ಅರ್ಜುನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೩ ನೇ ಸಾಲು:
[[Image:Ravi Varma-Arjuna and Subhadra.jpg|thumb|ಅರ್ಜುನ ಮತ್ತು ಸುಭದ್ರ.<br>[[ರಾಜಾ ರವಿವರ್ಮ]]ನ ವರ್ಣಚಿತ್ರ.]]
== '''ವ್ಯಕ್ತಿತ್ವ''' ==
ಹಿತಕರವಾದ ಹಾಗೂ ಎಲ್ಲ್ಲಎಲ್ಲ ರೀತಿಯಲ್ಲೂ ಸಂಪೂರ್ಣವಾದ ವ್ಯಕ್ತಿತ್ವವುಳ್ಳ, ಅರೋಗ್ಯಕರ ದೇಹದಲ್ಲಿ ಉತ್ತಮ ಸ್ವಾಸ್ಥ್ಯವುಳ್ಳ ಮನಸ್ಸನ್ನು ಹೊಂದಿದ, ಯಾವುದೇ ತಾಯಿ, ಮಡದಿ, ಸ್ನೇಹಿತನು ತನ್ನ ಜೀವನದಲ್ಲಿ ಇಂಥಾ ವ್ಯಕ್ತಿಯನ್ನು ಹೊಂದಲು ಹೆಮ್ಮೆ ಪಡುತ್ತಾರೋ ಅಂತಹ ವ್ಯಕ್ತಿತ್ವ ಅರ್ಜುನನದ್ದು ಎಂದು ಮಹಾಭಾರತದಲ್ಲಿ ಚಿತ್ರಿಸಲಾಗಿದೆ. ಬಲಶಾಲಿಯಾದ, ಅತ್ಯಂತ ಸುಂದರನಾದ; ಹೆಂಗಳೆಯರ ಮನಸೂರೆ ಮಾಡುವಂತಹ ಇಂದ್ರ ಪುತ್ರ ಅರ್ಜುನನು ನಾಲ್ಕು ಬಾರಿ ವಿವಾಹವಾಗಿದ್ದನು ಎಂದು ವಿವರಿಸಿದ್ದಾರೆ. ಅರ್ಜುನನು ಓರ್ವ ಸತ್ಯಸಂಧ ಹಾಗೂ ಅತ್ಯಂತ ನಿಷ್ಠಾವಂತ ಸ್ನೇಹಿತನಾಗಿದ್ದನು (ಧೀರ ಯೋಧ [[ಸಾತ್ಯಕಿ]] ಈತನ ಆಪ್ತ ಮಿತ್ರನಾಗಿದ್ದನು). ಈತನ ಭಾವನಾಗಿದ್ದ [[ಶ್ರೀಕೃಷ್ಣ |ಶ್ರೀಕೃಷ್ಣನ]] ಜೊತೆ ಆ ಜೀವನ ಪರ್ಯಂತ ಸಹೃದಯ ಸಂಬಂಧವನ್ನು ಹೊಂದಿದ್ದನು. [[ಕುರುಕ್ಷೇತ್ರ ಯುದ್ಧ |ಕುರುಕ್ಷೇತ್ರ ಯುದ್ಧದ]] ಬಗ್ಗೆ ಈತನಿಗಿದ್ದ ಸಂದೇಹದಿಂದ ಈತನು ಸೂಕ್ಷ್ಮನೂ ಹಾಗೂ ಪರಹಿತ ಚಿಂತನೆಯುಳ್ಳವನುಚಿಂತನೆಯುಳ್ಳವನೂ ಎಂದು ತಿಳಿಯುತ್ತದೆ. ಇದೇ ಸಂದರ್ಭದಲ್ಲಿ ಶ್ರೀಕೃಷ್ಣನು ಈತನಿಗೆ [[ಭಗವದ್ಗೀತೆ |ಭಗವದ್ಗೀತೆಯ]] ಭೋಧನೆಯನ್ನು ಮಾಡಿದನು. ಅತೀ ಕಾರ್ಯನಿಷ್ಠನಾಗಿದ್ದ ಅರ್ಜುನನು ಒಮ್ಮೆ [[ಬ್ರಾಹ್ಮಣ |ಬ್ರಾಹ್ಮಣನೋ ರ್ವನಿಗೆಬ್ರಾಹ್ಮಣನೋರ್ವನಿಗೆ]] ಸಹಾಯ ಮಾಡದೇ ಇರುವುದರ ಬದಲಾಗಿ ವನವಾಸ ಹೋಗಲು ನಿರ್ಧರಿಸಿದನು.
=== ಶ್ರಮಶೀಲ ವಿದ್ಯಾರ್ಥಿ ===
ಅರ್ಜುನನು ಓರ್ವ ಮಹಾಯೋಧನೆಂದೇ ಕರೆಯಲ್ಪಡುತ್ತಾನೆ. ಈ ಯೋಧನ ಜೀವನದ ಬುನಾದಿ ಬಹಳ ಸಣ್ಣ ವಯಸ್ಸಿನಲ್ಲೇ ಹಾಕಲಾಯಿತು. ಅತ್ಯುನ್ನತ ಹಾಗೂ ಶ್ರದ್ಧಾಶೀಲ ವಿದ್ಯಾರ್ಥಿಯಾಗಿದ್ದ ಅರ್ಜುನನು, ಗುರುಗಳಾದ [[ದ್ರೋಣಾಚಾರ್ಯರು]] ಕಲಿಸಿ ಕೊಟ್ಟ ಸಕಲ ವಿದ್ಯೆಗಳಲ್ಲಿ ಪರಿಣತಿ ಹೊಂದಿ, ಅತಿ ಬೇಗನೇ "ಅತಿರಥ" (ಅತ್ಯುನ್ನತ ಯೋಧ)ಎಂಬ ಬಿರುದನ್ನು ಗಳಿಸಿದನು. ಈತನ ವಿದ್ಯಾರ್ಜನೆಯಲ್ಲಿನ ಏಕಾಗ್ರತೆಯು ಪ್ರತಿಯೋರ್ವ ಶಾಲಾ ಬಾಲಕನಿಗೂ ತಿಳಿದಿದೆ. ಒಮ್ಮೆ ದ್ರೋಣಾಚಾರ್ಯರು ತಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆಯೊಂದನ್ನು ಒಡ್ಡಿದರು. ಮರದ ಕೊಂಬೆಯಲ್ಲಿ ಒಂದು ಮರದ ಹಕ್ಕಿಯನ್ನು ಇಳಿಯ ಬಿಟ್ಟು, ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದರು. ಮರದ ಹಕ್ಕಿಯ ಕಣ್ಣಿಗೆ ಗುರಿ ಹೂಡಿದ ನಂತರ ವಿದ್ಯಾರ್ಥಿಗಳನ್ನು ಒಬ್ಬೊಬ್ಬರಾಗಿ, ನಿನಗೆ ಏನೇನು ಕಾಣಿಸುತ್ತಿದೆ ಎಂದು ಕೇಳಿದರು. ಆಗ ಒಬ್ಬೊಬ್ಬರು ತನಗೆ ಉದ್ಯಾನವನ, ಹೂವುಗಳು, ಮರದ ಕೊಂಬೆ ಹಾಗೂ ಇಳಿಯ ಬಿಟ್ಟಿದ್ದ ಮರದ ಹಕ್ಕಿಯು ಕಾಣಿಸುತ್ತಿದೆ ಎಂದರು. ಆ ವಿದ್ಯಾರ್ಥಿಗಳನ್ನು ಪಕ್ಕಕ್ಕೆ ನಿಲ್ಲಿಸುತ್ತಿದ್ದರು. ಅರ್ಜುನನಿಗೆ ಈ ಪ್ರಶ್ನೆಯನ್ನು ಕೇಳಿದಾಗ ಆತನು ನನಗೆ ಹಕ್ಕಿಯ ಕಣ್ಣು ಮಾತ್ರ ಕಾಣಿಸುತ್ತಿದೆ ಎಂದನು. ಈ ಘಟನೆಯು ಅರ್ಜುನನ ಏಕಾಗ್ರತೆಯ ಒಂದು ನಿದರ್ಶನವಾಗಿದೆ.
===ಗಾಂಡೀವ===
ಒಂದು ದಿವ್ಯ ಧನುಸ್ಸು. ಈ ಧನುಸ್ಸು ಬ್ರಹ್ಮನಿಂದ ಇಂದ್ರನಿಗೂ,ಇಂದ್ರನಿಂದ ವರುಣನಿಗೂ, ವರುಣನಿಂದ ಅಗ್ನಿಗೂ ಬಂತು. ಖಾಂಡವದಹನ ಸಮಯದಲ್ಲಿ ಅಗ್ನಿ ಅರ್ಜುನ ಮಾಡಿದ ಉಪಕಾರಕ್ಕಾಗಿ ಆತನಿಗಿದನ್ನು ಕೊಟ್ಟ. ಈ ಧನಸ್ಸು ಎರಡು ಅಕ್ಷಯ ಬತ್ತಳಿಕೆಗಳೊಂದಿಗೆ ಅರ್ಜುನನಿಗೆ ಪ್ರಾಪ್ತವಾಗಿತ್ತು. ಈ ಕಾರಣದಿಂದಲೇ ಅವನು 'ಗಾಂಡೀವಿ' ಎನಿಸಿದ. ಇದರ ಮಹಿಮೆಯಿಂದ ಅರ್ಜುನ ಎಲ್ಲ ದಿಕ್ಕುಗಳನ್ನು ಗೆದ್ದು, ಇಂದ್ರನನ್ನು ಸೋಲಿಸಿದುದಲ್ಲದೆ ಇದರ ತುದಿಯಿಂದ ಶಿವನ ನೆತ್ತಿ ಮೇಲೆ ಹೊಡೆದು ಗಾಯ ಮಾಡಿದ. ಮಹಾಪ್ರಸ್ಥಾನ ಸಮಯದಲ್ಲಿ ಅರ್ಜುನ ಇದನ್ನು ಸಮುದ್ರದಲ್ಲಿ ಬಿಸಾಡಿದನೆಂದು ಹೇಳಲಾಗಿದೆ.
 
== ಶಿವಾರ್ಜುನರ ಯುದ್ಧ ==
ಅರ್ಜುನನು ತನ್ನ ಅಣ್ಣನ ಆಜ್ಞಾ ಪರಿಪಾಲಕನು. ವನವಾಸದ ಕಾಲದಲ್ಲಿ [[ಯುಧಿಷ್ಠಿರ]]ನು ಅರ್ಜುನನ್ನು ಮುಂದಿನ ಯುದ್ಧದ ಸಿದ್ಧತೆಗಾಗಿ ಶಸ್ತ್ರಾಸ್ತ್ರಗಳನ್ನು ಸಂಪಾದಿಸಲು [[ಇಂದ್ರ]] ನ ಕುರಿತು ತಪಸ್ಸನ್ನು ಮಾಡಲು ನಿರ್ದೇಶಿಸಿದನು. ಅದರಂತೆ ಅತ್ಯಂತ ಪರಾಕ್ರಮಿಯಾದ ಅರ್ಜುನ ನು ಉತ್ತರ ದಿಕ್ಕಿನ ಕಡೆಗೆ ಪ್ರಯಾಣ ಮಾಡಿ ಅನೇಕ ಪರ್ವತ, ನದಿ, ಕಾನನಗಳನ್ನು ದಾಟಿ ಹಗಲು ರಾತ್ರಿಗಳ ವಿವೇಚನೆ ಇಲ್ಲದೆ ಆಯಾಸದ ಪರಿವೆ ಇಲ್ಲದೆ ನಡೆದು ಇಂದ್ರಕೀಲ ಪರ್ವತವನ್ನು ಸೇರಿದನು. ಆ ಪ್ರದೇಶವು ಸಾಮಾನ್ಯ ಮಾನವನಿಗೆ ತಲುಪಲು ಅಸಾಧ್ಯವಾಗಿದ್ದಿತು. ಅದು ಮಹಾತಪಸ್ವಿಗಳ ಸ್ಥಾನವಾಗಿದ್ದಿತು. ಅಲ್ಲಿ ಅವನು ಇಂದ್ರನ ದರ್ಶನ ಪಡೆದು ಅವನ ಆದೇಶದಂತೆ ಶಿವನನ್ನು ಕುರಿತು ತಪಸ್ಸನ್ನಾಚರಿಸಲುಪಕ್ರಮಿಸಿದನು. ಅವನು ಹಿಮವತ್ಪರ್ವತದ ತಪ್ಪಲಿಗೆ ಬಂದು ಘೋರ ತಪಸ್ಸನ್ನಾಚರಿಸಿದನು. ಅವನ ತಪಸ್ಸಿಗೆ ಮೆಚ್ಚಿದ ಶಿವನು ಬೇಡನ/ಕಿರಾತನ ವೇಷದಲ್ಲಿ ಬಂದು ಅರ್ಜುನನೊಡನೆ ಯುದ್ಧಕ್ಕೆ ನಿಂತನು .ಇವರೀರ್ವರ ನಡುವಿನ ಯುದ್ಧವು ಕೀರಾತಾರ್ಜುನರ ಯುದ್ದವೆಂಬ ಹೆಸರಿನಲ್ಲಿ ಅತ್ಯಂತ ಘೋರವಾಗಿದ್ದಿತೆಂದು ಪುರಾಣಕಥೆಗಳಿಂದ ತಿಳಿದುಬರುತ್ತದೆ. ಆ ಯುದ್ಧವು ಕಿರಾತಾರ್ಜನೇಯ ಯುದ್ಧವೆಂದು ಪ್ರಸಿದ್ಧಿಯಾಗಿದೆ. ಪರಶಿವನೆಂದು ತಿಳಿಯದೆ ಅವನೊಡನೆ ಯುದ್ಧ ಮಾಡಿ ಸೋತ ಅರ್ಜುನನ ಸಾಹಸಕ್ಕೆ ಮೆಚ್ಚಿದ ಶಿವನು ಅವನಿಗೊಲಿದು ಅವನು ಬೇಡಿದ ''[[ಪಾಶುಪತಾಸ್ತ್ರ]]'' ವನ್ನು ಕರುಣಿಸಿದನು. ಇದಾದ ನಂತರ ಅರ್ಜುನನಿಗೆ ''[[ಅಷ್ಟದಿಕ್ಪಾಲಕರು]]'' ತಾವೇ ಸ್ವತಃ ಬಂದು ಅನೇಕ ದಿವ್ಯಾಸ್ತಗಳನ್ನು ಕರುಣಿಸಿದರು.[[ಸ್ವರ್ಗ]] ದ ಅಧಿಪತಿಯಾದ ಇಂದ್ರನು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋಗಿ ಅನೇಕ ವಿದ್ಯೆಗಳನ್ನು(ಯುದ್ಧದ ಹಾಗು ಸಂಗೀತನಾಟ್ಯಗಳ) ತಿಳಿಸಿ ಮಹಾಶಕ್ತಿಯುಳ್ಳ ದಿವ್ಯಾಸ್ತಗಳನ್ನು ಕೊಟ್ಟನು. ಅಪ್ಸರೆಯರಲ್ಲಿ ಒಬ್ಬಳಾದ ಊರ್ವಶಿಯು ತನ್ನ ಕಾಮೇಚ್ಚೆಯನ್ನು ಅರ್ಜುನ ನೊಂದಿಗೆ ವ್ಯಕ್ತಪಡಿಸಿದಳು. ಇಂದ್ರಿಯಜಿತನಾದ ಅರ್ಜುನನು ನಿರಾಕರಿಸಿದ್ದಕ್ಕಾಗಿ ಕೋಪಗೊಂಡು ಅರ್ಜುನನನ್ನು ನಪುಂಸಕನೆಂದು ಖ್ಯಾತಿಹೊಂದುವಂತೆ ಶಪಿಸಿದಳು. ಆದರೆ ಮುಂದೆ ಇದರಿಂದ ಅರ್ಜುನನಿಗೆ ಉಪಕಾರವೇ ಆಯಿತು. ಹೀಗೆ ವನವಾಸ ಕಾಲದಲ್ಲಿ ಅರ್ಜುನನು ಮುಂಬರುವ ಯುದ್ಧಕ್ಕಾಗಿ ಸಕಲ ಶಸ್ತ್ರಾಸ್ರಗಳ ಸಿದ್ಧತೆ ಹೊಂದಿ ಭೂಲೋಕಕ್ಕೆ ಬಂದು ತನ್ನ ಸೋದರರನ್ನು ಸೇರಿದನು. ಇಲ್ಲಿ ಅವನ ಅನೇಕ ಗುಣಗಳು ವ್ಯಕ್ತವಾಗಿದೆ. ಅಂಥ ಕಠಿಣ ವನವಾಸ ಕಾಲದಲ್ಲೂ ಸಂಯಮ, ಗುರು ಹಿರಿಯರ ಆಜ್ಞಾ ಪರಿಪಾಲನೆ,ಗುರಿ ಸಾಧಿಸುವ ಛಲ, ಕಷ್ಟು ಸಹಿಷ್ಣುತೆ, ಪರಾಕ್ರಮ, ಭಕ್ತಿ, ನಮ್ರತೆ, ಜಿತೇಂದ್ರಿಯತ್ವ ಹೀಗೆ ಅರ್ಜುನನು ಸದ್ಗುಣ ಹಾಗು ಸದಾಚಾರದ ಮೂರ್ತಿಯೇ ಆಗಿದ್ದನೆಂದು ಇದರಿಂದ ತಿಳಿಯ ಬಹುದಾಗಿದೆ.
"https://kn.wikipedia.org/wiki/ಅರ್ಜುನ" ಇಂದ ಪಡೆಯಲ್ಪಟ್ಟಿದೆ