"ಉಷ್ಣತೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
===ಸಿದ್ಧಾಂತಗಳು===
ಉಷ್ಣದ ಗುಣಲಕ್ಷಣಗಳನ್ನೂ ವರ್ತನೆಯನ್ನು ಅನುಸರಿಸಿ ಎರಡು ಭಿನ್ನ ಸಿದ್ಧಾಂತಗಳನ್ನು ಮುಂದಿಡಲಾಗಿದೆ(ಕೆಲೋರಿಕ್ ಸಿದ್ಧಾಂತ ಚಲನ ಸಿದ್ಧಾಂತ. '''ಕೆಲೊರಿಕ್ ಸಿದ್ಧಾಂತ''': ಉಷ್ಣ ಒಂದು ತರಲ (ಫ್ಲೂಯ್ಡ್), ಇದು ಅತಿಸೂಕ್ಷ್ಮ, ತೂಕರಹಿತ, ನಾಶರಹಿತ, ಆದರೆ ವೇಗಸಹಿತವಸ್ತು ಎಂಬ ಪರಿಕಲ್ಪನೆಯಿಂದ ಈ ಸಿದ್ಧಾಂತವನ್ನು ಹೆಣೆದಿದ್ದಾರೆ. ಒಂದು ವಸ್ತುವನ್ನು ಕಾಯಿಸುವುದು ಎಂದರೆ ಉಷ್ಣತರಲದ ಅತಿಸೂಕ್ಷ್ಮ ಕಣಗಳಿಂದ ಅನಂತಸೂಕ್ಷ್ಮ ಕಣಗಳ ನಡುವಿನ ಎಲ್ಲ ಪ್ರದೇಶದ ಆಕ್ರಮಣ ಎಂದು ವಿವರಿಸಿದರು. ಅದೇ ರೀತಿ ವಸ್ತುವನ್ನು ತಣ್ಣಗಾಗಿಸಿದಾಗ ಉಷ್ಣ ತರಲದ ಕಣಗಳು ಆಕ್ರಮಿತ ಪ್ರದೇಶಗಳಿಂದ ಹಿಂದೆ ಸರಿಯುವುವು. ಮಂಜುಗೆಡ್ಡೆ ನೀರಾಗುವುದು ಮೊದಲಿನ ಕಾರಣದಿಂದಾದರೆ ನೀರು ಮಂಜುಗೆಡ್ಡೆಯಾಗುವುದು ಎರಡನೆಯ ಕಾರಣದಿಂದ ಎಂಬ ವಿವರಣೆ ತೋರ್ಕೆಗೆ ಸಮಧಾನ ನೀಡಿತು. ಆದರೆ ಇಲ್ಲೇ ಕೆಲೊರಿಕ್ ಸಿದ್ಧಾಂತ ಒಂದು ಹೊಸ ಪರಿಸ್ಥಿತಿ ಎದುರಿಸಬೇಕಾಯಿತು(ಮಂಜುಗಡ್ಡೆಯ ಉಷ್ಣತೆಯೂ 0ಲಿ ಸೆ. ಅದೇ ಪ್ರಕಾರ ಕುದಿಯುವ ನೀರಿನ ಉಷ್ಣತೆಯೂ 0ಲಿ ಸೆ. ಅದೇ ಪ್ರಕಾರ ಕುದಿಯುವ ನೀರಿನ ಉಷ್ಣತೆಯೂ ಅದರಿಂದ ದೊರೆತ ಆವಿಯ ಉಷ್ಣತೆಯೂ ಸಮನವಾಗಿರುವುವು (100ಲಿ ಸೆ.). ಹಾಗಾದರೆ ಈ ಘಟನೆಗಳಲ್ಲಿ ವಸ್ತುವನ್ನು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಪರಿವರ್ತಿಸಲು ಒದಗಿಸಿದ ಉಷ್ಣದ (ಕೆಲೋರಿಕ್ಕಿನ) ಗತಿ ಏನಾಯಿತು? ಗುಪ್ತೋಷ್ಣ (ಲೇಟೆಂಟ್ ಹೀಟ್) ಎಂಬ ಪರಿಕಲ್ಪನೆ ಕೆಲೋರಿಕ್ ಸಿದ್ಧಾಂತದ ವ್ಯಾಪ್ತಿಯಲ್ಲಿರಲಿಲ್ಲ. ಇದು 19ನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಪರಿಸ್ಥಿತಿ. ಅದೇ ವೇಳೆಯಲ್ಲಿ ಕೌಂಟ್‍ರಮ್‍ಫರ್ಡ್(1753-1814) ಮಾಡಿದ ಒಂದು ಪ್ರಯೋಗ ಕೆಲೊರಿಕ್ ಸಿದ್ಧಾಂತವನ್ನು ಪೂರ್ಣವಾಗಿ ಸಮಾಧಿಮಾಡಿತು. ಅವನು ಲೋಹದ ಹಾಳೆಗಳನ್ನು ಉಕ್ಕಿನ ಅಲಗಿನ ಬೈರಿಗೆಯಿಂದ ಕೊರೆಯುತ್ತಿದ. ಈ ಕ್ರಿಯೆಯಲ್ಲಿ ಅಪಾರ ಉಷ್ಣ ಜನಿಸುವುದನ್ನು ಕಂಡ. ಅವನ ಕೆಲಸ ಕೋಣೆಯ ಹಿತಕರ ಉಷ್ಣತೆಯಲ್ಲೇ ನಡೆದಿದ್ದರೂ ಇಷ್ಟೊಂದು ಉಷ್ಣ ಎಲ್ಲಿಂದ ಬಂದಿರಬಹುದು? ಉಷ್ಣ ತರಲವಾಗಿದ್ದು ದ್ರವ್ಯದ (ಮ್ಯಾಟರ್) ಒಂದು ರೂಪವಾಗಿದ್ದಿದ್ದರೆ ಅದು ಕೊರೆತದಲ್ಲಿ ರಚಿತವಾಯಿತು ಎಂಬ ಊಹೆ ದೋಷಯುಕ್ತವೆಂದೆನಿಸಿತು. ದ್ರವವನ್ನು ರಚಿಸಲೂ ಸಾಧ್ಯವಿಲ್ಲ ನಾಶಗೊಳಿಸಲೂ ಸಾಧ್ಯವಿಲ್ಲ ಎಂಬ ನಿಯಮವನ್ನು ಅಂದರೆ ದ್ರವ್ಯತ್ವದ ನಿತ್ಯತ್ವದ ನಿಯಮವನ್ನು(ವಿಜ್ಞಾನಿಗಳು ಆ ಮೊದಲೇ ಅಂಗೀಕರಿಸಿದ್ದರು. ಈ ನಿಯಮಕ್ಕೆ ರಮ್‍ಫರ್ಡನ ಪ್ರಯೋಗದಿಂದ ಲಭಿಸಿದ ಅನುಭವ ವ್ಯತಿರಿಕ್ತವಾಗಿತ್ತು. ಆದ್ದರಿಂದ ಉಷ್ಣ ತರಲವಲ್ಲ, ಅದು ವಸ್ತುವಲ್ಲ. ಕೆಲೊರಿಕ್ ಸಿದ್ಧಾಂತ ಸಾಧುವಲ್ಲ ಎಂದು ವಿಜ್ಞಾನಿಗಳು ತೀರ್ಮಾನಿಸಿದರು.
 
'''ಚಲನಶಕ್ತಿ ಸಿದ್ಧಾಂತ''': ಇದರ ಪ್ರಕಾರ ಯಾಂತ್ರಿಕಶಕ್ತಿ ಮತ್ತು ಅದನ್ನು ಉಪಯೋಗಿಸುವುದರಿಂದ ಉದ್ಭವವಾಗುವ ಉಷ್ಣ ಇವುಗಳಲ್ಲಿ ಸಂಬಂಧವಿದೆಯೆಂದು ಪ್ರಯೋಗಗಳು ತೋರಿಸಿಕೊಟ್ಟಿವೆ. ಇದಲ್ಲದೆ ವಿಶಿಷ್ಟ ಪರಿಮಾಣದ ಯಾಂತ್ರಿಕಶಕ್ತಿಯನ್ನು ಉಪಯೋಗಿಸಿದಾಗ ಅದಕ್ಕನುಗುಣವಾಗಿ ಉಷ್ಣ ನಿರ್ಮಾಣವಾಗುವುದೆಂದು ಅಥವ ಅದೇ ಪ್ರಕಾರವಾಗಿ ಇದೇ ಉಷ್ಣದಿಂದ ಯಾಂತ್ರಿಕಶಕ್ತಿಯನ್ನು ಉತ್ಪಾದಿಸಿದಾಗ ಮೊದಲಿನಷ್ಟೆ ಶಕ್ತಿ ಉದ್ಭವಿಸುವುದೆಂದು ಕಂಡುಬಂದಿದೆ. ಯಾಂತ್ರಿಕಶಕ್ತಿ ಮತ್ತು ಉಷ್ಣ ಇವುಗಳ ಸಂಬಂಧ ಸ್ಥಾಪಿಸಲು ಬೇರೆ ಬೇರೆ ಪ್ರಯೋಗಗಳನ್ನು ಮಾಡಲಾಯಿತು. ಇವುಗಳಲ್ಲಿಯ ಎರಡು ಪ್ರಯೋಗಗಳನ್ನು ಇಲ್ಲಿ ಸ್ಥೂಲವಾಗಿ ವಿವರಿಸಲಾಗಿದೆ. ಮೊದಲಿಗೆ ಜೌಲ್ ಎಂಬ ವಿಜ್ಞಾನಿ ವಿದ್ಯುಚ್ಛಕ್ತಿಯನ್ನು ಉಪಯೋಗಿಸಿ ಉಷ್ಣವನ್ನು ಪಡೆದು ಯಾಂತ್ರಿಕ ಶಕ್ತಿ-ಉಷ್ಣಗಳ ನಡುವಿನ ಸಂಬಂಧವನ್ನು ಎಂದರೆ ಎಷ್ಟು ಯಾಂತ್ರಿಕ ಶಕ್ತಿಯನ್ನು ಉಪಯೋಗಿಸಿದರೆ ಎಷ್ಟು ಉಷ್ಣ ಉತ್ಪನ್ನವಾಗುವುದೆಂಬುದನ್ನು ನಿರ್ಧರಿಸಿದ (1840). ಇನ್ನೊಂದು ಪ್ರಯೋಗದಲ್ಲಿ ರಾಟೆಯಿಂದ ತೂಗುಬಿಟ್ಟ ತೂಕದ ಕಲ್ಲುಗಳು ನೀರಿನಲ್ಲಿ ಇರಿಸಿದ ಹುಟ್ಟಿನಾಕಾರದ ಸಲಕರಣೆಯನ್ನು ತಿರುಗಿಸುವಂತೆ ಮಾಡಿ ಇಲ್ಲಿ ಉತ್ಪನ್ನವಾದ ಉಷ್ಣ ಮತ್ತು ಇದನ್ನು ದೊರಕಿಸಲು ವ್ಯಯಿಸಿದ ಯಾಂತ್ರಿಕಶಕ್ತಿ ಇವನ್ನು ತಿಳಿದು ಯಾಂತ್ರಿಕಶಕ್ತಿ-ಉಷ್ಣಗಳೊಳಗಿನ ಸಂಬಂಧವನ್ನು ಕಂಡುಹಿಡಿಯಲಾಯಿತು. ಇಂಥ ಪ್ರಯೋಗಗಳ ಫಲಿತಾಂಶಗಳು ಒಂದಕ್ಕೊಂದು ಪೂರಕವಾಗಿದ್ದುದರಿಂದ ಚಲನಶಕ್ತಿ ಸಿದ್ಧಾಂತ ಗ್ರಾಹ್ಯವೆನ್ನಿಸಿತು. ಉಷ್ಣವರ್ಗಾವಣೆ: ಉಷ್ಣ ಚಲನಶಕ್ತಿಯ ಒಂದು ರೂಪ, ಇದರ ವರ್ಗಾವಣೆ ಮೂರು ವಿಧಗಳಲ್ಲಿ ನಡೆಯುತ್ತದೆ. (ದಹನ (ಕಂಡಕ್ಷನ್), ನಯನ (ಕನ್ವೆಕ್ಷನ್), ವಿಕಿರಣ (ರೇಡಿಯೇಷನ್). ಭಿನ್ನ ಉಷ್ಣತೆಗಳ ನಡುವೆ ಮಾತ್ರ ಈ ವರ್ಗಾವಣೆ ಸಾಧ್ಯ. ಚಲನೆಯ ದಿಶೆ ಅಧಿಕ ಉಷ್ಣತೆಯ ಉಗಮದಿಂದ ಕಡಿಮೆ ಉಷ್ಣತೆಯ ಗ್ರಾಹಕದೆಡೆಗೆ.
 
'''ವಹನ''' : ಪರಮಾಣುಗಳ ಅಥವಾ ಅಣುಗಳ ಅಂತರ ಕ್ರಿಯೆಗಳಿಂದ ಉಷ್ಣವಹನ ನಡೆಯುತ್ತದೆ. ಉಷ್ಣ ಮೂಲಕ ಅತಿನಿಕಟದಲ್ಲಿರುವ ವಸ್ತುವಿನ ಅಣುಗಳು ಹೆಚ್ಚು ಶಕ್ತಿಯುತವಾಗಿ ಕಂಪಿಸುತ್ತವೆ. ಇದರಿಂದ ನೆರೆ ಅಣುಗಳೊಂದಿಗೆ ತಾಕಲಾಟಗಳು (ಕೊಲ್ಲಿಷನ್ಸ್) ಹೆಚ್ಚಿ ಅವೂ ಕಂಪಿಸತೊಡಗುವುವು. ಹೀಗೆ ಕಂಪನಗಳ ಪರಂಪರಯೆ ಉಷ್ಣ ಮೂಲದಿಂದ ಆರಂಭಿಸಿ ಮಾಧ್ಯಮದ ಮೂಲಕ ಮುಂದೆ ಮುಂದೆ ಸಾಗುತ್ತದೆ. ಇಂಥ ಕಂಪನಗಳಲ್ಲಿ ಯಾವ ಅಣುವೂ ತನ್ನ ಮೂಲಸ್ಥಾನದಿಂದ ವಿಚಲಿತವಾಗುವುದಿಲ್ಲ: ಬದಲು, ಅದರ ಮೂಲಸ್ಥಾನವನ್ನು ಕೇಂದ್ರವಾಗಿಟ್ಟು ಕಂಪಿಸುತ್ತದೆ. ಆದ್ದರಿಂದ ಉಷ್ಣವಹನದಲ್ಲಿ ಮಾಧ್ಯಮವಸ್ತುವಿನ ಅಣುಗಳ ಸ್ಥಾನಗಳು ಬದಲಾಗುವುದಿಲ್ಲ; ಆದರೆ ಉಷ್ಣ ಮಾತ್ರ ವರ್ಗವಾಗುತ್ತಲೆ ಇರುವುದು. ಲೋಹದ ಸರಳಿನ ಒಂದು ತುದಿಯನ್ನು ಕಾಯಿಸಿದಾಗ ಕ್ರಮೇಣ ಇನ್ನೊಂದು ತುದಿಯೂ ಬೆಚ್ಚಗಾಗಿ ಕಾಯುವುದರ ಕಾರಣ ಉಷ್ಣವಹನ. ಒಂದು ಅಪಾರದರ್ಶಕ ಘನವಸ್ತುವಿನ ಮೂಲಕ ಉಷ್ಣವನ್ನು ವರ್ಗಾಯಿಸಲು ಇರುವ ಏಕೈಕ ವಿಧಾನವೆಂದರೆ ವಹನ. ವಹನತೆ (ಕಂಡಕ್ಟಿವಿಟಿ) ಒಂದೊಂದು ವಸ್ತುವಿನಲ್ಲಿ ಒಂದೊಂದು ತೆರನಾಗಿದೆ( ಲೋಹಗಳಲ್ಲಿ ಇದು ಕನಿಷ್ಠ.
 
'''ನಯನ''' : ಒಂದು ತರಲದ (ಫ್ಲೂಯ್ಡ್) ಅಣುಗಳ ಬೆರಕೆಯಿಂದ ಉಷ್ಣನಯನ ನಡೆಯುತ್ತದೆ. ಎಂದರೆ ಅಣುಗಳೂ ಸ್ವತಃ ಚಲಿಸಿ ಉಷ್ಣವನ್ನು ಮಾಧ್ಯಮದಲ್ಲಿ ಹರಡುವ ವಿಧಾನ ನಯನ. ಉದಾಹರಣೆಗೆ. ಒಂದು ಪಾತ್ರೆಗೆ ನೀರು ತುಂಬಿಸಿ ಅದನ್ನು ಕಾಯಲು ಬೆಂಕಿಯ ಮೇಲೆ ಇಟ್ಟಾಗ ಪಾತ್ರೆಯ ತಳದಲ್ಲಿರುವ ನೀರಿನ ಅಣುಗಳು ಉಷ್ಣದೊಡನೆ ನಿಕಟಸಂಪರ್ಕ ಪಡೆದು ಕಾದು ಹಗುರವಾಗಿ (ಸಾಂದ್ರತೆ ಕಡಿಮೆಯಾಗಿ) ಮೇಲೆ ಏರಲು ತೊಡಗುವುವು. ಕಾದ ಅಣುಗಳು ಹೀಗೆ ಮೆಲೆ ಸಾಗುವಾಗ ತಣ್ಣಗಿನ ತೂಕದ (ಸಾಂದ್ರತೆ ಹೆಚ್ಚು) ಅಣುಗಳು ತಳದೆಡೆಗೆ ಇಳಿಯುವುವು. ಮತ್ತೆ ಮೊದಲಿನ ಕ್ರಿಯೆಯ ಪುನರಾವರ್ತನೆ. ಉಷ್ಣವರ್ಗಾವಣೆ ಇಲ್ಲಿ ನಡೆದದ್ದು ಅಣುಗಳ ಕಂಪನದಿಂದಲ್ಲ, ಚಲನೆಯಿಂದ, ದ್ರವ ಮತ್ತು ಅನಿಲಸ್ಥಿತಿಯಲ್ಲಿರುವ ವಸ್ತುಗಳನ್ನು ಮಾತ್ರ ನಯನರೀತಿಯ ಉಷ್ಣವರ್ಗಾವಣೆ ನಡೆಯುತ್ತದೆ. ಕೊಠಡಿಯನ್ನು ಬೆಚ್ಚಗಿಡಲು ಅಧಿಕೋಷ್ಣತೆಯಲ್ಲಿರುವ ಉಗಿಯನ್ನು ನಾಳಗಳ ಮೂಲಕ ಕೋಣೆಯಲ್ಲಿ ಹರಿಸುತ್ತಾರೆ: ಆಗ ನಾಳಗಳ ಹೊರಮೈ ಕಾದು ಕೊಠಡಿ ಬೆಚ್ಚಗಾಗುವುದು. ಈ ಕ್ರಿಯೆ ಉಷ್ಣನಯನಕ್ಕೆ ಒಂದು ಉದಾಹರಣೆ. (ನೋಡಿ- ನಯನ,-ಉಷ್ಣ).
 
'''ವಿಕಿರಣ''' : ಮಾಧ್ಯಮದÁವಶ್ಯಕತೆಯೆ ಇಲ್ಲದೆ ಉಷ್ಣದ ವರ್ಗಾವಣೆ. ಸೂರ್ಯನಿಂದ ಭೂಮಿಗೆ ಬೆಳಕು ಮುಂತಾದ ಶಕ್ತಿರೂಪಗಳೊಂದಿಗೆ ಉಷ್ಣವೂ ಬರುವುದು ಇದಕ್ಕೊಂದು ನಿದರ್ಶನ. ಇಲ್ಲಿ ಉಷ್ಣ ವಿದ್ಯುತ್ಕಾಂತ ತರಂಗಗಳ ಒಂದು ರೂಪವಾಗಿ ವರ್ತಿಸುತ್ತದೆ; ಅದರ ವೇಗ ಬೇಳಕಿನ ವೇಗಕ್ಕೆ ಸಮ (ಸೆಕೆಂಡಿಗೆ 3 ಲಕ್ಷ ಕಿ.ಮೀ.) ವಹನ ಮತ್ತು ನಯನ ವೇಗಗಳು ಈ ವೇಗಕ್ಕಿಂತ ಅದೆಷ್ಟೋ ಕಡಿಮೆ. ಪ್ರಸರಣದಿಂದ ಚಲಿಸುವ ಉಷ್ಣಶಕ್ತಿ ವಿದ್ಯುತ್ಕಾಂತ ತರಂಗಗಳ ಸಕಲಗುಣಗಳನ್ನು ಪ್ರದರ್ಶಿಸುತ್ತದೆ(ಚಲನೆ ಸರಳರೇಖೆಯಲ್ಲಿ, ವಕ್ರೀಭವನ ಮತ್ತು ಪ್ರತಿಫಲನ (ರಿಫ್ರಾಕ್ಷನ್ ಅಂಡ್ ರಿಫ್ಲೆಕ್ಷನ್) ಗುಣಗಳಿವೆ. ಎರಡು ವಸ್ತುಗಳ ನಡುವೆ ಉಷ್ಣತೆಗಳ ಅಂತರ ಇರುವವರೆಗೂ ವಿಕಿರಣ ಕ್ರಿಯೆ ನಡೆದೇ ಇರುತ್ತದೆ.
 
==ಉಷ್ಣ ಮತ್ತು ಕೆಲಸ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/853511" ಇಂದ ಪಡೆಯಲ್ಪಟ್ಟಿದೆ