ತಾಮ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೬ ನೇ ಸಾಲು:
 
==ಅದುರು ಸಂಸ್ಕರಣ ==
ಇದರಲ್ಲಿ ಮೂರು ಹಂತಗಳಿವೆ. ಮೊದಲನೆಯದಾಗಿ, ನೆಲದಿಂದ ಇಲ್ಲವೇ ಗಣಿಗಳಿಂದ ಅಗೆದು ತೆಗೆದ ಕಲ್ಲು ಮಣ್ಣುಗಳೊಡನೆ ತಾಮ್ರ ಬೆರೆತುಕೊಂಡಿರುವುದರಿಂದ ಮತ್ತು ಇಂಥ ಜಂಕುಗಳು ಸಾಕಷ್ಟು ಮೊತ್ತದಲ್ಲಿ ಇರುವುದರಿಂದ ಇವನ್ನು ಬೇರ್ಪಡಿಸುವುದು ತೀರ ಅಗತ್ಯ. ಈ ಪ್ರಕ್ರಮಕ್ಕೆ ಅದುರು ಶುದ್ಧೀಕರಣ ಎಂದು ಹೆಸರು. ಎರಡನೆಯದಾಗಿ, ಹೀಗೆ ಲಭಿಸಿದ ಸಾಂದ್ರ ಅದುರಿನಿಂದ ಲೋಹ ತಾಮ್ರವನ್ನು ಹೊರತೆಗೆಯಬೇಕು. ಈ ಪ್ರಕ್ರಮಕ್ಕೆ ಲೋಹ ಉಪಲಬ್ಧಿ (ಮೆಟಲ್ ರಿಕವರಿ) ಎಂದು ಹೆಸರು. ಮೂರನೆಯದಾಗಿ., ಇಂಥ ಲೋಹದೊಡನೆ ರಾಸಾಯನಿಕವಾಗಿ ಸಂಯೋಗಗೊಂಡಿರುವ ಅಶುದ್ಧತೆಗಳ ನಿರ್ಮೂಲನ. ಈ ಪ್ರಕ್ರಮಕ್ಕೆ ಲೋಹ ಶುದ್ಧೀಕರಣ ಎಂದು ಹೆಸರು. ಈಗ ಈ ಮೂರೂ ಹಂತಗಳನ್ನು ವಿವರವಾಗಿ ಪರಿಶೀಲಿಸೋಣ.
 
===ಅದುರು ಶುದ್ಧೀಕರಣ===
ಸಾಧಾರಣವಾಗಿ ತಾಮ್ರದ ಅದುರುಗಳನ್ನು ಕರಗಿಸುವುದರ ಮೂಲಕ (ಉಷ್ಣ ಲೋಹ ವೈಜ್ಞಾನಿಕ ವಿಧಾನಗಳು - ಪೈರೊ ಮೆಟಲರ್ಜಿಕಲ್ ಮೆಥಡ್ಸ್) ಇಲ್ಲವೇ ನಿಕ್ಷಾಲನದ (ಲೀಚಿಂಗ್) ಮೂಲಕ (ಜಲಲೋಹವೈಜ್ಞಾನಿಕ ವಿಧಾನಗಳು-- ಹೈಡ್ರೊಮೆಟಲರ್ಜಿಕಲ್ ಮೆಥಡ್ಸ್) ಸಂಸ್ಕರಿಸುತ್ತಾರೆ. ಸಲ್ಫೈಡ್ ಅದುರುಗಳಾದರೆ ಅವನ್ನು ವರಣಾತ್ಮಕ ಪ್ಲವನ (ಸೆಲೆಕ್ಟಿವ್ ಫ್ಲೊಟೇಶನ್) ರೀತಿಯಿಂದ ಮೊದಲಿಗೆ ಸಾಂದ್ರೀಕರಿಸುವುದು ವಾಡಿಕೆ. ಆಕ್ಸೈಡ್ ಅದುರುಗಳನ್ನಾದರೋ ನಿಕ್ಷಾಲಿಸುವುದು (ಲೀಚ್) ಮೊದಲ ಹಂತ ವರಣಾತ್ಮಕ ಪ್ಲವನ ರೀತಿಯಲ್ಲಿ ಅದುರನ್ನು ಬಲು ಸೂಕ್ಷ್ಮವಾಗಿ ಅರೆದು ನೀರು ಮತ್ತು ಆಯ್ದ ಅಭಿಕರ್ಮಕಗಳೊಂದಿಗೆ (ರೀ ಏಜೆಂಟ್ಸ್) ಬೆರೆಸಿ ಈ ಮಿಶ್ರಣಕ್ಕೆ ವಾಯುವನ್ನು ಪೂರೈಸಿ ತೀವ್ರವಾಗಿ ಕುಲುಕಲಾಗುತ್ತದೆ. ಇದರಿಂದ ದಟ್ಟವಾದ ನೊರೆ ಮೈದಳೆಯುವುದು. ನೊರೆಯಲ್ಲಿರುವ ವಾಯುಗುಳ್ಳೆಗಳೊಡನೆ ತಾಮ್ರದ ಕಣಗಳು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಂಟಿಕೊಂಡಿರುವುದು ಸಾಧ್ಯವಾಗಬೇಕು ಎಂಬುದನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಅಭಿಕರ್ಮಕಗಳನ್ನು ಆಯುವರು. ಮಿಶ್ರಣದಲ್ಲಿ ತೇಲುತ್ತಿರುವ ತಾಮ್ರಸಹಿತವಾದ ನೊರೆಯನ್ನು ತಳದ ಕಿಟ್ಟಿ ಪದಾರ್ಥದಿಂದ ಬೇರ್ಪಡಿಸುವುದು ಸುಲಭ. ಈ ಪ್ರಕ್ರಿಯೆಯನ್ನು ಮತ್ತೆ ಮತ್ತೆ ಪುನರಾವರ್ತಿಸಿ ಅದುರಿನಲ್ಲಿರುವ 95% ಯಾ ಹೆಚ್ಚು ತಾಮ್ರವನ್ನು ಮೂಲ ಅದುರಿನ ತೂಕದ 10%-20% ತೂಕದಷ್ಟಕ್ಕೆ ಸಾಂದ್ರೀಕರಿಸುವುದು ಸಾಧ್ಯವಿದೆ. ಹೀಗೆ ಲಭಿಸಿದೆಲಭಿಸಿದ ಸಾಂದ್ರವಸ್ತುವನ್ನು ಬಿಸಿಮಾಡಿ ಹುರಿಯಲಾಗುವುದು . ಇದರ ಉತ್ಪನ್ನವಾಗಿ ದೊರೆವದೊರೆಯುವ ಪದಾರ್ಥಕ್ಕೆ ಕ್ಯಾಲ್ಸೈನ್ ಎಂದು ಹೆಸರು (ಇದು ಶುದ್ಧ ತಾಮ್ರವಲ್ಲ) : ಲೋಹವಿಜ್ಞಾನದಲ್ಲಿ ಇದನ್ನು ಮ್ಯಾಟ್ ಎಂದು ಕರೆಯುವುದುಂಟು. ಇದು ತಾಮ್ರ ಮತ್ತು ಕಬ್ಬಿಣ ಧಾತುಗಳು ಸಲ್ಫೈಟ್.
 
===ಲೋಹ ಉಪಲಬ್ಧಿ===
ಮ್ಯಾಟನ್ನು ಕರಗಿಸುವುದರ ಮೂಲಕ ಇಲ್ಲವೇ ವಿದ್ಯುದ್ವಿಚ್ಛೇದನ ತಂತ್ರಗಳ ಮೂಲಕ ಲೋಹತಾಮ್ರವನ್ನು ಪಡೆಯಬಹುದು. ಕೆಲವು ವೇಳೆ ತಾಮ್ರವನ್ನು ಹರಕುಮುರುಕುಗಳಿಂದ ಮರುಪಡೆವುದುಂಟುಮರುಪಡೆಯುವುದುಂಟು.
 
ಮ್ಯಾಟನ್ನು ಊದು ಕುಲುಮೆಗಳಲ್ಲಿ (ಬ್ಲಾಸ್ಟ್ ಫರ್ನೇಸಸ್ _ ಇಂಥ ಒಂದು ಕುಲುಮೆಯಲ್ಲಿ ಸಂಸ್ಕರಣೆಗೆ ಒಳಪಡುವ ವಸ್ತುವಿಗೆ ಉಷ್ಣ ಮಾಡಿನಿಂದ ವಿವರಿಸಲ್ಪಡುವುದರಿಂದ ಈ ಹೆಸರು ಬಂದಿದೆ) ಇಲ್ಲವೇ ವಿದ್ಯುತ್ ಕುಲುಮೆಗಳಲ್ಲಿ ಕರಗಿಸಿ ಲೋಹ ತಾಮ್ರವನ್ನು ಬೇರ್ಪಡಿಸುವರು.
೪೩ ನೇ ಸಾಲು:
ಮೇಲಿನ ಎರಡು ಹಂತಗಳ ಅಂತ್ಯದಲ್ಲಿ ಲಭಿಸುವ ಲೋಹದಲ್ಲಿ ಅಶುದ್ಧತೆಗಳು ಇರುವುದು ಅಪರೂಪವೇನಲ್ಲ. ಇವು 1% ರ1/10 ಕ್ಕಿಂತಲೂ ಕಡಿಮೆ ಇರುವಂತೆ ಮಾಡುವ ಪ್ರಕ್ರಿಯೆಯೇ ಲೋಹಶುದ್ಧೀಕರಣ.
 
ಅಗ್ನಿಶುದ್ಧೀಕರಣ ವಿಧಾನದಲ್ಲಿ ಲೋಹವನ್ನು ಮೊದಲು ಉತ್ಕರ್ಷಣ ಕ್ರಿಯೆಗೂಉತ್ಕರ್ಷಣಕ್ರಿಯೆಗೂ ಮತ್ತೆ ಅಪಕರ್ಷಣ ಕ್ರಿಯೆಗೂ ಒಳಪಡಿಸಲಾಗುತ್ತದೆ. ಇದರ ಅಂತ್ಯದಲ್ಲಿ ಸ್ಪಷ್ಟವಾದ ಗುಲಾಬಿ ಬಣ್ಣದ ಲೋಹ ಮೈದಳೆಯುವುದು. ಇದನ್ನು ಸಾಂದ್ರವಾದ ಚಪ್ಪಡಿಗಳಾಗಿ ಎರಕ ಹುಯ್ಯಬಹುದು. ವಿದ್ಯುದ್ವಿಚ್ಛೀದನ ಶುದ್ಧೀಕರಣ ವಿಧಾನದಿಂದಲೂ ಶುದ್ಧ ಲೋಹವನ್ನು ಪಡೆಯುವುದುಂಟು.
 
==ಗುಣಗಳು==
"https://kn.wikipedia.org/wiki/ತಾಮ್ರ" ಇಂದ ಪಡೆಯಲ್ಪಟ್ಟಿದೆ