ಟೊಮೇಟೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭೯ ನೇ ಸಾಲು:
ಕರ್ನಾಟಕದಲ್ಲಿ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಅರ್ಕಾರಕ್ಷಕ್‌’ ಟೊಮೆಟೊ ಬೆಳೆ ರೈತರ ಪಾಲಿಗೆ ವರದಾನವಾಗಿದೆ.ಅರ್ಕಾರಕ್ಷಕ್‌ ಟೊಮೆಟೊ ತಳಿಯು ಅತಿ ಹೆಚ್ಚು ಇಳುವರಿ ನೀಡುವ ಹಾಗೂ ಮೂರು ಮುಖ್ಯ ರೋಗಗಳನ್ನು ತಡೆಯುವ ಸಾಮರ್ಥ್ಯವುಳ್ಳ ತಳಿ ಇದು ಎಂದು ಈ ತಳಿಯನ್ನು ಅಭಿವೃದ್ಧಿಪಡಿಸಿರುವ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಎ.ಟಿ. ಸದಾಶಿವ ಹೇಳುತ್ತಾರೆ.ಟೊಮೆಟೊ ಬೆಳೆಗೆ ಬರುವ ಸೊರುಗು ರೋಗ, ಎಲೆಮುರುಟು ರೋಗ ಹಾಗೂ ಎಲೆಚುಕ್ಕೆ ರೋಗಗಳನ್ನು ತಡೆಯುವ ಶಕ್ತಿ ಅರ್ಕಾರಕ್ಷಕ್‌ ತಳಿಗಿದೆ ಎನ್ನುತ್ತಾರೆ.
*ಈ ತಳಿಯಿಂದಹೆಕ್ಟೇರ್‌ಗೆ 40 ರಿಂದ 50 ಸಾವಿರ ಟನ್‌ (?) ಇಳುವರಿ ದೊರೆಯುತ್ತದೆ. ಗಿಡವೊಂದಕ್ಕೆ ಕನಿಷ್ಠ 10 ರಿಂದ 12 ಕೆ.ಜಿ ಫಸಲು ಸಿಗುತ್ತದೆ. ಎಂದರೆ ಒಂದು ಎಕರೆಗೆ ೧೬/16 ಸಾವಿರ ಟನ್ !!.ಗಾತ್ರ ಹಾಗೂ ಆಕಾರ , ಹಣ್ಣಿನ ಬಣ್ಣ ಆಕರ್ಷಣೀಯವೂ ಆಗಿದ್ದು ಮತ್ತು ಗಟ್ಟಿಯಾಗಿದ್ದು ಮಾರಾಟಕ್ಕೆ ಅನುಕೂಲಕರವಾಗಿದೆ. ಫಸಲು ಕೊಯ್ದ ನಂತರ 15–20 ದಿನಗಳಷ್ಟು ಕಾಲ ಕೆಡದೇ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ. ಆಧುನಿಕ ಬೇಸಾಯ ಪದ್ಧತಿಯಿಂದ ಕಡಿಮೆ ನೀರಿದ್ದರೂ ಇದನ್ನು ಬೆಳೆಯಬಹುದು.
:ಬೀಜವನ್ನು ತಂದು 25 ದಿನಗಳ ಕಾಲ ನರ್ಸರಿಯಲ್ಲಿ ಬೆಳೆಸಿದ ನಂತರ ನಾಟಿ ಮಾಡಬೇಕು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಔಷಧಿಯನ್ನು ತಿಂಗಳಿಗೊಮ್ಮೆ ಸಿಂಪರಣೆ ಮಾಡಬೇಕು.ಸಾಲಿನಿಂದ ಸಾಲಿಗೆ ನಾಲ್ಕು ಅಡಿಗಳ ಅಂತರವಿರಬೇಕು. ಗಿಡದಿಂದ ಗಿಡಕ್ಕೆ 2 ಅಡಿಗಳ ಅಂತರದಂತೆ ಒಂದು ಎಕರೆಯಲ್ಲಿ ಅಂದಾಜು 6 ಸಾವಿರ ಗಿಡಗಳನ್ನು ನಾಟಿ ಮಾಡಬೇಕು (ವಿಜ್ಞಾನಿ ಡಾ.ಎ.ಟಿ. ಸದಾಶಿವ).ಟೊಮೆಟೊ ಬೆಳೆಯಲು ಹನಿ ನೀರಾವರಿಗೆ ವೆಚ್ಚ ಬರಬಹುದು. ಇದಕ್ಕೆ ಸರ್ಕಾರ ಶೇ 90 ರಷ್ಟು ಸಬ್ಸಿಡಿ ನೀಡುವುದು.ಇತರೆಇತರ ಕೃಷಿ ವೆಚ್ಚ ಸೇರಿ ಆಧುನಿಕ ಕೃಷಿಗೆ ಎಕರೆಗೆ ₨ 4 ಲಕ್ಷ ಆಗಬಹುದು (2014).ಬೆಂಗಳೂರು ಸಂಶೋಧನಾ ಸಂಸ್ಥೆಯಲ್ಲಿ ಈ ಟೊಮೆಟೊ ಬೀಜ ಅರ್ಧ ಬೆಲೆಗೆ ಸಿಗುತ್ತದೆ. 10 ಗ್ರಾಂಗೆ ₨ 300 ನಿಗದಿ ಪಡಿಸಿದ್ದಾರೆ (2014).ಅರ್ಕಾರಕ್ಷಕ್‌’ ಟೊಮೆಟೊ ಬೆಳೆಯನ್ನು ಹೆನ್ನಾಗರದ ಪ್ರಗತಿಪರ ರೈತ ಹಾಗೂ ಹಾಪ್‌ಕಾಮ್‌್ಸ ನಿರ್ದೇಶಕ ಎಂ.ಬಾಬು ಅವರ ಐದು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದು ಭರ್ಜರಿ ಬೆಳೆ ತೆಗೆದಿದ್ದಾರೆ(2014)
*[ಚಿತ್ರ:Kg-as-vegetable-prices-surge-in-delhi.jpg ಕರ್ನಾಟಕದ ಟೊಮೇಟೋ]
*[ಚಿತ್ರ:Image0140.jpg|thumb|right|ಕರ್ನಾಟಕದ ಟೊಮೇಟೊ]
 
==ಭಾರತದಲ್ಲಿ ಬೆಳೆ==
ಭಾರತದಲ್ಲಿ ಟೊಮೆಟೊ ಬೆಳೆಯನ್ನು ಸುಮಾರು 880 ಸಾವಿರ ಹೆಕ್ಟೇರ್‌ ಭೂ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್‌ಗೆ 20.7 ಮೆಟ್ರಿಕ್ ಟನ್ ಸರಾಸರಿ ಉತ್ಪತ್ತಿಯಿಂದ ಒಟ್ಟು 18,227 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
"https://kn.wikipedia.org/wiki/ಟೊಮೇಟೊ" ಇಂದ ಪಡೆಯಲ್ಪಟ್ಟಿದೆ