ಪಾರ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೩ ನೇ ಸಾಲು:
ಪಾರ್ವತಿದೇವಿಯ ತಂದೆ ತಾಯಿಯರು ಓಡೋಡಿ ಬಂದರು, ದೇವದೇವತೆಗಳೆಲ್ಲ ನೆರೆದರು. ಸಂಭ್ರಮದಿಂದ ಶಿವ ಪಾರ್ವತಿಯರ ಕಲ್ಯಾಣ ನೆರವೇರಿಸಿದರು. ಅದೇ ಸಂದರ್ಪದಲ್ಲಿ ದೇವತೆಗಳೆಲ್ಲ ಶಿವನನ್ನು ಪ್ರಾರ್ಥಿಸಿದರು, ಮನ್ಮಥನಿಲ್ಲದಿದ್ದರೆ ಲೋಕದ ಸೃಷ್ಟಿಕಾರ್ಯವೆ ನಡೆಯದು, ಹಾಗಾಗಿ ಅವನನ್ನು ಬದುಕಿಸು ಎಂದರು. ಶಿವ ಒಪ್ಪಿಕೊಂಡ, ಮನ್ಮಥ ಬದುಕಿದ ಆದರೆ ಶರೀರವೆ ಇಲ್ಲದೆ ಅನಂಗನಾದ. ಅವನ ಪತ್ನಿ ರತಿದೇವಿಯು ಸಂತೋಷಿಸಿದಳು. ಮದುವೆಯ ನಂತರ ಶಿವ ಪಾರ್ವತಿಯರು ತಮ್ಮ ವೈವಾಹಿಕ ಜೀವನಕ್ಕಾಗಿ ಗಂಧಮಂದನ ಪರ್ವತದತ್ತ ನಡೆದರು.
 
ಉಮಾ, ಉಮೆ ಎನ್ನುವುದು ಪಾರ್ವತಿಯ ಒಂದು ಹೆಸರು. ಉಗ್ರತಪಸ್ಸ್ಸಿನಲ್ಲಿ ನಿರತಳಾದ ಈಕೆಯನ್ನು ಕುರಿತು ತಾಯಿ ಉ (ಎಲೌ) ಮಾ (ಬೇಡ, ಕಷ್ಟಸಾಧ್ಯವಾದ ತಪಸ್ಸಿಗೆ ಉದ್ಯುಕ್ತಳಾಗಬೇಡ) ಎಂದು ಬಾರಿಬಾರಿಗೂ ಅಡ್ಡಗಿಸಿದ ಕಾರಣ ಉಮಾ ಎಂಬ ಹೆಸರು ರೂಢಿಗೆ ಬಂತು.
 
 
[[ವರ್ಗ:ಹಿಂದೂ ದೇವತೆಗಳು]]
"https://kn.wikipedia.org/wiki/ಪಾರ್ವತಿ" ಇಂದ ಪಡೆಯಲ್ಪಟ್ಟಿದೆ