ಗಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಅಥವ → ಅಥವಾ (13) using AWB
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
 
==ಗಾಯ==
ಅಂಗಾಂಶಗಳ ಅವಿಚ್ಛಿನ್ನತೆಗೆ ಉಂಟಾಗುವ ತಡೆ (ವೂಂಡ್). ಕೆಲವರು ಇದನ್ನು ಸಮರಕ್ಕೆ ಮತ್ತು ಶಾಂತಿಗೆ ಸಂಬಂಧಿಸಿದ ಗಾಯ ಎಂಬ ಎರಡು ಬಗೆಗಳಾಗಿ ವಿಂಗಡಿಸಿ ಇವು ಪರಸ್ಪರ ವಿಭಿನ್ನವಾದವುಗಳೆಂದು ಪರಿಗಣಿಸುವುದುಂಟು. ಆದರೆ ಇವುಗಳ ರೋಗಲಕ್ಷಣಗಳಲ್ಲಿ ಮತ್ತು ಚಿಕಿತ್ಸೆಯಲ್ಲಿ ವ್ಯತ್ಯಾಸವೇನಿಲ್ಲ. ಹೀಗೆ ಇವನ್ನು ಬೇರ್ಪಡಿಸುವುದರಲ್ಲಿ ಯಾವ ಸ್ಪಷ್ಟ ಉದ್ದೇಶವನ್ನೂ ಸಾಧಿಸಿದಂತಾಗುವುದಿಲ್ಲ. ಈ ಕೆಳಗಿನ ವರ್ಗೀಕರಣ ಇವೆರಡನ್ನೂ ಒಳಗೊಳ್ಳುತ್ತದೆ- 1 ಮುಚ್ಚುಗಾಯಗಳು ಅಥವಾಾಅಥವಾ ನಿರ್ಭೇದಕ ಗಾಯಗಳು: ಜಜ್ಜುಗಾಯ, ರಕ್ತಹೆಪ್ಪುಗಟ್ಟುವಿಕೆ, ಉಜ್ಜುಗಾಯ; 2 ಬಿಚ್ಚು ಅಥವಾಾಅಥವಾ ತೆರೆಗಾಯಗಳು ಅಥವಾಾಅಥವಾ ಭೇದಕ ಗಾಯಗಳು: ಕಚ್ಚು ಇರಿತ, ಚುಚ್ಚು, ಹರಿಯುವಿಕೆ, ಹೊರಗಾಣಿಸದ ಸರಳಭೇದಕ ಗಾಯ, ತೂತುಗೊರೆದು ಹೊರಹಾಯುವ ಭೇದಕ ಗಾಯ, ಚೂರು ಚೂರಾಗುವಿಕೆ ಅಥವಾಾ ಸಿಡಿಯುವಿಕೆ.
 
==ಮುಚ್ಚುಗಾಯಗಳು==
ಮುಚ್ಚುಗಾಯಗಳು [[ಚರ್ಮ]]ದ ಪುರ್ಣ ಪದರವನ್ನು ಭೇದಿಸಿರುವುದಿಲ್ಲ. ಒರಟಾದ ಆಯುಧದಿಂದ ಬಲವಾಗಿ ಹೊಡೆದಾಗ ಜಜ್ಜು ಗಾಯ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಒಡೆದು ಹೋಗುವುದಲ್ಲದೆ ಚರ್ಮದ ಕೆಳಭಾಗದಲ್ಲಿರುವ ಮೃದುವಾದ ಅಂಗಾಂಶಗಳಿಗೆ ಅನೇಕ ಬಗೆಯ ಹಾನಿ ಉಂಟಾಗುತ್ತದೆ. ರಕ್ತನಾಳಗಳಿಂದ ಹೊರಹರಿದ ರಕ್ತ ಚರ್ಮದೊಳಗೆ ಪ್ರವೇಶಿಸಿದಾಗ ಚರ್ಮ ವಿವರ್ಣವಾಗುತ್ತದೆ. ನೋವು, ಊತ, ವಿವರ್ಣತೆಗಳು ಜಜ್ಜುಗಾಯದ ಚಿಹ್ನೆಗಳು. ಹಾನಿಗೆ ಒಳಗಾದ ಅಂಗಾಂಶಕ್ಕೆ ಅನುಗುಣವಾಗಿ ನೋವು ಮತ್ತು ಊತಗಳು ವಿಪರ್ಯಯವಾಗುತ್ತವೆ. ಕಣ್ಣುರೆಪ್ಪೆ ಮತ್ತು ವೃಷಣಕೋಶಗಳಂತಹ ಸಡಿಲಚರ್ಮವುಳ್ಳ ಭಾಗಗಳಿಗೆ ಜಜ್ಜುಗಾಯ ಉಂಟಾದಾಗ ಊತ ಜಾಸ್ತಿಯಾಗಿದ್ದರೂ ನೋವು ಕಡಿಮೆ ಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಬೆರಳುಗಳಿಗೆ ಅಥವಾಾ ನೆತ್ತಿಗೆ ಗಾಯವಾದಾಗ ಊತ ಕಡಿಮೆಯಾಗಿ ನೋವು ಹೆಚ್ಚಾಗಿರುತ್ತದೆ. ಕೆಂಪುರಕ್ತಕಣಗಳು ಒಡೆದು ಹೀಮೋಗ್ಲಾಬಿನ್ ಬಿಡುಗಡೆಯಾಗುವುದರಿಂದ ವಿವರ್ಣತೆಯುಂಟಾಗುತ್ತದೆ. ಇದು ಮೊದಲು ದಟ್ಟ ನೇರಳೆ ಬಣ್ಣದಾಗಿದ್ದು ಅನಂತರ ನೀಲಿ, ಕೆಂಪು, ಕಂದು, ಹಸಿರು ಬಣ್ಣಗಳಾಗಿ ಕೊನೆಯಲ್ಲಿ ಹಳದಿ ಕಲೆಯಾಗಿ 14-20 ದಿವಸಗಳೊಳಗೆ ಅದೃಶ್ಯವಾಗುತ್ತದೆ. ಹೀಮೋಗ್ಲಾಬಿನ್ ಹೀರಿಕೆಯ ಸಮಯದಲ್ಲಿ ನಡೆಯುವ ಕೆಲವು ರಾಸಾಯನಿಕ ಕ್ರಿಯೆಗಳೇ ಈ ವರ್ಣ ಬದಲಾವಣೆಗೆ ಕಾರಣ. ದೇಹದ ಒಳಪದರಗಳಲ್ಲಿ ಜಜ್ಜು ಗಾಯವಾದಾಗ ಊತ ಮತ್ತು ವಿವರ್ಣತೆಗಳು ಏಟುಬಿದ್ದ ಜಾಗದಿಂದ ದೂರದಲ್ಲಿಯೂ ಕಾಣಿಸಿಕೊಳ್ಳಬಹುದು.
"https://kn.wikipedia.org/wiki/ಗಾಯ" ಇಂದ ಪಡೆಯಲ್ಪಟ್ಟಿದೆ