ಅರ್ಜುನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೦ ನೇ ಸಾಲು:
 
== ಶಿವಾರ್ಜುನರ ಯುದ್ಧ ==
ಅರ್ಜುನನು ತನ್ನ ಅಣ್ಣನ ಆಜ್ಞಾ ಪರಿಪಾಲಕನು. ವನವಾಸದ ಕಾಲದಲ್ಲಿ [[ಯುಧಿಷ್ಠಿರ]]ನು ಅರ್ಜುನನ್ನು ಮುಂದಿನ ಯುದ್ಧದ ಸಿದ್ಧತೆಗಾಗಿ ಶಸ್ತ್ರಾಸ್ತ್ರಗಳನ್ನು ಸಂಪಾದಿಸಲು [[ಇಂದ್ರ]] ನ ಕುರಿತು ತಪಸ್ಸನ್ನು ಮಾಡಲು ನಿರ್ದೇಶಿಸಿದನು. ಅದರಂತೆ ಅತ್ಯಂತ ಪರಾಕ್ರಮಿಯಾದ ಅರ್ಜುನ ನುಅರ್ಜುನನು ಉತ್ತರ ದಿಕ್ಕಿನ ಕಡೆಗೆ ಪ್ರಯಾಣ ಮಾಡಿ ಅನೇಕ ಪರ್ವತ, ನದಿ, ಕಾನನಗಳನ್ನು ದಾಟಿ ಹಗಲು ರಾತ್ರಿಗಳ ವಿವೇಚನೆ ಇಲ್ಲದೆ ಆಯಾಸದ ಪರಿವೆ ಇಲ್ಲದೆ ನಡೆದು ಇಂದ್ರಕೀಲ ಪರ್ವತವನ್ನು ಸೇರಿದನು. ಆ ಪ್ರದೇಶವು ಸಾಮಾನ್ಯ ಮಾನವನಿಗೆ ತಲುಪಲು ಅಸಾಧ್ಯವಾಗಿದ್ದಿತು. ಅದು ಮಹಾತಪಸ್ವಿಗಳ ಸ್ಥಾನವಾಗಿದ್ದಿತು. ಅಲ್ಲಿ ಅವನು ಇಂದ್ರನ ದರ್ಶನ ಪಡೆದು ಅವನ ಆದೇಶದಂತೆ ಶಿವನನ್ನು ಕುರಿತು ತಪಸ್ಸನ್ನಾಚರಿಸಲುಪಕ್ರಮಿಸಿದನು. ಅವನು ಹಿಮವತ್ಪರ್ವತದ ತಪ್ಪಲಿಗೆ ಬಂದು ಘೋರ ತಪಸ್ಸನ್ನಾಚರಿಸಿದನು. ಅವನ ತಪಸ್ಸಿಗೆ ಮೆಚ್ಚಿದ ಶಿವನು ಬೇಡನ/ಕಿರಾತನ ವೇಷದಲ್ಲಿ ಬಂದು ಅರ್ಜುನನೊಡನೆ ಯುದ್ಧಕ್ಕೆ ನಿಂತನು .ಇವರೀರ್ವರ ನಡುವಿನ ಯುದ್ಧವು ಕೀರಾತಾರ್ಜುನರ ಯುದ್ದವೆಂಬ ಹೆಸರಿನಲ್ಲಿ ಅತ್ಯಂತ ಘೋರವಾಗಿದ್ದಿತೆಂದು ಪುರಾಣಕಥೆಗಳಿಂದ ತಿಳಿದುಬರುತ್ತದೆ. ಆ ಯುದ್ಧವು ಕಿರಾತಾರ್ಜನೇಯ ಯುದ್ಧವೆಂದು ಪ್ರಸಿದ್ಧಿಯಾಗಿದೆ. ಪರಶಿವನೆಂದು ತಿಳಿಯದೆ ಅವನೊಡನೆ ಯುದ್ಧ ಮಾಡಿ ಸೋತ ಅರ್ಜುನನ ಸಾಹಸಕ್ಕೆ ಮೆಚ್ಚಿದ ಶಿವನು ಅವನಿಗೊಲಿದು ಅವನು ಬೇಡಿದ ''[[ಪಾಶುಪತಾಸ್ತ್ರ]]'' ವನ್ನುವರವನ್ನು ಕರುಣಿಸಿದನು. ಇದಾದ ನಂತರ ಅರ್ಜುನನಿಗೆ ''[[ಅಷ್ಟದಿಕ್ಪಾಲಕರು]]'' ತಾವೇ ಸ್ವತಃ ಬಂದು ಅನೇಕ ದಿವ್ಯಾಸ್ತಗಳನ್ನುದಿವ್ಯಾಸ್ತ್ರಗಳನ್ನು ಕರುಣಿಸಿದರು.[[ಸ್ವರ್ಗ]] ದ ಅಧಿಪತಿಯಾದ ಇಂದ್ರನು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋಗಿ ಅನೇಕ ವಿದ್ಯೆಗಳನ್ನು(ಯುದ್ಧದ ಹಾಗುಹಾಗೂ ಸಂಗೀತನಾಟ್ಯಗಳ) ತಿಳಿಸಿ ಮಹಾಶಕ್ತಿಯುಳ್ಳ ದಿವ್ಯಾಸ್ತಗಳನ್ನುದಿವ್ಯಾಸ್ತ್ರಗಳನ್ನು ಕೊಟ್ಟನು. ಅಪ್ಸರೆಯರಲ್ಲಿ ಒಬ್ಬಳಾದ ಊರ್ವಶಿಯು ತನ್ನ ಕಾಮೇಚ್ಚೆಯನ್ನು ಅರ್ಜುನ ನೊಂದಿಗೆ ವ್ಯಕ್ತಪಡಿಸಿದಳು. ಇಂದ್ರಿಯಜಿತನಾದ ಅರ್ಜುನನು ನಿರಾಕರಿಸಿದ್ದಕ್ಕಾಗಿ ಕೋಪಗೊಂಡು ಅರ್ಜುನನನ್ನು ನಪುಂಸಕನೆಂದು ಖ್ಯಾತಿಹೊಂದುವಂತೆ ಶಪಿಸಿದಳು. ಆದರೆ ಮುಂದೆ ಇದರಿಂದ ಅರ್ಜುನನಿಗೆ ಉಪಕಾರವೇ ಆಯಿತು. ಹೀಗೆ ವನವಾಸ ಕಾಲದಲ್ಲಿ ಅರ್ಜುನನು ಮುಂಬರುವ ಯುದ್ಧಕ್ಕಾಗಿ ಸಕಲ ಶಸ್ತ್ರಾಸ್ರಗಳ ಸಿದ್ಧತೆ ಹೊಂದಿ ಭೂಲೋಕಕ್ಕೆ ಬಂದು ತನ್ನ ಸೋದರರನ್ನು ಸೇರಿದನು. ಇಲ್ಲಿ ಅವನ ಅನೇಕ ಗುಣಗಳು ವ್ಯಕ್ತವಾಗಿದೆ. ಅಂಥ ಕಠಿಣ ವನವಾಸ ಕಾಲದಲ್ಲೂ ಸಂಯಮ, ಗುರು ಹಿರಿಯರ ಆಜ್ಞಾ ಪರಿಪಾಲನೆ,ಗುರಿ ಸಾಧಿಸುವ ಛಲ, ಕಷ್ಟುಕಷ್ಟ ಸಹಿಷ್ಣುತೆ, ಪರಾಕ್ರಮ, ಭಕ್ತಿ, ನಮ್ರತೆ, ಜಿತೇಂದ್ರಿಯತ್ವ ಹೀಗೆ ಅರ್ಜುನನು ಸದ್ಗುಣ ಹಾಗುಹಾಗೂ ಸದಾಚಾರದ ಮೂರ್ತಿಯೇ ಆಗಿದ್ದನೆಂದು ಇದರಿಂದ ತಿಳಿಯ ಬಹುದಾಗಿದೆ.
 
== ಅರ್ಜುನನ ಸಂಪೂರ್ಣ ಕಥೆ==
*ಪಂಚಪಾಂಡವರಲ್ಲಿ ಮಧ್ಯದವ. ಪಾಂಡುರಾಜನ ಮೊದಲ ಹೆಂಡತಿಯಾದ ಕುಂತಿಯಲ್ಲಿ ಇಂದ್ರನ ವರಪ್ರಸಾದದಿಂದ ಹುಟ್ಟಿದ. ಗಂಗಾ ನದಿಯಲ್ಲಿ ಸ್ನಾನಕ್ಕಿಳಿದ ದ್ರೋಣಾಚಾರ್ಯರ ಕಾಲನ್ನು ಹಿಡಿದುಕೊಂಡು ಮೊಸಳೆಯನ್ನು ಕೊಂದ. ದ್ರೋಣಾಚಾರ್ಯರ ಇಷ್ಟದಂತೆ ದ್ರುಪದನನು ಹಿಂಗ್ಗಟ್ಟು ಬಿಗಿದು ತಂದು ಗುರುದಕ್ಷಿಣೆಯಾಗಿ ಅರ್ಪಿಸಿದ. ಅರ್ಜುನ, ನರ, ಫಲ್ಗುಣ, ಪಾರ್ಥ, ಕಿರೀಟಿ, ಶ್ವೇತವಾಹನ, ಭೀಭತ್ಸು, ವಿಜಯ, ಕೃಷ್ಣ, ಸವ್ಯಸಾಚಿ, ಧನಂಜಯ-ಎಂಬ ಹನ್ನೊಂದು ಹೆಸರುಗಳು ಅರ್ಜುನನಿಗಿದೆ. ದ್ರೌಪದಿ ಸ್ವಯಂವರಕ್ಕಾಗಿ ಹೋಗುತ್ತಿದ್ದಾಗ ಗಂಗಾ ತೀರದಲ್ಲಿ ರಾತ್ರಿಯ ವೇಳೆ ಅಡ್ಡಗಟ್ಟಿದ ಗಂಧರ್ವ ಅಂಗಾರಪರ್ಣನನ್ನು ಸೋಲಿಸಿ ಅವನಿಂದ ಚಾಕ್ಷುಷೀ ವಿದ್ಯೆಯನ್ನು ಗಳಿಸಿ ಅವನ ಸೂಚನೆಯಂತೆ ತಮ್ಮ ಪುರೋಹಿತನನ್ನಾಗಿ ಧೌಮ್ಯಾಚಾರ್ಯರನ್ನು ಒಪ್ಪಿಕೊಂಡ. ಬ್ರಾಹ್ಮಣವೇಷದಲ್ಲಿದ್ದು ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ವರಿಸಿದ.
"https://kn.wikipedia.org/wiki/ಅರ್ಜುನ" ಇಂದ ಪಡೆಯಲ್ಪಟ್ಟಿದೆ