ಎಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
 
== ಎಲೆಗಳ ರಚನೆ ==
[[ದಾಸವಾಳ]]ದಂಥ ಒಂದು ಸಾಮಾನ್ಯ ರೀತಿಯ ಎಲೆಗೆ ಒಂದು ಬುಡವೂ ಒಂದು ತೊಟ್ಟೂ ಒಂದು ಪತ್ರ ಭಾಗವೂ ಇವೆ. ಬುಡದ ಇಕ್ಕೆಲದಲ್ಲೂ ವೃಂತಪರ್ಣಗಳು (ಸ್ಟಿಫ್ಯೂಲ್) ಕಾಣಬರುತ್ತವೆ. ಪತ್ರದ ಉದ್ದಕ್ಕೂ ಮಧ್ಯದಲ್ಲಿ ಒಂದು ದೊಡ್ಡ ನಾಳವೂ ಇದರ ಎರಡು ಕಡೆಗಳಲ್ಲಿಯೂ ಸಣ್ಣ ನಾಳಗಳೂ ಇವುಗಳ ಕವಲುಗಳೂ ಇರುವುವು. ಎಲಚಿಯಂಥ ಎಲೆಗಳಲ್ಲಿ, ಮೂರು ಮುಖ್ಯವಾದ ನಾಳಗಳಿರುತ್ತವೆ. ಇಂಥ ಎಲೆಗೆ ಮಲ್ಟಿಕಾಸ್ಟೇಟ್ ಎನ್ನುವರು. ಕಾವಿನ ಒಳಗೂ ನಾಳಗಳಿದ್ದು, ಇವು ಕಾಂಡದಲ್ಲಿರುವ ನೀರಿನ ಮತ್ತು ಆಹಾರದ ಕೊಳವೆಗಳ ಸಮೂಹವನ್ನು ಸೇರಿಕೊಳ್ಳುತ್ತವೆ. ಎಲೆಯ ನಾಳಸಮೂಹ ದ್ವಿದಳ ಸಸ್ಯಗಳಲ್ಲಿ ಬಲೆಯ ರೂಪದಲ್ಲಿಯೂ ಏಕದಳಸಸ್ಯಗಳಲ್ಲಿ ಸಮಾನಾಂತರವಾಗಿಯೂ ಜರಿಗಿಡಗಳಲ್ಲಿ ಕವಲೊಡೆಯುವ ರೀತಿಯಲ್ಲಿಯೂ ಇರುತ್ತದೆ. ಆದರೆ ಈ ಸೂತ್ರಕ್ಕೆ ವಿರೋಧ ವಾಗಿ ಕೆಸವಿನ ದಂಟು ಮುಂತಾದ ಏಕದಳ ಸಸ್ಯಗಳಲ್ಲಿ ಬಲೆಯ ರೀತಿಯ ನಾಳಜಾಲವೂ ಸುರಹೊನ್ನೆಯಂಥ ದ್ವಿದಳ ಸಸ್ಯಗಳಲ್ಲಿ ಸಮಾನಾಂತರ ರೀತಿಯ ನಾಳಸಮೂಹವೂ ಇರುವುದುಂಟು. ಗೊಡ್ಡೀಚಲಿನ (ಸೈಕಾಸ್) ಪತ್ರ ಭಾಗಗಳಲ್ಲಿ ಮಧ್ಯದ ನಾಳ ಎಡಬಲಕ್ಕೆ ಕವಲೊಡೆಯು ವುದೇಕವಲೊಡೆಯುವುದೇ ಇಲ್ಲ. ಹರಳೆಲೆಯಲ್ಲಿ, ಮುಖ್ಯವಾದ ನಾಳಗಳು ಹಸ್ತದ ಬೆರಳುಗಳನ್ನು ಹೋಲುವ ರೀತಿಯಲ್ಲಿ ಇರುತ್ತವೆ. ನಾಳಸಮೂಹಗಳಿಂದ ಎಲೆಯ ಹಸಿರು ಜೀವಕಣಗಳಿಗೆ ನೀರೂ ಲವಣಗಳೂ ಒದಗುವುದಲ್ಲದೆ, ಇವುಗಳಲ್ಲಿ ಉತ್ಪತ್ತಿಯಾಗುವ ಸಕ್ಕರೆಯನ್ನು ಗಿಡದ ಇತರ ಭಾಗಗಳಿಗೆ ಸಾಗಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನಾಳ ಸಮೂಹಗಳು ಎಲೆಯ ರಚನೆಗೆ ಆಧಾರವಾಗಿದ್ದು, ತೆಳುವಾಗಿದ್ದರೂ ಅವು ಗಾಳಿಯ ಹೊಡೆತವನ್ನು ತಡೆಯುವ ಶಕ್ತಿಯನ್ನು ಕೊಡುತ್ತವೆ. ಆದರೆ ಬಾಳೆಯ ಎಲೆಯ ಅಂಚಿನಲ್ಲಿ ಈ ತರಹ ರಚನೆ ಇಲ್ಲದ ಕಾರಣ ಅದು ಬೇಗನೆ ಹರಿದುಹೋಗುತ್ತದೆ.
ಕೆಲವು ಎಲೆಯ ಮೈಮೇಲೆ ಕೂದಲುಗಳೂ ಹೂವರ್ಚಿಯಲ್ಲಿರುವಂತೆ ಸಣ್ಣಸಣ್ಣ ಪೊರೆಗಳೂ ಇರುವುದುಂಟು. ಇವುಗಳಿಂದ ಎಲೆಗಳ ಆವಿ ಹೊರಹೊಮ್ಮುವಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಎಲೆಯ ಅಂಚಿನಲ್ಲಿ ಮುಳ್ಳುಗಳಿದ್ದು (ಉಮ್ಮತ್ತಿ) ಅಥವಾ ಎಲೆಯ ವೃಂತಪರ್ಣಗಳು ಮುಳ್ಳುಗಳಾಗಿದ್ದು (ಎಲಚಿ) ಅಥವಾ ಪುರ್ಣ ಎಲೆಯೇ ಮುಳ್ಳಿನ ರೀತಿಯಲ್ಲಿದ್ದು (ಪಾಪಸುಕಳ್ಳಿ) ಆಡು ಮುಂತಾದ ಪ್ರಾಣಿಗಳಿಂದ ಈ ಗಿಡಗಳಿಗೆ ರಕ್ಷಣೆಯನ್ನು ದೊರಕಿಸುತ್ತದೆ. ನಿಂಬೆ, ನಾಗದಾಳಿ, ಯೂಕಲಿಪ್ಟಸ್, ವೀಳೆಯದೆಲೆ, ಕರಿಬೇವಿನ ಸೊಪ್ಪು ಮುಂತಾದ ಗಿಡಗಳ ಎಲೆಗಳಲ್ಲಿ, ತೈಲವಿರುತ್ತದೆ.
ಅಲ್ಲದೆ, ಮುಟ್ಟಿನೋಡುವುದಕ್ಕೆ ಕೆಲವು ಎಲೆಗಳು ಮೃದುವಾಗಿಯೂ ಮತ್ತೆ ಕೆಲವು ಚರ್ಮದ ಹಾಗೆಯೂ ಇನ್ನು ಕೆಲವು ಸುಲಭವಾಗಿ ಪುಡಿಯಾಗುವ ಹಾಗೆಯೂ (ಪಾರಿಜಾತ) ಇರುವುವು. ದೊಡ್ಡ ಪತ್ರೆ ಎಲೆ ತುಂಬ ರಸವತ್ತಾಗಿರುತ್ತದೆ. ಕ್ಷೀಣ ಎಲೆಗಳು ಪೊರೆಯಂತೆ ಇರುವುದೂ ಉಂಟು.
 
== ಎಲೆಯ ಬಗೆಗಳು ==
ಎಲೆಗಳಲ್ಲಿ ಸರಳ ಪತ್ರವೆಂದೂ ಭಿನ್ನಪತ್ರವೆಂದೂ (ಕಾಂಪೌಂಡ್) ಎರಡು ಬಗೆಯುಂಟು. ಆದರೆ ಕೆಲವು ಸರಳ ಪತ್ರಗಳಲ್ಲಿನ ಭಾಗಗಳು ಅರ್ಧ ಮಾತ್ರ ಕತ್ತರಿಸಲ್ಪಟ್ಟಂತೆ ಇರಬಹುದು. (ಹರಳೆಲೆ). ಭಿನ್ನಪತ್ರಗಳ ಉಪಪತ್ರಗಳು ಮತ್ತೊಂದು ಸಲ ಭಿನ್ನವಾಗಿದ್ದು, ದ್ವಿಭಿನ್ನಪತ್ರಗಳಾಗಬಹುದು (ಗೋಲ್ಡ್‌ ಮೊಹರ್). ಹೆಚ್ಚಾಗಿ ಭಿನ್ನವಾದ ಪತ್ರಗಳನ್ನು ನಾವು ನುಗ್ಗೆ ಗಿಡದಲ್ಲಿ ಕಾಣಬಹುದು. ಮೇಲೆ ಹೇಳಿರುವ ಎರಡು ಉದಾಹರಣೆಗಳಲ್ಲಿ ಉಪಪತ್ರಗಳು ಗರಿಯ ಮಾದರಿಯಲ್ಲಿ ಜೋಡಣೆಗೊಂಡಿರುತ್ತವೆ. ಎಲೆಯ ತುದಿಯ ಮಧ್ಯದಲ್ಲಿ ಉಪಪತ್ರವಿದ್ದರೆ ಅದಕ್ಕೆ ಇಂಪ್ಯಾರಿಪಿನ್ನೇಟ್ (ಬೇವು) ಎಂದೂ ಹಾಗಿಲ್ಲದಿದ್ದರೆ ಪ್ಯಾರಿಪಿನ್ನೇಟ್ (ಹುಣಿಸೆ) ಎಂದೂ ಕರೆಯುತ್ತಾರೆ. ಬೂರುಗದ ಮರದಲ್ಲಿರುವ ಭಿನ್ನ ಪತ್ರಗಳು ಹಸ್ತದ ಮಾದರಿಯವು. ಭಿನ್ನಪತ್ರದ ಮಧ್ಯದ ಅಕ್ಷಕ್ಕೆ ರೇಕಿಸ್ ಎಂದು ಹೆಸರು. ಕಿತ್ತಲೆ ಎಲೆಯಲ್ಲಿ ಒಂದೇ ಉಪಪತ್ರವಿರುವ ಭಿನ್ನಪತ್ರ ಉತ್ಪತ್ತಿಯಾಗಿರುವುದು ಒಂದು ವಿಶೇಷ. ಭಿನ್ನಪತ್ರಗಳು ಗಾಳಿಯ ಹೊಡೆತದಿಂದ ಬೇಗ ಹರಿಯುವುವು. ಅಲ್ಲದೆ ಪತ್ರಗಳ ನಡುನಡುವೆ ಹೆಚ್ಚಿನ ಗಾಳಿ ಮತ್ತು ಬೆಳಕು ಆಡುವ ಸಾಧ್ಯತೆ ಹೆಚ್ಚು. ಭಾರತದ ಕಾಡಿನ ಕೆಲವು ಮರಗಳಲ್ಲಿ ಒಂದೇ ಒಂದು ಭಿನ್ನಪತ್ರ ನಾಲ್ಕೈದು ಅಡಿಗಳಷ್ಟು ಉದ್ದವಿದ್ದು, ಅದರ ಉಪ ಪತ್ರಗಳು ಅಂಗೈ ಅಷ್ಟು ಅಗಲವಾಗಿರುವುದುಂಟು. ಇಂಥ ಸಂದರ್ಭದಲ್ಲಿ ಆ ದೊಡ್ಡ ಭಿನ್ನಪತ್ರವನ್ನು ಒಂದು ಕಾಂಡದ ಕೊಂಬೆಯೆಂದು ತಪ್ಪಾಗಿ ಭಾವಿಸಬಹುದು. ಆದರೆ ಆ ಎಲೆಯ ತುದಿಯಲ್ಲಿ ಎಲೆ ಮೊಗ್ಗು ಇರುವುದಿಲ್ಲ. ಉಪಪತ್ರ ಕೊಂಕುಳಲ್ಲಿಯೂ ಎಲೆಮೊಗ್ಗು ಇರುವುದಿಲ್ಲ. ಎಲ್ಲ ಉಪ ಪತ್ರಗಳೂ ಒಂದೇ ದಿಕ್ಕಿನಲ್ಲಿ ಹರಡಿಕೊಂಡಿರುವುವು. ಆ ದೊಡ್ಡ ಎಲೆಯ ಬುಡದ ಕೊಂಕುಳಲ್ಲಿ ಮಾತ್ರ ಎಲೆಮೊಗ್ಗು ಇರುತ್ತದೆ.
"https://kn.wikipedia.org/wiki/ಎಲೆ" ಇಂದ ಪಡೆಯಲ್ಪಟ್ಟಿದೆ