ಸದಸ್ಯ:Lahariyaniyathi/ನನ್ನ ಪ್ರಯೋಗಪುಟ/iva braun: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇವಾ ಬ್ರಾನ್ ಪುಟ ರಚನೆ
( ಯಾವುದೇ ವ್ಯತ್ಯಾಸವಿಲ್ಲ )

೧೧:೨೮, ೨೭ ಮೇ ೨೦೧೮ ನಂತೆ ಪರಿಷ್ಕರಣೆ

ಇವಾ ಬ್ರೌನ್, (ಜನನ ೬ ಫೆಬ್ರವರಿ ೧೯೧೨, ಮ್ಯುನಿಕ್, ಜರ್ಮನಿ- ಮರಣ:ಏಪ್ರಿಲ್ ೩೦, ೧೯೪೫, ಬರ್ಲಿನ್), ಈಕೆ ಅಡೋಲ್ಫ್ ಹಿಟ್ಲರ್ನ ಪ್ರೇಯಸಿ ಮತ್ತು ಪತ್ನಿಯಾಗಿದ್ದರು . ಇವಾ ಬ್ರೌನ್ ಮಧ್ಯಮ ವರ್ಗದ ಬವೇರಿಯನ್ ಕುಟುಂಬದಲ್ಲಿ ಜನಿಸಿದರು ಮತ್ತು ಸಿಂಬಾಕ್-ಆಮ್-ಇನ್ನ್ ಕ್ಯಾಥೋಲಿಕ್ ಯಂಗ್ ವುಮೆನ್ಸ್ ಇನ್ಸ್ಟಿಟ್ಯೂಟ್ನಲ್ಲಿ ಶಿಕ್ಷಣ ಪಡೆದಳು. ಈಕೆ ೧೯೩೦ರಲ್ಲಿ ಹಿಟ್ಲರನ ಛಾಯಾಚಿತ್ರಗ್ರಾಹಕ ಹೆನ್ರಿಕ್ ಹೊಫ್ಮಾನ್ ಎಂಬುವನ ಅಂಗಡಿಯಲ್ಲಿ ಮಾರಾಟಗಾರ್ತಿಯಾಗಿ ಕೆಲಸ ಮಾಡುತಿದ್ದರು . ಇವಾ ಬ್ರೌನ್ ಛಾಯಾಗ್ರಾಹಕರಾಗಿದ್ದಳು, ಇಂದು ನಾವು ನೋಡುವ ಹಿಟ್ಲರನ ಛಾಯಾಚಿತ್ರಗಳು ಮತ್ತು ಉಳಿದಿರುವ ಇವಾ ಬ್ರೌನ್ ಸೆರೆಹಿಡಿದ ಚಿತ್ರಗಳಾಗಿವೆ. ಹಿಟ್ಲರನ ಖಾಸಗಿ ವಲಯದಲ್ಲಿ ಈಕೆ ಪ್ರಮುಖ ವ್ಯಕ್ತಿಯಾಗಿದ್ದರೂ ಸಹ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ.

ಬಾಲ್ಯ

ಇವಾ ಬ್ರಾನ್ ಅವರು ಮ್ಯೂನಿಚ್ನಲ್ಲಿ ಜನಿಸಿದರು ಮತ್ತು ಶಾಲಾ ಶಿಕ್ಷಕ ಫ್ರೆಡ್ರಿಕ್ "ಫ್ರಿಟ್ಜ್" ಬ್ರೌನ್ ಮತ್ತು ಫ್ರಾಂಜಿಸ್ಕ "ಫ್ಯಾನಿ" ಕ್ರೊನ್ಬರ್ಗರ್ ಎರಡನೆಯ ಮಗಳಾಗಿದ್ದರು. ಬ್ರಾನ್ ಅವರ ಪೋಷಕರು ಎಪ್ರಿಲ್ ೧೯೨೧ ರಲ್ಲಿ ವಿಚ್ಛೇದನ ಪಡೆದರು, ಬ್ರೌನ್ ಅವರು ಮ್ಯೂನಿಚ್ನಲ್ಲಿನ ಕ್ಯಾಥೊಲಿಕ್ ಲೈಸಿಯಂನಲ್ಲಿ ಮತ್ತು ಸಿಂಬಾಗ್ ಆಮ್ ಇನ್ ಎಂಬ ಇಂಗ್ಲಿಷ್ ಸಿಸ್ಟರ್ಸ್ನ ಕಾನ್ವೆಂಟ್ನಲ್ಲಿ ಒಂದು ವರ್ಷ ವಿದ್ಯಾಭ್ಯಾಸ ಮಾಡಿದರು. ತಮ್ಮ ೧೭ ನೇ ವಯಸ್ಸಿನಲ್ಲಿ ನಾಝಿ ಪಾರ್ಟಿಯ ಅಧಿಕೃತ ಫೋಟೋಗ್ರಾಫರ್ ಹೆನ್ರಿಕ್ ಹೊಫ್ಮನ್ ಜೊತೆ ಕೆಲಸ ಮಾಡಿದರು. ಆರಂಭದಲ್ಲಿ ಅಂಗಡಿ ಸಹಾಯಕ ಮತ್ತು ಗುಮಾಸ್ತಳಾಗಿ ನೇಮಕಗೊಂಡ ಆಕೆ ಕ್ಯಾಮರಾವನ್ನು ಹೇಗೆ ಬಳಸಬೇಕು ಮತ್ತು ಫೋಟೋಗಳನ್ನು ಅಭಿವೃದ್ಧಿಪಡಿಸುವುದನ್ನು ಶೀಘ್ರವಾಗಿ ಕಲಿತರು. ಅಕ್ಟೋಬರ್ ೧೯೨೯ ರಲ್ಲಿ ಮ್ಯೂನಿಚ್ನ ಹಾಫ್ಮನ್ ಸ್ಟುಡಿಯೊದಲ್ಲಿ ಹಿಟ್ಲರನನ್ನು ಭೇಟಿಯಾದರು.

ಹಿಟ್ಲರ್ನೊಡನೆ ಸಂಬಂಧ