ಗಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧೪ ನೇ ಸಾಲು:
 
==2 ಬಿಚ್ಚು ಅಥವಾ ತೆರೆಗಾಯಗಳು==
ಬಿಚ್ಚು ಅಥವಾಾಅಥವಾ ತೆರೆಗಾಯಗಳಲ್ಲಿ ಚರ್ಮದ ಅಥವಾಾಅಥವಾ ಲೋಳೆಪೊರೆಯ ಅವಿಚ್ಛಿನ್ನತೆಗೆ ತಡೆಯುಂಟಾಗಿ ಒಳಭಾಗದ ಮೃದು ಅಂಗಾಂಶಗಳಿಗೆ ಹಾನಿ ತಗಲುತ್ತದೆ. ಇದರ ತೀವ್ರತೆ ಪೀಡಕವಸ್ತುವಿನ ಗುಣ ಮತ್ತು ಬಲವನ್ನು ಅವಲಂಬಿಸಿರುತ್ತದೆ. ಹಾನಿಗೆ ಒಳಗಾದ ಮಾಂಸಖಂಡದ ತಂತುಗಳ ರಕ್ತಸಂಚಾರಕ್ಕೆ ಅಡ್ಡಿಯುಂಟಾಗಿ ಅವು ತಮ್ಮ ಸಂಕುಚನ ಸಾಮರ್ಥ್ಯ ಮತ್ತು ಸೋಂಕು ನಿರೋಧಕ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತವೆ. ಅಲ್ಲದೆ ಅವಾಯುಶ್ವಸನ ಜೀವಿಗಳ ಬೆಳೆವಣಿಗೆಗೆ ಇವು ಉತ್ತೇಜನಕಾರಿಯಾಗಿರುತ್ತವೆ. ತತ್ಕ್ಷಣವೇ ಉರಿತದ ಕ್ರಿಯೆ ಪ್ರಾರಂಭ ವಾಗಿ ಶರೀರ ತನ್ನ ರಕ್ಷಣೆಗೆ ತೊಡಗುತ್ತದೆ. ಸ್ರಾವದಿಂದಾಗಿ ಊತ ಕಾಣಿಸಿಕೊಳ್ಳುತ್ತದೆ. ಊತ ಕೆಲವು ಸಲ ವಿಪರೀತವಾಗಿ ಆ ಅಂಗದ ರಕ್ತ ಚಲನೆಗೆ ತಡೆಯುಂಟಾಗಬಹುದು. ಚರ್ಮ ಅಶುದ್ಧವಾಗಿದ್ದು ದೂಳಿನ ಕಣಗಳು ಗಾಯದೊಳಕ್ಕೆ ಪ್ರವೇಶಿಸುತ್ತವೆ. ಗಾಯ ಉಂಟಾದ ಮೇಲೆ ಆರರಿಂದ ಹನ್ನೆರಡು ಗಂಟೆಯವರೆಗೆ ಈ ಕ್ರಿಮಿಗಳು ಹಾನಿಗೆ ಒಳಗಾದ ಅಂಗಾಂಶದ ಮೇಲೆಯೇ ಇದ್ದು ಇನ್ನೂ ನಂಜನ್ನು ಉತ್ಪತ್ತಿ ಮಾಡಿರುವುದಿಲ್ಲ. ಈ ಅವಧಿ ಕಳೆದ ಬಳಿಕ ಗಾಯ ಸೋಂಕಿಗೊಳಗಾಗಿದೆ ಎಂದರ್ಥ.
 
ಕಚ್ಚುಗಾಯ ಸಾಮಾನ್ಯವಾಗಿ ಗಾಜಿನಚೂರು, ಚಾಕು ಮೊದಲಾದ ಹರಿತವಾದ ವಸ್ತುಗಳಿಂದ ಉಂಟಾಗುತ್ತದೆ. ಅಪುರ್ವವಾಗಿ ನೆತ್ತಿಯ ಬಿಗಿಗೊಂಡ ಚರ್ಮವಿರುವ ಭಾಗದಲ್ಲಿ ಮೊಂಡು ಆಯುಧ ಸಹ ಕಚ್ಚುಗಾಯವನ್ನು ಉಂಟುಮಾಡಬಲ್ಲದು. ಕಚ್ಚುಗಾಯದಲ್ಲಿ ಬಿರುಕು ಕಾಣಿಸುತ್ತದೆ. ಇದರ ಉದ್ದ ಆಳಕ್ಕಿಂತ ಹೆಚ್ಚು. ಗಾಯದ ಅಂಚುಗಳು ಕ್ರಮವಾಗಿರುತ್ತವೆ. ರಕ್ತಸ್ರಾವ ಹೆಚ್ಚಾಗಿದ್ದು, ಸಂವೇದನ ನರಗಳು ಕತ್ತರಿಸಿಹೋಗುವುದರಿಂದ ನೋವಿರುತ್ತದೆ. ಸೋಂಕು ತಗಲಿರದಿದ್ದಲ್ಲಿ ಗಾಯದ ಅಂಚುಗಳನ್ನು ಸೇರಿಸಿದಾಗ ಅವು ಸರಿಯಾಗಿ ಕೂಡಿಕೊಳ್ಳುತ್ತವೆ.
೨೧ ನೇ ಸಾಲು:
ಸೂಜಿ ಮೊದಲಾದ ಹರಿತವಾದ ಮೊನೆಯುಳ್ಳ ವಸ್ತುಗಳಿಂದ ಇರಿತ ಮತ್ತು ಚುಚ್ಚುಗಾಯಗಳು ಉಂಟಾಗುತ್ತವೆ. ಇವು ಹೊರನೋಟಕ್ಕೆ ಸಣ್ಣವಾಗಿದ್ದರೂ ಅನ್ಯವಸ್ತುಗಳು ಅಥವಾಾ ಸೋಂಕು ಇವುಗಳೊಳಕ್ಕೆ ಪ್ರವೇಶಿಸಬಹುದು; ಒಳಾಂಗಗಳಿಗೆ ಹಾನಿಯುಂಟಾಗಿದ್ದು ಅದನ್ನು ಸುಲಭವಾಗಿ ತಿಳಿಯಲು ಸಾಧ್ಯವಾಗದೆ ಹೋಗಬಹುದು. ಯಾವುದೇ ತೊಡಕಿಲ್ಲದಿದ್ದಲ್ಲಿ ಈ ಚುಚ್ಚುಗಾಯದಿಂದ ಉಂಟಾಗುವ ರಕ್ತಸ್ರಾವ ಮತ್ತು ನೋವು ಕಡಿಮೆಯಾಗಿದ್ದು ಬೇಗನೇ ಗುಣವಾಗುತ್ತದೆ. ಅವು ಸೋಂಕಿಗೊಳಗಾದಾಗ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬೇಕಾಗುತ್ತದೆ.
 
ಹಾವಿನ ಕಡಿತವೂ ಒಂದು ಬಗೆಯ ಚುಚ್ಚುಗಾಯವೇ. ಊತ, ನೋವು, ವಿವರ್ಣತೆ, ಮೂರ್ಛೆ, ನಾಡಿಮಿಡಿತ ಕ್ಷೀಣವಾಗುವುದು, ಕಣ್ಣುಪಾಪೆ ಅಗಲ ಗೊಳ್ಳುವುದು-ಇವು ಇದರ ಮುಖ್ಯ ಲಕ್ಷಣಗಳು. ಉಗ್ರಪರಿಸ್ಥಿತಿಯಲ್ಲಿ ನರಗಳು ಮತ್ತು ಸ್ನಾಯುಗಳು ನಿಶ್ಚೇತನಗೊಂಡು ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸಬಹುದು. ಕಡಿದ ಜಾಗಕ್ಕೆ ತೀವ್ರವಾದ ಚಿಕಿತ್ಸೆ ಮಾಡಬೇಕು. ಗಾಯದಿಂದ ಕೊಂಚ ಮೇಲಕ್ಕೆ ಕಟ್ಟನ್ನು ಕಟ್ಟಿ, ಗಾಯವನ್ನು ಕೊಯ್ದು ರಕ್ತಸ್ರಾವವಾಗಲು ಬಿಡಬೇಕು. ಅನಂತರ ಅಮೋನಿಯ ಅಥವಾಾಅಥವಾ ಹೈಡ್ರೊಜನ್ ಪೆರಾಕ್ಸೈಡಿನಿಂದ ತೊಳೆಯಬೇಕು. ಬ್ರಾಂಡಿ ಮತ್ತು ಹೃದಯೋತ್ತೇಜಕಗಳನ್ನು ಕೊಡಬೇಕು. ಹಾವು ಕಚ್ಚಿದ ಒಂದು ಗಂಟೆಯೊಳಗೆ ವಿಷನಿರೋಧಕಗಳನ್ನು ಕೊಟ್ಟಲ್ಲಿ ಒಳ್ಳೆಯ ಪರಿಣಾಮ ಕಾಣಿಸುತ್ತದೆ.
ಜೇನು, ಕಣಜ, ಸೊಳ್ಳೆ, ಚೇಳು, ಮುಂತಾದವುಗಳ ಕಡಿತದಿಂದ ಸೋಂಕು ರೋಗಗಳು ಹರಡಬಹುದು. ನಾಲಿಗೆ ಮತ್ತು ಗಂಟಲಲ್ಲಿ ಇವು ಕಚ್ಚಿದಾಗ ಊತವುಂಟಾಗಿ ಜೀವಕ್ಕೇ ಅಪಾಯ ಒದಗಬಹುದು. ಕೊಂಡಿ ಸೇರಿದ್ದಲ್ಲಿ ಅದನ್ನು ಹೊರತೆಗೆದು ಕ್ಷಾರವಸ್ತುಗಳಿಂದ ಕಟ್ಟುಪಟ್ಟಿಯನ್ನು ಕಟ್ಟಿದಲ್ಲಿ ಗಾಯ ಗುಣವಾಗುತ್ತದೆ.
 
ಹರಿಗಾಯಗಳು ಯುದ್ಧರಂಗದಲ್ಲಿ ಆಗಬಹುದು ಇಲ್ಲವೇ ಯಂತ್ರಗಳಿಂದ ಆಗಬಹುದು. ಸಿಡಿಯುವ ಅಥವಾಾಅಥವಾ ಹರಿಯುವ ಶಕ್ತಿಗಳಿಂದ ಈ ವಿಧವಾದ ಗಾಯಗಳು ಉಂಟಾಗುವುದರಿಂದ ಇವು ಆಕಾರರಹಿತವಾಗಿರುತ್ತವೆ. ಸಾಮಾನ್ಯವಾಗಿ ಚರ್ಮ ಹರಿದು ಒಳಭಾಗಕ್ಕೆ ಹೆಚ್ಚು ಪೆಟ್ಟಾಗಿರುತ್ತದೆ. ಗಾಯದ ಅಂಚುಗಳು ಚಿಂದಿಚಿಂದಿಯಾಗಿ, ನೇರಳೆ ಬಣ್ಣದವಾಗಿರುತ್ತವೆ. ಚರ್ಮದ ಕೆಳಭಾಗದಲ್ಲಿರುವ ಕೊಬ್ಬು, ಆಳದಲ್ಲಿರುವ ತಂತುರೂಪದ ಅಂಗಾಂಶದ ಕೋಶಗಳು ಮತ್ತು ಮಾಂಸಖಂಡಗಳು ಹಾನಿಗೊಳಗಾಗಿ ಊದಿಕೊಳ್ಳುತ್ತವೆ. ಸಾಮಾನ್ಯವಾಗಿ ರಕ್ತ ನಾಳಗಳಲ್ಲಿ ಹೆಪ್ಪುಗಟ್ಟುವುದರಿಂದ ಅದರ ಸ್ರಾವ ಹೆಚ್ಚಾಗಿರುವುದಿಲ್ಲ. ಹರಿಗಾಯದ ಬಾಯಿಯನ್ನು ಸಾಮಾನ್ಯವಾಗಿ ರಕ್ತದ ಗೆಡ್ಡೆಗಳು ಮುಚ್ಚಿರುತ್ತವೆ. ನರಗಳಿಗೆ ಹಾನಿ ಉಂಟಾದಲ್ಲಿ ಸಂವೇದನ ಸಾಮರ್ಥ್ಯ ಕುಗ್ಗುತ್ತದೆ. ಈ ಬಗೆಯ ಗಾಯಗಳಲ್ಲಿ ಸೋಂಕು ಖಚಿತ.
ಕೆಲವು ಭೇದಕ ಗಾಯಗಳಿಗೆ ಪ್ರವೇಶದ್ವಾರ ಮಾತ್ರ ಇರುತ್ತದೆ. ಇವು ಕಚ್ಚು, ಚುಚ್ಚು ಅಥವಾಾಅಥವಾ ಹರಿಗಾಯಗಳಾಗಿರಬಹುದು. ಇವು ಒಳಗಿನ ಅಂಗಗಳಿಗೆ ಹೆಚ್ಚು ಅಪಾಯವನ್ನು ಉಂಟುಮಾಡುತ್ತವೆ. ಅನೇಕ ಯುದ್ಧಗಾಯಗಳು ಈ ಬಗೆಯವು.
ತೂತು ಕೊರೆದು ಹೊರಹಾಯುವ ಭೇದಕಗಾಯಗಳಿಗೆ ಪ್ರವೇಶ, ನಿರ್ಗಮನ ಗಳೆರಡೂ ಉಂಟು. ಇಂಥ ಗಾಯಗಳಲ್ಲಿ ಅನ್ಯವಸ್ತುಗಳು ಶರೀರದಲ್ಲಿ ಉಳಿಯುವುದಿಲ್ಲ. ಸಿಡಿತದಿಂದ ಉಂಟಾಗುವ ಗಾಯಗಳಲ್ಲಿ ಸ್ಪಷ್ಟವಾದ ಯಾವುದೇ ಬಾಹ್ಯವಸ್ತು ಅಂಗಾಂಶವನ್ನು ಪ್ರವೇಶಿಸಿರುವುದಿಲ್ಲ.
 
"https://kn.wikipedia.org/wiki/ಗಾಯ" ಇಂದ ಪಡೆಯಲ್ಪಟ್ಟಿದೆ