ವೇದವ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
==ವ್ಯಾಸರ ಪುರಾಣ ಕಥೆ==
ವ್ಯಾಸರು ಬಹು ಮುಖ್ಯ [[ಹಿಂದೂ]] ಮಹಾಕಾವ್ಯವಾದ [[ಮಹಾಭಾರತ]]ದ ಕರ್ತೃ. ಶತಮಾನಗಳಷ್ಟು ಹಳೆಯದಾದ ಭಾರತದ ಚಾರಿತ್ರಿಕ ಘಟನೆಗಳನ್ನು ಆಧರಿಸಿ [[ಮಹಾಭಾರತ]]ವು ರಚಿತವಾಗಿದ್ದರೂ ಕೂಡ, ಇದು ಪ್ರಾಚೀನ ಭಾರತದ ದಂತಕಥೆಗಳು, ಪುರಾಣಗಳು, ದಾರ್ಶನಿಕತೆ ಮತ್ತು ಅರೆಚಾರಿತ್ರಿಕ ಘಟನೆಗಳ ಒಂದು ಬೃಹತ್ ಕಾವ್ಯ. ಈ ಕಾರಣದಿಂದ ಚಾರಿತ್ರಿಕವಾಗಿ ವ್ಯಾಸರ ಕಾಲ ಮತ್ತು ದೇಶಗಳನ್ನು ದಂತಕಥೆಗಳಿಂದ ಬೇರ್ಪಡಿಸುವುದು ಬಹಳ ಕಷ್ಟ.
ಮಹಾಭಾರತದ ಪ್ರಕಾರ, ವ್ಯಾಸರು [[ಪರಾಶರ]] ಮುನಿ ಮತ್ತು ಮೀನುಗಾರ[ಬೆಸ್ತ]ನ ಮಗಳಾದ [[ಮತ್ಸ್ಯಗಂಧಿನಿಮತ್ಸ್ಯಗಂಧಿ]] ಅಥವಾ [[ಸತ್ಯವತಿ]]ಯ ಪುತ್ರ. ಜನ್ಮ [[ಯಮುನಾ]] ನದಿ ಯ ಒಂದು ದ್ವೀಪದಲ್ಲಿ. ಇದು ಈಗಿನ ಕಾಲದ [[ಉತ್ತರ ಪ್ರದೇಶ]]ದ ಜಲುವಾ [[ಜಿಲ್ಲೆ]]ಯ 'ಕಲ್ಪಿ' ಎನ್ನುವ ಸ್ಥಳದ ಬಳಿಯಿದೆ. ವ್ಯಾಸರ ಬಣ್ಣ ಕಪ್ಪಾಗಿದ್ದ ಕಾರಣ '[[ಕೃಷ್ಣ]]' ಎಂದು ಕರೆಯಲಾಗುತ್ತಿತ್ತು. ದ್ವೀಪದಲ್ಲಿ ಜನಿಸಿದ ಕಾರಣ 'ದ್ವೈಪಾಯನ' ಎಂದೂ ಹೆಸರಿತ್ತು. ಈ ಕಾರಣದಿಂದ ಇವರನ್ನು "ಕೃಷ್ಣ-ದ್ವೈಪಾಯನ" ಎಂದೂ ಕರೆಯಲಾಗುತ್ತದೆ. ಮಗು ವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು, ತಾಪಸ ಜೀವನ ನಡೆಸಿ ಅತಿ ಪ್ರಮುಖ [[ಋಷಿ]]ಗಳಲ್ಲಿ ಒಬ್ಬರಾಗಿ ಪರಿಗಣಿತರಾಗಿದ್ದಾರೆ.
[[ಪುರಾಣ]]ಗಳಲ್ಲಿ ಇವರನ್ನು [[ವಿಷ್ಣು]]ವಿನ ಒಂದು [[ಅವತಾರ]]ವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇವರು ಏಳು [[ಚಿರಂಜೀವಿ]]ಗಳಲ್ಲಿ ಒಬ್ಬರು.
[[File:Ganesa writing the Mahabharat.jpeg|thumb|left|ಮಹಾಭಾರತವನ್ನು ಬರೆಯುತ್ತಿರುವ ಗಣೇಶ]]
"https://kn.wikipedia.org/wiki/ವೇದವ್ಯಾಸ" ಇಂದ ಪಡೆಯಲ್ಪಟ್ಟಿದೆ