ಸಿರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
'''ಸಿರಿ''' ಎಂದರೆ ಅಮೂಲ್ಯ ಸಂಪನ್ಮೂಲಗಳು ಅಥವಾ ಬೆಲೆಬಾಳುವ ಭೌತಿಕ ಸ್ವತ್ತುಗಳ ಸಮೃದ್ಧಿ. ಸಾರ್ವಜನಿಕ ಹಿತದ ಪ್ರಯೋಜನಕ್ಕಾಗಿ ಅಂತಹ ಸ್ವತ್ತುಗಳು ಅಥವಾ ಸಂಪನ್ಮೂಲಗಳ ಆಧಿಕ್ಯವನ್ನು ಹೊಂದಿರುವ ವ್ಯಕ್ತಿ, ಸಮುದಾಯ, ಪ್ರದೇಶ ಅಥವಾ ದೇಶವನ್ನು ಸಿರಿವಂತಎಂದುಸಿರಿವಂತ ಎಂದು ಕರೆಯಲಾಗುತ್ತದೆ.
 
ಸಿರಿಯ ಆಧುನಿಕ ಪರಿಕಲ್ಪನೆಯು [[ಅರ್ಥಶಾಸ್ತ್ರ|ಅರ್ಥಶಾಸ್ತ್ರದ]] ಎಲ್ಲ ಕ್ಷೇತ್ರಗಳಲ್ಲಿ ಮಹತ್ವಪೂರ್ಣವಾಗಿದೆ,  ಮತ್ತು [[ಆರ್ಥಿಕ ಬೆಳೆವಣಿಗೆ|ಬೆಳವಣಿಗೆ ಅರ್ಥಶಾಸ್ತ್ರ]] ಹಾಗೂ ಅಭಿವೃದ್ಧಿ ಅರ್ಥಶಾಸ್ತ್ರಕ್ಕೆ ಸ್ಪಷ್ಟವಾಗಿ ಮಹತ್ವದ್ದಾಗಿದೆ, ಆದರೂ ಸಿರಿಯ ಅರ್ಥ ಸಂದರ್ಭವನ್ನು ಅವಲಂಬಿಸಿದೆ. ಅತ್ಯಂತ ಸಾಮಾನ್ಯ ಮಟ್ಟದಲ್ಲಿ, ಅರ್ಥಶಾಸ್ತ್ರಜ್ಞರು ಸಿರಿಯನ್ನು "ಏನಾದರೂ ಮೌಲ್ಯವಿರುವಂಥದ್ದು" ಎಂದು ವ್ಯಾಖ್ಯಾನಿಸಬಹುದು. ಇದು ಕಲ್ಪನೆಯ ವ್ಯಕ್ತಿನಿಷ್ಠ ಸ್ವರೂಪ ಹಾಗೂ ಇದು ಒಂದು ಸ್ಥಿರ ಅಥವಾ ಸ್ಥಾಯಿ ಪರಿಕಲ್ಪನೆಯಲ್ಲ ಎಂಬ ವಿಚಾರ ಎರಡನ್ನೂ ಸೆರೆಹಿಡಿಯುತ್ತದೆ. ವಿವಿಧ ವ್ಯಕ್ತಿಗಳು ವಿಭಿನ್ನ ಸಂದರ್ಭಗಳಲ್ಲಿ ಸಿರಿಯ ವಿವಿಧ ವ್ಯಾಖ್ಯಾನಗಳು ಮತ್ತು ಪರಿಕಲ್ಪನೆಗಳನ್ನು ಪ್ರತಿಪಾದಿಸಿದ್ದಾರೆ. ಸಿರಿ ಪದವನ್ನು ವ್ಯಾಖ್ಯಾನಿಸುವುದು ವಿವಿಧ ನೈತಿಕ ಪರಿಣಾಮಗಳಿರುವಪ್ರಮಾಣಕ ಪ್ರಕ್ರಿಯೆಯಾಗಿರಬಹುದು, ಏಕೆಂದರೆ ಹಲವುವೇಳೆ ಸಂಪತ್ತಿನ ಗರಿಷ್ಠೀಕರಣವನ್ನು ಗುರಿಯಾಗಿ ಕಾಣಲಾಗುತ್ತದೆ ಅಥವಾ ಸ್ವಂತದ್ದರ ಪ್ರಮಾಣಕ ತತ್ವ ಎಂದು ನಂಬಲಾಗುತ್ತದೆ.<ref>{{Cite journal|url=http://www.journals.uchicago.edu/doi/abs/10.1086/467637|title=Wealth Maximization as a Normative Principle|last=Kronman|first=Anthony T.|date=March 1980|publisher=[[The Journal of Legal Studies]]|doi=10.1086/467637|volume=9}}</ref>
"https://kn.wikipedia.org/wiki/ಸಿರಿ" ಇಂದ ಪಡೆಯಲ್ಪಟ್ಟಿದೆ