ಮಹಿಷಾಸುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯಗಳನ್ನು ಸೇರಿಸಲಾಗಿದೆ.
ಲೇಖನಕ್ಕೆ ಮತ್ತಷ್ಟು ವಿಷಯಗಳನ್ನು ಸೇರಿಸಲಾಗಿದೆ.
೨ ನೇ ಸಾಲು:
[[File:Brooklyn Museum - Mahasura Attacks the Devi Folio from a Dispersed Devi Mahatmya Series.jpg|thumb|350px|This painting shows a pivotal battle between Durga and a powerful demon named Mahasura. The demon, with an animal head and purple skin, appears three times, attacking the goddess with bow and arrow, sword and shield, and trident (this weapon is shown snapped in two, a sign that he will eventually lose).]]
'''ಮಹಿಷಾಸುರ'''<ref>http://www.mysoredasara.gov.in/ಪ್ರವಾಸೋದ್ಯಮ/ಮೈಸೂರಿನ-ಪ್ರವಾಸಿ-ತಾಣಗಳು/ಚಾಮುಂಡಿ-ಬೆಟ್ಟ/</ref><ref>http://m.varthabharati.in/article/2017_09_17/94499</ref> [[ಹಿಂದೂ]] [[ಪುರಾಣ]]ಗಳನ್ವಯ ಒಬ್ಬ ಅಸುರ. ಮೈಸೂರು ಸಂಸ್ಥಾನದ ಹಿಂದಿನ ಅಧಿಪತಿ.
==ಇತಿಹಾಸ==
* ಮೈಸೂರು ಎಂಬ ಹೆಸರು ಬಂದಿರುವುದೇ ಮಹಿಷಾ ಮಂಡಲದ ಹಿನ್ನೆಲೆಯಲ್ಲಿ. ಈ ಪ್ರಾಂತ್ಯವನ್ನು ಹಿಂದೆ ಎರಮೈನಾಡು ಎಂದು ಕರೆಯಲಾಗುತ್ತಿತ್ತು. ಎರಮೈನಾಡು ಎಂದರೆ ಎಮ್ಮೆಗಳ ನಾಡು ಎಂದರ್ಥ. * ಈ ಭಾಗದಲ್ಲಿ ಇಲ್ಲಿನ ಮೂಲ ನಿವಾಸಿಗಳು ಎಮ್ಮೆ ಮತ್ತು ಹಸು ಸಾಕಾಣಿಕೆಯಲ್ಲಿ ಮುಂದಿದ್ದರೂ ಸಹಿತ ಎಮ್ಮೆಯನ್ನೆ ತಮ್ಮ ಕುಲಚಿನ್ಹೆಯನ್ನಾಗಿ ಬಳಸುತ್ತಿದ್ದರು. ಇಂದಿಗೂ ಹಳೆ ಮೈಸೂರು ಪ್ರಾಂತ್ಯದಲ್ಲಿ ಜನಸಮೂಹವು ಎಮ್ಮೆಯ ತಲೆಯ ಆಕಾರದ ಚಿತ್ರವನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಂಡಿರುತ್ತಾರೆ.
* ಆ ಮೂಲಕ ತಮ್ಮ ಮೂಲ ಪರಂಪರೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಎರಮೈನಾಡು ನಂತರ ಈ ಭೂ ಪ್ರದೇಶ ಮಹಿಷಾ ಮಂಡಲ ವಾಗಿದೆ. ಬಹುಶಃ ಮಹಿಷಾಸುರನ ಆಳ್ವಿಕೆಯ ಪ್ರಾರಂಭದ ನಡುವೆ ಎರಮೈನಾಡು ಹೋಗಿ ಮಹಿಷಾ ಮಂಡಲ ಎಂದು ಮರು ನಾಮಂಕಿತವಾಗಿರಬೇಕು.
* ಆ ನಂತರ ಮಹಿಷಾ ಮಂಡಲ ಹೆಸರು ಜಾರಿಗೆ ಬಂದಿರಬೇಕು. ಉತ್ತರದಲ್ಲಿ ಕುರು, ಪಾಂಚಾಲ, ಮಗಧ, ಕೋಸಲ, ನಾಗ ಎಂಬ ಜನಪದ ಆಳ್ವಿಕೆಯ ಕುಲಗಳಿದ್ದಂತೆ, ದಕ್ಷಿಣದಲ್ಲಿಯೂ ನಾಗ, ಚೇರ, ವೆಂಗಿ, ಮಹಿಷಾ ಮಂಡಲ ಆಳ್ವಿಕೆಯ ಕುಲಗಳಾಗಿದ್ದವು. ಮಹಿಷಾ ಮಂಡಲವು ನಾಗ ಜನರಿಂದಲೇ ಅನಂತರ ಕರೆಯಲ್ಪಟ್ಟದ್ದು.
* ಮಹಿಷಾ ಮಂಡಲದಲ್ಲಿ ಮಹಿಷಾಸುರ ಎಮ್ಮೆಯ ತಲೆಯ ಚಿನ್ಹೆಯನ್ನಿಟ್ಟುಕೊಂಡು ಆಳ್ವಿಕೆ ಮಾಡುತ್ತಿದ್ದ ರಾಜ. ಆತನ ಆಳ್ವಿಕೆಯಲ್ಲಿ ಎಲ್ಲರನ್ನೂ ಕಾಯ್ದುಕೊಳ್ಳುತ್ತಿದ್ದ. ಜನರನ್ನು ರಕ್ಷಿಸುವುದರ ಜೊತೆಗೆ ಮೂಲ ಸಂಸ್ಕೃತಿಯ ರಕ್ಷಕನೂ ಕೂಡ ಆಗಿದ್ದ.
* ಮಹಿಷಾ ಮಂಡಲವು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಪ್ರದೇಶ. ಕೆಲವರು ಮಹಿಷನನ್ನು ಬುದ್ಧಪೂರ್ವ ಎಂದು ಹೇಳುತ್ತಾರೆ. ಹಲವರು ಅಶೋಕನ ನಂತರ ಎಂದು ಕರೆಯುತ್ತಾರೆ.
* ಮಹಿಷಾಸುರನ ಆಳ್ವಿಕೆಯಲ್ಲಿ ಆರ್ಯರು ಆಗಮಿಸಿದ ನಂತರ ನಿಧಾನಗತಿಯಲ್ಲಿಯೇ ಚಲಿಸ ತೊಡಗಿದರು. ಮಹಿಷಾ ಮಂಡಲದಲ್ಲಿ ಯಾವುದೇ ವೈದಿಕ ಆಚರಣೆಗೆ ಅವಕಾಶವಿರಲಿಲ್ಲ.
* ಮಹಿಷಾ ಮಂಡಲದಲ್ಲಿ ಐದು ರೀತಿಯ ಅಮ್ಮಂದಿರು ಬರುತ್ತಾರೆ. ಶತ್ರು ಪಡೆಯ ವಿರುದ್ಧ ದಂಡೆತ್ತಿ ಹೋದವಳನ್ನು "ದಂಡಿನ ಮಾರಿ", ಕೋಟೆ ಕಾಯುತ್ತಿದ್ದವಳನ್ನು "ಕೋಟೆ ಮಾರಮ್ಮ", ಸಿಡುಬು ರೋಗಕ್ಕೆ ಗಿಡಮೂಲಿಕಿ ಔಷಧಿ ಕೊಡುತ್ತಿದ್ದವಳನ್ನು "ಸಿಡುಬು ಮಾರಮ್ಮ", ಬಂಡಿ ಏರಿ ಯುದ್ಧಕ್ಕೆ ಹೋದವಳನ್ನು "ಬಂಡಿಕಾಳಮ್ಮ", ಶತ್ರು ಪಡೆಯಿಂದ ಶೀಲ ರಕ್ಷಿಸಿಕೊಂಡವಳು ಹಾಗೂ ಕೆರೆ ಕಟ್ಟೆ ತುಂಬಿಸಲು ಪ್ರಾಣತ್ಯಾಗ ಮಾಡಿದವಳನ್ನು "ಕಟ್ಟೆ ಮಾರಮ್ಮ" ಈ ಐವರು ಪ್ರಸಿದ್ಧರು.
* ಇವರನ್ನು ನಮ್ಮ ಮೂಲನಿವಾಸಿಗಳು ಇಂದಿಗೂ ಅದರಲ್ಲಿ ಹೆಚ್ಚಾಗಿ ಗ್ರಾಮೀಣ ಜನರು ಚೌಡಮ್ಮಂದಿರು, ಚಾಮುಂಡಂಮ್ಮಂದಿರು ಎಂದು ಕರೆಯುತ್ತಾರೆ. ಆ ಸಂದರ್ಭದ ಕಾಲಘಟ್ಟದಲ್ಲಿ ಅನ್ಯಾಯದ ವಿರುದ್ಧ ಬಂಡಾಯವೇಳುವ ಹೆಣ್ಣು ಮಕ್ಕಳನ್ನು ಚಾಮುಂಡಿ ಎಂದು ಕರೆಯುತ್ತಿದ್ದ ವಾಡಿಕೆಯು ಇದೆ.
 
==ಇತಿವೃತ್ತ==
* ಮೈಸೂರು ಹಿಂದೆ 'ಮಹಿಷ ಮಂಡಲ'ವಾಗಿತ್ತು. ಮಹಿಷಾಸುರ ಇಡೀ ಮಹಿಷ ಮಂಡಲದ ಒಡೆಯನಾಗಿದ್ದ. ಅಪಾರ ಸಂಖ್ಯೆಯಲ್ಲಿ ಎಮ್ಮೆ-ಕೋಣಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡಿಕೊಂಡಿದ್ದನು.
* ಈತನ ತಂಗಿ ಮಹಿಷಿ. ಮಹಿಷ ಆಗಾಗ್ಗೆ ದೇವಲೋಕಕ್ಕೆ ಹೋಗಿ ದೇವೆಂದ್ರನಿಗೆ ಕಾಟ ಕೊಟ್ಟು ಅವನ ಸಿಂಹಾಸನಕ್ಕೆ ಕಣ್ಣು ಹಾಕಿದ್ದರಿಂದ ಕೋಪಗೊಂಡ ದೇವತೆಗಳು ಕುತಂತ್ರದಿಂದ ಚಾಮುಂಡೇಶ್ವರಿಯನ್ನು ಸೃಷ್ಟಿ ಮಾಡಿ, ಮಹಿಷನ ಸಂಹಾರಕ್ಕೆ ಕಳುಹಿಸಿ,ಅವನನ್ನು ಸಂಪೂರ್ಣ ನಾಶಗೊಳಿಸಿ ಇಡೀ ಮೈಸೂರನ್ನು ವಶಪಡಿಸಿಕೊಳ್ಳುತ್ತಾರೆ.
 
==ಪುರಾಣ ಮಾಹಿತಿ==
* ಮಹಿಷಾಸುರನ ತಂದೆ ರಂಭಾ ಅಸುರರ ರಾಜನಾಗಿದ್ದನು. ಇವನು ಎಮ್ಮೆ (ಮಹಿಷಿ)ಯ ರೂಪದಲ್ಲಿ ಶಾಪಗ್ರಸ್ಥಳಾಗಿದ್ದ ರಾಣಿಯನ್ನು ಮೋಹಿಸಿ ಅದರಿಂದ ಮಹಿಷಾಸುರನ ಜನ್ಮವಾದುದರಿಂದ ಮಹಿಷಾಸುರನಿಗೆ ತನ್ನ ಇಚ್ಛೆಯಂತೆ ಮಾನವ ಅಥವಾ ಮಹಿಷ(ಕೋಣ)ನ ರೂಪ ತಾಳಲು ಸಾದ್ಯವಾಯಿತು.
Line ೨೨ ⟶ ೩೩:
 
==ಮಹಿಷ ಹಬ್ಬದ ಆಚರಣೆ==
* ಕಳೆದ ಐದು ವರ್ಷಗಳಿಂದ ಮಹಿಷ ಹಬ್ಬದ<ref>https://www.udayavani.com/kannada/news/ಮೈಸೂರು/238442/ಪ್ರಗತಿಪರರಿಂದ-ಮೈಸೂರಲ್ಲಿ-ಮಹಿಷ-ದಸರಾ</ref> ಆಚರಣೆ ಆರಂಭವಾಗಿದ್ದು, ಮಹಿಷಾಸುರ ರಾಕ್ಷಸನಲ್ಲ, ಮೈಸೂರಿನ ಮೂಲ ಅರಸ. ಚಾಮುಂಡೇಶ್ವರಿಯ ಮಹಿಷ ಮರ್ದಿನಿ ಕಟ್ಟುಕಥೆ ಎಂಬ ಉದ್ದೇಶದಿಂದ ಮಹಿಷ ಹಬ್ಬವನ್ನು ಆಚರಿಸಲಾಗುತ್ತಿದೆ.
* ಮೈಸೂರು ಎಂಬ ಹೆಸರು ಬಂದಿರುವುದೇ ಇದು ಮಹಿಷಾ ಮಂಡಲವಾಗಿತ್ತು ಎಂಬ ಕಾರಣಕ್ಕೆ. ಇಲ್ಲೊಬ್ಬ ಆದಿದೊರೆ ಮಹಿಷಾಸುರ ಮಹಿಷಾ ಮಂಡಲವನ್ನು ಆಳ್ವಿಕೆ ಮಾಡಿದ ಪರಂಪರೆಯಿಂದಲೇ ಮೈಸೂರು ಖ್ಯಾತಿಗೊಳಗಾಗಿದೆ.
* ಆದರೆ ಇದೇ ಮಹಿಷಾಸುರನನ್ನು ಅವನೊಬ್ಬ ದುಷ್ಟ, ಕಾಮಾಂಧ, ಜನವಿರೋಧಿ ಈತನ ಸಂಹಾರಕ್ಕಾಗಿಯೇ ಪಾರ್ವತಿಯು ಚಾಮುಂಡೇಶ್ವರಿಯ ಅವತಾರವೆತ್ತಿ ಬಂದಳು. ಆಕೆ ಕೊಂದದ್ದು ಜನರಿಗಾಗಿ, ಜನಧರ್ಮಕ್ಕಾಗಿ ಎಂಬಂತೆ ಹೇಳಲಾಗಿದೆ. ಇದರಲ್ಲಿ ಯಾವುದು ಸುಳ್ಳು? ಯಾವುದು ಕಪೋಕಲ್ಪಿತವಾಗಿದೆ? ಎಂಬುದನ್ನು ಅರಿತು ನಿಜವಾದ ಮಹಿಷಾನನ್ನು ಜನರ ಬಳಿ ಕರೆದೊಯ್ಯಬೇಕಿದೆ.
*
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಮಹಿಷಾಸುರ" ಇಂದ ಪಡೆಯಲ್ಪಟ್ಟಿದೆ