ಎಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
 
ಸಾಮಾನ್ಯವಾಗಿ ಎಲ್ಲ ಬಗೆಯ [[ಸಸ್ಯ]]ಗಳ ಕಾಂಡ, ರೆಂಬೆ, ಕೊಂಬೆಗಳಲ್ಲಿ ವಿವಿಧ ವರ್ಣಗಳಲ್ಲಿ ಬೆಳೆಯುವ [[ಸಸ್ಯ]]ಗಳ ಪ್ರಮುಖ ಭಾಗ ಎಲೆ (ಲೀಫ್)<ref>{{cite book|last1=Katherine|first1=Esau|title=Esau's Plant Anatomy: Meristems, Cells, and Tissues of the Plant Body: Their Structure, Function, and Development|publisher=John Wiley & Sons|isbn=9780470047378|pages=624}}</ref>. ಕಾಂಡದ ಮೇಲೆ ಹಸಿರಾಗಿ ಬೆಳೆಯುವ ಎಲ್ಲ ಸಸ್ಯಭಾಗಗಳನ್ನೂ ವಾಡಿಕೆಯಾಗಿ ಎಲೆ ಎಂದು ಕರೆಯುತ್ತಾರೆ. ಆದರೆ ಎಲೆಯಂತೆ ತೋರದ ಇನ್ನೂ ಅನೇಕ ಭಾಗಗಳೂ ಎಲೆಗಳೇ ಆಗಿವೆಯೆಂದು ಸಂಶೋಧನೆಗಳಿಂದ ತಿಳಿಯಬಂದಿದೆ. ಗೆಡ್ಡೆಯ ಮೇಲಿನ ಪದರಗಳು, ಹೂವಿನ ಕೆಲ ಭಾಗಗಳು ಇದಕ್ಕೆ ಒಳ್ಳೆಯ ಉದಾಹ ರಣೆಉದಾಹರಣೆ. ಪಾಚಿಯಂಥ ಕೆಳವರ್ಗದಸಸ್ಯದಲ್ಲಿ ಎಲೆ ಕಾಂಡ ಬೇರುಗಳನ್ನು ಪ್ರತ್ಯೇಕವಾಗಿ ಕಾಣುವುದು ಅಸಾಧ್ಯ. ಕೋಲುಗಳ್ಳಿಯಲ್ಲಿನ ಎಲೆಗಳು ಆಗಲೇ ಬಿದ್ದುಹೋಗಿರುತ್ತವೆ. ಪಾಪಾಸುಕಳ್ಳಿಯಲ್ಲಿ ಹಸ್ತದಂತೆ ದಪ್ಪನಾಗಿರುವ ಭಾಗ ಎಲೆಯಂತೆ ಕಂಡರೂ ಅದು ಎಲೆಯಲ್ಲ, ಅದು ಅದರ ಕಾಂಡ. ಆ ಹಸ್ತದ ಮೇಲೆ ಚೂಪಾಗಿ ನಿಮಿರಿ ನಿಂತಿರುವ ಮುಳ್ಳುಗಳೇ ಗಿಡದ ಎಲೆಗಳು.
ಎಲೆಗಳು ಕಾಂಡ ಅಥವಾ ಅದರ ಕವಲುಗಳ ಮೇಲೆ ತೆಳುವಾಗಿ, ಅಗಲವಾಗಿ ಇದ್ದು ಗಿಣ್ಣುಗಳಿರುವ [[ಜಾಗ]]ದಲ್ಲಿ ಉದ್ಭವಿಸುವುವು. ಕಾಂಡಕ್ಕೂ ಎಲೆಗಳಿಗೂ ಇರುವ ಮೇಲುಗಡೆಯ ಕಂಕುಳಲ್ಲಿ (ಆಕ್ಸಿಲ್) ಒಂದೊಂದು ಎಲೆ [[ಮೊಗ್ಗು]] ಇರುತ್ತದೆ. ಇದರ ಬೆಳೆವಣಿಗೆಯಿಂದ ಕಾಂಡದ ಹೊಸಕೊನೆಗಳು ಉತ್ಪತ್ತಿಯಾಗುವುವು. ಕೊನೆ ಬೆಳೆದಂತೆ ಎಳೆಯ ಎಲೆಗಳು ಮೇಲಾಗಿ ಹಳೆಯ ಎಲೆಗಳು ಕೆಳಗಾಗುತ್ತವೆ. ಕಾಂಡಗಳ ಮೇಲೆ ಈ ರೀತಿ ಎಲೆಗಳು ಇರುವುದನ್ನು ಊಧರ್ವ್‌ ವೃದ್ಧಿ (ಆಕ್ರೊಪೆಟಲ್ ಸಕ್ಸೆಷನ್) ಎನ್ನುತ್ತಾರೆ. ಎಲೆ ಉತ್ಪತ್ತಿಯಾಗುತ್ತಿರುವಾಗ, ಅದು ತನ್ನ ತುದಿಯಲ್ಲಿ ಮೊದಲು ಸ್ವಲ್ಪ ಬೆಳೆಯುತ್ತದೆ. ಕೆಲವು ಜರಿಗಿಡಗಳಲ್ಲಿ ಬಹು ಕಾಲ ಈ ರೀತಿಯ ಬೆಳೆವಣಿಗೆಯನ್ನು ಕಾಣಬಹುದು. ಉದಾ: ಲೈಗೋಡಿಯಂ. ಅನಂತರ ಅದು ತನ್ನ ಬುಡದಲ್ಲಿಯೂ ಸಾಧಾರಣವಾಗಿ ಮಧ್ಯ ಪ್ರದೇಶದಲ್ಲಿಯೂ ವೃದ್ಧಿಯಾಗುತ್ತದೆ. ಏಕದಳ ಸಸ್ಯಗಳಲ್ಲಿ, ಎಲೆ ಬುಡದಲ್ಲಿ ಬಹುಕಾಲ ಬೆಳೆಯುತ್ತದೆ. ಆಮೇಲೆ, ಎಲೆಗಳು ತಮ್ಮೊಳಗೆ ಹೊಸ ಜೀವಕೋಶಗಳನ್ನು ನಿರ್ಮಿಸದೆ ಕೇವಲ ಗಾತ್ರದಲ್ಲಿ ದೊಡ್ಡವಾಗುತ್ತವೆ.
ಸರಳವಾದ ವಿಕಾಸವನ್ನು ಹೊಂದಿರುವ ಥ್ಯಾಲೋಫೈಟ ಎನ್ನುವ ಒಂದು ದೊಡ್ಡ ಗುಂಪಿನ ಸಸ್ಯಗಳಲ್ಲಿ ಎಲೆಗಳಾಗಲಿ, ಕಾಂಡವಾಗಲಿ, ಸಾಧಾರಣವಾಗಿ ಕಂಡುಬರುವುದಿಲ್ಲ. ಈ ಗುಂಪಿಗಿಂತ ಹೆಚ್ಚು ವಿಕಾಸವನ್ನು ತೋರಿಸುವ ಬ್ರಯೊಫೈಟ್ ಗುಂಪಿನ ಹಾವಸೆಗಳಲ್ಲಿ ಕಾಣಬರುವ ಎಲೆಗಳೇ ಅತ್ಯಂತ ಸರಳವೂ ಸೂಕ್ಷ್ಮವೂ ಆದ ಎಲೆಗಳು. ಇವು ಒಂದು ಜೀವಕೋಶದಷ್ಟು ಮಾತ್ರ ದಪ್ಪನಾಗಿರುವುವು. ಆದರೆ ಒಂದು ವಿಶೇಷ ಜಾತಿಯ ತಾವರೆಯಾದ ವಿಕ್ಟೋರಿಯ ರೀಜಿಯ ಎಂಬ ಅಮೆರಿಕದ ಗಿಡದ ಎಲೆ ಎರಡು ಮೀಟರಿನಷ್ಟು ಅಗಲವಾಗಿರಬಹುದು.
[[File:Leaf anatomy.svg|500px|ಎಲೆಯ ಅಂಗರಚನೆ]]
 
== ಎಲೆಗಳ ರಚನೆ ==
[[ದಾಸವಾಳ]]ದಂಥ ಒಂದು ಸಾಮಾನ್ಯ ರೀತಿಯ ಎಲೆಗೆ ಒಂದು ಬುಡವೂ ಒಂದು ತೊಟ್ಟೂ ಒಂದು ಪತ್ರ ಭಾಗವೂ ಇವೆ. ಬುಡದ ಇಕ್ಕೆಲದಲ್ಲೂ ವೃಂತಪರ್ಣಗಳು (ಸ್ಟಿಫ್ಯೂಲ್) ಕಾಣಬರುತ್ತವೆ. ಪತ್ರದ ಉದ್ದಕ್ಕೂ ಮಧ್ಯದಲ್ಲಿ ಒಂದು ದೊಡ್ಡ ನಾಳವೂ ಇದರ ಎರಡು ಕಡೆಗಳಲ್ಲಿಯೂ ಸಣ್ಣ ನಾಳಗಳೂ ಇವುಗಳ ಕವಲುಗಳೂ ಇರುವುವು. ಎಲಚಿಯಂಥ ಎಲೆಗಳಲ್ಲಿ, ಮೂರು ಮುಖ್ಯವಾದ ನಾಳಗಳಿರುತ್ತವೆ. ಇಂಥ ಎಲೆಗೆ ಮಲ್ಟಿಕಾಸ್ಟೇಟ್ ಎನ್ನುವರು. ಕಾವಿನ ಒಳಗೂ ನಾಳಗಳಿದ್ದು, ಇವು ಕಾಂಡದಲ್ಲಿರುವ ನೀರಿನ ಮತ್ತು ಆಹಾರದ ಕೊಳವೆಗಳ ಸಮೂಹವನ್ನು ಸೇರಿಕೊಳ್ಳುತ್ತವೆ. ಎಲೆಯ ನಾಳಸಮೂಹ ದ್ವಿದಳ ಸಸ್ಯಗಳಲ್ಲಿ ಬಲೆಯ ರೂಪದಲ್ಲಿಯೂ ಏಕದಳಸಸ್ಯಗಳಲ್ಲಿ ಸಮಾನಾಂತರವಾಗಿಯೂ ಜರಿಗಿಡಗಳಲ್ಲಿ ಕವಲೊಡೆಯುವ ರೀತಿಯಲ್ಲಿಯೂ ಇರುತ್ತದೆ. ಆದರೆ ಈ ಸೂತ್ರಕ್ಕೆ ವಿರೋಧ ವಾಗಿ ಕೆಸವಿನ ದಂಟು ಮುಂತಾದ ಏಕದಳ ಸಸ್ಯಗಳಲ್ಲಿ ಬಲೆಯ ರೀತಿಯ ನಾಳಜಾಲವೂ ಸುರಹೊನ್ನೆಯಂಥ ದ್ವಿದಳ ಸಸ್ಯಗಳಲ್ಲಿ ಸಮಾನಾಂತರ ರೀತಿಯ ನಾಳಸಮೂಹವೂ ಇರುವುದುಂಟು. ಗೊಡ್ಡೀಚಲಿನ (ಸೈಕಾಸ್) ಪತ್ರ ಭಾಗಗಳಲ್ಲಿ ಮಧ್ಯದ ನಾಳ ಎಡಬಲಕ್ಕೆ ಕವಲೊಡೆಯು ವುದೇ ಇಲ್ಲ. ಹರಳೆಲೆಯಲ್ಲಿ, ಮುಖ್ಯವಾದ ನಾಳಗಳು ಹಸ್ತದ ಬೆರಳುಗಳನ್ನು ಹೋಲುವ ರೀತಿಯಲ್ಲಿ ಇರುತ್ತವೆ. ನಾಳಸಮೂಹಗಳಿಂದ ಎಲೆಯ ಹಸಿರು ಜೀವಕಣಗಳಿಗೆ ನೀರೂ ಲವಣಗಳೂ ಒದಗುವುದಲ್ಲದೆ, ಇವುಗಳಲ್ಲಿ ಉತ್ಪತ್ತಿಯಾಗುವ ಸಕ್ಕರೆಯನ್ನು ಗಿಡದ ಇತರ ಭಾಗಗಳಿಗೆ ಸಾಗಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನಾಳ ಸಮೂಹಗಳು ಎಲೆಯ ರಚನೆಗೆ ಆಧಾರವಾಗಿದ್ದು, ತೆಳುವಾಗಿದ್ದರೂ ಅವು ಗಾಳಿಯ ಹೊಡೆತವನ್ನು ತಡೆಯುವ ಶಕ್ತಿಯನ್ನು ಕೊಡುತ್ತವೆ. ಆದರೆ ಬಾಳೆಯ ಎಲೆಯ ಅಂಚಿನಲ್ಲಿ ಈ ತರಹ ರಚನೆ ಇಲ್ಲದ ಕಾರಣ ಅದು ಬೇಗನೆ ಹರಿದುಹೋಗುತ್ತದೆ.
"https://kn.wikipedia.org/wiki/ಎಲೆ" ಇಂದ ಪಡೆಯಲ್ಪಟ್ಟಿದೆ