ಎಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧ ನೇ ಸಾಲು:
 
== ಎಲೆಯ ಬಗೆಗಳು ==
ಎಲೆಗಳಲ್ಲಿ ಸರಳ ಪತ್ರವೆಂದೂ ಭಿನ್ನಪತ್ರವೆಂದೂ (ಕಾಂಪೌಂಡ್) ಎರಡು ಬಗೆಯುಂಟು. ಆದರೆ ಕೆಲವು ಸರಳ ಪತ್ರಗಳಲ್ಲಿನ ಭಾಗಗಳು ಅರ್ಧ ಮಾತ್ರ ಕತ್ತರಿಸಲ್ಪಟ್ಟಂತೆ ಇರಬಹುದು. (ಹರಳೆಲೆ). ಭಿನ್ನಪತ್ರಗಳ ಉಪಪತ್ರಗಳು ಮತ್ತೊಂದು ಸಲ ಭಿನ್ನವಾಗಿದ್ದು, ದ್ವಿಭಿನ್ನಪತ್ರಗಳಾಗಬಹುದು (ಗೋಲ್ಡ್‌ ಮೊಹರ್). ಹೆಚ್ಚಾಗಿ ಭಿನ್ನವಾದ ಪತ್ರಗಳನ್ನು ನಾವು ನುಗ್ಗೆ ಗಿಡದಲ್ಲಿ ಕಾಣಬಹುದು. ಮೇಲೆ ಹೇಳಿರುವ ಎರಡು ಉದಾಹರಣೆಗಳಲ್ಲಿ ಉಪಪತ್ರಗಳು ಗರಿಯ ಮಾದರಿಯಲ್ಲಿ ಜೋಡಣೆಗೊಂಡಿರುತ್ತವೆ. ಎಲೆಯ ತುದಿಯ ಮಧ್ಯದಲ್ಲಿ ಉಪಪತ್ರವಿದ್ದರೆ ಅದಕ್ಕೆ ಇಂಪ್ಯಾರಿಪಿನ್ನೇಟ್ (ಬೇವು) ಎಂದೂ ಹಾಗಿಲ್ಲದಿದ್ದರೆ ಪ್ಯಾರಿಪಿನ್ನೇಟ್ (ಹುಣಿಸೆ) ಎಂದೂ ಕರೆಯುತ್ತಾರೆ. ಬೂರುಗದ ಮರದಲ್ಲಿರುವ ಭಿನ್ನ ಪತ್ರಗಳು ಹಸ್ತದ ಮಾದರಿಯವು. ಭಿನ್ನಪತ್ರದ ಮಧ್ಯದ ಅಕ್ಷಕ್ಕೆ ರೇಕಿಸ್ ಎಂದು ಹೆಸರು. ಕಿತ್ತಲೆಕಿತ್ತಳೆ ಎಲೆಯಲ್ಲಿ ಒಂದೇ ಉಪಪತ್ರವಿರುವ ಭಿನ್ನಪತ್ರ ಉತ್ಪತ್ತಿಯಾಗಿರುವುದು ಒಂದು ವಿಶೇಷ. ಭಿನ್ನಪತ್ರಗಳು ಗಾಳಿಯ ಹೊಡೆತದಿಂದ ಬೇಗ ಹರಿಯುವುವು. ಅಲ್ಲದೆ ಪತ್ರಗಳ ನಡುನಡುವೆ ಹೆಚ್ಚಿನ ಗಾಳಿ ಮತ್ತು ಬೆಳಕು ಆಡುವ ಸಾಧ್ಯತೆ ಹೆಚ್ಚು. ಭಾರತದ ಕಾಡಿನ ಕೆಲವು ಮರಗಳಲ್ಲಿ ಒಂದೇ ಒಂದು ಭಿನ್ನಪತ್ರ ನಾಲ್ಕೈದು ಅಡಿಗಳಷ್ಟು ಉದ್ದವಿದ್ದು, ಅದರ ಉಪ ಪತ್ರಗಳು ಅಂಗೈಉಪಪತ್ರಗಳು ಅಷ್ಟುಅಂಗೈಯಷ್ಟು ಅಗಲವಾಗಿರುವುದುಂಟು. ಇಂಥ ಸಂದರ್ಭದಲ್ಲಿ ಆ ದೊಡ್ಡ ಭಿನ್ನಪತ್ರವನ್ನು ಒಂದು ಕಾಂಡದ ಕೊಂಬೆಯೆಂದು ತಪ್ಪಾಗಿ ಭಾವಿಸಬಹುದು. ಆದರೆ ಆ ಎಲೆಯ ತುದಿಯಲ್ಲಿ ಎಲೆ ಮೊಗ್ಗು ಇರುವುದಿಲ್ಲ. ಉಪಪತ್ರ ಕೊಂಕುಳಲ್ಲಿಯೂ ಎಲೆಮೊಗ್ಗು ಇರುವುದಿಲ್ಲ. ಎಲ್ಲ ಉಪ ಪತ್ರಗಳೂ ಒಂದೇ ದಿಕ್ಕಿನಲ್ಲಿ ಹರಡಿಕೊಂಡಿರುವುವು. ಆ ದೊಡ್ಡ ಎಲೆಯ ಬುಡದ ಕೊಂಕುಳಲ್ಲಿ ಮಾತ್ರ ಎಲೆಮೊಗ್ಗು ಇರುತ್ತದೆ.
== ಎಲೆಗಳಲ್ಲಿ ವೈವಿಧ್ಯ ==
ಎಲೆಯ ಪತ್ರದ ಭಾಗ (ಅಥವಾ ಉಪಪತ್ರ) ನಾನಾ ಆಕಾರಗಳನ್ನು ಹೊಂದಿರುತ್ತದೆ. ಸೂಜಿಯಂತೆ ಉದ್ದನಾದ ಪಟ್ಟಿಯಂತೆ (ಹುಲ್ಲು). ಭರ್ಜಿಯಂತೆ (ಕಣಗಿಲೆ). ಉದ್ದವಾದ ಕೊಳವೆಯಂತೆ (ಈರುಳ್ಳಿ), ಹೃದಯದಂತೆ (ವೀಳೆಯದ ಎಲೆಬಳ್ಳಿ), ಬಾಣದ ಅಲುಗಿನಂತೆ (ಕೆಸವಿನ ದಂಟು), ವೃತ್ತಾಕಾರದಲ್ಲಿ (ತಾವರೆ), ಮೂತ್ರ ಪಿಂಡದಂತೆ (ಒಂದೆಲಗ), ಆಯತವಾಗಿ (ಬಾಳೆ), ಅಂಡಾಕಾರವಾಗಿ (ಆಲ)-ಹೀಗೆ ನಾನಾ ಬಗೆಯ ಆಕಾರಗಳನ್ನು ನೋಡಬಹುದು. ಬೀಜಮೊಳೆತು ಸಸಿಯಾದಾಗ ಕಾಂಡದ ಮೊದಲ ನೆಯ ಎಲೆಗಳು ಆಕಾರದಲ್ಲಿ ಸರಳವಾಗಿದ್ದು, ಅನಂತರ ಹುಟ್ಟುವ ಎಲೆಗಳಿಗಿಂತ ಬೇರೆ ತರಹ ಇರುವುದನ್ನು ಅವರೆ ಮುಂತಾದ ಗಿಡಗಳಲ್ಲಿ ಕಾಣಬಹುದು. ಯೂಕಲಿಪ್ಟಸ್ ಗಿಡ ಎಳೆಯದಾಗಿ ರುವಾಗ ಎಲೆಗಳು ಅಗಲವಾಗಿದ್ದು ಗಿಡ ಬಲಿತಂತೆ, ಉದ್ದವಾಗಿ ಕುಡು ಗೋಲಿನ ಆಕಾರವನ್ನು ತಾಳುತ್ತವೆ. ಹಲಸಿನ ಮರದ ಎಲೆಗಳು ವಿವಿಧ ಆಕಾರಗಳಲ್ಲಿರುತ್ತವೆ. ನೀರಿನಲ್ಲಿ ಅರ್ಧ ಮುಳುಗಿ ಬೆಳೆಯುವ ಲಿಮ್ನೊಫೈಲ ಮುಂತಾದ ಗಿಡಗಳಲ್ಲಿ, ಮುಳುಗಿರುವ ಎಲೆಗಳು ಬಹಳ ಛಿದ್ರವಾಗಿ ಮೇಲಿರುವ ಎಲೆಗಳು ಅಗಲವಾಗಿಯೇ ಉಳಿಯುವುವು. ಈ ರೀತಿಗೆ ಹೆಟೆರೊಫಿಲಿ ಎಂದು ಕರೆಯುತ್ತಾರೆ. ಸೆಲಾಜಿನೆಲ್ಲ ಗಿಡದಲ್ಲಿ ದೊಡ್ಡ ಎಲೆಗಳ ಸಾಲೂ ಚಿಕ್ಕ ಎಲೆಗಳ ಸಾಲು ಇವೆ; ಇದಕ್ಕೆ ಅನೈಸೋಫಿಲಿ ಎಂದು ಹೆಸರು.
"https://kn.wikipedia.org/wiki/ಎಲೆ" ಇಂದ ಪಡೆಯಲ್ಪಟ್ಟಿದೆ