ಜೋಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖ ಲಿಂಕ್ ತಿದ್ದುಪಡಿ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೨ ನೇ ಸಾಲು:
ಜೋಳ ಪದವನ್ನು ಕನ್ನಡದಲ್ಲಿ ಜೋಳದ ಸಸ್ಯ ಹಾಗೂ ಕಾಳಿಗೂ (ಧಾನ್ಯ) ಬಳಸಲಾಗುತ್ತದೆ. ಇಂಗ್ಲೀಶ್ ಸಂವಾದಿ ಪದಗಳು <i>ಜೋವರ್</i> ಅಥವಾ <i>ಸೋರ್ಗಮ್</i>. ಇದು ಭಾರತದ ಪ್ರಮುಖ ಕಿರುಧಾನ್ಯಗಳಲ್ಲಿ (ಮಿಲೆಟ್ ಅಥವಾ ಸಿರಿಧಾನ್ಯ) ಒಂದು. ಜಾಗತಿಕ ಧಾನ್ಯ ಉತ್ಪಾದನೆಯಲ್ಲಿ ಅದು ಐದನೆಯ ಸ್ಥಾನದಲ್ಲಿದೆ <ref> Awika M. Joshep, [http://pubs.acs.org/doi/pdf/10.1021/bk-2011-1089.ch001 "Chapter1 Major Cereal Grains Production and Use around the World"] access date 2016-07-14</ref>. ಭಾರತದಲ್ಲಿ ಬೆಳೆಯುವ ಧಾನ್ಯಗಳಲ್ಲಿ ಅದರ ಸ್ಥಾನ ಐದನೆಯದು (ಮೆಕ್ಕೆಜೋಳ ಮತ್ತು ಸಜ್ಜೆಯ ನಂತರದ ಸ್ಥಾನ). <ref> [http://eands.dacnet.nic.in/latest_20011.htm “Normal (average of 2005-06 - 2009-10) Area, Production and Yield of Major Crops in India”] access date 2016-07-14 (from Direcorate of Economics and Statistics, Department of Agriculture, Govt of India. </ref>. ಭಾರತದ ಜೋಳ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಮಹಾರಾಷ್ಟ್ರ ನಂತರ ಎರಡನೆಯದು<ref name=D>[http://agropedia.iitk.ac.in/content/area-production-and-yield-jowar-major-producing-states ”Area, Production and Yield of Jowar in major Producing States”], Agropedia, access date 2016-07-14</ref>. ಅಮೆರಿಕ ಸಂಯುಕ್ತ ಸಂಸ್ಥಾನಗಳಂತಹ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಇದನ್ನು ಪ್ರಮುಖವಾಗಿ ಪಶು ಆಹಾರವಾಗಿ ಬಳಸಿದರೆ, ಭಾರತದ ಕೆಲವು ಭಾಗಗಳಲ್ಲಿ ಮತ್ತು ಹಲವು ಆಫ್ರಿಕಾ ಹಾಗೂ ಏಷಿಯಾದ ದೇಶಗಳಲ್ಲಿ ಮಾನವ ಆಹಾರವಾಗಿ ಧಾನ್ಯವನ್ನು ಬಳಸಲಾಗುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿ ಜೋಳ ಪ್ರಮುಖ ಆಹಾರ ಧಾನ್ಯಗಳಲ್ಲೊಂದು.
==ಹುಟ್ಟು==
ಈಗ ಬೆಳೆಯಲಾಗುತ್ತಿರುವ ಜೋಳದ ವನ್ಯ ಸಸ್ಯ ಸಂಬಂಧಿಗಳು ಸಹಾರದ ದಕ್ಷಿಣಕ್ಕಿರುವ ಆಫ್ರಿಕಾಕ್ಕೆ ಸೀಮಿತವಾಗಿದೆ. ಜೊಹರಿ ಮತ್ತು ಹಾಫ್ “ಬಹುಶಹ” ಎಮೆನ್ ಮತ್ತು ಸೂಡಾನ್‌ಗಳ ಸಹ ಎಂದು ಸೇರಿಸುವ ಮೂಲಕ ಇಲ್ಲಿಯೂ ಇದನ್ನು ಬೆಳೆಯಾಗಿಸುವುದು ಅಥವಾ ವನ್ಯಸಸ್ಯಗಳಿಂದ ಒಂದು ಬೆಳೆಯನ್ನಾಗಿ ಅಭಿವೃದ್ಧಿ ಪಡಿಸಿರ ಬಹುದುಪಡಿಸಿರಬಹುದು ಎಂದು ಸೂಚಿಸುತ್ತಾರೆ<ref name=A>Daniel Zohary and Maria Hopf, Domestication of plants in the Old World, third edition (Oxford: University Press, 2000),p. 89 (Wikipedia English Commercia sorghum reference)</ref>. ಭಾರತೀಯ ಉಪಖಂಡದಲ್ಲಿನ ಅತಿ ಪುರಾತನ ಜೋಳದ ಇರುವಿಕೆಯನ್ನು ಹರಪ್ಪ ಪೂರ್ವದ ಹಂತಗಳಲ್ಲಿ ಪತ್ತೆಹಚ್ಚಲಾಗಿದೆ (ಕ್ರಿ ಪೂ ೨೭೫೦-೨೫೦೦). ಇಂದು ಪ್ರಮುಖವಾಗಿ ಈ ಬೆಳೆಯನ್ನು ಬೆಳೆಯುವ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಇದರ ಇರುವಿಕೆಯನ್ನು ಅಹೆಮದ್‌ನಗರ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳ ದೈಮಾಬಾದ್‌ನಲ್ಲಿನ ಸವಲ್ಡ ಹಂತ ಮತ್ತು ನಂತರದ ಹಂತಗಳಲ್ಲಿ (ಕಾಲಮಾನ I ಕ್ರಿ ಪೂ ೨೨೦೦-೨೦೦೦) ಪತ್ತೆಹಚ್ಚಲಾಗಿದೆ.<ref> Sing, Purushottam “Chapter8 History of Millet Cultivation in India” in Editors. Lallanji Gopal and V. C. Srivastav (2008), Concept Publishing Company, [https://books.google.co.in/books?id=FvjZVwYVmNcC&dq ''History of Agriculture in India, Up to C. 1200 A.D.''], pages 107-108.</ref>
 
ಜೋಳದ ಇರುವಿಕೆಯನ್ನು ಅದರ ಮೂಲವೆಂದು ಗುರುತಿಸಿಲಾದ ಆಫ್ರಿಕಾದ ಪ್ರದೇಶಗಳಲ್ಲಿ ಪತ್ತೆಹಚ್ಚಿರುವ ಕಾಲಮಾನ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಪತ್ತೆಯಾದ ಕಾಲಮಾನಕ್ಕಿಂತ ಹಿಂದೆ ಹೋಗುವುದಿಲ್ಲ. ಈ ಪ್ರದೇಶದಲ್ಲಿ ಪತ್ತೆಯಾದ ಪುರಾತನ ಜೋಳದ ವನ್ಯಸಸ್ಯಗಳ ಇರುವಿಕೆ ಕ್ರಿ ಪೂ ೮೦೦-೬೦೦ರಷ್ಟು ಹಿಂದೆ ಹೋದರೆ, ಬೆಳೆದ ಸಸ್ಯಗಳ ಇರುವಿಕೆ ಕ್ರಿ ಪೂ ೧೦೦ರವರೆಗೆ ಹಿಂದೆ ಹೋಗುತ್ತದೆ. ಜೋಹರಿ ಮತ್ತು ಹಾಫ್ ಜೋಳ ಇಲ್ಲಿ ಪತ್ತೆಯಾದ ಕಾಲಕ್ಕೂ ಮುಂಚೆಯೇ ಬೆಳೆಯಲಾಯಿತು ಮತ್ತು ಅದು ಬಹಳ ಮುಂಚೆಯೇ ಭಾರತೀಯ ಉಪಖಂಡಕ್ಕೆ ವಲಸೆ ಹೋಯಿತು ಎಂದು ಸೂಚಿಸುತ್ತದೆ ಎನ್ನುತ್ತಾರೆ. <ref name=A />
 
ಮುಸ್ಲಿಂ ಕೃಷಿ ಕ್ರಾಂತಿಯ<ref>ಮುಸ್ಲಿಂ ಸಂಸ್ಕೃತಿಯ ಪ್ರದೇಶಗಳಲ್ಲಿ ಕ್ರಿ ಶ ೮ ರಿಂದ ೧೩ನೆಯ ಶತಮಾನಗಳ ವರೆಗೆ ನಡೆದ ಮತ್ತು ಅರಬ್ ಕ್ರಾಂತಿಯ ಭಾಗವಾದ ಕೃಷಿಯಲ್ಲಿನ ಬದಲಾವಣೆಗಳು</ref> ಪರಿಣಾಮವಾಗಿ ಜೋಳವು ಮಧ್ಯ ಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಯುರೋಪುಗಳಿಗೆ ಹರಡಿತು.
 
==ಸಾಗುವಳಿ ಮತ್ತು ಉಪಯೋಗ==
ಜೋಳದ ಧಾನ್ಯಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕ ಸಂಯುಕ್ತ ಸಂಸ್ಥಾನವು ಅದನ್ನು ಪ್ರಧಾನವಾಗಿ ಕುಕ್ಕಟ (ಪೌಲ್ಟ್ರಿ) ಮತ್ತು ಪಶು ಆಹಾರವಾಗಿ ಬಳಸುತ್ತದೆ. ಆದರೆ ಇದರ ಧಾನ್ಯವು ಮಹಾರಾಷ್ಟ್ರ, ಉತ್ತರ ಮತ್ತು ಪೂರ್ವ ಕರ್ನಾಟಕ, ಆಂಧ್ರ ಪ್ರದೇಶದ ರಾಯಲಸೀಮ ಭಾಗಗಳಲ್ಲಿ ಪ್ರಧಾನವಾಗಿ ಜೋಳದ ರೊಟ್ಟಿಯಾಗಿ ಬಳಕೆಯಲ್ಲಿದೆ. ಇದರ ಸೊಪ್ಪೆ (ಕಾಂಡವು) ಪಶುಗಳ ಆಹಾರವಾಗಿ ಬಳಕೆಯಲ್ಲಿದೆ.
"https://kn.wikipedia.org/wiki/ಜೋಳ" ಇಂದ ಪಡೆಯಲ್ಪಟ್ಟಿದೆ