ಮನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರದ ಅಡಿಬರಹ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
ಮಾನವ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಾಸಿಸಲು ಬಳಸುವ ನೈಸರ್ಗಿಕವಾದ ತಾಣ ಅಥವಾ ತಾನೇ ರಚಿಸಿದ ಆಸರೆ. ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ, ಕಲ್ಲುಬಂಡೆಗಳ ಸಂದು, ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳ ವರೆಗಿನ ಇದರ ಬೆಳೆವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖ. ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವನಿಗೆ ಬಂದುದೇ ಸು.11000 ವರ್ಷಗಳ ಹಿಂದೆ, ಪ್ರ.ಶ.ಪು. ಸು. 9000 ಸುಮಾರಿಗೆ ಎನ್ನಬಹುದು. ಅದಕ್ಕೂ ಹಿಂದೆ ಆತ ತನ್ನ ಸುತ್ತಲಿನ ಪ್ರಾಕೃತಿಕ ಸನ್ನಿವೇಶಗಳನ್ನು ಅವಲಂಬಿಸಿದ್ದ. ಆಹಾರಕ್ಕಾಗಿ ಹಣ್ಣುಹಂಪಲುಗಳನ್ನು-ಅವು ಬೆಳೆದಷ್ಟು ಕಾಲ, ಪ್ರಾಯಶಃ ವರ್ಷದಲ್ಲಿ ಒಂದೆರಡು ತಿಂಗಳು-ತಿನ್ನುತ್ತಿದ್ದ. ಉಳಿದ ವೇಳೆಯಲ್ಲಿ ಸುತ್ತಲಿನ [[ಪ್ರಾಣಿ]]ಗಳೇ ಇವನ ಆಹಾರ. ಸ್ವಂತ ಜೀವಕ್ಕೆ ಅವುಗಳಿಂದ ಅಪಾಯ ಒದಗದಂತೆ ರಕ್ಷಣೆ ಪಡೆಯಲು ಮಾನವ ಮರದ ಪೊಟರೆಗಳಲ್ಲೋ ಬಂಡೆಗಳ ಸಂದುಗಳಲ್ಲೋ ರಾತ್ರಿಗಳನ್ನು ಕಳೆಯುತ್ತಿದ್ದ. ಸ್ವಾಭಾವಿಕವಾಗಿ [[ಗುಹೆ]]ಗಳೂ ಇವನ ತಂಗುದಾಣಗಳಾದುವು. ಆಹಾರಕ್ಕಾಗಿ ಅಲೆಮಾರಿಜೀವನವನ್ನು ಅವಲಂಬಿಸಿದ ಇವನಿಗೆ ಶಾಶ್ವತವಾದ ನೆಲೆಯ ಆವಶ್ಯಕತೆಯಿರಲಿಲ್ಲ. ಕ್ರಮೇಣ ಇವನ ಜೀವನಕ್ರಮದಲ್ಲಿ ಸುಧಾರಣೆಗಳಾದುವು. ಆಹಾರವನ್ನು ಹುಡುಕುವ ಶ್ರಮಕ್ಕೆ ಬದಲಾಗಿ ಆಹಾರವನ್ನು ತಾನೇ ಬೆಳೆಯುವ ವಿಧಾನವನ್ನು ಅರಿತುಕೊಂಡ. ಈ ಘಟನೆ ಮಾನವನ ಇತಿಹಾಸದಲ್ಲಿ ಅತಿ ಪ್ರಮುಖವಾದದ್ದು. ಅಂದಿನಿಂದ ಇವನು ಅಲೆಮಾರಿಜೀವನವನ್ನು ಮುಕ್ತಾಯಗೊಳಿಸಿ ಒಂದು ಕಡೆ ಸ್ಥಿರವಾಗಿ ನೆಲೆಸುವುದನ್ನು ಕಲಿತ. ತನ್ನೊಡನಿದ್ದ ಜನರೊಡನೆ ಗುಂಪುಗೂಡಿ ವಾಸಿಸಲಾರಂಭಿಸಿದ್ದು ಈ ಅವಧಿಯಲ್ಲಿ. ಕ್ರಮೇಣ ತಾನು, ತನ್ನದು ಎಂಬ ಮನೋಭಾವ ಬೆಳೆದು ಕುಟುಂಬ ಪದ್ಧತಿ ಆರಂಭವಾಯಿತು. ಕುಟುಂಬದವರೆಲ್ಲ ಒಂದು ಕಡೆ ಇರಬೇಕೆನಿಸಿದ್ದಾಗಲೇ ಏಕಾಂತತೆಯ ಆವಶ್ಯಕತೆಯೂ ಉಂಟಾಯಿತು. ಅದಕ್ಕಾಗಿ ಮನೆಯ ರಚನೆ ತಲೆದೋರಿತು. ಈ ಮನೆಗಳು ಕೇವಲ ಪ್ರಾರಂಭಿಕ ಸ್ಥಿತಿಯ ಗುಡಿಸಲುಗಳು ಮಾತ್ರ.
 
==ಪ್ರಾಚೀನತೆ==
==ಪ್ರಾಜೀನತೆ==
ಅತಿಪ್ರಾಚೀನವೆನಬಹುದಾದಅತಿಪ್ರಾಚೀನವೆನ್ನಬಹುದಾದ ಗುಡಿಸಲುಗಳು ಅಸ್ಸೀರಿಯದ ಉಬೈದನ್ ಗ್ರಾಮಗಳಲ್ಲಿ ದೊರೆತಿವೆ (ಪ್ರ.ಶ.ಪು. 3000). ಇವುಗಳ ರಚನೆ ಜೊಂಡಿನಿಂದ. ಇವನ್ನು ಮಣ್ಣುಮೆತ್ತಿ ನಿಲ್ಲಿಸುತ್ತಿದ್ದರೆಂದು ತೋರುತ್ತದೆ. ಸುಮರನ ಎರಿದು ಎಂಬಲ್ಲಿ ಬೇರೆ ಭಾಗಗಳುಳ್ಳ ಇಂಥ ಜೊಂಡಿನ ಗುಡಿಸಲಿನ ಅವಶೇಷ ದೊರೆತಿದೆ. ಆದರೆ ಇದು ಮಣ್ಣಿನ ಗೋಡೆಗಳಿಂದ ಮಾಡಿದ ಮನೆಯೊಂದಕ್ಕೆ ಸೇರಿದಂತಿದೆ. ಪಶ್ಚಿಮ ಇರಾನಿನ ಸಿಯಾಲ್ಕ್‌ನ ಉತ್ಖನನದಲ್ಲಿ ಕೆಳಗಿನ ಪದರಗಳಲ್ಲಿ ವಾಸಸ್ಥಾನದ ಕುರುಹುಗಳೇನೂ ಕಾಣದಿದ್ದರೂ ಜೊಂಡಿನ ಗುಡಿಸಲುಗಳ ಉಪಯೋಗ ಅಲ್ಲಿನ ಜನರಿಗೆ ತಿಳಿದಿತ್ತೆಂದು ಊಹಿಸಲಾಗಿದೆ. ಆದರೆ ಗಟ್ಟಿಸಿದ ಮಣ್ಣಿನ ಗೋಡೆಗಳಿಂದ ಕಟ್ಟಿದ ಮನೆಗಳ ಅವಶೇಷಗಳು ಸು. 4 ಮೀ ಮೇಲಿನ ಪದರದಲ್ಲಿ ಕಂಡುಬಂದಿವೆ. ಗೋಡೆಹಾಕುವ ಸ್ಥಳದಲ್ಲಿ ಗರಸುಬೆರೆಸಿದ ಮಣ್ಣು ಅಥವಾ ಜೇಡಿಯನ್ನು ಹಲಗೆಗಳ ಮಧ್ಯೆ ಚೆನ್ನಾಗಿ ಗಟ್ಟಿಸಿ ಅದು ಗಡಸಾದ ಮೇಲೆ ಹಲಗೆಗಳನ್ನು ತೆಗೆದು ಬಿಡುವುದರ ಮೂಲಕ ಇಂಥ ಜೋಡಿಗೋಡೆಗಳನ್ನು ಕಟ್ಟುತ್ತಿದ್ದಿರಬೇಕು.
 
ಮನೆ ಎಂಬ ಇಂದಿನ ಅರ್ಥದ ನೆಲೆಗಳನ್ನು ನಾವು ಮೊದಲು ಕಾಣುವುದು ಈಜಿಪ್ಟಿನಲ್ಲಿ. ನೈಲ್ ನದಿಯ ರೊಸೆಟ್ಟಾ ಶಾಖೆಯ ಬಳಿ ಮೆರಿಂದೆ ಎಂಬಲ್ಲಿ (ಪ್ರ.ಶ.ಪು. 4000-3000) ಮೊತ್ತಮೊದಲು ನೆಲೆನಿಂತ ಜನರು ನಿರ್ಬಲವಾದ ಗೂಡುಗಳನ್ನು ಕಟ್ಟಿ ಕೊಂಡರು. ಇವು ಹೊನಲಿನ ಸೆಳೆತಕ್ಕೆ ಸಿಕ್ಕು ಮರಳಿನಲ್ಲಿ ಹುಗಿದುಹೋಗುತ್ತಿದ್ದುವು. ಆದರೆ ಕ್ರಮೇಣ ಹೆಚ್ಚು ಬಲಶಾಲಿಯಾದ ಆಸರೆ ಗಳನ್ನು ಇವರು ಕಟ್ಟಲು ಶಕ್ತರಾದರು. ಹೊನಲಿಗೆ ಅಡ್ಡವಾಗಿ ಜೊಂಡಿನ ಚಾಪೆ ಗಳನ್ನುಚಾಪೆಗಳನ್ನು ಅಂಡಾಕಾರವಾಗಿ ಅಥವಾ ಲಾಳಾಕಾರವಾಗಿ, ನೆಲದೊಳಗೆ ಹುಗಿದ ಕಂಬ ಗಳಿಗೆ, ಜೋತುಬಿಟ್ಟರು. ಕೆಲಕಾಲದ ಬಳಿಕ ಇಂಥ ಆಸರೆಗಳಿಗೆ ಚಾಪೆಗಳ ಬದಲಾಗಿ ಮಣ್ಣಿನ ಗೋಡೆಗಳನ್ನು ಉಪಯೋಗಿಸತೊಡಗಿದರು. ಈ ಗೋಡೆಗಳನ್ನು ದಪ್ಪವಾದ ಕೆಲವು 1.5 ಮೀಟರ್ ದಪ್ಪ ಮಣ್ಣಿನ ಮುದ್ದೆಗಳಿಂದ ಮಾಡಲಾಗಿತ್ತು. ಇಂಥ ಮನೆಗಳಾದರೂ ಒತ್ತೊತ್ತಾಗಿರದೆ ದೂರದೂರವಾಗಿದ್ದುವು: ಆದರೆ ಕ್ರಮಬದ್ಧವಾದ ಸಾಲಿನಲ್ಲಿ ಇದ್ದುವು.
 
ಎಲ್ಅಮ್ರದಲ್ಲಿ (ಪ್ರ.ಶ.ಪು.3000) ಮನೆಯೊಂದರ ಮಣ್ಣಿನಮಾದರಿ ದೊರೆತಿದೆ. ಇದು ಅಂದಿನ ಮನೆಗಳಿರುತ್ತಿದ್ದ ಬಗೆಯನ್ನು ಸೂಚಿಸುತ್ತದೆ. ಅವು ಆಯತಾಕಾರದ ಮನೆಗಳು. ಉದ್ದವಾದ ಭಾಗದಲ್ಲಿ ಮನೆಯೊಳಗೆ ಹೋಗಲು ಪ್ರವೇಶವಿದ್ದು ಅಲ್ಲಿ ಮಣ್ಣಿನ ಚೌಕಟ್ಟಿನ ದ್ವಾರವಿತ್ತು. ಇಂಥ ಮನೆಗಳು ಸುಮಾರು 7.5 - 5.5 ಚದರ ಮೀಟರುಗಳಷ್ಟು ವಿಶಾಲವಾಗಿದ್ದುವು.
[[File:Kamena kuca u Pokreveniku.jpg|thumb|ಸೆರ್ಬಿಯಾದಲ್ಲಿನ ಸಾಂಪ್ರದಾಯಿಕ ಕಲ್ಲಿನ ಮನೆಗಳು]]
[[ಮೆಸಪೊಟೇಮಿಯ]]ದ ಖಲತ್ ಜರ್ಮೊ ಎಂಬಲ್ಲಿ ಆಹಾರವನ್ನು ಬೆಳೆಸಲು ಕಲಿಯಲಾರಂಭಿಸಿದ ಜನ ಸಣ್ಣ ಮನೆಗಳನ್ನು ಕಟ್ಟಿರುವುದು [[ಉತ್ಖನನ]]ದಿಂದ ಬೆಳಕಿಗೆ ಬಂದಿದೆ. ಅಲ್ಲಿನ ರೈತರು ಗಟ್ಟಿಸಿದ ಜೇಡಿಮಣ್ಣಿನ ಗೋಡೆಗಳುಳ್ಳ ಸರಳವಾದ ಮನೆಗಳನ್ನು ಕಟ್ಟುತ್ತಿದ್ದರು. ಮನೆಗೆ ಜೊಂಡಿನ ನೆಲಗಟ್ಟು ಇತ್ತು. [[ಟೈಗ್ರಿಸ್ ನದಿ]]ಯ ಪಶ್ಚಿಮಕ್ಕಿರುವ ಹಸ್ಸುನ ಎಂಬಲ್ಲಿ [[ನವಶಿಲಾಯುಗ]]ದ ಜನರು ವಾಸಿಸಿದ್ದುದಕ್ಕೆ ಕುರುಹುಗಳು ದೊರೆತಿವೆ. ಅತಿ ಕೆಳಗಿನ ಪದರಗಳಲ್ಲಿ ಮನೆಗಳ ಅವಶೇಷಗಳು ಇಲ್ಲವಾದರೂ ಮೇಲಿನ ಪದರಗಳಲ್ಲಿ ಇವು ಸ್ಪಷ್ಟವಾಗಿವೆ. ಅತಿಪ್ರಾಚೀನ ಗ್ರಾಮದಲ್ಲಿ ವಕ್ರವಾದ ಗೋಡೆಗಳ ಅವಶೇಷಗಳಿವೆ. ಇದರ ಬಳಿಕ ಈ ಮನೆಗಳು ಹೆಚ್ಚು ಸಜ್ಜುಗೊಂಡಿವೆ. ಹಲವಾರು ಕೊಠಡಿಗಳಿಂದಕೂಡಿದಕೊಠಡಿಗಳಿಂದ ಕೂಡಿದ ಇವುಗಳಿಗೆ ಆಯತಾಕಾರವಿತ್ತು. ಮನೆಯ ಆವರಣದೊಳಗೆ ಒಂದು ಅಂಗಳವೂ ಇತ್ತು. ಮನೆಗಳಿಗೆ ಕಲ್ಲಿನ ಕುಳಿಯ ಸುತ್ತಲೂ ತಿರುಗುವ ತಿರುಗು ಗೂಟಗಳುಳ್ಳ ಮರದ ಬಾಗಿಲುಗಳಿದ್ದುವು. ಅಂಗಳದಲ್ಲಿ ಆಹಾರಬೇಯಿಸಲು ಮಣ್ಣಿನ ಗುಂಡಾದ ಒಲೆಗಳಿದ್ದವು. ಇವು ಕೆಲವೊಮ್ಮೆ ಕೊಠಡಿಗಳೊಳಗೆ ಇದ್ದುದೂ ಕಂಡುಬಂದಿದೆ. ಇವೆಲ್ಲ ಪ್ರ.ಶ.ಪು. ಸುಮಾರು 3000 ವರ್ಷಗಳಿಗೂ ಹಿಂದೆ ಪ್ರಚಲಿತವಿದ್ದ ನಾಗರಿಕತೆಗಳು.
 
[[ಸುಮೇರಿಯ]]ದ ಮೊದಲ ಅರಸು ಮನೆತನಗಳ ಕಾಲದಲ್ಲಿ (ಪ್ರ.ಶ.ಪು. ಸುಮಾರು 2000). ಆ ಜನರು ಒಂದು ಮಹಡಿಯನ್ನುಳ್ಳ ಇಟ್ಟಿಗೆಯ ಮನೆಗಳಲ್ಲಿ ವಾಸಿಸುತ್ತಿದ್ದರು. ಖಫಜೆ ಎಂಬಲ್ಲಿ ಒಂದುಕಡೆ 10-6.5 ಚದರ ಮೀಟರಿನಷ್ಟು ಕಿರಿದಾದ ಸ್ಥಳಗಳಲ್ಲಿ ಐದು ಕೊಠಡಿಗಳ ಮನೆಯೂ 30-20 ಚದರ ಮೀಟರಿನ ಸುತ್ತಳತೆಯ ವಿಶಾಲಪ್ರದೇಶದಲ್ಲಿ ಹತ್ತು ಕೊಠಡಿಗಳುಳ್ಳ ದೊಡ್ಡಮನೆಯೂ ಇವೆ. ಈ ದೊಡ್ಡ ಮನೆಯ ಕೆಲವು ಬಾಗಿಲುಗಳ ಮೇಲೆ ಕಮಾನಿನ ನೆತ್ತಿಗಲ್ಲುಗಳು ಇವೆ. ಆದರೆ ಇವು ಕೇವಲ 1.5 ಮೀ. ಎತ್ತರವಾಗಿದ್ದುವು. ಕೊಠಡಿಗಳಿಗೆ ಬೆಳಕು ಸಣ್ಣ ಕಿಟಕಿಗಳಿಂದ ಬರುತ್ತಿತ್ತು. ಈ ಮನೆಗಳಲ್ಲಿ ಪ್ರತ್ಯೇಕವಾದ ಅಡುಗೆಯ ಕೊಠಡಿಗಳು ಕೂಡ ಇದ್ದುವು. ಮನೆಗಳು ಅಡಕವಾದ ವಠಾರಗಳಲ್ಲಿ ವಿಂಗಡಿಸಲ್ಪಟ್ಟು ಇವುಗಳ ನಡುವೆ ಬೀದಿಗಳೂ ಗಲ್ಲಿಗಳೂ ಹಾದುಹೋಗಿದ್ದುವು.
"https://kn.wikipedia.org/wiki/ಮನೆ" ಇಂದ ಪಡೆಯಲ್ಪಟ್ಟಿದೆ