ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧ ನೇ ಸಾಲು:
[[File:Horseshoe_Bend_TC_27-09-2012_15-34-14.jpg|thumbnail|The Colorado River at [[Horseshoe Bend (Arizona)|Horseshoe Bend]], [[Arizona]]]]
 
ನೆಲದ ಮೇಲೆ ಬಿದ್ದ ನೀರಿನ ಬಹುಭಾಗ ಇಮರಿ ಇಂಗಿಹೋಗುತ್ತದೆ. ಸಾಕಷ್ಟು ಭಾಗ ಸಸ್ಯಗಳ ಮೂಲಕ ಅಲ್ಲದೇ ನೇರ ಆವಿಯಾಗಿ ಮತ್ತೆ ವಾಯುಮಂಡಲವನ್ನು ಸೇರಿ ಪುನಃ ಮಳೆಯಾಗಿ ನೆಲದ ಮೇಲೆ ಬೀಳುತ್ತದೆ. ಈ ನಿರಂತರ ನೈಸರ್ಗಿಕ ಆಟ ಚಕ್ರದಂತೆ ತಿರುಗುತ್ತಿರುವುದು. ಇಮರಿದ ನೀರಿನ ಬಹು ಭಾಗ ನೆಲಮಟ್ಟದಿಂದ ಸಾಕಷ್ಟು ಆಳದಲ್ಲಿ ಶೇಖರವಾಗಿ ಅಂತರ್ಜಲವೆನಿಸುತ್ತದೆ. ಇದು ಚಿಲುಮೆ ಹಾಗೂ ಬಾವಿಗಳ ಮೂಲಕ ನಮಗೆ ದೊರೆಯುವುದು. ಇನ್ನುಳಿದ ಭಾಗ ಇಳಿಜಾರಿರುವ ಕಡೆ ಪ್ರವಹಿಸಿ ಹೊಳೆ ಅಥವಾ ನದಿ ಎನಿಸುತ್ತದೆ. ಹೀಗೆ ನದಿಗೆ ಜೀವಾಧಾರ ಮಳೆ. [[ಮಳೆ]]ಯಿಲ್ಲದೆ ನದಿಯಿಲ್ಲ. ಮಳೆ [[ಭೂಮಿ]]ಯ ಮೇಲೆ ಒಂದೇ ಸಮವಾಗಿ ಬೀಳುವುದಿಲ್ಲ. ಇದಕ್ಕೆ ಹಲವಾರು ಕಾರಣಗಳುಂಟು. [[ಚಿಲಿ]] ದೇಶದ [[ಆಟಕಾಮ ಮರುಭೂಮಿ]]ಯಲ್ಲಿ ನಾಲ್ಕೈದು ವರ್ಷಗಳಿಗೊಮ್ಮೆ ಎಂದೋ ಒಂದು ದಿನ ಹನಿ ಹಾಕುತ್ತದೆ. ಆದರೆ ಅಸ್ಸಾಮಿನ [[ಚಿರಾಪುಂಜಿ]]ಯಲ್ಲಿ ಇಡೀ ವರ್ಷದುದ್ದ ಧಾರಾಕಾರವಾದ ಮಳೆ. ವರ್ಷಕ್ಕೆ ಏನಿಲ್ಲೆಂದರೂ 1500 ಸೆಂ.ಮೀ.ಗಳಷ್ಟು ಮಳೆ. ಇಂಥ ಪ್ರದೇಶದ ನದಿಗಳಲ್ಲಿ ವರ್ಷದ ಉದ್ದಕ್ಕೂ ನೀರು ಹರಿಯುತ್ತಿದ್ದು ಅವು ಜೀವಂತ ನದಿಗಳು ಎನ್ನಿಸಿಕೊಳ್ಳುವುವು. ಪ್ರತಿವರ್ಷವೂ ಬೀಳುವ ಮಳೆಯ ಪ್ರಮಾಣ 91.44 ಸೆಂಮೀ. ಗಳೆನಿಸಿದಲ್ಲಿ ಅದು 13,98,60,000 ಚದರ ಕಿಮೀ ವಿಸ್ತೀರ್ಣದ ಭೂಖಂಡಗಳ ಮೇಲೆ ಬಿದ್ದು ಸುಮಾರು 127.185 ಘನ ಕಿಮೀ.ಗಳಷ್ಟು ಮಳೆಯ ನೀರಿನ ಪ್ರಮಾಣಕ್ಕೆ ಕಾರಣವೆನಿಸುತ್ತದೆ. ಇದರಲ್ಲಿ ಕೇವಲ ಮೂರನೆಯ ಒಂದು ಭಾಗ ಅಂದರೆ ಸುಮಾರು 37,530 ಘನ ಕಿಮೀಗಳಷ್ಟುಕಿ.ಮೀ ಗಳಷ್ಟು ನದಿಗಳ ರೂಪದಲ್ಲಿ ಹರಿದು ಸಮುದ್ರವನ್ನು ಸೇರುತ್ತದೆ. ಇನ್ನುಳಿದ 89,655 ಘನ ಕಿಮೀಕಿ.ಮೀ ನೀರು ಇಂಗಿ ಇಮರುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ವಾರ್ಷಿಕ ಮಳೆಯ ಪ್ರಮಾಣ ಸುಮಾರು 380 ಸೆಂಮೀ. ಇದರಲ್ಲಿ 358 ಸೆಂಮೀ.ಗಳಷ್ಟು ಸಸ್ಯಗಳ ಮೂಲಕ ಅಲ್ಲದೇ ಇಮರಿ ಆವಿಯಾಗಿ ಮತ್ತೆ ವಾಯು ಮಂಡಲವನ್ನು ಸೇರುತ್ತದೆ. ಕೇವಲ 22 ಸೆಂಮೀ.ಗಳಷ್ಟು ನೀರು ಮಾತ್ರ ನದಿಗಳಾಗಿ ಹರಿದು ಕಟ್ಟಕಡೆಗೆ ಸಮುದ್ರವನ್ನು ಸೇರುತ್ತದೆ. ಹೀಗೆ ಹರಿವ ನೀರನ್ನು ನದಿ ಎಂದು ಊಹಿಸಿದಲ್ಲಿ ಅದು ಪ್ರತಿದಿನ 6.3644Χ 1011 ಲೀಟರುಗಳಷ್ಟು ನೀರನ್ನು ಸಮುದ್ರಕ್ಕೆ ಒಯ್ಯುವ ನಿತ್ಯನದಿ ಎನಿಸುತ್ತದೆ. ಈ ದೇಶದ ನದಿಗಳ ಒಟ್ಟು ಉದ್ದ 48,27,000 ಕಿಮೀ.
[[File:NileDelta-EO.JPG|thumb|left|[[Nile River delta]], as seen from Earth orbit. The Nile is an example of a wave-dominated delta that has the classic Greek letter delta (Δ) shape after which river deltas were named.]]
[[File:PIA16197 Titan river.jpg|thumb|right|A radar image of a {{convert|400|km|mi|adj=on}} river of methane and ethane near the north pole of Saturn's moon [[Lakes of Titan|Titan]]]]
೧೮ ನೇ ಸಾಲು:
ಭೂಮಿಯ ಮೇಲೆ ಹರಿಯುವ ಮಳೆಯ ನೀರು ಕಾಲುವೆಗಳಾಗಿ, ಸಣ್ಣ ಝರಿಗಳಾಗಿ, ಹಲವಾರು ಝರಿಗಳು ಸೇರಿ ತೊರೆಯಾಗಿ, ಈ ಬಗೆಯ ಹತ್ತಾರು ತೊರೆಗಳು ಒಟ್ಟುಗೂಡಿ ನದಿಯಾಗಿ ಪ್ರವಹಿಸುತ್ತವೆ. ಹೀಗೆ ಮಳೆಯ ನೀರೇ ಮೂಲಾಧಾರವಾದರೂ ಹಲವು ಬಾರಿ ಸರೋವರಗಳು, ಚಿಲುಮೆಗಳು ಸಹ ನದಿಗಳಿಗೆ ಮೂಲವಾಗಿರಬಹುದು. ಅಂತೆಯೇ ಹಿಮದ ಹಾಳೆಗಳು ಕರಗಿ ಅವು ಕೂಡ ನದಿಗೆ ಆಸರೆ ಯಾಗಿರಲು ಸಾಧ್ಯ. ಹೀಗೆ ನಾನಾ ಬಗೆಯಲ್ಲಿ ಜನ್ಮತಳೆವ ನದಿಗಳು ಅಪಾರ. ಒಂದೊಂದು ಬಗೆ. ಪ್ರಪಂಚದಲ್ಲಿ ಈ ತೆರನಾದ ಸಾವಿರಾರು ನದಿಗಳಿದ್ದು ಅವುಗಳಲ್ಲಿ ಪ್ರಮುಖವೆನಿಸಿದ ಹದಿನೈದು ನದಿಗಳನ್ನು ಇಲ್ಲಿ ಬರೆದಿದೆ.
 
ಉಗಮದಿಂದ ತೊಡಗಿ ಸಾಗರಸಂಗಮದವರೆಗೆ ನದಿ ಮಾಡುವ ಕೆಲಸಗಳು ಹಲಬಗೆಯವು. ಭೂವ್ಯಾಪಾರಕಾರಕಗಳ ಪೈಕಿ ನದಿಗೆ ಅಗ್ರಸ್ಥಾನ. ಇದರ ಕಾರ್ಯಾಚರಣೆ ಬಹು ವ್ಯಾಪಕ ಹಾಗೂ ಸತತ. ನದಿ ಹರಿಯುವ ಪ್ರದೇಶದ ದಿಬ್ಬ, ಬೆಟ್ಟ, ಕಣಿವೆ, ಜಲಪಾತ, ಮೈದಾನ ಮೊದಲಾದ ಭೂಸ್ವರೂಪಗಳಲ್ಲೆಲ್ಲ ನದಿಯ ಕೈವಾಡವನ್ನು ಗುರುತಿಸಬಹುದು. ನೆಲಮಟ್ಟ ಸಮುದ್ರ ಮಟ್ಟಕ್ಕಿಂತ ಸುಮಾರು 0.8 ಕಿಮೀಯಷ್ಟುಕಿ.ಮೀ ನಷ್ಟು ಹೆಚ್ಚಾಗಿದೆ ಎಂದು ಅಂದಾಜು. ಈ ಅಂತರವನ್ನು ಭೂಸವೆತದಿಂದ ಆದಷ್ಟು ಕಡಿಮೆ ಮಾಡುವುದೇ ನದಿಯ ಮುಖ್ಯ ಕೆಲಸ.
 
==ನದಿ ಮೂಲ==
ನದಿ ಹುಟ್ಟುವುದು ಸಾಮಾನ್ಯವಾಗಿ ಬೆಟ್ಟ ಅಥವಾ ಪರ್ವತಪ್ರದೇಶಗಳಲ್ಲಿ. ಇದೇ ನದಿಯ ಮೂಲ. ಇದಕ್ಕೆ ಮಳೆಯ ನೀರು ಅಥವಾ ಹಿಮಗಡ್ಡೆಗಳೇ ಆಶ್ರಯ. ಇಲ್ಲಿ ನದಿಯನ್ನು ಗುರುತಿಸುವುದು ಬಲು ಕಷ್ಟ. ಬೆಟ್ಟದ ಮೇಲೆ ಬಿದ್ದ ಮಳೆಯ ಅಥವಾ ಹಿಮಗಡ್ಡೆ ಕರಗಿ ಉಂಟಾದ ನೀರು ಇಳಿಜಾರಿನ ಕೊರಕಲುಗಳಲ್ಲಿ ಝರಿಗಳಂತೆ ಹರಿದು ಕೆಳಗಿಳಿಯುತ್ತದೆ. ಮುಂದೆ ಹರಿದಂತೆಲ್ಲ ಹಲವಾರು ಝರಿಗಳು ಒಂದರೊಡನೊಂದು ಸೇರಿ ಹಳ್ಳವಾಗಿ, ಸಣ್ಣತೊರೆಯಾಗಿ ಬೆಟ್ಟದ ತಪ್ಪಲನ್ನು ಮುಟ್ಟುವ ವೇಳೆಗೆ ಸಾಕಷ್ಟು ಗುರುತಿಸಲು ಸಾಧ್ಯವಾದ ನದಿಯಾಗುತ್ತದೆ. ಹಿಮಾಲಯದ ನದಿಗಳಿಗೆ ಬಲುಮಟ್ಟಿಗೆ ಹಿಮಗಡ್ಡೆಗಳೇ ಆಶ್ರಯ. ದಕ್ಷಿಣ ಭಾರತದ ನದಿಗಳಿಗೆ ಮಳೆಯ ನೀರೇ ಮೂಲ.
"https://kn.wikipedia.org/wiki/ನದಿ" ಇಂದ ಪಡೆಯಲ್ಪಟ್ಟಿದೆ