ರಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೯ ನೇ ಸಾಲು:
* ಇದಕ್ಕೆ ಪೂರಕವಾಗಿ ಅವಳು, ಮೊದಲನೆಯದಾಗಿ, ತನ್ನ ಮಗ ಭರತನನ್ನು ಯುವರಾಜನಾಗಿ ನೇಮಿಸಬೇಕೆಂದೂ, ಎರಡನೆಯದಾಗಿ, ರಾಮನನ್ನು ಹದಿನಾಲ್ಕು ವರ್ಷಕಾಲ ಘೋರವಾದ ದಂಡಕಾರಣ್ಯಕ್ಕೆ ವನವಾಸಕ್ಕೆ ಕಳಿಸಬೇಕೆಂದೂ ಕೇಳಿದಳು. ದುಃಖಿತನಾದ ದಶರಥ, ಆದಾಗ್ಯೂ ತನ್ನ ವಚನವನ್ನು ಪರಿಪಾಲಿಸಿಕೊಳ್ಳಲು ನಿರ್ಧರಿಸಿದನು.
* ಆದರ್ಶ ಪುತ್ರನಾದ ರಾಮ, ಸಿಂಹಾಸನದ ಮೇಲೆ ತನಗಿದ್ದ ಹಕ್ಕನ್ನು ಬಿಟ್ಟುಕೊಟ್ಟು ವನವಾಸಕ್ಕೆ ಹೊರಡಲು ಸಿದ್ಧನಾದನು. ಅವನ ನಿಷ್ಠಾವಂತ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣ, ರಾಮನ ಜೊತೆ ಹೊರಡಲು ನಿರ್ಧರಿಸಿದರು. ದಶರಥ ದುಃಖದಲ್ಲಿದ್ದಂತೆ ರಾಮ, ಅಯೋಧ್ಯೆಯ ಪರಿತಪ್ತ ಜನರಿಂದ ಹಿಂಬಾಲಿಸಲ್ಪಟ್ಟು ವನವಾಸಕ್ಕೆ ತೆರಳಿದನು. ಸ್ವಲ್ಪ ಕಾಲಾನಂತರ ದಶರಥ ದುಃಖದಿಂದ ಮರಣವನ್ನಪ್ಪಿದನು.
 
==ಸೀತಾಪಹರಣ==
* ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆ ಮತ್ತು ಅಲ್ಲಿನ ಜನರನ್ನು ಬಿಟ್ಟು ಗಂಗಾ ನದಿಯನ್ನು ದಾಟಿ ಕಾಡಿನೊಳಕ್ಕೆ ಹೋದರು. ಚಿತ್ರಕೂಟ ಎಂಬ ಸುಂದರ ಸ್ಥಳವನ್ನು ಹುಡುಕಿ ಅಲ್ಲಿ ತಮ್ಮ ಕುಟೀರವನ್ನು ಸ್ಥಾಪಿಸಿದರು. ಅತ್ಯಂತ ಸುಂದರವಾಗಿದ್ದ ಈ ಸ್ಥಳದಲ್ಲಿ ಎಲ್ಲ ರೀತಿಯ ಫಲಪುಷ್ಪಗಳಿದ್ದು ಸಂಪೂರ್ಣ ಪ್ರೇಮದಿಂದ ಕೂಡಿದ್ದ ಕುಟೀರ ಭೂಮಿಯ ಮೇಲಿದ್ದ ಸ್ವರ್ಗವೇ ಆಯಿತು. ಕಾಡಿನಲ್ಲಿ ರಾಮ ಗರುಡರಾಜನಾದ ಜಟಾಯುವಿನೊಂದಿಗೆ ಮಿತ್ರತ್ವವನ್ನು ಸ್ಥಾಪಿಸಿದ.
* ಇಷ್ಟರಲ್ಲಿ ಅಯೋಧ್ಯೆಗೆ ಮರಳಿ ಬಂದ ಭರತ, ನಡೆದ ವಿಷಯವನ್ನು ಕೇಳಿ, ರಾಮನನ್ನು ವನವಾಸಕ್ಕೆ ಕಳಿಸುವಲ್ಲಿ ತನ್ನ ತಾಯಿ ಕೈಕೇಯಿ ವಹಿಸಿದ ಪಾತ್ರದ ಬಗ್ಗೆ ಬೇಸರ, ಕೋಪಗೊಂಡನು. ರಾಮನನ್ನು ಹಿಂದಕ್ಕೆ ತರುವ ಉದ್ದೇಶದಿಂದ ಕಾಡಿಗೆ ಬಂದು ರಾಮನನ್ನು ಹಿಂದಕ್ಕೆ ಬರುವಂತೆ ಬೇಡಿಕೊಂಡನು.
* ತಂದೆಯ ವಚನದಿಂದ ಬದ್ಧನಾದ ರಾಮ ಇದಕ್ಕೆ ನಿರಾಕರಿಸಿದಾಗ ರಾಮನ ಪಾದುಕೆಗಳನ್ನು ಅಯೋಧ್ಯೆಗೆ ಒಯ್ದು ಸಿಂಹಾಸನದ ಮೇಲೆ ಸ್ಥಾಪಿಸಿ ರಾಮನ ಹೆಸರಿನಲ್ಲಿ ನಂದಿಗ್ರಾಮದಿಂದ ಭರತ ರಾಜ್ಯವನ್ನು ಆಳುತ್ತಿದ್ದನು. ಹದಿನಾಲ್ಕು ವರ್ಷಗಳಲ್ಲಿ ರಾಮ ಮರಳಿ ಬರದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನೂ ಭರತ ತೆಗೆದುಕೊಂಡನು. ಒಂದು ದಿನ ರಾವಣನ ತಂಗಿಯಾದ ಶೂರ್ಪನಖಿ ಎಂಬ ರಾಕ್ಷಸಿ, ಚಿತ್ರಕೂಟದಲ್ಲಿ ರಾಮನನ್ನು ಕಂಡು ಅವನನ್ನು ಮೋಹಿಸಿದಳು.
* ಸುಂದರ ಹುಡುಗಿಯ ವೇಷ ಧರಿಸಿ ರಾಮನನ್ನು ಆಕರ್ಷಿಸಲು ಪ್ರಯತ್ನಿಸಿದಳು. ತನ್ನ ಪತ್ನಿಯತ್ತ ನಿಷ್ಠಾವಂತನಾದ ರಾಮ ಪ್ರತಿಕ್ರಿಯೆ ತೋರಿಸಲಿಲ್ಲ. ಶೂರ್ಪನಖಿಯ ವರ್ತನೆಯಿಂದ ಕುಪಿತನಾದ ಲಕ್ಷ್ಮಣ ಅವಳ ಮೂಗು ಮತ್ತು ಕಿವಿಗಳನ್ನು ಕತ್ತರಿಸಿಬಿಟ್ಟನು. ರಾವಣನತ್ತ ಮರಳಿ ಶೂರ್ಪನಖಿ ಇದರ ಬಗ್ಗೆ ದೂರಿತ್ತಳು. ಅವಳಿಂದ ಸೀತೆಯ ಸೌಂದರ್ಯದ ಬಗ್ಗೆ ಕೇಳಿದ ರಾವಣ, ರಾಮನನ್ನು ಕೊಂದು ಸೀತೆಯನ್ನು ಹೊತ್ತೊಯ್ಯುವ ನಿರ್ಧಾರ ವನ್ನು ಮಾಡಿದನು.
* ರಾವಣನ ಸಹಾಯಕ್ಕೆ ಬಂದ ಮಾರೀಚ ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಕುಟೀರದಲ್ಲಿ ಬಿಟ್ಟು ದೂರ ಬರುವಂತೆ ಮಾಡಿದನು. ಹೊರಡುವ ಮುನ್ನ, ಲಕ್ಷ್ಮಣ ಮಣ್ಣಿನಲ್ಲಿ ಒಂದು ಗೆರೆಯನ್ನು ಎಳೆದು ಅದರ ಒಳಗೆ ಇರುವವರೆಗೂ ಸೀತೆ ಸುರಕ್ಷಿತಳಾಗಿ ಇರುವಳೆಂದು ತಿಳಿಸಿ ಹೋದನು. ಮುದುಕನ ವೇಷ ಧರಿಸಿ ಬಂದ ರಾವಣ ಅನ್ನದಾನ ಮಾಡುವಂತೆ ಸೀತೆಯನ್ನು ಕೇಳಿಕೊಂಡನು.
* ಗೆರೆಯನ್ನು ದಾಟಲು ಹೆದರಿದರೂ, ಅವನಿಗೆ ದಾನ ಮಾಡಲು ಸೀತೆ ಮುಂದೆ ಬಂದಾಗ ರಾವಣ ಅವಳನ್ನು ಹೊತ್ತುಕೊಂಡು ತನ್ನ ಪುಷ್ಪಕ ವಿಮಾನದಲ್ಲಿ ಹಾರಿದನು. ಇದನ್ನು ಕಂಡ ಜಟಾಯು ಸೀತೆಯ ರಕ್ಷಣೆಗೆ ಬಂದಾಗ ರಾವಣ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಹೋದನು. ಹಿಂದಕ್ಕೆ ಮರಳಿದ ರಾಮ-ಲಕ್ಷ್ಮಣರು ಸೀತೆಯನ್ನು ಕಾಣದೆ ಹುಡುಕುತ್ತಿದ್ದಾಗ ಜಟಾಯುವಿನಿಂದ ಸೀತಾಪಹರಣದ ವಿಷಯವನ್ನು ತಿಳಿದರು.
 
==ವಾನರ ಸಾಮ್ರಾಜ್ಯ==
"https://kn.wikipedia.org/wiki/ರಾಮ" ಇಂದ ಪಡೆಯಲ್ಪಟ್ಟಿದೆ