ಎಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೪ ನೇ ಸಾಲು:
 
== ಎಲೆಗಳಲ್ಲಿ ವೈವಿಧ್ಯ ==
ಎಲೆಯ ಪತ್ರದ ಭಾಗ (ಅಥವಾ ಉಪಪತ್ರ) ನಾನಾ ಆಕಾರಗಳನ್ನು ಹೊಂದಿರುತ್ತದೆ. ಸೂಜಿಯಂತೆ ಉದ್ದನಾದ ಪಟ್ಟಿಯಂತೆ (ಹುಲ್ಲು). ಭರ್ಜಿಯಂತೆ (ಕಣಗಿಲೆ). ಉದ್ದವಾದ ಕೊಳವೆಯಂತೆ (ಈರುಳ್ಳಿ), ಹೃದಯದಂತೆ (ವೀಳೆಯದ ಎಲೆಬಳ್ಳಿ), ಬಾಣದ ಅಲುಗಿನಂತೆ (ಕೆಸವಿನ ದಂಟು), ವೃತ್ತಾಕಾರದಲ್ಲಿ (ತಾವರೆ), ಮೂತ್ರ ಪಿಂಡದಂತೆ (ಒಂದೆಲಗ), ಆಯತವಾಗಿ (ಬಾಳೆ), ಅಂಡಾಕಾರವಾಗಿ (ಆಲ)-ಹೀಗೆ ನಾನಾ ಬಗೆಯ ಆಕಾರಗಳನ್ನು ನೋಡಬಹುದು. ಬೀಜಮೊಳೆತು ಸಸಿಯಾದಾಗ ಕಾಂಡದ ಮೊದಲ ನೆಯಮೊದಲನೆಯ ಎಲೆಗಳು ಆಕಾರದಲ್ಲಿ ಸರಳವಾಗಿದ್ದು, ಅನಂತರ ಹುಟ್ಟುವ ಎಲೆಗಳಿಗಿಂತ ಬೇರೆ ತರಹ ಇರುವುದನ್ನು ಅವರೆ ಮುಂತಾದ ಗಿಡಗಳಲ್ಲಿ ಕಾಣಬಹುದು. ಯೂಕಲಿಪ್ಟಸ್ ಗಿಡ ಎಳೆಯದಾಗಿ ರುವಾಗಎಳೆಯದಾಗಿರುವಾಗ ಎಲೆಗಳು ಅಗಲವಾಗಿದ್ದು ಗಿಡ ಬಲಿತಂತೆ, ಉದ್ದವಾಗಿ ಕುಡು ಗೋಲಿನಕುಡುಗೋಲಿನ ಆಕಾರವನ್ನು ತಾಳುತ್ತವೆ. ಹಲಸಿನ ಮರದ ಎಲೆಗಳು ವಿವಿಧ ಆಕಾರಗಳಲ್ಲಿರುತ್ತವೆ. ನೀರಿನಲ್ಲಿ ಅರ್ಧ ಮುಳುಗಿ ಬೆಳೆಯುವ ಲಿಮ್ನೊಫೈಲ ಮುಂತಾದ ಗಿಡಗಳಲ್ಲಿ, ಮುಳುಗಿರುವ ಎಲೆಗಳು ಬಹಳ ಛಿದ್ರವಾಗಿ ಮೇಲಿರುವ ಎಲೆಗಳು ಅಗಲವಾಗಿಯೇ ಉಳಿಯುವುವು. ಈ ರೀತಿಗೆ ಹೆಟೆರೊಫಿಲಿ ಎಂದು ಕರೆಯುತ್ತಾರೆ. ಸೆಲಾಜಿನೆಲ್ಲ ಗಿಡದಲ್ಲಿ ದೊಡ್ಡ ಎಲೆಗಳ ಸಾಲೂ ಚಿಕ್ಕ ಎಲೆಗಳ ಸಾಲು ಇವೆ; ಇದಕ್ಕೆ ಅನೈಸೋಫಿಲಿ ಎಂದು ಹೆಸರು.
ಎಲೆಯ ಅಂಚಿನಲ್ಲೂ ವೈವಿಧ್ಯವುಂಟು. ಹಲ್ಲಿನಂತೆಯೂ ಗರಗಸದ ಅಂಚಿನಂತೆಯೂ ಮುಳ್ಳಿನಂತೆಯೂ ಕಮಾನುಗಳಂತೆಯೂ (ಒಂದೆಲಗ) ಅಲೆಗಳೋಪಾದಿಯಲ್ಲಿಯೂ (ಅಶೋಕ) ಇರುವುದುಂಟು. ಆದ್ದರಿಂದ ಆಯಾ ಎಲೆಯ ಮಾದರಿಯಿಂದ ಹಲವು ಸಸ್ಯಗಳನ್ನು ಗುರುತಿಸಬಹುದು.
 
== ಎಲೆತೊಟ್ಟು ==
ಕೆಲವು ತೆಂಗಿನ ಜಾತಿಯ ಗಿಡದಲ್ಲಿ 15 ಅಡಿಯಷ್ಟು ಉದ್ದದ ತೊಟ್ಟು ಇರುವುದುಂಟು. ನಿಂಬೆಯ ಎಲೆಯಲ್ಲಿ ತೊಟ್ಟಿಗೆ ರೆಕ್ಕೆಗಳು ಅಗಲವಾಗಿ ಬೆಳೆದಿರುವುವು. ಆಸ್ಟ್ರೇಲಿಯದ ಜಾಲಿಗಿಡಗಳಲ್ಲಿ, ಎಲೆ ತೊಟ್ಟು ಅಗಲವಾಗಿದ್ದು, ಎಲೆ ಪತ್ರದ ಕೆಲಸವನ್ನೇ ಮಾಡುತ್ತದೆ. ಇದಕ್ಕೆ ಫಿಲ್ಲೋಡ್ ಎಂದು ಹೆಸರು, ಇದು ಸೂರ್ಯನ ಬೆಳಕಿಗೆ ತನ್ನ ಅಂಚನ್ನು ತೋರಿಸುವುದು. ಈ ಎಲೆಯ ಭಿನ್ನಪತ್ರದ ಇತರ ಭಾಗಗಳು ಬೇಗನೆ ಉದುರಿ ಹೋಗುವುವು. ಸಾರಸೆನಿಯ ಎನ್ನುವ ಕೀಟಾಹಾರಿ ಸಸ್ಯದಲ್ಲಿ ಎಲೆತೊಟ್ಟು ಹೂಜಿಯ ಆಕಾರದಲ್ಲಿದೆ. ಟ್ರೋಪಿಯೋಲು ಗಿಡದಲ್ಲಿನ ತೊಟ್ಟು ನುಲಿಬಳ್ಳಿಯಂತೆ ಇರುವುದು. ಎಲೆತೊಟ್ಟಿನ ಬುಡದಲ್ಲಿ ಉಬ್ಬಿದ್ದರೆ ಆ ಭಾಗಕ್ಕೆ ಪಲ್ವೈನಸ್ ಎಂದು ಹೆಸರು. ಹರಳು ಮುಂತಾದ ಎಲೆಗಳ ಕಾವು ಪತ್ರದ ಮಧ್ಯಭಾಗದಲ್ಲಿ ಸೇರಿಕೊಂಡಿದೆ. ಮುಟ್ಟಿದರೆ ಮುನಿಯಲ್ಲಿ ಈ ಪಲ್ವೈನಸಿನ ಸಹಾಯದಿಂದ ಎಲೆಯ ಭಾಗಗಳು ಚಲಿಸುವುವು. ಇದರಂತೆಯೆ ಬಂiೆÆೕಫೈಟಂ ಸಸ್ಯದ ಎಲೆಗಳೂ ಮುಟ್ಟಿದರೆ ಅಥವಾ ಶಾಖವನ್ನು ತೋರಿಸಿದರೆ, ಮುಚ್ಚಿಕೊಳ್ಳುವುವು. ಆದರೆ ಡೆಸ್ಮೋಡಿಯ ಗೈರಾನ್ಸಿನ (ಟೆಲಿಗ್ರಾಫ್ ಸಸ್ಯ) ಎಲೆಯ ಉಪಪತ್ರಗಳು ತಮ್ಮಷ್ಟಕ್ಕೆ ತಾವೇ ಸದಾ ಚಲಿಸುತ್ತಿರುವುವು. ಮತ್ತೆ ಕೆಲವು ಗಿಡಗಳ ಉಪಪತ್ರಗಳು ರಾತ್ರಿಯಾಗುತ್ತಲೇ ಮುಚ್ಚಿಕೊಂಡು, ನಿದ್ರಿಸುವಂತೆ ತೋರುವುವು. ಜಾನ್ ಗೋಟು ಬೆಡ್ ಎಟ್ ನೂನ್ ಎಂದು ಕರೆಯುವ ಇಂಗ್ಲೆಂಡಿನ ಸಸ್ಯದಲ್ಲಿ ಈ ರೀತಿ ಮಧ್ಯಾಹ್ನದ ತಾಪಕ್ಕೆ ಉಪಪತ್ರಗಳು ಮುಚ್ಚಿಕೊಳ್ಳುವುವಂತೆ. ಅದರೆ ಅಮೆರಿಕದ ಹುಲ್ಲುಗಾವಲಿನಲ್ಲಿ ಬೆಳೆಯುವ ಸಿಲ್ಫಿಯಂ ಎಂಬ ಗಿಡದ ಎಲೆಗಳು ಮಧ್ಯಾಹ್ನದ ಸೂರ್ಯನ ಕಡೆಗೆ ತಮ್ಮ ಅಂಚನ್ನೇ ತೋರಿಸಿಟ್ಟುಕೊಂಡು ಬಿಸಿಲಿನ ತಾಪದಿಂದ ಪಾರಾಗುವುವಂತೆ.
"https://kn.wikipedia.org/wiki/ಎಲೆ" ಇಂದ ಪಡೆಯಲ್ಪಟ್ಟಿದೆ