Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೧ ನೇ ಸಾಲು:
2O), ಇದು ಗ್ರಹದ 70% ಭಾಗದಲ್ಲಿ ಸಂಯೋಜನೆಗೊಂಡಿದೆ. ನಿಸರ್ಗದಲ್ಲಿ ಇದು ದ್ರವ, ಘನ, ಮತ್ತು ಅನಿಲ ರೂಪದಲ್ಲಿ ಅಸ್ತಿತ್ವದಲ್ಲಿದೆ. ಉಷ್ಣಾಂಶ ಮತ್ತು ಒತ್ತಡ ಪ್ರಮಾಣದಲ್ಲಿ ದ್ರವ ಮತ್ತು ಅನಿಲಗಳ ನಡುವೆ ಪ್ರೇರಕ ಸಮತೋಲನವಾಗಿ ಇರುತ್ತದೆ. ಕೊಠಡಿ ತಾಪಮಾನದಲ್ಲಿ, ಅದು ವರ್ಣರಹಿತವಾಗಿರುತ್ತದೆ ಜೊತೆಗೆ ನೀಲಿ ಬಣ್ಣದ ಸುಳಿವು ಹಿಂದಿದ್ದು ರುಚಿಹೀನವಾಗಿಯೂ ಮತ್ತು ವಾಸನಾರಹಿತವಾಗಿಯೂ ಇರುವ ದ್ರವಾಗಿದೆ. ಅನೇಕ ವಸ್ತುಗಳು ನೀರಿನಲ್ಲಿ ಕರಗುತ್ತವೆ ಮತ್ತು ಸಾಮಾನ್ಯವಾಗಿ ನೀರನ್ನು ವಿಶ್ವವ್ಯಾಪಿ ದ್ರವೀಕರಣ ಮಾಡುವ ಗುಣವುಳ್ಳದ್ದು ಎಂದು ಉಲ್ಲೇಖಿಸಲಾಗುತ್ತದೆ. ಈ ಕಾರಣದಿಂದಲೇ ಪ್ರಕೃತಿಯಲ್ಲಿ ಮತ್ತು ಬಳಕೆಯಲ್ಲಿ ನೀರು ಅಶುದ್ಧವೆನ್ನಲಾಗಿದೆ ಮತ್ತು ಶುದ್ಧ ವಸ್ತುಗಳ ಶುದ್ಧತೆಯೂ ಕೂಡ ಒಂದಿಷ್ಟು ವ್ಯತ್ಯಾಸಗೊಳ್ಳುತ್ತದೆ. ಏನೇ ಆಗಲಿ, ಪೂರ್ಣವಾಗಿ ಅಲ್ಲದಿದ್ದರೂ ಕೆಲವು ಸಂಯೋಗಗಳು ಅಗತ್ಯವಾಗಿದೆ, ಇಲ್ಲದಿದ್ದಲ್ಲಿ ನೀರಲ್ಲಿ ಕರಗುವುದಿಲ್ಲ. ನೀರು ಎಂಬುದೊಂದೇ ನೈಸರ್ಗಿಕವಾಗಿ ಎಲ್ಲಾ ಮೂರು ಸಾಮಾನ್ಯವಾದ ಭೌತದ್ರವ್ಯದ ಸ್ಥಿತಿ-ಯಲ್ಲಿ ಕಂಡು ಬರುವುದು, ಬೇರೆ ರೀತಿಯಲ್ಲಿ ಕಾಣುವುದಕ್ಕಾಗಿ ರಾಸಾಯನಿಕ ಗುಣಲಕ್ಷಣಗಳು ನೋಡಬೇಕಾಗುತ್ತದೆ. ಭೂಮಿಯ ಮೇಲೆ ಜೀವಿಸುವುದಕ್ಕೆ ನೀರು ಅತ್ಯಂತ ಅಗತ್ಯ.ಮನುಷ್ಯನ ಶರೀರದಲ್ಲಿ 55% ರಿಂದ 78% ರಷ್ಟು ನೀರು ತುಂಬಿರುತ್ತದೆ.
* ಜಲ ಮಾಲಿನ್ಯ
.
ಇಂದಿನ ಜಗತ್ತಿಗೆ ಭಾರೀ ತಳಮಳದ ಸಂಗತಿ ಎಂದರೆ ಜಲ ಮಾಲಿನ್ಯ. ಈ ಜಲ ಮಾಲಿನ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳ ಸರಕಾರಗಳು ಹೆಣಗಾಡುತ್ತಿವೆ. ಹಲವಾರು ಮಲಿನ ಪದಾರ್ಥಗಳು ನೀರಿನ ಪೂರೈಕೆ ಮಾಡುವಲ್ಲಿ ಬೆದರಿಕೆಯನ್ನೇ ಒಡ್ಡುತ್ತಿವೆ. ಮಲ ಮೂತ್ರಾದಿಯಾಗಿ ಊರಿನ ರೊಚ್ಚನ್ನು ಯಾವ ಸಂಸ್ಕರಣೆಗೂ ಒಳಪಡಿಸದೇ ನಿಸರ್ಗ ದತ್ತ ಸ್ವಚ್ಛ ನೀರಿಗೆ ಹರಿ ಬಿಡುವುದು ಇವುಗಳಲ್ಲೆಲ್ಲಾ ಅತ್ಯಂತ ಭಯಾನಕ. ಜನ ಸಾಮಾನ್ಯರು ಸಾರ್ವಜನಿಕರು ಸಂಚಾರ ಮಾಡುವ ಮಾರ್ಗ,ಮುಖ್ಯ ರಸ್ತೆ,ಒಳರಸ್ತೆಗಳ ಬದಿಗಳ(ಪಕ್ಕದ)ಲ್ಲಿರುವ ಇನ್ನೂ
ಮುಚ್ಚದೆ ಇರುವ ಚರಂಡಿಗಳು,ಹಾಗೂ ಅವುಗಳಲ್ಲಿ ಉಂಟಾಗುವ,ಉತ್ಪತ್ತಿಯಾಗುವ ಕ್ರಿಮಿಗಳು ಕೀಟಗಳು,ಇವುಗಳಿಂದ ಪರಿಸರದಲ್ಲಿ ಉಂಟು ಮಾಡುವ ಭಯಾನಕ ರೋಗ ರುಜಿನಗಳಿಗೂ ಕಾರಣವಾಗಿರುವುದು ಮಾತ್ರವಲ್ಲ ಇವುಗಳಿಂದ ಉತ್ಪತ್ತಿಯಾಗುವ ಕೆಟ್ಟವಾಸನೆ(ದುರ್ನಾಥ)ಯ ಫಲವಾಗಿ ಪರಿಸರದಲ್ಲಿ ನಡೆದಾಡುವ ಸಾರ್ವಜನಿಕರ
ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅತಿಯಾಗಿ ವ್ಯಾಪಿಸಿಕೊಂಡಿರುವ ಈ ಭೀಕರ ಸಮಸ್ಯೆ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡುಬರುವುದು ಹೆಚ್ಚು.ಅಭಿವೃದ್ಧಿ ಹೊಂದದ ದೇಶಗಳಲ್ಲಂತೂ ಊರಿನ ಹೊಲಸನ್ನು ಈ ರೀತಿಯಾಗಿ ಬಿಡುಗಡೆ ಮಾಡುವುದು ಸರ್ವೇಸಾಮಾನ್ಯ; ಈ ಬಗೆಯಲ್ಲಿ ತ್ಯಾಜ್ಯ ಬಿಡುಗಡೆ ಮಾಡುವುದನ್ನು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಚೀನಾ,ಭಾರತ ಮತ್ತು ಇರಾನ್‌ಗಳೂ ರೂಢಿಸಿಕೊಂಡಿವೆ.
ಊರಿನ ಹೊಲಸು, ಜಿಗುಟು ರಾಡಿ, ಕಸ ಮತ್ತು ವಿಷಯುಕ್ತ ಪದಾರ್ಥಗಳನ್ನೂ ಚರಂಡಿಗೆ, ನೀರಿಗೆ ಎಸೆಯಲಾಗುತ್ತದೆ. ಊರಿನ ಹೊಲಸನ್ನು ಸಂಸ್ಕರಿಸಿದರೂ ಸಮಸ್ಯೆ ಮತ್ತೆ ಉದ್ಭವಿಸುತ್ತದೆ. ಸಂಸ್ಕರಣೆಯ ನಂತರ ದೊರೆಯುವ ಹೊಲಸು ಗಟ್ಟಿಗಳು ಅಥವಾ ಪುಡಿ ಪದಾರ್ಥವನ್ನು ಗುಂಡಿಗಳಲ್ಲಿ ತುಂಬಬೇಕು, ಇಲ್ಲವೇ ನೆಲದ ಮೇಲೆ ಹರಡ ಬೇಕು ಅಥವಾ ಸಮುದ್ರಕ್ಕೆ ಎಸೆಯಬೇಕು.
ಊರಿನ ಹೊಲಸಷ್ಟೇ ಅಲ್ಲದೇ ಜಮೀನುಗಳಿಂದ ಕೊಚ್ಚಿ ಹರಿದು ಬರುವ ಮಾಲಿನ್ಯ,ಚಂಡಮಾರುತದಿಂದ ಅಪ್ಪಳಿಸುವ ಭಾರೀ ಮಳೆಯಿಂದ ಹರಿದು ಬರುವ ಮಲಿನ ಪದಾರ್ಥ, ಮತ್ತು ಸರಕಾರ ಹಾಗೂ ಕೈಗಾರಿಕೆಗಳಿಂದ ರಾಸಾಯನಿಕ ತ್ಯಾಜ್ಯದ ಸುರಿತ-ಇವೆಲ್ಲವೂ ಜಲ ಮೂಲಿನ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳು.
 
ಭೂಮಿಯ ಪವಿತ್ರತೆಯಲ್ಲಿ ಪಂಚಭೂತಗಳಲ್ಲೊಂದಾದ ನೀರಿನ ಪಾತ್ರ :-
ವಿಶ್ವಕ್ಕೆ ಜಲ ಪೂರೈಕೆ ಮತ್ತು ವಿತರಣೆ :-
 
ಆಹಾರ ಮತ್ತು ನೀರು ಮಾನವನ ತಳ ಮಟ್ಟದ ಅವಶ್ಯಕತೆ. ವರ್ಷ 2002ರಿಂದ ಜಾಗತಿಕ ಮಟ್ಟದಲ್ಲಿ ಕಲೆಹಾಕಲಾಗಿರುವ ಅಂಕಿಅಂಶದ ಪ್ರಕಾರ ಪ್ರತಿ 10 ಮಂದಿಯಲ್ಲಿ:
ಅಂದಾಜು 5 ಜನರು ನೀರಿನ ಸಂಪರ್ಕ ಪಡೆದಿದ್ದಾರೆ (ತಮ್ಮ ಮನೆಯಲ್ಲಿ,ಅಂಗಳದಲ್ಲಿ ಅಥವಾ ಹೊಲದಲ್ಲಿ)
3 ಮಂದಿ ಸಂರಕ್ಷಿಸಲ್ಪಟ್ಟ ಬಾವಿ ಅಥವಾ ಬೀದಿ ನಲ್ಲಿಯಲ್ಲಿ ದೊರೆಯುವಂಥ ಇತರ ಸುಧಾರಿತ ಜಲ ಮೂಲವನ್ನು ಆಶ್ರಯಿಸಿದ್ದಾರೆ;
2 ಜನಕ್ಕೆ ಇಂಥ ಯಾವುದೇ ಸೇವೆ ಇಲ್ಲದೇ ವಂಚಿತರಾಗಿದ್ದಾರೆ;
10 ರಲ್ಲಿ 4 ಮಂದಿ ಸುಧಾರಿತ ಶೌಚಾಲಯ ಸೌಲಭ್ಯವಿಲ್ಲದೇ ಬದುಕುತ್ತಿದ್ದಾರೆ.[೩]
ವರ್ಷ 2002ರ ಭೂಶೃಂಗದಲ್ಲಿ ಪಾಲ್ಗೊಂಡ ಸರಕಾರಗಳು ಈ ಕೆಳಗಿನ ಕ್ರಿಯಾ ಯೋಜನೆಗೆ ಅಂಗೀಕಾರ ನೀಡಿದವು:
 
ವರ್ಷ 2015ರ ವೇಳೆಗೆ ಕುಡಿಯುವ ನೀರು ಸಿಕ್ಕದೇ ಪರದಾಡುತ್ತಿರುವ ಮಂದಿಗೆ ಸಮಪಾಲು ನೀಡುವುದು. ವಿಶ್ವ ಜಲ ಪೂರೈಕೆ ಮತ್ತು ಶುಚಿತ್ವದ ಮೌಲ್ಯ ಮಾಪನ ವರದಿ-2000 ([http:// www.who.int /water_sanitation _health/monitoring / globalassess/en/ ಗ್ಲೋಬಲ್ ವಾಟರ್ ಸಪ್ಲೈ ಅಂಡ್ ಸ್ಯಾನಿಟೇಷನ್ ರಿಪೋರ್ಟ್ ೨೦೦೦ = GWSSAR]) ಬಳಕೆದಾರನ ಮನೆ ಹಾಗೂ ಜಲ ಮೂಲದ ನಡುವಿನ ಅಂತರ ಒಂದು ಕಿಲೋಮೀಟರ್‌ ಒಳಗಿದ್ದು ಪ್ರತಿ ವ್ಯಕ್ತಿಗೆ ನಿತ್ಯವೂ ಕನಿಷ್ಠ 20 ಲೀಟರ್‌ ನೀರು "ಸಿಕ್ಕುವಂತಿರುವುದು ನ್ಯಾಯೋಚಿತ" ಎಂದು ವರದಿಯಲ್ಲಿ ವಿವರಿಸಲಾಗಿದೆ.
ಶೌಚಾಲಯದ ಮೂಲ ಸೌಕರ್ಯವಿಲ್ಲದ ಜನಕ್ಕೆ ಅದನ್ನು ಒದಗಿಸುವುದು. "ಶೌಚಾಲಯದ ಮೂಲ ಸೌಕರ್ಯ" ಖಾಸಗಿಯದೇ ಇರಬಹುದು ಅಥವಾ ಪಾಲುದಾರಿಕೆಯದ್ದೇ ಆಗಿರಬಹುದು, ಆದರೆ ಅದು ಮಾನವನ ಶರೀರದಿಂದ ಹೊರಬಂದಿರುವ ತ್ಯಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ.
ಸಂಪನ್ಮೂಲದ ಕೊರತೆ ಹಾಗೂ ಕ್ಷಿಪ್ರಗತಿಯಲ್ಲಿ ಏರುತ್ತಿರುವ ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಬಡದೇಶಗಳು 2025ರ ವೇಳೆಗೆ ನೀರಿನ ಕೊರತೆಯಿಂದ ನರಳುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ. ನಮ್ಮ ಮುಂದಿನ ಪೀಳಿಗೆ ಇಂಥಹ ಕಷ್ಟಗಳನ್ನು ಎದುರಿಸಬೇಕಾಗಿಬರಬಹುದು,ನೀರಿನ ಸಮಸ್ಯೆಯಿಂದ ಜನತೆ ತತ್ತರಗೊಳ್ಳಬಹುದು.ಇದಕ್ಕಾಗಿ ಭೂಮಿಯಲ್ಲಿನ ಅಂತರ್ಜಲ ಖಾಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇದೆ, ನೀರು ಮಳೆಗಾಲದಲ್ಲಿ ಹರಿದು ಅನಾವಶ್ಯಕವಾಗಿ ಸರಾಗವಾಗಿ ಸಮುದ್ರವನ್ನು ಸೇರುವುದನ್ನು ತಡೆದು ಭೂಮಿಯ ಅಂತರ್ಜಲ(ಒಸರು) ಬತ್ತಿ ಹೋಗದಂತೆ ತಡೆಯುವ ಸಲುವಾಗಿ ಅಲ್ಲಲ್ಲಿ ಇಂಗು ಗುಂಡಿಗಳ ರಚನೆ, ಹೊಸ ಹೊಸ ಹಳ್ಳ, ತೋಡು, ಕೆರೆಗಳ ರಚನೆಯಿಂದ ಮಳೆಗಾಲದ ನೀರನ್ನು ರಕ್ಷಿಸಿ ಶೇಕರಿಸಿಡುವುದು,ಸಣ್ಣ ಹಾಗೂ ಮದ್ಯಮ ಪ್ರಮಾಣದ ಜಲಾಶಯ,ಅಣೆಕಟ್ಟುಗಳ ನಿರ್ಮಾಣ ಇವುಗಳ ಪಾತ್ರ ಮಹತ್ತರವಾಗಿದೆ ಮಾತ್ರವಲ್ಲ ಅನಿವಾರ್ಯವೂ ಆಗಲಿದೆ.
 
ಭೂಮಿಯ ಪವಿತ್ರತೆಯಲ್ಲಿ ಪಂಚಭೂತಗಳಲ್ಲೊಂದಾದ ಗಾಳಿ(ವಾಯು)ಯ ಪಾತ್ರ :-
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು. ಮಾಲಿನ್ಯವನ್ನು ಪ್ರತ್ಯಕ್ಷ ಮಾಲಿನ್ಯ ಹಾಗೂ ಪರೋಕ್ಷ ಮಾಲಿನ್ಯ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಬ್ಲಾಕ್‌ಸ್ಮಿತ್ ಇನ್ಸ್ಟಿಟ್ಯೂಟ್ಎಂಬ ಸಂಸ್ಥೆಯು ಪ್ರತಿ ವರ್ಷ ಪ್ರಪಂಚದ ಅತಿಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶಗಳ ಪಟ್ಟಿ ಪ್ರಕಟಿಸುತ್ತದೆ. 2007ರ ಪ್ರಕಟಣೆಯಲ್ಲಿ ಪ್ರಕಟವಾದ ಪಟ್ಟಿಯಲ್ಲಿದ್ದ ಟಾಪ್ 10 ಮಾಲಿನ್ಯ ಪ್ರದೇಶಗಳು ಅಜರ್ಬೈಜಾನ್, ಚೀನಾ, ಭಾರತ, ಪೆರು, ರಷ್ಯಾ, ಉಕ್ರೇನ್ ಮತ್ತು ಜಾಂಬಿಯಾ ಪ್ರದೇಶದಲ್ಲಿವೆ.
"https://kn.wikipedia.org/wiki/ಸದಸ್ಯ:Srinivas_ujire" ಇಂದ ಪಡೆಯಲ್ಪಟ್ಟಿದೆ