ಕಟ್ಟಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೨ ನೇ ಸಾಲು:
ಪ್ರಾದೇಶಿಕ ನೆಲದ ವಿಶೇಷ ಲಕ್ಷಣಗಳು ಮತ್ತು ವಾಯುಗುಣದ ಮೇಲೆ ಮಾಡಿನ ಸಂವಿಧಾನ ನಿಂತಿದೆ. [[ಮಾಡು]]ಗಳನ್ನು ಇಳಿಜಾರಾದುವು ಮತ್ತು ಚಪ್ಪಟೆಯಾದವು ಎಂದು ಎರಡು ದರ್ಜೆಗಳಾಗಿ ವಿಂಗಡಿಸಬಹುದು.
'''ಇಳಿಜಾರಾದ ಮಾಡುಗಳು''': ಇವುಗಳಲ್ಲಿ ಒಪ್ಪಾರಗಳು ಎತ್ತರವಾದ ಗೋಡೆಗಳಿಗೆ ಒರಗಿಕೊಂಡಿರಬಹುದು. ಇಲ್ಲವೆ ಸ್ವತಂತ್ರವಾಗಿರಬಹುದು. ಒಪ್ಪಾರದ ಇಳಿಜಾರು ನಾಲ್ಕಕ್ಕೆ ಒಂದು (ಎತ್ತರ) ಇದ್ದರೆ ಸಾಕು. ಮರದಿಂದ ಮಾಡನ್ನು ಮಾಡಿ ಹಂಚುಗಳು, ತಗಡುಗಳು, ಸ್ಲೇಟುಗಳು ಇವುಗಳಿಂದ ಮುಚ್ಚುತ್ತಾರೆ.
'''ಇಳಿಜಾರಾದ ಚಾವಣಿಗಳು''': ಮಳೆ ಹೆಚ್ಚಾಗಿ ಬೀಳುವ ಕಡೆ ಮನೆಗಳ ಮಾಡನ್ನು ಮರದಿಂದ ಇಳಿಜಾರಾಗಿ ಕಟ್ಟಿ ಹೆಂಚುಗಳು, ಸ್ಲೇಟುಗಳು, ಹುಲ್ಲು ಇವುಗಳಿಂದ ಮುಚ್ಚುತ್ತಾರೆ. ಕಾರ್ಖಾನೆಗಳಲ್ಲಿ ಉಕ್ಕಿನಿಂದ ಮಾಡನ್ನು ಮಾಡಿ ಕಲ್ನಾರು ಸಿಮೆಂಟಿನ ಹಾಳೆಗಳಿಂದ ಮುಚ್ಚುತ್ತಾರೆ. ಮರದ ಮಾಡುಗಳಲ್ಲಿ ಚೌಕಟ್ಟುಗಳು ಇಲ್ಲವೆ ತೀರುಗಳ ಮೇಲೆ ಉದ್ದ ಸರಗಳನ್ನುಸರಳುಗಳನ್ನು ಹಾಕಿ ಮೇಲುಗಡೆಯ ತೀರಿನಿಂದ ಕೆಳಗಿನ ವರೆಗೆ ಸಾಮಾನ್ಯ ತೀರುಗಳನ್ನು ಎಳೆದು ಅವಕ್ಕೆ ಮರದ ರೀಪರುಗಳನ್ನು ಹೊಡೆದು ಮೇಲೆ ಹಂಚನ್ನು ಹೊದೆಸುತ್ತಾರೆ. ಮೊದಲು ಸುಟ್ಟ ಮಣ್ಣಿನ ನಾಡು ಹಂಚುಗಳನ್ನು ಹೊದೆಸುತ್ತಿದ್ದರೆ ಈಗ ಮಂಗಳೂರು ಹಂಚುಗಳು ರೂಢಿಯಾಗಿವೆ. ದೊಡ್ಡ ಅಳತೆಯ ಮಾಡುಗಳಲ್ಲಿ ಉಕ್ಕಿನ ಸರಕಟ್ಟುಗಳನ್ನು ದೂರದಲ್ಲಿಟ್ಟು ಮೇಲೆ ಉದ್ದ ಸರಗಳನ್ನು ಎಳೆದು ಅವುಗಳ ಮೇಲೆ ರೀಪರುಗಳನ್ನು ಹೊಡೆದು ಸತುವಿನ ತಗಡುಗಳನ್ನೋ ಸಿಮೆಂಟ್-ಕಲ್ನಾರಿನ ಹಾಳೆಗಳನ್ನೋ ಹೊದೆಸುತ್ತಾರೆ.
ಇಳಿಜಾರಾದ ಮಾಡಿನಲ್ಲಿ ಇಪ್ಪಾರು ಚಾವಣಿ ಮತ್ತು ಬಾಗುಚಾವಣಿ (ಹಿಪ್ ರೂಫ್) ಎಂಬ ಎರಡು ಮಾದರಿಗಳಿವೆ. ಉಪಯೋಗಿಸಬಹುದಾದ ಜಾಗ ಇಪ್ಪಾರುಚಾವಣಿಯಲ್ಲಿ ಹೆಚ್ಚಾಗಿದೆ. ಅಲ್ಲಿ ಕಿಟಕಿಗಳನ್ನಿಡಬಹುದು. ಮಳೆ ಹೆಚ್ಚಾದ ಕಡೆ ಬಾಗುಚಾವಣಿಯನ್ನು ಉಪಯೋಗಿಸುವುದೇ ಹೆಚ್ಚು.
'''ಉತ್ತರದ ಬೆಳಕಿನ ಮಾಡು''': ಇದನ್ನು ದೊಡ್ಡ ಕಾರ್ಖಾನೆಗಳಲ್ಲಿ ಉಪಯೋಗಿಸುತ್ತಾರೆ. ಈ ಮಾದರಿಯಲ್ಲಿ ಒಂದು ಪಾಶರ್ವ್‌ದಪಾರ್ಶ್ವದ ಇಳಿಕಲು ಕಡಿಮೆ. ಇದಕ್ಕೆ [[ಸಿಮೆಂಟ್]]-ಕಲ್ನಾರಿನ ತಗಡುಗಳನ್ನು ಹೊದಿಸಿರುತ್ತಾರೆ. ಮತ್ತೊಂದು ಪಾಶರ್ವ್‌ದಪಾರ್ಶ್ವದ ಇಳಿಕಲು ಹೆಚ್ಚು. ಅದನ್ನು ಮರದ ಇಲ್ಲವೆ ಉಕ್ಕಿನ ಚೌಕಟ್ಟಿನಲ್ಲಿರುವ ಗಾಜಿನಿಂದ ಮುಚ್ಚಿರುತ್ತಾರೆ. ಇದು ಸುಮಾರಾಗಿ ಉತ್ತರದಿಕ್ಕಿನಲ್ಲಿರುವುದು. ಈ ಮಾದರಿಯಲ್ಲಿ ಬಿಸಿಲಿನ ಝಳವಿಲ್ಲದೆ ಗರಿಷ್ಠ ಬೆಳಕು ಒಳಕ್ಕೆ ಬರುತ್ತದೆ. ಮಾಡಿನ ಎರಡು ಇಳಿಕಲುಗಳಿಗೂ ಮಧ್ಯೆ ಮಳೆಯ ನೀರನ್ನು [[ದೋಣಿ]]ಗಳಿಂದ ಸಾಗಿಸುತ್ತಾರೆ.
'''ಚಪ್ಪಟೆ ಮಾಡುಗಳು''': ಹಿಂದೆ [[ದೇವಸ್ಥಾನ]]ಗಳಲ್ಲಿ ಕಲ್ಲಿನ ಕಂಬಗಳ ಮೇಲೆ ಚಪ್ಪಡಿಗಳನ್ನು ಕೂರಿಸಿ ಚಪ್ಪಟೆಯಾದ ಮಾಡನ್ನು ಕಟ್ಟುತ್ತಿದ್ದರು. ಈಚೆಗೆ ಪಕ್ಕ ತಾರಸಿ ಎಂಬ ಮಾಡು, ಮಳೆ ಕಡಿಮೆಯಾಗಿರುವ ಪ್ರದೇಶಗಳಲ್ಲಿ ಬಳಕೆಯಲ್ಲಿತ್ತು. ಪ್ರಬಲಿತ ಕಾಂಕ್ರೀಟು ಬಂದ ಮೇಲೆ ಚಪ್ಪಟೆಯಾದ ಮಾಡುಗಳು ಸರ್ವತ್ರ ಬಳಕೆಗೆ ಬಂದಿವೆ. ಮಾಡಿನ ಅಗಲಕ್ಕೆ ಅನುಗುಣವಾಗಿ ಈ ನಮೂನೆಯನ್ನು ಶಾಸ್ತ್ರೀಯವಾಗಿ ಸಂವಿಧಾನ ಮಾಡಬೇಕು. ಅಗಲ ಕಡಿಮೆಯಾಗಿದ್ದರೆ ಗೋಡೆಗಳ ಮೇಲೆ ಚಪ್ಪಡಿಯನ್ನು ಎಳೆಯಬಹುದು. ಅಗಲ ಹೆಚ್ಚಾದರೆ 2.5-3 ಮೀ ಅಂತರದಲ್ಲಿ ಖಿ-ತೊಲೆಗಳನ್ನು ಎಳೆದು ಮೇಲುಗಡೆ ಪ್ರಬಲಿತ ಕಾಂಕ್ರೀಟಿನ ಚಪ್ಪಡಿಯನ್ನು ಇಡಬೇಕಾಗುತ್ತದೆ.
ಕಾರ್ಖಾನೆಗಳಲ್ಲಿ ತೊಲೆ ಮತ್ತು ಚಪ್ಪಡಿಯ ಮಾದರಿಯಲ್ಲಿ ಪುರ್ವನಿರ್ಮಿತಪೂರ್ವನಿರ್ಮಿತ ಕಾಂಕ್ರೀಟಿನ ಮಾಡುಗಳನ್ನು ಕಟ್ಟಡದ ಜಾಗಕ್ಕೆ ಸಾಗಿಸಿ ಸ್ಥಳದಲ್ಲಿ ಜೋಡಿಸಬಹುದು. ಆಗ ತೊಲೆಗಳನ್ನು ಒಂದು ಕಡೆಯಿಂದ ಇನ್ನೊಂದಕ್ಕೆಇನ್ನೊಂದು ಕಡೆಗೆ ಸಾಗಿಸುವಾಗ ಬೀಳುವ ಹೆಚ್ಚಿನ ತ್ರಾಸವನ್ನು ತಡೆಯುವುದಕ್ಕಾಗಿ ಹೆಚ್ಚು ಉಕ್ಕನ್ನು ಉಪಯೋಗಿಸಬೇಕಾಗುತ್ತದೆ.
ಮತ್ತೊಂದು ನಮೂನೆಯ ಚಪ್ಪಟೆಯಾದ ಪ್ರಬಲಿತ ಕಾಂಕ್ರೀಟಿನಿಂದ ಮಾಡಿನಲ್ಲಿ ಮಾಡನ್ನು ಬೇರೆ ಬೇರೆ ಅಳತೆಗಳಲ್ಲಿಯೂ ದಪ್ಪಗಳಲ್ಲಿಯೂ ಕಾಂಕ್ರೀಟಿನಿಂದಲೋ ಸುಟ್ಟ ಮಣ್ಣಿನಿಂದÀಲೋಮಣ್ಣಿನಿಂದಲೋ ಮಾಡಿದ ಒಂದೇ ಅಳತೆಯ ಚಪ್ಪಡಿಗಳ ರೂಪದಲ್ಲಿ ಮಾಡುತ್ತಾರೆ. ಚಪ್ಪಡಿಗಳ ಮಧ್ಯೆ ಉಕ್ಕಿನ ಕಂಬಿಗಳನ್ನು ಜೋಡಿಸಿ ಸಂದುಗಳಲ್ಲಿ ಸಿಮೆಂಟ್ ಕಾಂಕ್ರೀಟನ್ನು ತುಂಬುತ್ತಾರೆ. ಮೇಲುಗಡೆ ಕೊಂಚ ನಯವಾದ ಕಾಂಕ್ರೀಟಿನಿಂದ ಮುಚ್ಚುತ್ತಾರೆ. ಈಚೆಗೆ ಹಿಂದೆಯೇ ತ್ರಾಸವನ್ನು ಹಾಕಿದ ಕಾಂಕ್ರೀಟಿನಲ್ಲಿ (ಪ್ರೀಸ್ಟ್ರೆಸ್ಡ್‌ ಕಾಂಕ್ರೀಟ್) ಎರಕ ಹೊಯ್ಯುವುದಕ್ಕೆ ಮುಂಚೆಯೇ ಹೆಚ್ಚಾದ ಎಳೆತದ ಶಕ್ತಿಯುಳ್ಳ ತಂತಿಯನ್ನು ತ್ರಾಸದಲ್ಲಿರಿಸಿ ಆ ಮೂಲಕ ಕಾಂಕ್ರೀಟನ್ನು ಕಡಿಮೆ ಮಾಡುವುದರಿಂದ ಉಕ್ಕಿನ ತೂಕವೂ ವಿಶೇಷವಾಗಿ ಕಡಿಮೆಯಾಗುತ್ತದೆ. ಇದರಿಂದ ಮಾಡನ್ನು ಇಳಿಸುವ ಸಮಸ್ಯೆಗೆ ಸಹಾಯವಾಗುತ್ತದೆ.
ಬಾಗಿದ ಮಾಡುಗಳು: ಇವುಗಳನ್ನು ಉಕ್ಕಿನ ಸರಕಟ್ಟುಗಳಿಂದಲೂ ಉದ್ದದ ಸರಗಳಿಂದಲೂಸರಳುಗಳಿಂದಲೂ ಕಟ್ಟಿ ಸತುವಿನ ತಗಡುಗಳಿಂದಲೋ ಸಿಮೆಂಟ್-ಕಲ್ನಾರಿನ ಹಾಳೆಗಳಿಂದಲೋ ಮುಚ್ಚುತ್ತಾರೆ. ಭದ್ರ ಕಾಂಕ್ರೀಟಿನಿಂದಲೂ ಬಾಗಿದ ಮಾಡುಗಳನ್ನು ತಯಾರಿಸುತ್ತಾರೆ.
 
==ನೆಲ==
ಈಗಿನ ಕಟ್ಟಡಗಳ ನೆಲದಲ್ಲಿ ಸೌಕರ್ಯದ ದೃಷ್ಟಿಯಿಂದ ಪರಿಷ್ಕರಣಗಳಾಗುತ್ತಿವೆ. ಕಲ್ಲಿನ ಇಲ್ಲವೆ ಮಣ್ಣಿನ ನೆಲವೇ ಮೊನ್ನೆ ಮೊನ್ನೆಯ ವರೆಗೆ ಸಾಕಾಗಿತ್ತು. ಆಮೇಲೆ ಇಟ್ಟಿಗೆಯ [[ನೆಲ]] ಬಂತು. [[ಭೂಮಿ]]ಯ ತೇವ ಮನೆಯ ನೆಲದ ಮೇಲೆ ಒಸರುವುದನ್ನು ತಡೆಯುವುದಕ್ಕಾಗಿ ಮರದ ತೊಲೆಗಳ ಮೇಲೆ ಹಾಸಿದರು. ಅನಂತರ ಕೆಳಗಡೆ ಗಟ್ಟಿಯಾದ ನೆಲದ ಮೇಲೆ ತಂಡಿಯನ್ನು ತಡೆಯುವ ಪದರವೂ ಅದರ ಮೇಲೆ ಕಾಂಕ್ರೀಟೊ ಬಂದಮೇಲೆ ಸುಮಾರಾಗಿ ಅನುಕೂಲವಾದ ನೆಲ ದೊರೆತ ಹಾಗಾಯಿತು.
"https://kn.wikipedia.org/wiki/ಕಟ್ಟಡ" ಇಂದ ಪಡೆಯಲ್ಪಟ್ಟಿದೆ