ಎಳ್ಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೨೧ ನೇ ಸಾಲು:
'''ಎಳ್ಳು''' (''ಸೆಸಮಮ್ ಇಂಡಿಕಮ್'') ''[[ಸೆಸಮಮ್]]'' ಪಂಗಡದಲ್ಲಿನ ಒಂದು [[ಹೂಬಿಡುವ ಸಸ್ಯ]]. [[ಆಫ್ರಿಕಾ]]ದಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ಮತ್ತು [[ಭಾರತ]]ದಲ್ಲಿ ಸಣ್ಣಸಂಖ್ಯೆಯಲ್ಲಿ ಕಾಡುಸಂಬಂಧಿಗಳು ಕಾಣುತ್ತವೆ. ವಿಶ್ವದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ಅದು ವ್ಯಾಪಕವಾಗಿ [[ದೇಶೀಕರಣ]]ಗೊಂಡಿದೆ ಮತ್ತು ಬೀಜಕೋಶಗಳಲ್ಲಿ ಬೆಳೆಯುವ ಅದರ ಖಾದ್ಯ ಬೀಜಗಳಿಗಾಗಿ ಬೇಸಾಯಮಾಡಲಾಗುತ್ತದೆ.
ಎಳ್ಳು: ಪಿಡಾಲಿಯೇಸಿ ಕುಟುಂಬಕ್ಕೆ ಸೇರಿದ ಸೆಸ್ಸಾಮಮ್ ಇಂಡಿಕಮ್ ಎಂಬ ಏಕವಾರ್ಷಿಕ ಸಸ್ಯಪ್ರಭೇದ. ಮಾನವ ಮೊಟ್ಟ ಮೊದಲು ಬೆಳೆದ [[ಎಣ್ಣೆ]] ಬೀಜದ ಬೆಳೆಗಳಲ್ಲಿ ಒಂದಾಗಿದೆ. ಎಳ್ಳಿನ ಬೆಳೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಬರ್ಮಾ ದೇಶಕ್ಕೆ ಮೊದಲನೇ ಸ್ಥಾನ. ಏಷ್ಯದ ಇತರ ದೇಶಗಳಲ್ಲಿ ಅಂದರೆ ಸಯಾಮ್, ಇಂಡೊಚೀನ, ಫಾರ್ಮೊಸ, ಜಪಾನ್, ಪ್ಯಾಲೆಸ್ಟೈನ್, ಟರ್ಕಿ ಮತ್ತು ಯುರೋಪಿನ ಮೆಡಿಟರೇನಿಯನ್ ಭಾಗಗಳಲ್ಲಿ, ರಷ್ಯ, ಬ್ರೆಜಿಲ್, ಅರ್ಜಂಟೀನ, ಮೆಕ್ಸಿಕೋ ಮತ್ತು [[ಆಫ್ರಿಕ]] ಖಂಡಗಳಲ್ಲೂ ಎಳ್ಳನ್ನು ಬೆಳೆಸುತ್ತಾರೆ. ಈ ಸಸ್ಯದ ಮೂಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಇದು
[[ಕರ್ನಾಟಕ]] ರಾಜ್ಯದಲ್ಲಿ ಫೆಬ್ರವರಿಯಿಂದ ಮಾರ್ಚ್ ವರೆಗೆ ನೀರಾವರಿಯಿಂದ ಬಿತ್ತನೆ ಮಾಡುವುದನ್ನು ಕಾರು ಎಳ್ಳು ಎಂದು ಕರೆಯುತ್ತಾರೆ. ಇದು ಸ್ವಲ್ಪ ಕಂದು ಬಣ್ಣದ ಬೀಜದ ತಳಿ. ಕಪ್ಪು ಬಣ್ಣದವೂ ಇವೆ. ಪ್ರಮುಖ ತಳಿಗಳ ಬೀಜಗಳನ್ನು ಜೂನ್ ಅಥವಾ ಜುಲೈ ಮಧ್ಯದಲ್ಲಿ ಬಿತ್ತಿ ಅಕ್ಟೋಬರ್ ಅಥವಾ ನವಂಬರ್ ತಿಂಗಳಲ್ಲಿ ಒಕ್ಕಣೆ ಮಾಡುತ್ತಾರೆ. ಇವು ಕಂದು ಮತ್ತು ಕಪ್ಪು ಬೀಜಗಳುಳ್ಳ ತಳಿಗಳು. ಬಿಳಿಯ ಮತ್ತು ಮಾಸಲು ಬಿಳಿಯ ಜಾತಿಯನ್ನು ಸೆಪ್ಟೆಂಬರಿನಲ್ಲಿ ಬಿತ್ತಿ ಡಿಸೆಂಬರಿನಲ್ಲಿ ಒಕ್ಕಣೆ ಮಾಡುತ್ತಾರೆ. ಎಳ್ಳಿನ ಬೀಜದಲ್ಲಿ ಶೇಕಡ ನಲವತ್ತೈದರಿಂದ ಅರವತ್ತುಮೂರು ಭಾಗ ಎಣ್ಣೆ, ಹದಿನಾರರಿಂದ ಮೂವತ್ತೆರಡು ಭಾಗ ಸಾರಜನಕ ಇದೆ. ಭಾರತದಲ್ಲಿ ಹುರಿದ ಅಥವಾ ಹಸಿಯ ಎಳ್ಳು ಬೀಜವನ್ನು ಅನೇಕ ಸಿಹಿತಿಂಡಿಗೆ ಉಪಯೋಗಿಸುತ್ತಾರೆ. (ಜಿ.ಬಿ.;ಡಿ.ಜಿ.)
ಎಳ್ಳಿನ ಎಣ್ಣೆಯನ್ನು ಹೆಚ್ಚಾಗಿ
ಲಿನೋಲೀಯಿಕ್ ಮತ್ತು ಒಲೀಯಿಕ್ ಆಮ್ಲಗಳೇ ಪ್ರಧಾನ, 0.1 ಗ್ರಾಮು ಪುಡಿ ಮಾಡಿದ ಸಕ್ಕರೆ ಮತ್ತು 100 ಮಿಲಿಲೀಟರ್ ಮದ್ಯಸಾರ ಬೆರೆಸಿ, 0.1 ಮಿಲಿಲೀಟರ್ ಮಿಶ್ರಣಕ್ಕೆ 10 ಮಿಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು 10 ಮಿಲಿ ಎಣ್ಣೆ ಹಾಕಿ ಕಲಕಿದರೆ ಕಡು ಕೆಂಪು ಬಣ್ಣ ಬರುತ್ತದೆ. ಇದಕ್ಕೆ ನೀರು ಬೆರೆಸಿದರೂ ಬಣ್ಣ ನಷ್ಟವಾಗುವುದಿಲ್ಲ. ಈ ರೀತಿ ಎಳ್ಳೆಣ್ಣೆಯನ್ನು ಸುಲಭವಾಗಿ ಗುರುತಿಸಬಹುದು. ಇತರ ಯಾವ ಎಣ್ಣೆಗಳಿಗೂ ಈ ಬಣ್ಣ ಅಂಟುವುದಿಲ್ಲ. ಇದಕ್ಕೆ ಬೊಡಾಯಿನ್ ಟೆಸ್ಟ್ ಎಂದು ಹೆಸರು. ಎಳ್ಳು ಹಿಂಡಿ ಜಾನುವಾರುಗಳಿಗೆ ಒಳ್ಳೆಯ ಮೇವು; ನೆಲಕ್ಕೆ ಒಳ್ಳೆಯ ಗೊಬ್ಬರ. (ವೈ.ಎಸ್.ಎಲ್.)
ಎಳ್ಳು ಬೆಳೆಗೆ ಆಂಟೆಗ್ಯಾಸ್ಟರ್ ಕ್ಯಾಟೆಲನಾಲಿಸ್ ಎಂಬ ಕಂಬಳಿ ಹುಳುಗಳು ಹತ್ತಿ ಎಲೆಗಳನ್ನು ತಿಂದು ಕಾಂಡ ಮತ್ತು ಕಾಯಿಗಳನ್ನು ಹಾಳುಮಾಡುತ್ತವೆ. ಆಸ್ಪೆನೊಡೈಲಿಯ ಸಿಸ್ಸೆಮಿ ಕೀಟದ [[ಚಿಟ್ಟೆ]] ಹೂವಿನ ಮೊಗ್ಗನ್ನು ತಿಂದು ಹಾಕುತ್ತದೆ. ಇವುಗಳ ಜೊತೆಗೆ ರಸ ಕುಡಿಯುವ ಬಲ್ಬ್ ಮತ್ತು ಎಫಿಡ್ಡುಗಳೂ ಬೆಳೆ ಹಾಳು ಮಾಡುತ್ತವೆ. ಎಲೆಗಳಿಗೆ ಸರ್ಕೊಸ್ಟೊರ ಎಂಬ ಬೂಷ್ಟು [[ರೋಗ]] ಬಂದರೆ ಬೂದು ಬಣ್ಣದ ಅಥವಾ ಕಪ್ಪು ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗ ತಗುಲಿದರೆ ಬೆಳೆಗೆ ತೀರ ಹಾನಿಯಾಗುವುದು. ಕೆಲವು ರಾಸಾಯನಿಕ ಕ್ರಿಮಿನಾಶಕಗಳಿಂದ ಈಚೆಗೆ ಈ ಪಿಡುಗುಗಳನ್ನು ಹತೋಟಿ ಗೊಳಿಸಲಾಗಿದೆ. (ಜಿ.ಬಿ)
|