷ್ಣು ಇಟ್ಟಿಗೆಗಳ ತಯಾರಿಕೆಯಲ್ಲಿಯೂ ಸಿಮೆಂಟ್ ತಯಾರಿಕೆಯಲ್ಲಿಯೂ ಜಲಾಂಶರಹಿತ ಅಲ್ಯೂಮಿನಿಯಂ ಆಕ್ಸೈಡ್‍ಗೆ ತೇವವನ್ನು ಹೀರುವುದಕ್ಕೂ ಪೆಟ್ರೋಲಿಯಂ ಕೈಗಾರಿಕೆಯಲ್ಲಿ ವೇಗವರ್ಧಕವಾಗಿಯೂ (ಕ್ಯಟಲಿಸ್ಟ್) ಉಪಯೋಗಗಳಿವೆಉಪಯೋಗಿಸಲ್ಪಡುತ್ತವೆ.
* ಅಲ್ಯೂಮಿನಿಯಂ ಪೊಟ್ಯಾಸಿಯಂ ಅಥವಾ ಅಲ್ಯೂಮಿನಿಯಂ ಅಮೋನಿಯಂ ಪಟಿಕ ಲವಣಗಳನ್ನು ನೀರನ್ನು ಶುದ್ಧಿಮಾಡುವ ಕಾರ್ಯದಲ್ಲಿ ಉಪಯೋಗಿಸುವರು. ಈ ಪಟಿಕಗಳಲ್ಲಿನ ಅಲ್ಯೂಮಿನಿಯಂ (ಂಟ3+) ವಿದ್ಯುದ್ವಾಹಿ ಕಣಗಳು, ಬಗ್ಗಡದ ನೀರಿನಲ್ಲಿ ತೇಲುತ್ತಿರುವ ಸೂಕ್ಷ್ಮಕಣಗಳನ್ನು ಒಂದುಗೂಡುವಂತೆ ಮಾಡಿ, ತತ್ಪರಿಣಾಮವಾಗಿ ಅವು ಭಾರವಾಗಿ ಜಲಾಶಯಗಳಲ್ಲಿ ನೀರಿನಲ್ಲಿ ಮುಳುಗುವುವು.
* ನೀರು ತಿಳಿಯಾಗುವುದು. ಇನ್ನೂ ಕಡಿಮೆ ಬೆಲೆಯ ಅಲ್ಯೂಮಿನಿಯಂ ಸಲ್ಫೇಟ್ ಲವಣವನ್ನು ಈ ಉದ್ದೇಶಕ್ಕಾಗಿ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಬಳಸುತ್ತಿರುವರು. ಪಟಿಕಗಳನ್ನು ಚರ್ಮಹದಮಾಡುವುದು, ಕಾಗದ ತಯಾರಿಕೆ, ಬಟ್ಟೆಗಳಿಗೆ ಬಣ್ಣ ಕಚ್ಚಿಸುವುದು ಇವೇ ಮುಂತಾದ ಕೈಗಾರಿಕೆಗಳಲ್ಲಿ ಬಳಸುವರು. ಲಿಥಿಯಂ ಅಲ್ಯೂಮಿನಿಯಂ ಹೈಡ್ರೈಡ್ ಒಂದು ಉತ್ತಮ ರಾಸಾಯನಿಕ ಅಪಕರ್ಷಣಕಾರಿ.
"https://kn.wikipedia.org/wiki/ಅಲ್ಯೂಮಿನಿಯಮ್" ಇಂದ ಪಡೆಯಲ್ಪಟ್ಟಿದೆ