"ಗಂಗಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
==ಉತ್ತರ ಕಾಶಿ==
*ಉತ್ತರ ಕಾಶಿಯು ನೈಸರ್ಗಿಕ ಸೌಂದರ್ಯ, ಧಾರ್ಮಿಕ ಆಸ್ತಿಕತೆಯ ಅಪೂರ್ವ ಸಂಗಮ ಪ್ರದೇಶ. ಮನುಷ್ಯನ ಮನಸ್ಸಿಗೆ ರೋಮಾಂಚನ ತರುವ ಸ್ಥಳ ಮನಮೋಹಕ ದೃಶ್ಯ. ಭಕ್ತ ರಭಕ್ತರ ಪಾಲಿಗೆ ಕಲ್ಯಾಣಕಾರಿ. ಪ್ರಕೃತಿಯ ಅನುಪಮ ನೋಟ ತಲೆ ಎತ್ತಿದರೆ ಗಗನಚುಂಬಿ ಬೆಟ್ಟಗಳು, ತಲೆ ತಗ್ಗಿಸಿದರೆ ನೀಳವಾಗಿ ಹರಿಯುವ ಗಂಗೆ, ಇದನ್ನೇಲ್ಲ ಹೋಗಿಯೆಇದನ್ನೆಲ್ಲ ಅನುಭವಿಹೋಗಿಯೇ ಸಬೇಕುಅನುಭವಿಸಬೇಕು, ಆಸ್ವಾದಿಸಬೇಕು.
*ಉತ್ತರಕಾಶಿಯಲ್ಲಿ ಉಳಿದು ವಿಶ್ರಾಂತಿ ಪಡೆದು ಮುಂದೆ ಹೊರಡಬಹುದು. ಇಲ್ಲಿ ತಂಗಲು ಅನೇಕ ಧರ್ಮಶಾಲೆಗಳು, ವಸತಿಗಳು ಇವೆ. ನೂರು ವರುಷದಷ್ಟು ಹಳೆಯದಾದ ಕೈಲಾಸ ಆಶ್ರಮವೂ ಇದೆ. ಇಲ್ಲಿ ರಾತ್ರಿ ಎಂಟರವರಗೆಎಂಟರವರೇಗೆ ಬೆಳಕು ಇರುತ್ತದೆ. ಸೂರ್ಯಾಸ್ತಮ ತಡವಾಗಿ ಆಗುತ್ತದೆ ಇದೇ ಇಲ್ಲಿನ ವೈಶಿಷ್ಟ್ಯ.
*ಹಾಗೆ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ.
*ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. ಅದನ್ನು ತಿಳಿಯಲು ಅನೇಕ ವೈಜ್ಞಾನಿಕ ಪ್ರಯೋಗಗಳಾದರೂ ಸತ್ಯವನ್ನು ತಿಳಿಯಲು ಇನ್ನು ಸಾದ್ಯವಾಗಿಲ್ಲ. ಉತ್ತರ ಕಾಶಿಯಿಂದ ಬೆಳಿಗ್ಗೆ ಬೇಗ ೫ ಗಂಟೆಗೆ ಹೊರಟರೆ ಸಂಜೆಗೆ ವಾಪಾಸ್ಸು ಉತ್ತರ ಕಾಶಿಗೆ ಬಂದು ಸೇರಬಹುದು.
*ಉತ್ತರ ಕಾಶಿಯಿಂದ ಗಂಗೋತ್ರಿಗೆ ಹೊರಟಾಗ ದಾರಿಯಲ್ಲಿ ಸಿಗುವ ಸುಂದರ ತಾಣ 'ಹಸ್ಲಿಲ'. ಈ ಪ್ರದೇಶವು 'ಸೇಬು ಮರ'ಗಳಿಂದ ತುಂಬಿ ತುಳುಕುತ್ತದೆ. ಉತ್ತರ ಕಾಶಿ ಯಿಂದ ೧೫.ಕಿ.ಮೀ. ದೂರದಲ್ಲಿ ಮನೇರಿ ಡ್ಯಾಂ ಇದೆ. ಇಲ್ಲಿಯ ನಂತರ ಗಂಗೆ ತನ್ನ ಗಾತ್ರವನ್ನು ಕುಗ್ಗಿಸುತ್ತಾಳೆ. ಬೆಟ್ಟದ ಅಡಿಯಿಂದ ಉತ್ತರಕಾಶಿ ತನಕ ಹೋಗುತ್ತಾಳೆ. ಇಲ್ಲಿಂದ ಮುಂದೆ ಭೂ ಕುಸಿತಗಳ ಪ್ರಕರಣಗಳು ಹೆಚ್ಚು, ಹಾಗೇನಾದರು ಆದರೆ ಗಂಟೆಗಟ್ಟಲೆ-ದಿನಗಟ್ಟಲೆ ಸಾಲುಸಾಲಾಗಿ ವಾನಹಗಳುವಾಹನಗಳು ನಿಲ್ಲುತ್ತವೆ.
*ಮಿಲ್ಟ್ರಿರಿಯವರುಮಿಲಿಟ್ರಿಯವರು ಬಂದು ತೆರವು ಮಾಡಿದ ಮೇಲೆ ಹೊರಡಬೇಕಾಗುತ್ತದೆ. ಹಸ್ಲಿಲದಲ್ಲಿ ಮಿಲ್ಟ್ರಿಮಿಲಿಟ್ರಿ ಕ್ಯಾಂಪ್ ಇದೆ, ಆ ಸ್ಥಳದ ಸುತ್ತ ಮುತ್ತಲೇ 'ರಾಮತೇರಿ ಗಂಗಾಮೈಲಿ' ಹಿಂದಿ ಸಿನಿಮಾ ತೆಗೆದದ್ದನ್ನು ಅಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ನಂತರ ಸಿಗುವುದೇ ಭೈರವ ಘಾಟಿ. ಇಲ್ಲಿ ಭೈರವನ ದೇವಸ್ಥಾನವಿದೆ. ಊಟ-ತಿಂಡಿ ಚಾಯ್ ಹೋಟಲು ಗಳಿವೆಹೋಟೆಲುಗಳಿವೆ. ಯಾತ್ರಿಕರು ವಿಶ್ರಾಂತಿ ಪಡೆದು ಮುಂದೆ ಹೊರಡ್ತಾರೆ.
*ಭೈರವ ಘಾಟಿಯ ನಂತರ ಗಂಧಕ ಪರ್ವತಗಳ ತಾಣವಿದೆ. ಇಲ್ಲಿ ಬಿಸಿನೀರಿನ ಬುಗ್ಗೆಗಳನ್ನು ನೋಡಬಹುದು. ಯಾತ್ರಿಕರು ಅಲ್ಲಿ ಸ್ನಾನ ಮಾಡಿ ಮುಂದಕ್ಕೆ ಹೊರಡುತ್ತಾರೆ. ಅಲ್ಲಿ ದಾರಿಯುದ್ದಕ್ಕೂ ಪಾದಯಾತ್ರಿಕರನ್ನು ನೋಡುತ್ತೇವೆ (ಸನ್ಯಾಸಿಗಳು-ಸಿಖ್ಖ್‌ರು ಹೆಚ್ಚು) ಸಿಖ್ಖ್‌ರು ಡೋಲಿಯ ತರದಲ್ಲಿ ಇರುವ ಗಾಡಿಯಲ್ಲಿ ಗಂಗಾ ಜಲವನ್ನು ಇಟ್ಟು ಭಜನೆ ಮಾಡುತ್ತಾ ಹೋಗುವುದನ್ನು ಕಾಣಬಹುದು.
*ಥಂಡಿ ಹವಾ-ತುಂತುರು ಮಳೆ (ಜುಲೈ ತಿಂಗಳು) ಎರಡು ಕಡೆ ಕಡಿದಾದ ಎತ್ತರ ಬೆಟ್ಟಗಳು ಮೇಲಿನಿಂದ ಸಣ್ಣದಾಗಿ ಬೀಳುವ ನೀರಿನಿಂದ ಝರಿಗಳು, ಮೋಡಗಳು, ಪಾತಾಳ ದಲ್ಲಿ ಭೋರ್ಗರೆದು ಹರಿಯುವ ಗಂಗೆ. ಬ್ರಹ್ಮ ಸೃಷ್ಠಿಯನ್ನೇ ಕಡೆದು ಅಲ್ಲಿ ಇಟ್ಟಿದ್ದಾನೆನ್ನುವಂತಿದೆ. ಗಂಗೋತ್ರಿ ಸಮುದ್ರ ಮಟ್ಟದಿಂದ ೩೧೦೦ ಮೀಟರ್(೧೦,೩೫೫ ಅಡಿ) ಎತ್ತರದಲ್ಲಿದೆ. ಗಂಗೋತ್ರಿ ತಲುಪುವ ವೇಳೆಗೆ ಎಲ್ಲ ಆಯಾಸಗಳನ್ನು ಮರೆತುಬಿಡುತ್ತೇವೆ.
*ಗಂಗೆಯ ದಡದಲ್ಲಿ ಕೂತರೆ, ಆಕೆ ಹಿಮಾಲಯದಿಂದ ವೋ ಎಂದು ಸದ್ದು ಮಾಡುತ್ತಾ ಭೋರ್ಗರೆದು ಹರಿದು ಬರುವ ದಾರಿ(ಹರಿದ್ವಾರದಲ್ಲಿ ಶಾಂತವಾಗಿ ಹರಿಯುತಾಳೆ) ದೃಶ್ಯ ನಮ್ಮನ್ನು ತಲ್ಲೀನವಾಗಿಸುತ್ತದೆ. ಆಕೆಯನ್ನು ಸ್ಪರ್ಶಿಸಿದರೆ ತಣ್ಣಗೆ ಕೊರೆಯುತ್ತಾಳೆ. ಇಲ್ಲಿ ಗಂಗಾಮಾತೆಯ ವಿಶಾಲ ದೇವಾಲಯವಿದೆ. ಇದರಲ್ಲಿ ಗಂಗಾ, ಜಮುನಾ, ಸರಸ್ವತಿ, ಲಕ್ಷ್ಮೀ ಪಾರ್ವತಿ ಮತ್ತು ಸರಸ್ವತಿ ದೇವತೆಗಳ ಪ್ರಾಚೀನ ಪ್ರತಿಮೆಗಳಿವೆ.
*ಭಗೀರಥ ಮಹಾರಾಜ ಎದುರಿಗೆ ಕೈ ಜೋಡಿಸಿ ನಿಂತಿರುವ ಪ್ರತಿಮೆಯಿದೆ. ಇಲ್ಲಿ ಪೂಜಿಸುವ ವಸ್ತುಗಳೆಲ್ಲ ಚಿನ್ನದವು. ಇಲ್ಲಿ ಒಂದು ಸ್ಥಳದಲ್ಲಿ ಗಂಗೆ ಶಿವಲಿಂಗದ ಮೇಲೆಯೇ ಬೀಳು ತ್ತಾಳೆಬೀಳುತ್ತಾಳೆ. ಇಲ್ಲಿ ಶೀತಗಾಳಿ ಹೆಚ್ಚು. ನಾವು ಗಂಗೆಯಲ್ಲಿ ಇಳಿದು ಸ್ನಾನ ಮಾಡುವುದು ಅತ್ಯಂತ ಕಷ್ಟಕರ. ತಲೆ ಮೇಲೆ ಪ್ರೋಕ್ಷಣೆ ಮಾಡುವಷ್ಟರಲ್ಲಿಯೇ ಕೈ ಶೀತದಿಂದ ಮರಗಟ್ಟಿರು ತ್ತದೆ. ದುರ್ಗಮ ಘಟ್ಟಗಳ ಮಧ್ಯೆ ಪಾಪ ಕಳೆಯುವ ಪತೀತ ಪಾವನೆ ಈ ಗಂಗಾ ಮಾತೆಯ ಮುಂದಿರುವ ಸ್ಥಳ ಸಗರರಾಜ ಭಗೀರಥ ಕುಳಿತು ತಪಸ್ಸು ಮಾಡಿದ ಸ್ಥಳ ಎಂದು ಹೇಳುವ ದೊಡ್ಡ ಕಲ್ಲು ಹಾಸಿಗೆ ಇದೆ.
*ಈ ಸ್ಥಳದಲ್ಲಿ ಮಾಡುವಂತಹ ಪೂಜೆ ಮಂಗಳಕಾರಿ ಇಲ್ಲಿ ವರ್ಷದ ೬ ತಿಂಗಳು ಮಾತ್ರ ಪೂಜೆ ನಡೆಯುತ್ತದೆ. ಇನ್ನು ೬ ತಿಂಗಳು ಹಿಮದಿಂದ ತುಂಬಿ ಹೋಗಿರುತ್ತದೆ. ಆಗ ಬೆಟ್ಟದ ಕೆಳಗಿರುವ ಮುಖೀಮಠದಲ್ಲಿ ಪೂಜೆ ನಡೆಯುತ್ತದೆ. ಅಲ್ಲಿ ಯಾರೂ ಇರಲು ಸಾಧ್ಯವಿಲ್ಲ. ಉನ್ನತ ಪರ್ವತಗಳ ನಡುವೆ ಕಿಲಕಿಲ ನಗುತ್ತಾ ತಂಪಾಗಿ ಕೊರೆಯುತ್ತಾ ಹರಿಯುವ ಗಂಗಾಜಲ ಧಾರೆಯು ದೃಶ್ಯ ನಮಗೊಂದು ಅಲೌಕಿಕ ಆನಂದ ಕೊಡುತ್ತದೆ (ಇಲ್ಲಿ ಯಾತ್ರೆಗೆ ಮೇ-ಸೆಫ್ಟೆಂಬರ್).
*ಇಲ್ಲಿ ಗಂಗೆಯ ಪೂಜೆ ಮಾಡಿಸಲು ಪೂಜಾರಿಗಳು ಅನೇಕರು ಹಿಂದೆ ಹಿಂದೆ ಬರುತ್ತಾರೆ. ಪೂಜೆ ಮಾಡಿಸಿದರೆ ಮನೆತನದ ಹಿರಿಯರಿಗೆ ಮುಕ್ತಿ ಸಿಗುತ್ತದೆ ಎನ್ನುವ ಪ್ರತೀತಿ. ಇಲ್ಲಿ ಅನೇಕ ಕ್ಷೇತ್ರಗಳು ಮತ್ತು ಧರ್ಮಶಾಲೆಗಳು, ಸಣ್ಣ ಪೇಟೆಯು ಇದೆ.
"https://kn.wikipedia.org/wiki/ವಿಶೇಷ:MobileDiff/855553" ಇಂದ ಪಡೆಯಲ್ಪಟ್ಟಿದೆ