"ಕಟ್ಟಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
==ರಚನೆ==
ಇಂಜಿನಿಯರಿಂದ ತಪಶೀಲಾದ ನಕ್ಷೆಗಳು ಬಂದ ಮೇಲೆ ಅವಕ್ಕನುಸಾರವಾಗಿ ನೆಲದ ಮೇಲೆ ಗುರುತು ಮಾಡಿ ತಳಪಾಯದಲ್ಲಿ ಗಟ್ಟಿಯಾದ ಮಣ್ಣುಸಿಕ್ಕುವವರೆಗೂ ಅಗೆದು ಅವಶ್ಯವಾದ ಕಡೆ ಮರ, ಉಕ್ಕು ಇಲ್ಲವೆೆಇಲ್ಲವೇ ಪ್ರಬಲಿತ ಕಾಂಕ್ರೀಟಿನ ದಸಿಗಳನ್ನು ಭಾರವಾದ ಸಮಷ್ಟಿಯಿಂದ ಹೊಡೆದು ಹೂಳಬೇಕು. ಮಳೆಯ ನೀರಿನ ಚರಂಡಿಗಳು, ಕುಡಿಯುವ ನೀರಿನ ಕೊಳಾಯಿಗಳು, ಗ್ರಾಮಸಾರದ ಕೊಳವಿಗಳು-ಇವುಗಳಿಗೆ ಅಗಳುಗಳನ್ನು ಸೂಕ್ತವಾದ ಕಡೆ ತೆಗೆದು ಅವುಗಳಿಗೆ ಇಟ್ಟಿಗೆಯಿಂದಲೋ ಕಾಂಕ್ರೀಟಿನಿಂದಲೋ ಅಚ್ಚುಕಟ್ಟನ್ನು ಕಟ್ಟಿ ಮೇಲುಗಡೆ ಕಟ್ಟಡದ ಭಾರವನ್ನು ತಡೆಯುವ ಕಾಂಕ್ರೀಟಿನ ಚಪ್ಪಡಿಗಳನ್ನು ಎಳೆಯಬೇಕು-ಕಾರ್ಖಾನೆಯನ್ನು ಕಟ್ಟುವಾಗ ಭಾರವಾದ ಯಂತ್ರಗಳಿಗೆ ವಿಶಿಷ್ಟವಾದ ಅಡಿಪಾಯವನ್ನು ಹಾಕಬೇಕು.
ಕಟ್ಟಡದ ಭಾರವನ್ನು ಹೊರುವುದಕ್ಕೆ ಉಕ್ಕಿನ ಚೌಕಟ್ಟನ್ನು ಈ ಘಟ್ಟದಲ್ಲಿಯೇ ತಂದು ಲಂಬವಾಗಿ ನಿಲ್ಲಿಸಿ ಜಾಲಂದರದ (ಲ್ಯಾಟ್ಟೀಸ್) ಚೌಕಟ್ಟಿನ ಹಂದರವನ್ನು (ಸಕೆಲಿಟನ್) ತಯಾರಿಸಬೇಕು. ಈ ಚೌಕಟ್ಟನ್ನು ಪ್ರಬಲಿತ ಕಾಂಕ್ರೀಟಿನಿಂದ ಮಾಡಿದರೆ ಒಳಗಡೆ ಉಕ್ಕಿನ ಕಂಬಗಳನ್ನು ಲೆಕ್ಕಾಚಾರವಾಗಿ ಕೂಡಿಸಿ ಅಚ್ಚಿನ ಹಲಗೆಗಳ ಮಧ್ಯೆ ಕಂಬಿಗಳ ಸುತ್ತಲೂ ಸಿಮೆಂಟ್ ಕಾಂಕ್ರೀಟನ್ನು ಹೊಯ್ಯುಬೇಕು. ಆಮೇಲೆ ಗೋಡೆಗಳನ್ನು ಇಟ್ಟಿಗೆ ಗಾರೆಯಿಂದಲೋ ಕಲ್ಲುಗಾರೆಯಿಂದಲೋ ಕಟ್ಟಬಹುದು. ಈಚೆಗೆ ಮೊದಲೇ ಜೋಡಿಸಿದ ಮರದ ಇಲ್ಲವೆ ಕಾಂಕ್ರೀಟಿನ ತೆಳ್ಳನೆಯ ಪುಟೀಪುಗಳನ್ನು ಚೌಕಟ್ಟಿಗೆ ಅಂಟಿಸುವುದು ವಾಡಿಕೆ, ಬಾಗಿಲುಗಳಿಗೂ ಕಿಟಕಿಗಳಿಗೂ ಜಾಗವನ್ನು ಬಿಟ್ಟು ಆಮೇಲೆ ಅವನ್ನು ಜೋಡಿಸಬಹುದು. ಕಟ್ಟಡ ಮೇಲಕ್ಕೆ ಹೋದ ಹಾಗೆ ಕಾಲಾವಧಿ (ಸಾರುವೆ) ಬೇಕಾಗುತ್ತದೆ. ಆಗ ಸಾಮಾನುಗಳನ್ನು ಕ್ರೇನುಗಳಿಂದಲೋ ಕಪ್ಪಿಗಳಿಂದಲೋ ಮೇಲಕ್ಕೆ ಎತ್ತಿ ಕೆಲಸಗಾರರಿಗೆ ಒದಗಿಸುತ್ತಾರೆ. ಗೋಡೆಗಳೇ ಭಾರವನ್ನು ಹೊರುವುದಾದರೆ, ಅವನ್ನು ಸಾಕಷ್ಟು ಭದ್ರವಾಗಿ ಕಲ್ಲುಗಾರೆ ಇಟ್ಟಿಗೆ ಇಲ್ಲವೆ ಕಾಂಕ್ರೀಟಿನಿಂದ ಕಟ್ಟಬೇಕು.
ಮೇಲಿನ ಮಹಡಿಗಳನ್ನು ಕಟ್ಟುತ್ತಿರುವಾಗ ಕೆಳಗಿನ ಅಂತಸ್ತುಗಳಲ್ಲಿ ಬಾಗಿಲು ಮತ್ತು ಕಿಟಕಿಗಳ ಚೌಕಟ್ಟುಗಳನ್ನು ಅದಕ್ಕಾಗಿ ಬಿಟ್ಟಿರುವ ಜಾಗದಲ್ಲಿ ಕೂರಿಸುತ್ತಾರೆ. ಕಟ್ಟಡದ ಒಳಗಡೆಯ ಅಡ್ಡಗೋಡೆಗಳನ್ನು ಈಗ ಹೊರಗಿನ ಗೋಡೆಗಳಂತೆಯೇ ಕಟ್ಟಲು ಪ್ರಾರಂಭಿಸುತ್ತಾರೆ. ಇವು ತೆಳುವಾಗಿದ್ದರೂ ಒಂದು ಕೊಠಡಿಯಿಂದ ಶಬ್ದ ಇನ್ನೊಂದಕ್ಕೆ ಕೇಳದಂತೆ ವಿಶಿಷ್ಟ ರೀತಿಯಲ್ಲಿರುತ್ತವೆ. ಮಹಡಿಯ ಮೆಟ್ಟಲುಗಳು, ಎತ್ತುಗೆಗಳು, ನೀರಿನ ಕೊಳವಿಗಳುಕೊಳವೆಗಳು, ವಿದ್ಯುತ್ತಿನ ತಂತಿಗಳು-ಇವಕ್ಕೆಲ್ಲ ಸೂಕ್ತವಾಗಿ ಜಾಗವನ್ನು ಬಿಟ್ಟಿರುತ್ತಾರೆ. ಮೇಲಿನ ಮಹಡಿಗಳನ್ನು ಮಟ್ಟವಾದ ತೊಲೆಗಳ ಮೇಲೆ ತೂರಿಸಿ ಮಾಡಿನ ಚಪ್ಪಡಿಗಳನ್ನು ಪ್ರಬಲಿತ ಕಾಂಕ್ರೀಟಿನಿಂದ ಮಾಡಿರುತ್ತಾರೆ. ಬೇರೆ ಬೇರೆ ಮಹಡಿಗಳಲ್ಲಿ ಸ್ವತಂತ್ರವಾಗಿ ಸಂಸಾರಗಳು ವಾಸಮಾಡುವಾಗ ಶಬ್ದ ಒಂದು ಅಂತಸ್ತಿನಿಂದ ಇನ್ನೊಂದಕ್ಕೆ ಸಂಚಾರಮಾಡದ ಹಾಗೂ ಚೌಕಟ್ಟಿಗೂ ಮಧ್ಯೆ ಒಂದು ಮೆತುವಾದಮೆದುವಾದ ಕ್ವಿಲ್ಟನ್ನು ಗಾಜಿನ ಉಣ್ಣೆಯಿಂದಲೋ ಇನ್ನು ಯಾವುದಾದರೂ ಪುಟ ಚಿಮ್ಮುವಂಥ ಸಾಮಗ್ರಿಯಿಂದಲೊ ಇಡುತ್ತಾರೆ. ಚಾವಣಿಗಳು ಬಲವಾಗಿಯೂ ಹಗುರವಾಗಿಯೂ ಇರಬೇಕು.
 
==ಕೆಲಸದ ಪ್ರಗತಿ==
ಕಟ್ಟಡದ ಗುತ್ತಿಗೆದಾರ ಎಲ್ಲ ಕೆಲಸಕ್ಕೂ ಜವಾಬುದಾರನಾದರೂ ಉಕ್ಕಿನ ಕೆಲಸ, ಒಳಗಡೆಯ ಗಾಳಿಯನ್ನು ಒಂದೇ ಕಾವಿನಲ್ಲಿಟ್ಟಿರುವುದು ಮೊದಲಾದ ಕೆಲಸಗಳನ್ನು ಬೇರೆ ಬೇರೆ ಪ್ರವೀಣರಿಗೆ ಕೊಟ್ಟಿರುತ್ತಾರೆ, ಜೊತೆಗೆ ಕೊಳಾಯಿ ಜೋಡಿಸುವವರು, ಬಡಗಿಗಳು, ಬಣ್ಣ ಬಳಿಯುವವರು-ಇವರ ಕೆಲಸವನ್ನು ಒಂದು ವ್ಯವಸ್ಥೆಗೆ ಅನುಗುಣವಾಗಿ ಮಾಡಬೇಕಾಗುತ್ತದೆ. ಹಣವೂ ಕೆಲಸವೂ ಪೋಲಾಗದೆ ಇರಬೇಕಾದರೆ ಸಾಮಗ್ರಿಗಳು ಸಕಾಲಕ್ಕೆ ಒದಗಬೇಕು. ಅನೇಕ ಚಿಲ್ಲರೆ ಕೆಲಸಗಳಲ್ಲಿ ಒಂದೊಂದಕ್ಕೂ ಎಷ್ಟು ದಿನ ಹಿಡಿಯುತ್ತದೆ-ಎಂದು ಅಂದಾಜು ಮಾಡುವುದಕ್ಕೂ ಇವನ್ನೆಲ್ಲ ಒಂದು ಕಾರ್ಯಕ್ರಮಕ್ಕೆ ಹೊಂದಿಸುವುದಕ್ಕೂ ಅಪಾರವಾದ ಅನುಭವವೂ ವಿವೇಚನಾಶಕ್ತಿಯೂ ಬೇಕು.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/854080" ಇಂದ ಪಡೆಯಲ್ಪಟ್ಟಿದೆ