ಎಪಿಗ್ರಾಫಿಯ ಕರ್ನಾಟಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ ಸೃಷ್ಠಿ
( ಯಾವುದೇ ವ್ಯತ್ಯಾಸವಿಲ್ಲ )

೦೧:೫೪, ೨೯ ಮೇ ೨೦೧೮ ನಂತೆ ಪರಿಷ್ಕರಣೆ

ಎಪಿಗ್ರಾಫಿಕಾ ಕರ್ನಾಟಿಕಾ ಎಂಬುದು ಸ್ವಾತಂತ್ರ್ಯಪೂರ್ವದ ಮೈಸೂರು ಸಂಸ್ಥಾನದ ಬಗೆಗಿನ ಐತಿಹಾಸಿಕ ಪುಸ್ತಕಗಳ ಸಂಗ್ರಹ. ಇದನ್ನು ಸಂಗ್ರಹಿಸಿದವರು ಮೈಸೂರು ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಬೆಂಜಮಿನ್ ಲೆವಿಸ್ ರೈಸ್ ಅಥವಾ ಬಿ.ಎಲ್.ರೈಸ್ ಅವರು. ೧೮೯೪ರಿಂದ ೧೯೦೫ ರ ನಡುವಿನ ಕಾಲದಲ್ಲಿ ಹನ್ನೆರಡು ಸಂಪುಟಗಳಲ್ಲಿ ಈ ಪುಸ್ತಕಗಳನ್ನು ಪ್ರಕಟಿಸಲಾಯಿತು. ಈ ಪುಸ್ತಕಗಳು ಹಳೇ ಮೈಸೂರು ಪ್ರಾಂತ್ಯದಲ್ಲಿ ದೊರಕಿದ್ದ ಸುಮಾರು ೯೦೦೦ ತಾಮ್ರ ಮತ್ತು ಶಿಲಾಶಾಸನಗಳಲ್ಲಿರುವ ಮಾಹಿತಿಯನ್ನು ಒಳಗೊಂಡಿದೆ. ಮೂಲ ಬರಹಗಳ ಜೊತೆಗೆ ಇದರಲ್ಲಿ ಇಂಗ್ಲೀಷ್ ಮತ್ತು ರೋಮನ್ ಅನುವಾದಗಳನ್ನೂ ಕೊಡಲಾಗಿದೆ.

ಇತಿಹಾಸ

ಬೆಂಜಮಿನ್ ಲೆವಿಸ್ ರೈಸ್ ಅವರು ೧೮೯೭ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು. ಇಂಗ್ಲೇಂಡಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ ಬಳಿಕ ಭಾರತಕ್ಕೆ ಮರಳಿದ ರೈಸ್ ಅವರು ಬೆಂಗಳೂರಿನ ಸೆಂಟ್ರಲ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಲು ಪ್ರಾರಂಬಿಸಿದರು. ಅವರನ್ನು ಇಲ್ಲಿನ ಶಿಕ್ಷಣ ಕಮಿಷನ್ನಿನ ಕಾರ್ಯದರ್ಶಿಯನ್ನಾಗಿಯೂ ನೇಮಿಸಲಾಯ್ತು. ಶಿಕ್ಷಣ ಇನ್ಸಪೆಕ್ಟರ್ ಆಗಿ ದೇಶಾದ್ಯಂತ ತಿರುಗಾಡುವ ಅವಕಾಶ ಸಿಕ್ಕಾಗ ಅವರು ವಿಭಿನ್ನ ಶಿಲಾಶಾಸನಗಳನ್ನು ಕಂಡರು. ಇದರಿಂದ ಶಾಸನಗಳ ಬಗ್ಗೆ ಆಸಕ್ತಿ ತಳೆದ ಅವರು ಆ ಶಾಸನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುವಾದಿಸಲು ಮತ್ತು ತಮ್ಮ ಸಹಾಯಕರ ಸಹಾಯ ಪಡೆದರು. ೧೮೮೬ ರ ಸುಮಾರಿಗೆ ಈ ತರಹದ ಸುಮಾರು ೯೦೦೦ ಶಾಸನಗಳನ್ನು ಅರ್ಥೈಸಿ ಅನುವಾದಿಸಲಾಗಿತ್ತು. ೧೮೮೬ರಲ್ಲಿ ಬ್ರಿಟಿಷರು ಇವರನ್ನು ಪುರಾತತ್ವ ಇಲಾಖೆಯ ನಿರ್ದೇಶಕರನ್ನಾಗಿ ಮಾಡಿದಾಗ ಇವರು ತಮ್ಮ ಕೆಲಸಗಳನ್ನು ಮುದ್ರಿಸಲು ಆರಂಭಿಸಿದರು. ಆಗ ಪ್ರಕಟವಾದ ಹನ್ನೆರಡು ಸಂಪುಟಗಳೇ ಎಪಿಗ್ರಾಫಿಕಾ ಕರ್ನಾಟಿಕಾ. ಈ ಸಂಪುಟಗಳಲ್ಲಿರುವ ಮಾಹಿತಿಯನ್ನಾಧರಿಸಿ ರೈಸ್ ಅವರು The History of Mysore and Coorg ಎನ್ನುವ ಪುಸ್ತಕವನ್ನೂ ಬರೆದಿದ್ದಾರೆ.

ಪ್ರಕಟಣೆ

ಎಫಿಗ್ರಾಫಿಕಾ ಕರ್ನಾಟಿಕಾದಲ್ಲಿ ೩ನೇ ಶತಮಾನದಿಂದ ೧೯ನೇ ಶತಮಾನದವರೆಗಿನ ಶಾಸನಗಳ ಸಂಗ್ರಹವಿದೆ. ಮೈಸೂರು ಪ್ರಾಂತ್ಯವನ್ನಾಳಿದ ಚೋಳರು, ಕದಂಬರು, ಪಶ್ಚಿಮದ ಚಾಲುಕ್ಯರು, ಹೊಯ್ಸಳರು, ವಿಜಯನಗರದರಸರು, ಹೈದರ್ ಆಲಿ , ಟಿಪ್ಪು ಮತ್ತು ಮೈಸೂರು ಒಡೆಯರ್ಗಳಿಗೆ ಸಂಬಂಧಿಸಿದ ಶಾಸನಗಳು ಇದರಲ್ಲಿವೆ. ಇದರಲ್ಲಿರುವ ಹೆಚ್ಚಿನ ಶಾಸನಗಳನ್ನು ಕನ್ನಡದಲ್ಲೇ ಬರೆಯಲಾದರೂ ಕೆಲವನ್ನು ತಮಿಳು, ಸಂಸ್ಕೃತ, ತೆಲುಗು, ಉರ್ದು, ಪರ್ಶಿಯನ್ ಭಾಷೆಗಳಲ್ಲೂ ಬರೆಯಲಾಗಿದೆ.

ಸಂಪುಟಗಳು

ಇದರಲ್ಲಿರುವ ಹನ್ನೆರಡು ಸಂಪುಟಗಳೆಂದರೆ Coorg inscriptions Inscriptions at Sravanabelagola Inscriptions in the Mysore district, Part I Inscriptions in the Mysore district, Part II Inscriptions in the Hassan district Inscriptions in the Kadur district Inscriptions in the Shimoga district, Part I Inscriptions in the Shimoga district, Part II Inscriptions in the Bangalore district Inscriptions in the Kolar district Inscriptions in the Chitaldroog district Inscriptions in the Tumkur district


ಬಾಹ್ಯ ಕೊಂಡಿಗಳು