ಮನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೫ ನೇ ಸಾಲು:
==ಸೌಂದರ್ಯ==
 
ಮನೆ ಯಜಮಾನನ ಕಲಾದೃಷ್ಟಿಯ ಪ್ರಕಟಿತರೂಪ ಮನೆ ಆಗಿರಬೇಕು. ಉಪಯುಕ್ತತೆಯೊಂದಿಗೆ ಸೌಂದರ್ಯವನ್ನು ಸಮರಸವಾಗಿ ಹೊಂದಿಸಿ ಸಾಕಷ್ಟು ಮಿತವ್ಯಯದಿಂದಲೇ ಮನೆಯನ್ನು ಕಟ್ಟುವುದು ಸಾಧ್ಯ. ಆದರೆ ಇಲ್ಲೆಲ್ಲ ಅನೇಕ ವೇಳೆ ಮನೆಯ ಯಜಮಾನನಿಗೆ ಉಪಯುಕ್ತತೆಯನ್ನು ಕುರಿತಾಗಲೀ ಸೌಂದರ್ಯವನ್ನು ಕುರಿತಾಗಲೀ ಸ್ಪಷ್ಟಭಾವನೆ ಇರುವುದಿಲ್ಲ. ನೋಡಿದ ಹತ್ತು ಮನೆಗಳಲ್ಲಿ ಅವನು ಹತ್ತು ಗುಣಗಳ ಜೊತೆಗೆ ಹತ್ತು ದೋಷಗಳನ್ನು ಕಂಡಿರುತ್ತಾನೆ. ಈ ದೋಷಗಳನ್ನು ಕಳೆದು ಗುಣಗಳನ್ನು ಸುಸಂಗತವಾಗಿ ಮೇಳೈಸಿ ತನ್ನ ದೃಷ್ಟಿಗೆ ಅನುಸಾರವಾದ ಮನೆ ಹೇಗಿರಬೇಕು ಎಂಬ ಖಚಿತ ನಿರ್ದೇಶನ ನೀಡುವಲ್ಲಿ ಆತ ಸೋಲುತ್ತಾನೆ. ಇಂಥ ಪರಿಸ್ಥಿತಿಗಳಲ್ಲಿ ತಜ್ಞ ವಾಸ್ತುಶಿಲ್ಪಿಯ ಹಾಗೂ ಎಂಜಿನಿಯರನ ಮರೆಮೊರೆ ಹೋಗುವುದೇ ಸರ್ವ ಶ್ರೇಯಸ್ಕರ. ಮೇಲುನೋಟಕ್ಕೆ ಇದು ದುಬಾರಿಯ ದಾರಿ ಅನ್ನಿಸಬಹುದು. ಆದರೆ ಮನೆ ಕಟ್ಟಿ ಮುಗಿಯುವ ವೇಳೆಗೆ ದಕ್ಷ ವಾಸ್ತುಶಿಲ್ಪಿಯ ಆಲೇಖ್ಯದಿಂದ ಸಾಧಿತವಾಗುವ ಮಿತವ್ಯಯ, ಉಪಯುಕ್ತತೆ ಹಾಗೂ ಸೌಂದರ್ಯ ವರ್ಧನೆ ಈ ನಿರ್ಧಾರ ಎಷ್ಟು ಸಮರ್ಪಕ ಎಂಬುದನ್ನು ಸಮರ್ಥಿಸದಿರವು. ಒಂದು ಉಪಯುಕ್ತ ಮನೆ ಸೌಂದರ್ಯಪೂರಿತವಾಗಿಯೂ ಇರಬಲ್ಲದು. ಮತ್ತು ವಿಲೋಮ ವಾಗಿವಿಲೋಮವಾಗಿ, ಒಂದು ಸುಂದರ ಮನೆ ಉಪಯುಕ್ತವಾಗಿಯೂ ಇರಬಲ್ಲುದು ಎಂಬುದನ್ನು ಮನೆ ಮಾಲೀಕರು ಮನಗಾಣಬೇಕು. ಮನೆಯ ಸುತ್ತಲೂ ಇರುವ ಜಾಗದಲ್ಲಿ ಹೂ ಮತ್ತು ತರಕಾರಿ ತೋಟಗಳನ್ನು ಬೆಳೆಸುವುದರಿಂದ ಮನೆಯ ಒಟ್ಟಂದ ವೃದ್ಧಿ ಆಗುತ್ತದೆ; ಅಲ್ಲದೆ ಈ ಹವ್ಯಾಸ ಆರ್ಥಿಕವಾಗಿ ಸ್ವಯಂಪೂರ್ಣವಾಗಿಯೂ ಇರುತ್ತದೆ.
 
==ಕುಂಡಸಸ್ಯಗಳು==
"https://kn.wikipedia.org/wiki/ಮನೆ" ಇಂದ ಪಡೆಯಲ್ಪಟ್ಟಿದೆ