"ಗೋಲ್ಡ್‌ಸ್ಮಿತ್, ಆಲಿವರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್: 2017 source edit
 
 
ಗೋಲ್ಡ್‌ಸ್ಮಿತ್ ಕಷ್ಟಕಾರ್ಪಣ್ಯಗಳಲ್ಲಿ ಜೀವನವನ್ನು ನೂಕಬೇಕಾಯಿತು. ಮೃದು ಮನಸ್ಸು, ದುಂದುಗಾರಿಕೆ ಮತ್ತು ಔದಾರ್ಯಗಳ ಮೂಲಕ ಕೊನೆಯವರೆಗೂ ಆರ್ಥಿಕ ಮುಗ್ಗಟ್ಟಿನಲ್ಲಿದ್ದು ಅಧಿಕ ಶ್ರಮದಿಂದ ಆರೋಗ್ಯವನ್ನು ಕೆಡಿಸಿಕೊಂಡು ಸಾವನ್ನಪ್ಪಿದನಾದರೂ ತನ್ನ ವಿಚಿತ್ರ ಕಲ್ಪನೆ, ಮೃದು ಮಾನವೀಯತೆ, ಕಣ್ಣನ್ನು ಅರಳಿಸುವ ಹಾಸ್ಯ, ಸುಂದರ ಶೈಲಿ-ಇವುಗಳಿಂದಾಗಿ ಗೋಲ್ಡ್‌ಸ್ಮಿತ್ ಚಿರಸ್ಮರಣೀಯನಾಗಿದ್ದಾನೆ. ಈತನ ಸುಹೃತ್ಪರಂಪರೆಯಲ್ಲಿ ಜಾನ್ಸನ್, ಬರ್ಕ್ ಮತ್ತು ಕಲಾವಿದ ರೇನಲ್ಡ್ಸ್ ಮೊದಲಾದವರು ಬರುತ್ತಾರೆ. ಅವರೆಲ್ಲ ಇವನನ್ನು ಕಂಡು ಗೇಲಿ ಮಾಡಿದರಾದರೂ ಎಲ್ಲರೂ ಮನಸಾರೆ ಮೆಚ್ಚಿದ್ದರು. ಆಂತರ್ಯದಲ್ಲಿ ಅಪಾರವಾಗಿ ಪ್ರೀತಿಸಿದರು. ಈತನ ಸಾವಿನ ಸುದ್ದಿ ಮುಟ್ಟಿದೊಡನೆ ಬರ್ಕ್ ಬಿಕ್ಕಿಬಿಕ್ಕಿ ಅತ್ತನಂತೆ. ರೇನಲ್ಡ್‌್ಸ ಆ ದಿನವೆಲ್ಲ ತನ್ನ ಕುಂಚವನ್ನು ಎತ್ತಲಿಲ್ಲವಂತೆ. ಜಾನ್ಸನ್ ‘ಈತ ಮುಟ್ಟಿದ್ದನ್ನೆಲ್ಲ ಚಿನ್ನವಾಗಿಸಿದ’ ಎಂಬ ಅರ್ಥಬರುವ ಚರಮ ವಾಕ್ಯವೊಂದನ್ನು ಲ್ಯಾಟಿನಿನಲ್ಲಿ ಬರೆದನಂತೆ. ಬಡವರು, ರೋಗಗ್ರಸ್ತರು, ದೀನದಲಿತರು ಇವನ ಮನೆಯ ಮುಂದೆ ನೆರೆದು, ತನ್ನ ಬಡತನದಲ್ಲೂ ತಮ್ಮನ್ನು ಕೈಬಿಡದೆ ನಡೆಸಿದ ಅನ್ನದಾತ ಸತ್ತುದಕ್ಕಾಗಿ ಕಣ್ಣೀರಿಟ್ಟರಂತೆ. ಬಡತನವನ್ನು ನೀಗಿಸಿಕೊಳ್ಳಲೆಂದು ಗೋಲ್ಡ್‌ಸ್ಮಿತ್ ಬರೆದ ಎಲ್ಲ ಬರೆಹಗಳೂ ಶಾಶ್ವತ ಮೌಲ್ಯವನ್ನು ಪಡೆಯಲಿಲ್ಲವಾದರೂ '''ದಿ ಟ್ರ್ಯಾವಲರ್, ದಿ ಡೆಸರ್ಟೆಡ್ ವಿಲೆಜ್, ಷಿ ಸ್ಟೂಪ್ಸ್‌ ಟು ಕಾನ್ಕರ್,''' ಎಲ್ಲಕ್ಕಿಂತ ಮಿಗಿಲಾಗಿ '''ದಿ ವಿಕಾರ್ ಆಫ್ ವೇಕ್ಫೀಲ್ಡ್‌''' ಕಾದಂಬರಿ-ಇವು ಇಂಗ್ಲಿಷ್ ಸಾಹಿತ್ಯದಲ್ಲಿ ಅಮರವಾಗಿ ನಿಂತಿವೆ.
==ಉಲ್ಲೇಖಗಳು==
{{Reflist|2}}
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
೪೭೬

edits

"https://kn.wikipedia.org/wiki/ವಿಶೇಷ:MobileDiff/846651" ಇಂದ ಪಡೆಯಲ್ಪಟ್ಟಿದೆ