ಅಲ್ಯೂಮಿನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
* ಆಧಿಕ್ಯ ಪ್ರಮಾಣದ ಮೂಲವಸ್ತುಗಳ ಪೈಕಿ ಆಕ್ಸಿಜನ್, ಸಿಲಿಕಾನ್ ಆದ ಮೇಲೆ ಮೂರನೆಯದು. [[ಲೋಹ]]ದಲ್ಲಿ ಇದೇ ಮೊದಲನೆಯದು ಅಂದರೆ ಕಬ್ಬಿಣಕ್ಕಿಂತಲೂ ಹೇರಳವಾದುದು. ಭೂಮಿಯ ಮೇಲ್ಮೈನಲ್ಲಿನ ಪದರದಲ್ಲಿ ಸುಮಾರು 8% ಇದೆ. ಭೂಮಿಯ ಮೇಲಿನ ಕಲ್ಲು, ಮಣ್ಣು, ಜೇಡಿಮಣ್ಣುಗಳಲ್ಲೆಲ್ಲಾ ಹೊಕ್ಕಿದೆ. ಆದರೆ ಈ ಲೋಹ ಶುದ್ಧಮೂಲವಸ್ತುವಿನ ರೂಪದಲ್ಲಿ ದೊರೆಯುವುದಿಲ್ಲ.
* ತನ್ನ ರಾಸಾಯನಿಕ ಚಟುವಟಿಕೆಯಿಂದಾಗಿ, ಅದರಲ್ಲೂ ಆಕ್ಸಿಜನ್ನಿನೊಡನೆ ತೋರುವ ವಿಶೇಷ ಒಲವಿನಿಂದಾಗಿ ಪ್ರಕೃತಿಯಲ್ಲಿ ಅಲ್ಯೂಮಿನಿಯಂ ಆಕ್ಸಿಜನ್ನಿನೊಡನೆ ಸಂಯೋಗ ಹೊಂದಿರುತ್ತದೆ. ಮತ್ತು ಇದೇ ಕಾರಣದಿಂದ ಲೋಹವನ್ನು ಅದುರುಗಳಿಂದ ಬೇರ್ಪಡಿಸುವುದೂ ಕಷ್ಟ. ಅಲ್ಯೂಮಿನಿಯಂ ಅದುರುಗಳಲ್ಲಿ ಮುಖ್ಯವಾದುದು ಬಾಕ್ಸೈಟ್.
* ರಾಸಾಯನಿಕವಾಗಿ ಬಾಕ್ಸೈಟ್ ಎಂಬುದು ಮುಖ್ಯವಾಗಿ ಅಲ್ಯೂಮಿನಿಯಂ ಆಕ್ಸೈಡ್ (ಂಟ2ಔ3). ಆದರೆ ಅದರಲ್ಲಿ ನೀರಿನ ಅಂಶವೂ ಜೊತೆಗೆ ಕಲ್ಮಷಪ್ರಾಯವಾಗಿ ಕಬ್ಬಿಣ, ಸಿಲಿಕಾನ್ ಮತ್ತು ಟೈಟಾನಿಯಂ ಮತ್ತಿತರ ಲೋಹಗಳ ಆಕ್ಸೈಡ್‍ಗಳೂ ಬೆರೆತಿರುತ್ತವೆ. ಬಾಕ್ಸೈಟ್ ವಿವಿಧ ರಚನಾವಿನ್ಯಾಸ ಮತ್ತು ಬಣ್ಣಗಳನ್ನು ಪ್ರದರ್ಶಿಸುವ ಸಾಮಥ್ರ್ಯಸಾಮರ್ಥ್ಯ ಹೊಂದಿರುವ ಖನಿಜ.
* ಕಬ್ಬಿಣದ ಅಂಶ ಕಡಿಮೆ ಇದ್ದರೆ ಬಿಳಿಯ ಅಥವಾ ಮಾಸಿದ ಬಿಳಿಯ ಬಣ್ಣವನ್ನು, ಕಬ್ಬಿಣದ ಅಂಶ ಹೆಚ್ಚಾದರೆ ಬೂದಿ ಅಥವಾ ಕಪ್ಪುಬಣ್ಣವನ್ನು ಹೊಂದಿರುವುದು. ಮೆದುವಾದ ಮುದ್ದೆಯಿಂದ ಹಿಡಿದು ಗಟ್ಟಿಯಾದ ಕಲ್ಲಿನ ಸ್ವರೂಪದವರೆಗೂ ವಿವಿಧ ಗಡಸಿಕೆಯ ಖನಿಜ.
* ಗ್ರೀನ್‍ಲ್ಯಾಂಡ್‍ದೇಶದಲ್ಲಿ ರಾಸಾಯನಿಕವಾಗಿ ಸೋಡಿಯಂ ಅಲ್ಯೂಮಿನಿಯಂ ಫ್ಲೋರೈಡ್ ಸಂಯುಕ್ತವಾದ (ಓಚಿ3ಂಟಈ6) ಕ್ರಯೊಲೈಟ್ ಎಂಬ ಖನಿಜ ನೋಡುವುದಕ್ಕೆ ಹಿಮಗಡ್ಡೆಯನ್ನು ಹೋಲುವ ಭಾರಿಪ್ರಮಾಣದಲ್ಲಿ ದೊರಕುತ್ತದೆ. ಅಲ್ಯೂಮಿನಿಯಂ ಲೋಹ ಸಸ್ಯ, ಪ್ರಾಣಿವರ್ಗಗಳಲ್ಲೂ ಇರುವುದು ತಿಳಿದಿದೆ.<ref>http://vijaykarnataka.indiatimes.com/lavalavk/kids/science/aluminium/articleshow/48624968.cms</ref>
"https://kn.wikipedia.org/wiki/ಅಲ್ಯೂಮಿನಿಯಮ್" ಇಂದ ಪಡೆಯಲ್ಪಟ್ಟಿದೆ