ಅಷ್ಟಾದಶ ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಭಾರತೀಯ ಸಂಸ್ಕೃತಿಯಲ್ಲಿ ವೇದವಾಙ್ಮಯ ಸೂರ್ಯಮಂಡಲವೆನ್ನಿಸಿದರೆ ಪುರಾಣಗಳು ಗ್ರಹನಕ್ಷತ್ರಗಳೆನ್ನಿಸಿವೆ. ನಾಲ್ಕು ವೇದಗಳಾದ ಬಳಿಕ ಬರುವ ಪುರಾಣ ಸಮುದಾಯ ಐದನೆಯ ವೇದವೆಂದು ಖ್ಯಾತಿವೆತ್ತಿದೆ. ಪುರಾಣ ಜನತಾವೇದ; ವೇದಗಣದಂತೆಯೇ ಪ್ರಾಚೀನ ಪರಂಪರೆಗಳ ಕರಂಡಕ ಮತ್ತು ಪವಿತ್ರ. ಅದರ ವಸ್ತುವೂ ರೀತಿಯೂ ಮಹಾಭಾರತ ಮತ್ತು ಸ್ಮೃತಿಗ್ರಂಥಗಳ ವಸ್ತು, ರೀತಿಗಳನ್ನು ಹೋಲುತ್ತವೆ. ಹಿಂದೂಧರ್ಮದ ಸರ್ವಮುಖಗಳನ್ನೂ ಪ್ರತಿಬಿಂಬಿಸುವ ಹೆಗ್ಗನ್ನಡಿಯೆಂದರೆ ಪುರಾಣಸ್ತೋಮವೇ. ಪುರಾಣಸಂಹಿತೆಗಳಲ್ಲಿ ಹಲವು ವಿಶ್ವಕೋಶಗಳೇ ಆಗಿವೆ; ಅವುಗಳಲ್ಲಿ ಸನಾತನ ಮತಧರ್ಮದ ತತ್ತ್ವಗಳಿವೆ. ತತ್ತ್ವಜ್ಞಾನದ ವಿವಿಧ ವಿವರಣೆಗಳಿವೆ. ಐತಿಹಾಸಿಕ ಸಾಮಗ್ರಿಗಳಿವೆ. ವೈಯಕ್ತಿಕ ಜೀವನದ ಆಚಾರ ನಿಯಮಗಳಿವೆ. ಸಾಮಾಜಿಕ ಹಾಗೂ ರಾಜಕೀಯ ನೀತಿಗಳಿವೆ. ಅಷ್ಟಾದಶವೆಂದು ಪ್ರಸಿದ್ಧವಾದ ಮಹಾಪುರಾಣಗಳಲ್ಲಿರುವ ಶ್ಲೋಕಗಳ ಮೊತ್ತ ನಾಲ್ಕು ಲಕ್ಷಗಳಷ್ಟೆಂದು ಭಾಗವತ ಮಹಾಪುರಾಣದ ಹೇಳಿಕೆ.
==ಪುರಾಣಪದದ ವ್ಯುತ್ಪತ್ತಿ==
*ಪುರಾ (ಹಿಂದೆ) ನವಂ (ಹೊಸದು) ಎಂದು ಪುರಾಣಪದದ ವ್ಯುತ್ಪತ್ತಿಯನ್ನು ಹೇಳುವುದೊಂದು ಚಮತ್ಕಾರ. ಪುರಾ (ಹಿಂದಕ್ಕೆ) ನೀಯತೇ (ಒಯ್ಯಲ್ಪಡುತ್ತದೆ) ಎಂಬುದಿ ನ್ನೊಂದುಎಂಬುದಿನ್ನೊಂದು ನಿರುಕ್ತಿ. ಬ್ರಾಹ್ಮಣ ಗ್ರಂಥಗಳಲ್ಲಿ ಬಳಸಲಾಗಿರುವ ಪುರಾಣವೆಂಬ ಪದಕ್ಕೆ ಕೇವಲ ಹಳೆಯ ಕತೆ ಎಂದಿಷ್ಟೇ ಅರ್ಥ. ಅದು ಇತಿಹಾಸ ಮತ್ತು ನಾರಾಶಂಸಿಗಳ ಸಾಲಿಗೆ ಸೇರಿದ್ದು. ಬಾಯಿಂದ ಬಾಯಿಗೆ ಹರಿದುಬಂದ ಹಳಗತೆಯ ರೂಪದಲ್ಲಿದ್ದ ಪುರಾಣವಸ್ತು ಕೆಲ ಅಂಶಗಳಲ್ಲಿ ವೇದವಾಙ್ಮಯಕ್ಕೂ ಹಿಂದಿನದೆಂದು ಹೇಳುತ್ತಾರೆ.
*ಆದರೆ ನಮಗೆ ಈಗ ಸಿಗುವ ಪುರಾಣಕೃತಿಗಳು ಸ್ವರೂಪತಃ ವೇದೋತ್ತರಕಾಲೀನ. ಇವು ವಿಶಿಷ್ಟಕೃತಿಗಳೆಂಬ ಸೂಚನೆಯನ್ನು ಛಾಂದೋಗ್ಯೋಪನಿಷತ್ತು ಕೊಟ್ಟಿದೆ. ಇವುಗಳ ಸ್ಪಷ್ಟೋಲ್ಲೇಖ ಸೂತ್ರವಾಙ್ಮಯದಲ್ಲಿದೆ. ಮಹಾಪುರಾಣ, ಉಪಪುರಾಣಗಳೆರಡರಲ್ಲೂ ಕಂಡುಬರುವ ಐದು ಲಕ್ಷಣಗಳನ್ನು ಪ್ರ.ಶ. 5ನೆಯ ಶತಮಾನದಲ್ಲಿದ್ದ ಅಮರಸಿಂಹನೆಂಬ ಕೋಶಕಾರ ಹೇಳಿರುವುದು ಸುಪ್ರಸಿದ್ಧ:
# ಸರ್ಗ ಅಥವಾ ಆದಿಸೃಷ್ಟಿಯ ವಿವರಗಳು.
೭ ನೇ ಸಾಲು:
# ವಂಶ ಅಥವಾ ದಿವ್ಯಕುಲ ವಿವರಣೆ
# ಮನ್ವಂತರ ಅಥವಾ ಹದಿನಾಲ್ಕು ಮನುಗಳ ಕಾಲಾವಧಿಯ ವಿಚಾರ.
# ವಂಶಾನುಚರಿತ ಅಥವಾ ರಾಜಮಹಾರಾಜರುಗಳ ವಂಶ ವೃಕ್ಷಗಳುವಂಶವೃಕ್ಷಗಳು. ವಂಶಾನುಚರಿತಕ್ಕೆ ಬದಲಾಗಿ ಭೂಮ್ಯಾದಿಗಳ ಸಂಸ್ಥಾನ ಅಥವಾ ಜಾಗತಿಕ ಭೂಗೋಳ ವಿಜ್ಞಾನವನ್ನು ಐದನೆಯ ಲಕ್ಷಣವೆಂದು ಕೆಲವೆಡೆ ಹೇಳಿದೆ.
ಪ್ರತಿಯೊಂದು ಪುರಾಣದಲ್ಲೂ ಪಂಚಲಕ್ಷಣಗಳಿವೆಯೆಂದು ಹೇಳಬರುವಂತಿಲ್ಲ. ಕೆಲ ಪುರಾಣಗಳಲ್ಲಿ ಇವುಗಳಲ್ಲಿನ ಕೆಲ ಲಕ್ಷಣಗಳಿಲ್ಲ. ಪುರಾಣದ ಮುಖ್ಯ ಗುರಿ ಸಾಮಾನ್ಯವಾಗಿ ಮತ ಧರ್ಮದ ಉಪದೇಶ ಎಂದರೂ ಪೂರ್ಣ ಸರಿಯಾಗದು. ಶುದ್ಧವಾಗಿ ಧಾರ್ಮಿಕವೆನ್ನಿಸುವ ವ್ರತ, ನಿಯಮ, ಉಪವಾಸ, ತಪಸ್ಸು, ಶ್ರಾದ್ಧ, ದಾನ-ಮುಂತಾದ ಸನಾತನ ವಿಷಯಗಳು ಪುರಾಣದಲ್ಲಿರುವುದು ನಿಜ. ಆದರೆ ಇವೂ ಮತಪಂಥಗಳ ವಿಚಾರಗಳೂ ಅನಂತರ ಅದರಲ್ಲಿ ಬಂದು ಸೇರಿಕೊಂಡು ಪಂಚಲಕ್ಷಣಸೀಮೆಯನ್ನು ಅದು ಉಲ್ಲಂಘಿಸುವಂತೆ ಮಾಡಿದೆ. ಇದರ ಫಲವಾಗಿ ಮಹಾ ಪುರಾಣದ ಲಕ್ಷಣಗಳು ಐದರಿಂದ ಹತ್ತಕ್ಕೇರಿದುವು.
# ವೃತ್ತಿ ಅಥವಾ ಜೀವನೋಪಾಯ.
# ರಕ್ಷೆ ದಿವ್ಯಾವತಾರಗಳು.
# ಮುಕ್ತಿ ಅಥವಾ ಸಂಸಾರಚಕ್ರದಿಂದ ಕೊನೆಯದಾಗಿ ಬಿಡುಗಡೆ ಹೊಂದುವುದು.
# ಹೇತು ಅಥವಾ ಅವ್ಯಕ್ತ ಜೀವಅವ್ಯಕ್ತಜೀವ ವಿಚಾರ.
# ಬ್ರಹ್ಮವಿಚಾರ ಇಲ್ಲವೆ ಅಪಾಶ್ರಯ ಎಂಬೀ ಐದು ವಿಷಯಗಳನ್ನು ಹಿಂದೆ ಹೇಳಿದ ಐದಕ್ಕೆ ಸೇರಿಸಿದರೆ ದಶಲಕ್ಷಣಗಳಾಗುತ್ತವೆ.
ಇನ್ನೊಂದು ಪಾಠದ ಪ್ರಕಾರ ಸರ್ಗ, ವಿಸರ್ಗ, ವೃತ್ತಿ, ರಕ್ಷೆ, ಅಂತರ, ವಂಶ, ವಂಶಾನುಚರಿತ, ಸಂಸ್ಥೆ, ಹೇತು ಮತ್ತು ಅಪಾಶ್ರಯಗಳು ದಶಲಕ್ಷಣಗಳು. ಬ್ರಹ್ಮನ ಐಶ್ವರ್ಯವರ್ಣನೆ, ವಿಷ್ಣುವಿನ ಮಾಹಾತ್ಮ್ಯದ ವಿವರಣೆ, ಸೂರ್ಯ, ರುದ್ರಾದಿಗಳ ಶಕ್ತಿ ವೈಭವದ ಉಲ್ಲೇಖ, ಸೃಷ್ಟಿಸ್ಥಿತಿಲಯಗಳ ನಿರೂಪಣೆ ಮತ್ತು ಚತುರ್ವಿಧ ಪುರಾಷಾರ್ಥಗಳ ಪ್ರತಿಪಾದನೆ ಇವು ಪುರಾಣಪ್ರಪಂಚಕ್ಕೆ ಸೇರುತ್ತವೆ ಯೆಂದುಸೇರುತ್ತವೆಯೆಂದು ಹೇಳಿ ಮತ್ಸ್ಯಪುರಾಣ ಪುರಾಣ ವಿಷಯಗಳ ವೈವಿಧ್ಯವನ್ನು ಹೆಚ್ಚಿಸಿದೆ. ಆದರೆ ಇಷ್ಟಕ್ಕೂ ಪುರಾಣದ ವಿಷಯ ವ್ಯಾಪ್ತಿ ಮುಗಿಯಿತೆನ್ನಲಾಗದು. ಭಾರತ ಮಹಾಭಾರತವಾಗಿ ಬೆಳೆದಂತೆ ಪ್ರತಿಯೊಂದು ಪುರಾಣವೂ ಕಾಲಕಾಲಕ್ಕೆ ಹೊಸ ಹೊಸ ವಿಷಯಗಳನ್ನೊಳ ಗೊಳ್ಳುತ್ತವಿಷಯಗಳನ್ನೊಳಗೊಳ್ಳುತ್ತ, ಹಳೆಯ ವಿಷಯಗಳನ್ನು ಇಟ್ಟುಕೊಳ್ಳುತ್ತ ಅಥವಾ ಕಳೆದುಕೊಳ್ಳುತ್ತ, ಇಲ್ಲವೆ ಬದಲು ಮಾಡಿಕೊಳ್ಳುತ್ತ, ತಿದ್ದಿಕೊಳ್ಳುತ್ತ ಬೆಳೆದುಬಂದ ಗ್ರಂಥವಾಗಿದೆ. ಒಟ್ಟಿನಲ್ಲಿ ಪುರಾಣ ವೆಂದರೆ ಹಳಗತೆ, ಐತಿಹ್ಯ, ಪರಂಪರೆಯ ಇತಿಹಾಸ ಮುಂತಾದವನ್ನೊಳಗೊಂಡ ಕಥನ ಕವನ. ಪುರಾತನವಾದರೂ ಅತಿಪ್ರಾಚೀನವಲ್ಲದ ಮತ್ತು ಸಾಂಪ್ರದಾಯಿಕ ಹಾಗೂ ಈಚಿನ ಸನಾತನ ಸಂಸ್ಕೃತಿಯ ಪರಂಪರೆಯೇ ಪುರಾಣ.
ಹದಿನೆಂಟು ಪುರಾಣಗಳ ಹೆಸರನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಈ ಶ್ಲೋಕ ನೆರವಾಗುತ್ತದೆ:
* ಮಧ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಂ|
೨೭ ನೇ ಸಾಲು:
5. ಮತಪಂಥಗಳ ಪ್ರಚಾರಕ್ಕೆ ಅಗ್ರಪ್ರಾಶಸ್ತ್ಯವನ್ನೀಯುವ ಲಿಂಗ, ವಾಮನ, ಮಾರ್ಕಂಡೇಯಗಳದ್ದು ಪಂಚಮವರ್ಗ. ಲಿಂಗಪುರಾಣ ಲಿಂಗಪೂಜೆಯನ್ನೂ ವಾಮನಪುರಾಣ ಶೈವವ್ರತಗಳನ್ನೂ ಮಾರ್ಕಂಡೇಯಪುರಾಣ ದೇವೀ ಮಾಹಾತ್ಮ್ಯವನ್ನೂ ಎತ್ತಿ ಹಿಡಿದಿವೆ.
6. ಮೂಲರೂಪವನ್ನು ಗುರುತಿಸಲು ಅಸಾಧ್ಯವಾಗುವಷ್ಟು ಪರಿಷ್ಕರಣ ಹೊಂದಿದ ವರಾಹ, ಕೂರ್ಮ, ಮತ್ಸ್ಯಪುರಾಣಗಳು ಬಹಳ ಹಳೆಯವೆಂದು ತೋರುತ್ತದೆ. ವಿಷ್ಣುವಿನ ವರಾಹಾವತಾರ ಒಂದನೆಯದರ ಅರೆವಾಸಿಯಷ್ಟನ್ನೂ ಮತ್ಸ್ಯಾವತಾರ ಎರಡನೆಯದರ ಅರ್ಧದಷ್ಟನ್ನೂ ಕೂರ್ಮಾವತಾರ ಎರಡನೆಯದರ ಒಂದನೆಯ ಎಂಟರಷ್ಟನ್ನೂ ಹೇಳಿವೆ.
 
==ಪುರಾಣಗಳ ಹೇಳಿಕೆಗಳಂತೆ ಪುರಾಣಗಳ ಹುಟ್ಟು ವಿವಿಧ==
*ವೇದಗಳನ್ನು ವಿಭಜಿಸಿ ತನ್ನ ನಾಲ್ವರು ಶಿಷ್ಯರಿಗೆ ಹಂಚಿಕೊಟ್ಟ ಮೇಲೆ ವೇದವ್ಯಾಸಋಷಿ ಕತೆ, ಜೀವನವೃತ್ತಾಂತ, ಗೀತ ಮುಂತಾದವುಗಳಿಂದ ಕೂಡಿದ ಪುರಾಣ ಸಂಹಿತೆಯನ್ನು ಮಾಡಿ, ಅದನ್ನು ತನ್ನ ಐದನೆಯ ಶಿಷ್ಯನಾದ ಲೋಮಹರ್ಷಣ ಸೂತನಿಗೆ ಕಲಿಸಿದ. ಆತ ಅದನ್ನು ಆರುಪಾಠಗಳನ್ನಾಗಿ ಮಾಡಿ ಆರುಜನ ಶಿಷ್ಯರಿಗೆ ಹೇಳಿಕೊಟ್ಟ. ಅವರಲ್ಲಿ ಮೂವರು ಮಿಕ್ಕ ಪುರಾಣಾಂಶಗಳನ್ನು ಕಲೆಹಾಕಿದರು-ಎಂಬುದು ವಿಷ್ಣುಪುರಾಣದ ಹೇಳಿಕೆ.
"https://kn.wikipedia.org/wiki/ಅಷ್ಟಾದಶ_ಪುರಾಣಗಳು" ಇಂದ ಪಡೆಯಲ್ಪಟ್ಟಿದೆ