ಅಷ್ಟಾದಶ ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೦ ನೇ ಸಾಲು:
*ತೈಜಸಾಹಂಕಾರದಿಂದ ಕರ್ಮ, ಜ್ಞಾನೇಂದ್ರಿಯಗಳ ದಶಕವೂ ವೈಕಾರಿಕಾಹಂಕಾರದಿಂದ ಮನಸ್ಸೂ (ಮನ+ಬುದ್ಧಿ+ಅಹಂಕಾರ+ಚಿತ್ತ) ಉದಯಿಸುತ್ತವೆ. ಜಗತ್ತನ್ನು ಹೊರಗಿನಿಂದ ಜಲ, ಅಗ್ನಿ, ವಾಯು, ಆಕಾರ, ಭೂತಾದಿ ಮಹದವ್ಯಕ್ತಗಳು ಅನುಕ್ರಮವಾಗಿ ಸುತ್ತುವರಿದಿವೆ. ಜಗತ್ತು ಅಥವಾ ಪ್ರಪಂಚವೆಂದರೆ ತೈಜಸಾಹಂಕಾರದಿಂದ ಹುಟ್ಟಿದ ದಶೇಂದ್ರಿಯ, ಮನ, ಪಂಚತನ್ಮಾತ್ರ, ಅಹಂಕಾರ ಮತ್ತು ಮಹತ್ತುಗಳ ಏಕೀಕೃತವೂ ಸಮನ್ವಿತವೂ ಆದ ಚರಾಚರಾತ್ಮಕ ಮೊಟ್ಟೆ. ಈ ಮೊಟ್ಟೆಯ ವಿಕಸಿತರೂಪವೇ ವಿಷ್ಣುವಿನ ಶರೀರವೆನ್ನಿಸುವ ಬ್ರಹ್ಮ. ಬ್ರಹ್ಮ-ವಿಷ್ಣು-ರುದ್ರಾತ್ಮಕನಾಗಿ ವಿಷ್ಣು ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳನ್ನು ನಡೆಸುತ್ತಾನೆ. ಅಂದರೆ ಆತ ಆದಿಕಾರಣನಾದ ಪರಬ್ರಹ್ಮ. ಈ ಬಗೆಯ ಸಾಂಖ್ಯವಿಚಾರಗಳು ವಿಷ್ಣುಪುರಾಣದಲ್ಲಿವೆ.
===ವಾಯು ಪುರಾಣ===
*ಶ್ಲೋಕ ಸಂಖ್ಯೆ 24,000 ಎಂಬ ಹೇಳಿಕೆಯಿದ್ದರೂ ಮುದ್ರಿತಪ್ರತಿಯ ಸಂಖ್ಯೆ 12,000 ಮಾತ್ರ. ಇದು ಬಹುಶಃ ಪುರಾಣದ ಒಂದನೆಯ ಖಂಡದಷ್ಟೇ ಆಗಿರಬೇಕು. ಅನುಕ್ರಮಣಿಕೆಗಳ ಕಾಲದಲ್ಲಿ ದೇವಾದಿ ಮಾಹಾತ್ಮ್ಯಗಳು ಇದಕ್ಕೆ ಸೇರಿದ್ದವೆಂದು ತೋರುತ್ತದೆ. ಇದು ಎಲ್ಲ ಪುರಾಣ ಗಳಿಗಿಂತಪುರಾಣಗಳಿಗಿಂತ ಹೆಚ್ಚು ಪ್ರಾಚೀನವೆಂದು ನಂಬಲಾಗಿದೆ. ವಾಯು ಬ್ರಹ್ಮಾಂಡಗಳೆರಡೂ ವಾಯುಪ್ರೋಕ್ತ ಪುರಾಣಗಳಾದುದರಿಂದ ಇವು ಮೊದಲು ಒಂದೇ ಕೃತಿಯಾಗಿದ್ದುವೆಂದು ಪಾರ್ಗಿಟರ್ನ ಮತ. ಮಹಾಭಾರತ, ಹರಿವಂಶಗಳು ವಾಯುಪುರಾಣವನ್ನು ಉಲ್ಲೇಖಿಸುತ್ತವೆ, ಶ್ಲೋಕಗಳನ್ನು ಉದ್ಧರಿಸುತ್ತವೆ. ಪ್ರ.ಶ. 4ನೆಯ ಶತಮಾನದ ಗುಪ್ತಚಕ್ರವರ್ತಿ ಗಳಗುಪ್ತಚಕ್ರವರ್ತಿಗಳ ಆಳ್ವಿಕೆ ಇಲ್ಲಿ ವರ್ಣಿತವಾಗಿದೆ.
*ಆದುದರಿಂದ ಪ್ರಾಚೀನತಮವಾದ ಮೂಲವಾಯು ಪುರಾಣದ ಕಾಲ ಯಾವುದೇ ಆದರೂ ಅದರ ಇಂದಿನ ರೂಪದ ಬಹುಭಾಗ ಪ್ರ.ಶ. ಸು. 5ನೆಯ ಶತಮಾನದ್ದೆಂದು ವಿಂಟರ್ನಿಟ್ಜನ ಅಭಿಪ್ರಾಯ. ಜನತ್ಸೃಷ್ಟಿ ವಂಶವೃಕ್ಷ ಮುಂತಾದ ಪ್ರಾಚೀನ ಪೌರಾಣಿಕ ವಿಷಯಗಳೂ ಶಿವೋತ್ಕರ್ಷವನ್ನು ಸಾಧಿಸುವ ಕತೆಗಳೂ ಜಗತ್ಪ್ರಳಯವೂ ಯೋಗಮಾರ್ಗ ಪ್ರಶಂಸೆಯೂ ಶಿವಪುರ ವರ್ಣನ, ವಿಷ್ಣುಪ್ರಭಾವ, ಶ್ರಾದ್ಧ, ಗೀತಾಲಂಕಾರ, ಗಯಾ ಮಾಹಾತ್ಮ್ಯಗಳೂ ಈ ಪುರಾಣದ ಮುಖ್ಯಾಂಶಗಳು. ಇದಕ್ಕೆ ಸೇರಿದವೆಂದು ಹೇಳಲಾಗುವ ಇನ್ನೂ ಎಷ್ಟೋ ಸ್ತೋತ್ರಗಳೂ ಮಾಹಾತ್ಮ್ಯಗಳೂ ಕರ್ಮವಿಧಿಗ್ರಂಥಗಳೂ ದೊರಕುತ್ತವೆ. ಪ್ರಸ್ತುತ ವಾಯುಪುರಾಣದಲ್ಲಿರುವ ಪ್ರಾಚೀನ ಭಾಗಗಳ ಕಾಲ ಪ್ರ.ಶ. 200 ಅಥವಾ ಅದಕ್ಕೂ ಹಿಂದೆ ಹೋಗಬಹುದು.
*ವಾಯುಪುರಾಣ ದೇವರಲ್ಲಿಯ ಸೃಷ್ಟಿಮಾಡುವ ಪ್ರವೃತ್ತಿಯ ಮೂಲಕಾರಣವನ್ನು ಅಪ್ರಮೇಯವೆನ್ನುತ್ತದೆಯಲ್ಲದೆ, ಅದನ್ನು ಬ್ರಹ್ಮ, ಪ್ರಧಾನ, ಪ್ರಕೃತಿ, ಪ್ರಕೃತಿ-ಪ್ರಸೂತಿ, ಆತ್ಮ, ಗುಹ, ಯೋನಿ, ಚಕ್ಷುಸ್, ಕ್ಷೇತ್ರ, ಅಮೃತ, ಅಕ್ಷರ, ಶುಕ್ರ, ತಪಸ್, ಸತ್ಯ ಅಥವಾ ಅತಿಪ್ರಕಾಶ ಎಂದೂ ಕರೆಯುತ್ತದೆ, ಅದು ಲೋಕಪಿತಾಮಹನಾದ ಎರಡನೆಯ ಪುರುಷನನ್ನು ಸುತ್ತುವರಿದಿರುತ್ತದೆ. ಕಾಲಸಂಪರ್ಕ ಮತ್ತು ರಜಃ ಪ್ರಾಧಾನ್ಯಗಳಿಂದ ಕ್ಷೇತ್ರಜ್ಞನಿಗೆ ಸಂಬಂಧಿಸಿದ ಎಂಟು ಪರಿವರ್ತನಗಳಾಗುತ್ತವೆ.
*ಪ್ರಕೃತಿ ಮೂಲತಃ ಇಂದ್ರಿಯಗ್ರಾಹ್ಯ ಗುಣಗಳುಳ್ಳದ್ದಲ್ಲ; ಸತ್ತ್ವಾದಿಗುಣತ್ರಯದಿಂದ ಕೂಡಿದ್ದು; ಕಾಲಾತೀತ ಮತ್ತು ಅಜ್ಞೇಯ. ತನ್ನ ಮೂಲಸ್ವರೂಪ ವಾದ ಗುಣತ್ರಯ ಸಾಮ್ಯಾವಸ್ಥೆಯಲ್ಲದುಸಾಮ್ಯಾವಸ್ಥೆಯಲ್ಲದ್ದು ತಮೊರೂಪದಿಂದ ಎಲ್ಲವನ್ನೂ ಆವರಿಸಿತ್ತು. ಸೃಷ್ಟಿಕಾಲದಲ್ಲಿ ಅದಕ್ಕೆ ಕ್ಷೇತ್ರಜ್ಞ ಸಂಪರ್ಕವುಂಟಾಗಿ ಅದರಿಂದ ಮಹತ್ತತ್ತ್ವ ಹುಟ್ಟಿತು. ಈ ಮಹತ್ತನ್ನು ಮನಸ್, ಮತಿ, ಬ್ರಹ್ಮ, ಪುರ್, ಬುದ್ಧಿ, ಖ್ಯಾತಿ, ಈಶ್ವರ, ಚಿತಿ, ಪ್ರಜ್ಞೆ, ಸ್ಮೃತಿ, ಸಂವಿತ್, ವಿಪುರ ಎಂಬ ಹೆಸರುಗಳಿಂದ ಕರೆಯುತ್ತಾರೆ.
*ಸತ್ತ್ವಪ್ರಧಾನವೂ ಶುದ್ಧಾಸ್ತಿತ್ವ ಸ್ವರೂಪವುಳ್ಳದ್ದೂ ಆದ ಮಹತ್ತು ಸೃಜಿಸುವ ಇಚ್ಛೆಯುಂಟಾದಾಗ ಧರ್ಮಾಧರ್ಮಾದಿ ಪದಾರ್ಥಗಳನ್ನು ನಿರ್ಮಿಸುತ್ತದೆ. ಇಡೀ ವಿಶ್ವದ ಚರಾಚರಗಳೆಲ್ಲವೂ ಮಹತ್ತ್ವದ ಪರಿಣಾಮಗಳು. ಕ್ಷೇತ್ರ, ಕ್ಷೇತ್ರಜ್ಞರಲ್ಲಿ ಅದೇ ಜ್ಞಾತೃ. ಕ್ಷೇತ್ರಜ್ಞನೇ ಬ್ರಹ್ಮ, ಹಿರಣ್ಯ ಗರ್ಭ. ಗುಣತ್ರಯದ ಸಹಕಾರದಿಂದಾಗಿ ಮೊಟ್ಟೆಯಿಂದ ಆತ ಹುಟ್ಟಿದವ. ಪ್ರತಿ ಪ್ರಳಯದಲ್ಲೂ ಬ್ರಹ್ಮನ ಶರೀರ ನಾಶವಾಗುತ್ತದೆ. ಮೊಟ್ಟೆಯ ರೂಪದ ಬ್ರಹ್ಮಾಂಡ ಜಲ, ಪ್ರಕಾಶ, ಉಷ್ಣತೆ, ವಾಯು, ಆಕಾಶ, ಭೂತಾದಿ, ಮಹತ್ ಮತ್ತು ಅವ್ಯಕ್ತಗಳಿಂದ ಆವೃತವಾಗಿದೆ.
*ವಾಯು ಮತ್ತು ಬ್ರಹ್ಮಾಂಡ ಪುರಾಣಗಳ ಪ್ರಕಾರ ಸೃಷ್ಟಿಯ ಆ ಆದಿಕಾಲದಲ್ಲಿ ಬ್ರಹ್ಮ ಸಾತ್ತ್ವಿಕ, ರಾಜಸ, ಸಾತ್ತ್ವಿಕ ರಾಜಸ, ಮತ್ತು ತಾಮಸಿಕ ಎಂಬ ನಾಲ್ಕು ಬಗೆಗಳ ಮನುಷ್ಯರನ್ನು ತನ್ನ ಬಾಯಿ, ಎದೆ, ತೊಡೆ ಮತ್ತು ಪಾದಗಳಿಂದ ಹುಟ್ಟಿಸಿದನೆಂದೂ ಅವರೆಲ್ಲರೂ ಮೇಲು-ಕೀಳೆಂಬ ಭೇದವಿಲ್ಲದೆ ಸಮಾನರಾಗಿ ಬಾಳುತ್ತಿದ್ದರೆಂದೂ ಅವರಲ್ಲಾಗ ವರ್ಣಾಶ್ರಮ ಭೇದಗಳಿರಲಿಲ್ಲವೆಂದೂ ಚಳಿಬಿಸಿಲುಗಳ ಅಂಜಿಕೆಯಿಲ್ಲದೆ, ಮನೆ-ಮಠಗಳನ್ನಾಶ್ರಯಿಸದೆ ದಿವ್ಯ ಜೀವನ ನಡೆಸುತ್ತಿದ್ದರೆಂದೂ ತಿಳಿಯುತ್ತದೆ.
*ತಮ್ಮ ದಿವ್ಯತೆಯನ್ನವರು ಕಳೆದುಕೊಂಡು ಮರ್ತ್ಯರಾದಾಗ ತಮ್ಮ ಕರ್ಮಕ್ಕೆ ತಕ್ಕಂತೆ ಮುಂದೆ ಜನ್ಮಗಳನ್ನು ಪಡೆದು, ಹಿಂದಿನದಕ್ಕೆ ವ್ಯತಿರಿಕ್ತವಾದ ಸ್ಥಿತಿಗಿಳಿದರು. ವರ್ಣ ಜಾತಿಗಳ ಮತ್ತು ರಾಜಾಧಿಕಾರದ ಅಗತ್ಯವುಂಟಾಗಲು ಮಾನವರು ಭ್ರಮಿಷ್ಠರಾಗಿ, ಪಾಪಮಾಡಿ, ದಿನೇ ದಿನೇ ಅಧಃಪತನ ಹೊಂದುತ್ತ ಹೋದುದೇ ಕಾರಣವೆಂದು ಉಕ್ತಪುರಾಣಗಳ ಮತ.
*ಕೃತಯುಗದಿಂದ ಕಲಿಯುಗದವರೆಗೆ ಧರ್ಮ ಕ್ಷೀಣವಾಗುತ್ತ ಹೋದ ಹಾಗೆ ಅದನ್ನು ಅರ್ಜಿಸುವ ವಿಧಾನಗಳ ಬಿಗಿಯೂ ಕಡಿಮೆಯಾಗುತ್ತದೆ, ರಾಜಾಧಿಕಾರ ದೇವಾಧಿಕಾರಕ್ಕೆ ಸರಿದೊರೆಯಾಗುತ್ತದೆ; ಪ್ರಭು ಪ್ರಜೆಗಳಿಬ್ಬರೂ ಪರಸ್ಪರರ ಬಗ್ಗೆ ಮಾಡಬೇಕಾದ ಕರ್ತವ್ಯಗಳನ್ನು ಮಾಡದಿದ್ದರೆ ದಂಡನೀಯವಾಗುತ್ತಾರೆ-ಎಂಬೀ ಅಂಶಗಳನ್ನೂ ವಿಷ್ಣು ಭಾಗವತ, ಮಾರ್ಕಂಡೇಯ ಪುರಾಣಗಳಂತೆಯೇ ಇವೂ ಪ್ರತಿಪಾದಿಸಿವೆ. ಸರ್ವರೂ ಧರ್ಮಾಧೀನರೆಂಬ ಸ್ಮೃತಿಪರಂಪರೆಗಿದು ಸಮ್ಮತ.
 
===ಭಾಗವತ ಪುರಾಣ===
*ವಿಷ್ಣು ಮಹಾಪುರಾಣದಂತೆಯೇ ಭಾಗವತವೂ ವಿಷ್ಣುವಿನ ಮೇಲ್ಮೆಯನ್ನು ಹೇಳ ಹೊರಟದ್ದು. ಇದರಷ್ಟು ಸುಪ್ರಸಿದ್ಧವಾದ ಮಹಾಪುರಾಣವಿನ್ನೊಂದಿಲ್ಲ. ಯುರೋಪಿನಲ್ಲಿ ಸಂಪಾದಿಸಿ ಅನುವಾದಿಸಲಾದ ಮೊಟ್ಟ ಮೊದಲ ಪುರಾಣವಿದು. ಆದರೆ ಇದು ಅರ್ವಾಚೀನ ಗ್ರಂಥ. ವಿಷ್ಣುಪುರಾಣವನ್ನು ಬಹಳವಾಗಿ ಅವಲಂಬಿಸಿದೆ. ಹೀಗಿದ್ದರೂ ಈ ಪುರಾಣ ಪ್ರಾಚೀನಾಂಶಗಳನ್ನು ಬಹಳಮಟ್ಟಿಗೆ ಬಳಸಿಕೊಂಡಿದೆ. ಪುರಾಣ ಸಾಹಿತ್ಯದಲ್ಲಿ ಇದೊಂದೇ ಏಕಸೂತ್ರತೆ, ಸಾಹಿತ್ಯಸೌಂದರ್ಯಗಳಿಂದ ಕೂಡಿರುವ ಕೃತಿ. ಇದರ ಸ್ಕಂಧಗಳು (ಅಥವಾ ಖಂಡ) 12. ಶ್ಲೋಕಗಳ ಮೊತ್ತ 18000. *ಅಲ್ಪಸ್ವಲ್ಪ ಭಿನ್ನವಾದರೂ ಇದರ ಸೃಷ್ಟಿಕಥೆಗಳು ಪುರಾಣವನ್ನೇ ಹೆಚ್ಚಾಗಿ ಹೋಲುತ್ತವೆ. ವಿಷ್ಣುವಿನ ವರಾಹಾವತಾರದ ಕಥೆ ವಿಸ್ತಾರವಾಗಿ ಬಂದಿದೆ. ಮೂರನೆಯ ಸ್ಕಂಧದ ಕೊನೆಯಲ್ಲಿ ವಿಷ್ಣುವಿನ ಅವತಾರವೆಂದು ಹೇಳಲಾದ ಸಾಂಖ್ಯದರ್ಶನದ ಮೂಲಾಚಾರ್ಯನೆನ್ನಿಸಿರುವ ಕಪಿಲಮುನಿಯ ಬಾಯಿಯಿಂದ ಯೋಗಶಾಸ್ತ್ರವನ್ನು ಸುದೀರ್ಘವಾಗಿ ಹೇಳಿಸಲಾಗಿದೆ. ಪ್ರ.ಶ. 12ನೆಯ ಶತಮಾನದಲ್ಲಿದ್ದ ಜಯದೇವನ ಗೀತಗೋವಿಂದದಲ್ಲಿರುವಂತೆ ಇಲ್ಲಿ ಗೌತಮಬುದ್ಧ ವಿಷ್ಣುವಿನ ಬೌದ್ಧಾವತಾರವಾಗಿದ್ದಾನೆ.
"https://kn.wikipedia.org/wiki/ಅಷ್ಟಾದಶ_ಪುರಾಣಗಳು" ಇಂದ ಪಡೆಯಲ್ಪಟ್ಟಿದೆ