"ಎಳ್ಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
'''ಎಳ್ಳು''' (''ಸೆಸಮಮ್ ಇಂಡಿಕಮ್'') ''[[ಸೆಸಮಮ್]]'' ಪಂಗಡದಲ್ಲಿನ ಒಂದು [[ಹೂಬಿಡುವ ಸಸ್ಯ]]. [[ಆಫ್ರಿಕಾ]]ದಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ಮತ್ತು [[ಭಾರತ]]ದಲ್ಲಿ ಸಣ್ಣಸಂಖ್ಯೆಯಲ್ಲಿ ಕಾಡುಸಂಬಂಧಿಗಳು ಕಾಣುತ್ತವೆ. ವಿಶ್ವದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ಅದು ವ್ಯಾಪಕವಾಗಿ [[ದೇಶೀಕರಣ]]ಗೊಂಡಿದೆ ಮತ್ತು ಬೀಜಕೋಶಗಳಲ್ಲಿ ಬೆಳೆಯುವ ಅದರ ಖಾದ್ಯ ಬೀಜಗಳಿಗಾಗಿ ಬೇಸಾಯಮಾಡಲಾಗುತ್ತದೆ.
 
[[ಎಳ್ಳು]]: ಪಿಡಾಲಿಯೇಸಿ ಕುಟುಂಬಕ್ಕೆ ಸೇರಿದ ಸೆಸ್ಸಾಮಮ್ ಇಂಡಿಕಮ್ ಎಂಬ ಏಕವಾರ್ಷಿಕ ಸಸ್ಯಪ್ರಭೇದ. ಮಾನವ ಮೊಟ್ಟ ಮೊದಲು ಬೆಳೆದ [[ಎಣ್ಣೆ]] ಬೀಜದ ಬೆಳೆಗಳಲ್ಲಿ ಒಂದಾಗಿದೆ. ಎಳ್ಳಿನ ಬೆಳೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಬರ್ಮಾ ದೇಶಕ್ಕೆ ಮೊದಲನೇ ಸ್ಥಾನ. ಏಷ್ಯದ ಇತರ ದೇಶಗಳಲ್ಲಿ ಅಂದರೆ ಸಯಾಮ್, ಇಂಡೊಚೀನ, ಫಾರ್ಮೊಸ, ಜಪಾನ್, ಪ್ಯಾಲೆಸ್ಟೈನ್, ಟರ್ಕಿ ಮತ್ತು ಯುರೋಪಿನ ಮೆಡಿಟರೇನಿಯನ್ ಭಾಗಗಳಲ್ಲಿ, ರಷ್ಯ, ಬ್ರೆಜಿಲ್, ಅರ್ಜಂಟೀನ, ಮೆಕ್ಸಿಕೋ ಮತ್ತು ಆಫ್ರಿಕ ಖಂಡಗಳಲ್ಲೂ ಎಳ್ಳನ್ನು ಬೆಳೆಸುತ್ತಾರೆ. ಈ ಸಸ್ಯದ ಮೂಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಇದು ಭಾರತದ ಮೂಲನಿವಾಸಿಯೆಂದು ಜಾತಿಯನ್ನುರ್ವಆಫ್ರಿಕದ ಮೂಲನಿವಾಸಿಯೆಂದು ಇನ್ನೂ ಕೆಲವರೂ ವಾದಿಸುವರು. ವೇದಗಳಲ್ಲಿ ತಿಲಪದದ ಪ್ರಯೋಗ, ಪುರ್ವ ಅಪರ ಕರ್ಮಗಳಲ್ಲಿ ತಿಲದ ಪ್ರಾಮುಖ್ಯ ಕಂಡುಬಂದಿದೆ. ಹೇಗೇ ಆಗಲಿ ಅದು ಕ್ರಮ ಕ್ರಮವಾಗಿ ಉಷ್ಣವಲಯ ಮತ್ತು ದಕ್ಷಿಣ ಸಮಶೀತೋಷ್ಣವಲಯಗಳಲ್ಲಿ ಹರಡಿತೆಂದು ನಂಬಲಾಗಿದೆ. ಬೆಳೆಯ ಅವಧಿ ಎರಡೂವರೆಯಿಂದ ಆರು ತಿಂಗಳವರೆಗೆ. ಗಿಡ ಸುಮಾರು ಎರಡರಿಂದ ಐದು ಅಡಿ ಎತ್ತರಕ್ಕೆ ನೇರವಾಗಿ ಬೆಳೆಯುತ್ತದೆ. ರೆಂಬೆಗಳು ಅನೇಕ, ಮೊಟ್ಟೆಯಾಕಾರದ ಅಥವಾ ಭರ್ಜಿ ಆಕಾರದ ಎಲೆಗಳು ಕಾಂಡದ ಕೆಳಭಾಗದಲ್ಲಿ ಅಭಿಮುಖ ಜೋಡಣೆಯಿಂದ ಕೂಡಿರುತ್ತವೆ. ಮೇಲ್ಭಾಗದಲ್ಲಿ ಪರ್ಯಾಯ ಜೋಡಣೆ ಕಂಡು ಬರುತ್ತದೆ. ಬಿತ್ತನೆಯಾದ ಆರು ವಾರಗಳಲ್ಲಿ ಒಂದರಿಂದ ಮೂರು ಆಕರ್ಷಕ ಬಿಳಿಯ ಹೂಗಳು ಮೂಡುತ್ತವೆ. ಹೂವಿನಲ್ಲಿ ದಳಗಳು ಕೂಡಿಕೊಂಡು ಕೊಳವೆಯೋಪಾದಿಯಲ್ಲಿದ್ದು ತುದಿಯಲ್ಲಿ ಹರಡಿಕೊಂಡಿರುತ್ತದೆ. ಬಣ್ಣ ಬಿಳಿಯಾದರೂ ಬಿಳಿಯಿಂದ ದಟ್ಟ ನೀಲಿಯವರೆಗೆ ಬಣ್ಣ ವ್ಯತ್ಯಾಸ ಕಂಡುಬರುತ್ತದೆ. ಕೇಸರಗಳು ನಾಲ್ಕು. ಅವುಗಳಲ್ಲಿ ಎರಡು ಚಿಕ್ಕವು, ಎರಡು ದೊಡ್ಡವು. ಅಂಡಾಶಯ ಉಚ್ಚಸ್ಥಾನದ್ದಾಗಿದ್ದು ಇಬ್ಭಾಗದ ಎರಡು ಜೋಡಣೆಗಳಿಂದ ಕೂಡಿದೆ. ಕಾಯಿ ಸಂಪುಟ (ಕ್ಯಾಪ್ಸುಲ್) ಮಾದರಿಯದು. ಆಕಾರ ನೀಳ ಚತುರ್ಭುಜಾಕೃತಿ. ಉದ್ದ ಒಂದರಿಂದ ಎರಡು ಇಂಚು, ಸುತ್ತಳತೆ ಅರ್ಧದಿಂದ ಒಂದು ಇಂಚು, ಒಳಗೆ ಎರಡು ಕೋಣೆಗಳಿದ್ದು ಅನಂತರ ನಾಲ್ಕಾಗುತ್ತವೆ. ಬೀಜ ಗಾತ್ರದಲ್ಲಿ ಚಿಕ್ಕವಾದರೂ ಪ್ರತಿ ಕಾಯಲ್ಲೂ ಅಧಿಕ ಸಂಖ್ಯೆಯಲ್ಲಿರುತ್ತವೆ. ಆಕಾರ ಚಪ್ಪಟೆ, ಬಣ್ಣ ಅನೇಕ, ಬಿಳುಪು, ಮಾಸಲು ಬಿಳುಪು, ಸ್ವಲ್ಪ ಕಪ್ಪು, ಕಂದು ಕಪ್ಪು ಹೀಗೆ ಬೇರೆ ಬೇರೆ ಪ್ರಭೇದದ ಬೇರೆ ಬೇರೆ ತಳಿಗಳು ಬೇರೆ ಬೇರೆ ಬಣ್ಣ ಹೊಂದಿರುತ್ತವೆ.
 
ಕರ್ನಾಟಕ ರಾಜ್ಯದಲ್ಲಿ ಫೆಬ್ರವರಿಯಿಂದ ಮಾರ್ಚ್ ವರೆಗೆ ನೀರಾವರಿಯಿಂದ ಬಿತ್ತನೆ ಮಾಡುವುದನ್ನು ಕಾರು ಎಳ್ಳು ಎಂದು ಕರೆಯುತ್ತಾರೆ. ಇದು ಸ್ವಲ್ಪ ಕಂದು ಬಣ್ಣದ ಬೀಜದ ತಳಿ. ಕಪ್ಪು ಬಣ್ಣದವೂ ಇವೆ. ಪ್ರಮುಖ ತಳಿಗಳ ಬೀಜಗಳನ್ನು ಜೂನ್ ಅಥವಾ ಜುಲೈ ಮಧ್ಯದಲ್ಲಿ ಬಿತ್ತಿ ಅಕ್ಟೋಬರ್ ಅಥವಾ ನವಂಬರ್ ತಿಂಗಳಲ್ಲಿ ಒಕ್ಕಣೆ ಮಾಡುತ್ತಾರೆ. ಇವು ಕಂದು ಮತ್ತು ಕಪ್ಪು ಬೀಜಗಳುಳ್ಳ ತಳಿಗಳು. ಬಿಳಿಯ ಮತ್ತು ಮಾಸಲು ಬಿಳಿಯ ಜಾತಿಯನ್ನು ಸೆಪ್ಟೆಂಬರಿನಲ್ಲಿ ಬಿತ್ತಿ ಡಿಸೆಂಬರಿನಲ್ಲಿ ಒಕ್ಕಣೆ ಮಾಡುತ್ತಾರೆ. ಎಳ್ಳಿನ ಬೀಜದಲ್ಲಿ ಶೇಕಡ ನಲವತ್ತೈದರಿಂದ ಅರವತ್ತುಮೂರು ಭಾಗ ಎಣ್ಣೆ, ಹದಿನಾರರಿಂದ ಮೂವತ್ತೆರಡು ಭಾಗ ಸಾರಜನಕ ಇದೆ. ಭಾರತದಲ್ಲಿ ಹುರಿದ ಅಥವಾ ಹಸಿಯ ಎಳ್ಳು ಬೀಜವನ್ನು ಅನೇಕ ಸಿಹಿತಿಂಡಿಗೆ ಉಪಯೋಗಿಸುತ್ತಾರೆ. (ಜಿ.ಬಿ.;ಡಿ.ಜಿ.)
"https://kn.wikipedia.org/wiki/ವಿಶೇಷ:MobileDiff/855841" ಇಂದ ಪಡೆಯಲ್ಪಟ್ಟಿದೆ