ಕಾಲೇಜು ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
 
==ಕಾಲೇಜುಗಳ ವೈವಿಧ್ಯ==
ಪಠ್ಯಕ್ರಮ ಮತ್ತು ಉದ್ದೇಶಗಳನ್ನನುಸರಿಸಿ ಕಾಲೇಜುಗಳನ್ನು ಸಾಂಸ್ಕøತಿಕಸಾಂಸ್ಕ್ರತಿಕ ಶಿಕ್ಷಣದ ಕಾಲೇಜುಗಳನ್ನು ಮಾನವಿಕ ವಿಷಯಗಳ ಕಾಲೇಜು, ವಿಜ್ಞಾನ ಶಾಸ್ತ್ರದ ಕಾಲೇಜು, ವಾಣಿಜ್ಯಶಾಸ್ತ್ರದ ಕಾಲೇಜು, ಲಲಿತ ಕಲಾ ಕಾಲೇಜು, ಎಂದು ನಾಲ್ಕು ವಿಧಗಳನ್ನಾಗಿ ಗುರುತಿಸಬಹುದು. ತಾಂತ್ರಿಕ ಶಿಕ್ಷಣದ ಕಾಲೇಜುಗಳೇ ಬೇರೆ; ವೃತ್ತಿಶಿಕ್ಷಣದ ಕಾಲೇಜುಗಳೇ ಬೇರೆ. ತಾಂತ್ರಿಕ ಶಿಕ್ಷಣದ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಮತ್ತು ಔದ್ಯೋಗಿಕ ವಿಜ್ಞಾನದ (ಟೆಕ್ನಾಲಜಿ) ಕಾಲೇಜುಗಳೇ ಬೇರೆ; ವೃತ್ತಿ ಶಿಕ್ಷಣದ ಕಾಲೇಜುಗಳೇ ಬೇರೆ. ವೈದ್ಯ, ವ್ಯವಸಾಯ, ಪಶುವೈದ್ಯ, ನ್ಯಾಯಶಾಸ್ತ್ರ, ಇತ್ಯಾದಿ ವೃತ್ತಿಗಳಲ್ಲಿ ಶಿಕ್ಷಣವೀಯುವ ಸಂಸ್ಥೆಗಳು ವೃತ್ತಿಶಿಕ್ಷಣಕ್ಕೆ ಸೇರುತ್ತವೆ. ಅಧ್ಯಾಪಕರ ವೃತ್ತಿಶಿಕ್ಷಣದ ಕಾಲೇಜುಗಳು ವಿಶಿಷ್ಟ ರೀತಿಯವಾಗಿದ್ದು ಅಧ್ಯಾಪಕರ ವೃತ್ತಿಶಿಕ್ಷಣಕ್ಕೆ ಮೀಸಲಾಗಿವೆ.
 
ಆಡಳಿತ ದೃಷ್ಟಿಯಿಂದ ಕಾಲೇಜು ಶಿಕ್ಷಣ ಮೂರು ಮುಖ್ಯ ಕ್ಷೇತ್ರಗಳಿಗೆ ಹಂಚಿಹೋಗಿದೆ. ವಿಶ್ವವಿದ್ಯಾನಿಲಯ ಮತ್ತು ಅದರ ಆಂಗಿಕ (ಕಾನ್ಸ್ಟಿಟ್ಯೂಯೆಂಟ್) ಕಾಲೇಜುಗಳಲ್ಲೂ ಸರ್ಕಾರದ, ಸ್ಥಳೀಯ ಸರ್ಕಾರಗಳ ಮತ್ತು ಖಾಸಗಿ ಸಂಸ್ಥೆಗಳ ಅಂಗೀಕೃತ (ಅಫಿಲಿಯೇಟಿಡ್) ಕಾಲೇಜುಗಳಲ್ಲೂ ಆ ಶಿಕ್ಷಣ ಹರಡಿದೆ. ಯುದ್ಧಪೂರ್ವದಲ್ಲಿ ಖಾಸಗಿ ಕಾಲೇಜುಗಳಿಗೆ ಅನುದಾನ ಅಷ್ಟಾಗಿ ಇರಲಿಲ್ಲವಾಗಿ ಅವುಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಈಚೆಗೆ ಅವಕ್ಕೆ ಹೆಚ್ಚು ಉದಾರವಾಗಿ ಧನಸಹಾಯ ದೊರಕುವಂತಾಗಿ ಆ ಕ್ಷೇತ್ರ ಬಹುವಾಗಿ ವಿಸ್ತರಿಸಿದೆ. ಶಿಕ್ಷಣದ ಅಂತಸ್ತನ್ನು ಆಧರಿಸಿ ಪರಿಗಣಿಸಿದಾಗ ಕಾಲೇಜು ಶಿಕ್ಷಣದಲ್ಲಿ ಎರಡು ಹಂತಗಳಿವೆ. ಮೊದಲ ಹಂತದಲ್ಲಿ ಪದವಿಯ ಸ್ನಾತಕ ಪೂರ್ವ ಶಿಕ್ಷಣ (ಅಂಡರ್ ಗ್ರಾಜುಯೇಟ್) ಮತ್ತು ಸ್ನಾತಕೋತ್ತರ ಶಿಕ್ಷಣ (ಪೋಸ್ಟ್ ಗ್ರಾಜುಯೇಟ್). ಎರಡನೆಯ ಹಂತದಲ್ಲಿ ಎಂ.ಎ., ಎಂ.ಎಸ್‍ಸಿ., ಎಂ.ಕಾಂ., ಎಂ.ಇ., ಎಂ.ಎಲ್., ಇತ್ಯಾದಿ ಮಾಸ್ಟರ್ ಪದವಿಯ ಶಿಕ್ಷಣವೂ ಡಾಕ್ಟರ್ ಪದವಿಯ ಶಿಕ್ಷಣವೂ ಇತರ ಉನ್ನತ ಸಂಶೋಧನೆಯ ಶಿಕ್ಷಣವೂ ಸೇರಿವೆ. ಬಹುಮಟ್ಟಿಗೆ ಸ್ನಾತಕೋತ್ತರ ಶಿಕ್ಷಣ ವಿಶ್ವವಿದ್ಯಾನಿಲಯದ ಬೇರೆ ಬೇರೆ ವಿಭಾಗಗಳಲ್ಲಿ ಅಥವಾ ಆಂಗಿಕ ಸಂಸ್ಥೆಗಳಲ್ಲಿ ಇದ್ದು, ಅದರ ನೇರ ಆಡಳಿತದಲ್ಲಿ ನಡೆಯುತ್ತದೆ. ಎಲ್ಲೊ ಕೆಲವು ಅಂಗೀಕೃತ ಕಾಲೇಜುಗಳಲ್ಲೂ ಸ್ನಾತಕೋತ್ತರ ಶಿಕ್ಷಣದ ವ್ಯವಸ್ಥೆಯುಂಟು. ಮುಂದೆ ನೂತನವಾಗಿ ವಿಶ್ವವಿದ್ಯಾನಿಲಯವೊಂದನ್ನು ಆರಂಭಿಸಬೇಕಾಗಿರುವ ಸ್ಥಳದಲ್ಲೂ ಸ್ನಾತಕೊತ್ತರ ಶಿಕ್ಷಣ ಕೇಂದ್ರವನ್ನು ಪೂರ್ವಭಾವಿಯಾಗಿ ಆರಂಭಿಸುವುದುಂಟು.
೨೩ ನೇ ಸಾಲು:
ಕೆಲವು ಶಿಕ್ಷಣಸಂಸ್ಥೆಗಳು ಕಾಲೇಜು ಎಂಬ ಹೆಸರನ್ನು ಹೊಂದಿಲ್ಲವಾದರೂ ಕಾಲೇಜು ಹಂತದ ಶಿಕ್ಷಣವನ್ನು ವ್ಯವಸ್ಥೆಗೊಳಿಸಿರುತ್ತವೆ. ಉದಾ: ಸ್ಕೂಲ್ ಆಫ್ ಮೆಡಿಸನ್, ಸ್ಕೂಲ್ ಆಫ್ ಮೈನಿಂಗ್, ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್-ಇತ್ಯಾದಿ.
 
ಭಾರತದಲ್ಲಿ ಕಾಲೇಜು ಶಿಕ್ಷಣ : ಪ್ರಾಚೀನ ಭಾರತದಲ್ಲಿ ಕಾಲೇಜು ಮಟ್ಟದ ಶಿಕ್ಷಣ ತುಂಬ ಅಭಿವೃದ್ಧಿ ಸ್ಥಿತಿಯಲ್ಲಿತ್ತು. ವೇದಗಳ ಆರಂಭ ಕಾಲದಲ್ಲಿ ಮೊದಲಾದ ಆ ಶಿಕ್ಷಣ ಮಧ್ಯಯುಗಗಳ ವರೆಗೂ ನಡೆದುಕೊಡು ಬಂದು ಮುಸಲ್ಮಾನರ ದಾಳಿಗೆ ಸಿಕ್ಕು ನಾಮಾವಶೇಷವಾಯಿತು. ಅಳಿದುಳಿದುಕೊಂಡಿದ್ದ ಕೆಲವು ಕಾಲೇಜುಗಳು 19ನೆಯ ಶತಮಾನದ ಮಧ್ಯಕಾಲದಲ್ಲಿ ಇಂಗ್ಲಿಷ್ ಶಿಕ್ಷಣ ಪದ್ಧತಿ ಆರಂಭವಾದಂತೆ ಕೊನೆಗೊಂಡುವು. ಬಂಗಾಳ, ಬಿಹಾರಗಳಲ್ಲಿ ಇನ್ನೂ ಉಳಿದುಕೊಂಡು ಬಂದಿರುವ ಕೆಲವು ತೋಲ್ ಎಂಬ ಸಂಸ್ಕøತ ಶಿಕ್ಷಣಸಂಸ್ಥೆಗಳೂ ಮದ್ರಸಾ ಎಂಬ ಮುಸಲ್ಮಾನರ ಸಂಸ್ಥೆಗಳೂ ಸಂಸ್ಕøತಸಂಸ್ಕ್ರತ ಮಹಾಪಾಠಶಾಲೆಗಳೂ ಇಂದಿಗೂ ಅವನ್ನು ನೆನಪಿಗೆ ತರುವಂತೆ ನಡೆದುಕೊಂಡು ಬರುತ್ತಿವೆ. ಕ್ರಿ.ಪೂ. 7ನೆಯ ಶತಮಾನಕ್ಕೂ ಹಿಂದೆ ಆರಂಭವಾಗಿದ್ದ ತಕ್ಷಶಿಲೆಯ ವಿಶ್ವವಿದ್ಯಾನಿಲಯ ಇಲ್ಲಿನ ಪ್ರಾಚೀನತಮ ಉನ್ನತ ಶಿಕ್ಷಣ ಸಂಸ್ಥೆ. ಮೊದ ಮೊದಲುಮೊದಮೊದಲು ಇದು ಬ್ರಾಹ್ಮಣ (ಹಿಂದೂ) ವಿದ್ಯಾಕೇಂದ್ರವಾಗಿದ್ದರೂ ಕ್ರಿ.ಪೂ. ಎರಡನೆಯ ಶತಮಾನದ ವೇಳೆಗೆ ಬೌದ್ಧವಿಶ್ವವಿದ್ಯಾನಿಲಯವಾಯಿತುಬೌದ್ಧ ವಿಶ್ವವಿದ್ಯಾನಿಲಯವಾಯಿತು. ಇಲ್ಲಿ ವೇದ, 18 ಕಲೆ (ವೃತ್ತಿ) ಅಥವಾ ಸಿಪಾಗಳನ್ನು ಕಲಿಸುತ್ತಿದ್ದರು. ಹದಿನೆಂಟು ಕಲೆಗಳಲ್ಲಿ ವೈದ್ಯ, ಧನುರ್ವಿದ್ಯೆ, ಸರ್ಪವಿದ್ಯೆ, ವ್ಯವಸಾಯ, ಮಂತ್ರಗಾರಿಕೆ ಇತ್ಯಾದಿ ವೃತ್ತಿಶಿಕ್ಷಣವೂ ಜೋತಿಷ್ಯ, ಖಗೋಳವಿಜ್ಞಾನ, ಲೆಕ್ಕಗಾರಿಕೆ, ವಾಣಿಜ್ಯ ಇತ್ಯಾದಿಗಳೂ ಸೇರಿದ್ದುವು. ಜೊತೆಗೆ ವ್ಯಾಕರಣ, ತರ್ಕ, ಕಾವ್ಯಮೀಮಾಂಸೆ, ಪುರಾಣ ಇವೂ ಸೇರಿಕೊಂಡಿದ್ದುವು. ಅನಂತರ ಆರಂಭವಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾಶಿ, ನಾಳಂದ, ವಲಭಿ (ವಾಲಾ), ವಿಕ್ರಮಶಿಲ, ಧನ್ಯಕಟಕ ಮುಂತಾದವು ಖ್ಯಾತಿ ಪಡೆದಿದ್ದುವು. ಕರ್ಣಾಟಕದಲ್ಲಿ ದೇವಸ್ಥಾನದ ಅಥವಾ ಮಠಗಳ ಅಂಗವಾಗಿ ಕಾಲೇಜು ಮಟ್ಟದ ಶಿಕ್ಷಣ ವ್ಯವಸ್ಥೆಗೊಂಡಿತ್ತು. ಅಂಥ ಕಾಲೇಜುಗಳಲ್ಲಿ ಸಾಲೊಟಗಿ, ಹೆಬ್ಬಾಳು (ಧಾರವಾಡ ಜಿಲ್ಲೆ), ಭುಜವೇಶ್ವರ ದೇವಾಲಯ, ಚಿತ್ರದುರ್ಗ ಜಿಲ್ಲೆಯ ಜಟಿಂಗ ರಾಮೇಶ್ವರ ದೇವಾಲಯ, ಬಿಜಾಪುರ, ತಾವರೆಗೆರೆ, ಮನಗೋಳಿ, ಬೆಳಗಾಂವಿಯ ದಕ್ಷಿಣೇಶ್ವರ ದೇವಾಲಯ, ತಾಳಗುಂದದ ಪ್ರಣವೇಶ್ವರ ದೇವಾಲಯ ಮುಂತಾದೆಡೆಗಳಲ್ಲಿ ಅಂಥ ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡಿತ್ತು. ಬಹುಮಟ್ಟಿಗೆ ಅವೆಲ್ಲ ಸಂಸ್ಕøತಸಂಸ್ಕ್ರತ ಪಾಠಶಾಲೆಗಳು. ಆ ಕಾಲದಲ್ಲಿ ಅಗ್ರಹಾರಗಳೂ (ಬಾಹ್ಮಣರ ವಸತಿಗಳು) ಬ್ರಹ್ಮಪುರಿಗಳೂ (ನಗರದ ಬ್ರಾಹ್ಮಣರು ವಾಸಿಸುತ್ತಿದ್ದ ಭಾಗಗಳು) ಉನ್ನತ ಶಿಕ್ಷಣದ ಕ್ಷೇತ್ರಗಳಾಗಿದ್ದುವು. ಅವುಗಳಲ್ಲಿ ಅರಸೀಕೆರೆ, ಕಾಡಿಯೂರು, ಸರ್ವಜ್ಞಪುರ (ಅರಸೀಕೆರೆ) ಮುಂತಾದುವನ್ನು ಉಲ್ಲೇಖಿಸಬಹುದು.  
 
ಆಧುನಿಕ ಭಾರತದಲ್ಲಿ ಕಾಲೇಜು ಶಿಕ್ಷಣ: ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದಿಂದ ಭಾರತದಲ್ಲಿ ಇಂದಿನ ರೀತಿಯ ಕಾಲೇಜು ಶಿಕ್ಷಣ ಆರಂಭವಾಯಿತು. ಆ ಶತಮಾನದ ಮಧ್ಯಕಾಲದ ವೇಳೆಗೆ ಸೆಕೆಂಡರಿ ಶಾಲೆಗಳು ಹೆಚ್ಚಿ ಕಾಲೇಜಿನ ಅಗತ್ಯ ಹೆಚ್ಚಿತು. ಅನಂತರ ಇಂಗ್ಲಿಷ್ ಆಡಳಿತ ಅದಕ್ಕೆ ನೀಡಿದ ಪ್ರೋತ್ಸಾಹದಿಂದ ನೂತನ ಮಾದರಿಯ ಕಾಲೇಜುಗಳು ಅಧಿಕ ಸಂಖ್ಯೆಯಲ್ಲಿ ಹೆಚ್ಚಿದುವು. ಸ್ವಾತಂತ್ರ್ಯಾ ನಂತರ ಕಾಲೇಜು ಶಿಕ್ಷಣ 8-10 ಪಾಲು ವಿಸ್ತರಿಸಿತು. ಸದ್ಯದಲ್ಲಿ ಆ ಶಿಕ್ಷಣ ದೇಶಾದ್ಯಂತ ಇರುವ 3,297 ಕಾಲೇಜುಗಳಲ್ಲೂ 9 ಪರಿಗಣಿತ ವಿಶ್ವವಿದ್ಯಾನಿಲಯಗಳಲ್ಲೂ 10 ರಾಷ್ಟ್ರೀಯ ಪ್ರಾಮುಖ್ಯ ಪಡೆದ ಸಂಸ್ಥೆಗಳಲ್ಲೂ ನಡೆಯುತ್ತಿದೆ. ಈ ಕಾಲೇಜುಗಳಲ್ಲಿ 185 ವಿಶ್ವವಿದ್ಯಾಲಯದ ಆಂಗಿಕ ಕಾಲೇಜುಗಳೂ; ಮಿಕ್ಕ 3112 ಅಂಗೀಕೃತ ಕಾಲೇಜುಗಳು. ಅವುಗಳಲ್ಲಿ ಸೇ. 5.4 ರಷ್ಟು ಕಾಲೇಜುಗಳು; ಮಾತ್ರ 1947ರ ಹಿಂದೆ ಆರಂಭವಾಗಿದ್ದುವು. ಮಿಕ್ಕ ಕಾಲೇಜುಗಳು ಅನಂತರ ಆರಂಭವಾದುವು. ಈ ಮಟ್ಟದ ಶಿಕ್ಷಣ ಎಷ್ಟು ತೀವ್ರಗತಿಯಿಂದ ವಿಸ್ತರಿಸಿತೆಂಬುದನ್ನು ಕೆಳಗಿನ ಪಟ್ಟಿ 2ರಲ್ಲಿ ಅರಿತುಕೊಳ್ಳಬಹುದು:
೩೧ ನೇ ಸಾಲು:
ಪಟ್ಟಿ 1
 
ಬೇರೆ ಬೇರೆ ವಿಷಯ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಮತ್ತು ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಅವರ ಸೇಕಡಾಶೇಕಡಾ ಪ್ರಮಾಣ.
 
 
"https://kn.wikipedia.org/wiki/ಕಾಲೇಜು_ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ