"ಉಷ್ಣತೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

===ಉಷ್ಣದ ಮೂಲಗಳು===
ಮನುಷ್ಯ ಕಂಡು ಹಿಡಿದ ಉಷ್ಣದ ಪ್ರಥಮ ಮೂಲ ಬೆಂಕಿ, ಚಳಿ ಹಾಗೂ ಕಾಡುಪ್ರಾಣಿಗಳಿಂದ ರಕ್ಷಣೆ: ಆಹಾರವನ್ನು ಬೇಯಿಸುವುದು; ಲೋಹೋಪಕರಣಗಳ ಹಾಗೂ ಆಯುಧಗಳ ತಯಾರಿಕೆ ಇತ್ಯಾದಿ ಕೆಲಸಗಳಲ್ಲಿ ಅವನಿಗೆ ಬೆಂಕಿಯ ಉಪಯೋಗವಿತ್ತು. ಉಷ್ಣಶಕ್ತಿಯ ಉತ್ಪಾದನೆ ಹಾಗೂ ಉದ್ದೇಶಪೂರಿತ ಬಳಕೆ ಇವುಗಳ ಪರಿಣಾಮವಾಗಿ ನಾಗರಿಕತೆ ಬೆಳೆಯುತ್ತ ಬಂದಿದೆ. ಮನುಷ್ಯನಿಗೆ ಉಷ್ಣದ ನೈಸರ್ಗಿಕ ಮೂಲ ಸೂರ್ಯ, ಖನಿಜವಸ್ತುಗಳಾದ ಕಲ್ಲಿದ್ದಲು, ಪೆಟ್ರೋಲುಗಳೂ ಕಟ್ಟಿಗೆ ಸೊಪ್ಪುಸದೆಗಳೂ ಉಷ್ಣಮೂಲಗಳೇ ಆದರೂ ಅಂತಿಮವಾಗಿ ಅವು ಸೂರ್ಯೋಷ್ಣದ ಸಂಗ್ರಾಹಕಗಳೇ ಆಗಿವೆ. ಯಾಂತ್ರಿಕಶಕ್ತಿ ಉಷ್ಣಶಕ್ತಿಯಾಗಿ ಮಾರ್ಪಡುವುದನ್ನು ಸುಲಭವಾಗಿ ಗಮನಿಸಿಬಹುದು. ವಸ್ತುಗಳನ್ನು ಪರಸ್ಪರ ಉಜ್ಜಿದಾಗ (ಉದಾಹರಣೆಗೆ ಎರಡು ಮರದ ತುಂಡುಗಳನ್ನು ಉಜ್ಜಿದಾಗ ಇಲ್ಲವೇ ನಮ್ಮ ಅಂಗೈಗಳನ್ನು ಉಜ್ಜಿಕೊಂಡಾಗ), ಸುತ್ತಿಗೆಯಿಂದ ಅಡಿಗಲ್ಲಿನ ಮೇಲೆ ಹೊಡೆದಾಗ ಉಷ್ಣ ಉತ್ಪಾದನೆ ಆಗುವುದೆಂಬುದು ತಿಳಿದಿದೆ. ಇನ್ನು ಜಡವಸ್ತುಗಳ ಪರಮಾಣುಗಳನ್ನು ವಿದಳನಗೊಳಿಸಿದಾಗ ಇಲ್ಲವೆ ಹಗುರವಾದ ವಸ್ತುಗಳನ್ನು ಸಂಲಯನಗೊಳಿಸಿದಾಗ ಸಹ ಉಷ್ಣ ಉತ್ಪತ್ತಿಯಾಗುವುದು.
 
===ಸಿದ್ಧಾಂತಗಳು===
ಉಷ್ಣದ ಗುಣಲಕ್ಷಣಗಳನ್ನೂ ವರ್ತನೆಯನ್ನು ಅನುಸರಿಸಿ ಎರಡು ಭಿನ್ನ ಸಿದ್ಧಾಂತಗಳನ್ನು ಮುಂದಿಡಲಾಗಿದೆ(ಕೆಲೋರಿಕ್ ಸಿದ್ಧಾಂತ ಚಲನ ಸಿದ್ಧಾಂತ. ಕೆಲೊರಿಕ್ ಸಿದ್ಧಾಂತ: ಉಷ್ಣ ಒಂದು ತರಲ (ಫ್ಲೂಯ್ಡ್), ಇದು ಅತಿಸೂಕ್ಷ್ಮ, ತೂಕರಹಿತ, ನಾಶರಹಿತ, ಆದರೆ ವೇಗಸಹಿತವಸ್ತು ಎಂಬ ಪರಿಕಲ್ಪನೆಯಿಂದ ಈ ಸಿದ್ಧಾಂತವನ್ನು ಹೆಣೆದಿದ್ದಾರೆ. ಒಂದು ವಸ್ತುವನ್ನು ಕಾಯಿಸುವುದು ಎಂದರೆ ಉಷ್ಣತರಲದ ಅತಿಸೂಕ್ಷ್ಮ ಕಣಗಳಿಂದ ಅನಂತಸೂಕ್ಷ್ಮ ಕಣಗಳ ನಡುವಿನ ಎಲ್ಲ ಪ್ರದೇಶದ ಆಕ್ರಮಣ ಎಂದು ವಿವರಿಸಿದರು. ಅದೇ ರೀತಿ ವಸ್ತುವನ್ನು ತಣ್ಣಗಾಗಿಸಿದಾಗ ಉಷ್ಣ ತರಲದ ಕಣಗಳು ಆಕ್ರಮಿತ ಪ್ರದೇಶಗಳಿಂದ ಹಿಂದೆ ಸರಿಯುವುವು. ಮಂಜುಗೆಡ್ಡೆ ನೀರಾಗುವುದು ಮೊದಲಿನ ಕಾರಣದಿಂದಾದರೆ ನೀರು ಮಂಜುಗೆಡ್ಡೆಯಾಗುವುದು ಎರಡನೆಯ ಕಾರಣದಿಂದ ಎಂಬ ವಿವರಣೆ ತೋರ್ಕೆಗೆ ಸಮಧಾನ ನೀಡಿತು. ಆದರೆ ಇಲ್ಲೇ ಕೆಲೊರಿಕ್ ಸಿದ್ಧಾಂತ ಒಂದು ಹೊಸ ಪರಿಸ್ಥಿತಿ ಎದುರಿಸಬೇಕಾಯಿತು(ಮಂಜುಗಡ್ಡೆಯ ಉಷ್ಣತೆಯೂ 0ಲಿ ಸೆ. ಅದೇ ಪ್ರಕಾರ ಕುದಿಯುವ ನೀರಿನ ಉಷ್ಣತೆಯೂ 0ಲಿ ಸೆ. ಅದೇ ಪ್ರಕಾರ ಕುದಿಯುವ ನೀರಿನ ಉಷ್ಣತೆಯೂ ಅದರಿಂದ ದೊರೆತ ಆವಿಯ ಉಷ್ಣತೆಯೂ ಸಮನವಾಗಿರುವುವು (100ಲಿ ಸೆ.). ಹಾಗಾದರೆ ಈ ಘಟನೆಗಳಲ್ಲಿ ವಸ್ತುವನ್ನು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಪರಿವರ್ತಿಸಲು ಒದಗಿಸಿದ ಉಷ್ಣದ (ಕೆಲೋರಿಕ್ಕಿನ) ಗತಿ ಏನಾಯಿತು? ಗುಪ್ತೋಷ್ಣ (ಲೇಟೆಂಟ್ ಹೀಟ್) ಎಂಬ ಪರಿಕಲ್ಪನೆ ಕೆಲೋರಿಕ್ ಸಿದ್ಧಾಂತದ ವ್ಯಾಪ್ತಿಯಲ್ಲಿರಲಿಲ್ಲ. ಇದು 19ನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಪರಿಸ್ಥಿತಿ. ಅದೇ ವೇಳೆಯಲ್ಲಿ ಕೌಂಟ್‍ರಮ್‍ಫರ್ಡ್(1753-1814) ಮಾಡಿದ ಒಂದು ಪ್ರಯೋಗ ಕೆಲೊರಿಕ್ ಸಿದ್ಧಾಂತವನ್ನು ಪೂರ್ಣವಾಗಿ ಸಮಾಧಿಮಾಡಿತು. ಅವನು ಲೋಹದ ಹಾಳೆಗಳನ್ನು ಉಕ್ಕಿನ ಅಲಗಿನ ಬೈರಿಗೆಯಿಂದ ಕೊರೆಯುತ್ತಿದ. ಈ ಕ್ರಿಯೆಯಲ್ಲಿ ಅಪಾರ ಉಷ್ಣ ಜನಿಸುವುದನ್ನು ಕಂಡ. ಅವನ ಕೆಲಸ ಕೋಣೆಯ ಹಿತಕರ ಉಷ್ಣತೆಯಲ್ಲೇ ನಡೆದಿದ್ದರೂ ಇಷ್ಟೊಂದು ಉಷ್ಣ ಎಲ್ಲಿಂದ ಬಂದಿರಬಹುದು? ಉಷ್ಣ ತರಲವಾಗಿದ್ದು ದ್ರವ್ಯದ (ಮ್ಯಾಟರ್) ಒಂದು ರೂಪವಾಗಿದ್ದಿದ್ದರೆ ಅದು ಕೊರೆತದಲ್ಲಿ ರಚಿತವಾಯಿತು ಎಂಬ ಊಹೆ ದೋಷಯುಕ್ತವೆಂದೆನಿಸಿತು. ದ್ರವವನ್ನು ರಚಿಸಲೂ ಸಾಧ್ಯವಿಲ್ಲ ನಾಶಗೊಳಿಸಲೂ ಸಾಧ್ಯವಿಲ್ಲ ಎಂಬ ನಿಯಮವನ್ನು ಅಂದರೆ ದ್ರವ್ಯತ್ವದ ನಿತ್ಯತ್ವದ ನಿಯಮವನ್ನು(ವಿಜ್ಞಾನಿಗಳು ಆ ಮೊದಲೇ ಅಂಗೀಕರಿಸಿದ್ದರು. ಈ ನಿಯಮಕ್ಕೆ ರಮ್‍ಫರ್ಡನ ಪ್ರಯೋಗದಿಂದ ಲಭಿಸಿದ ಅನುಭವ ವ್ಯತಿರಿಕ್ತವಾಗಿತ್ತು. ಆದ್ದರಿಂದ ಉಷ್ಣ ತರಲವಲ್ಲ, ಅದು ವಸ್ತುವಲ್ಲ. ಕೆಲೊರಿಕ್ ಸಿದ್ಧಾಂತ ಸಾಧುವಲ್ಲ ಎಂದು ವಿಜ್ಞಾನಿಗಳು ತೀರ್ಮಾನಿಸಿದರು.
 
==ಉಷ್ಣ ಮತ್ತು ಕೆಲಸ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/853510" ಇಂದ ಪಡೆಯಲ್ಪಟ್ಟಿದೆ