"ಅಡಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
'''ಅಡಿಕೆ''' (ಸಂಸ್ಕೃತ:''ಪೂಗ'', ಮರಾಠಿ ಮತ್ತು ಗುಜರಾತಿ: ''ಸುಪಾರಿ'') ಒಂದು ತೋಟಗಾರಿಕ ಬೆಳೆ. ಇದರ ಮೂಲ [[ಮಲೇಷ್ಯಾ ]]ದೇಶ. [[ದಕ್ಷಿಣ ಏಷಿಯಾ]] ಮತ್ತು [[ಆಫ್ರಿಕ]]ದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. [[ಕರ್ನಾಟಕ]]ದಲ್ಲಿ [[ಮಲೆನಾಡು ]] ಮತ್ತು [[ಕರಾವಳಿ]]ಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. [[ಗುಜರಾತ್]] ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. '''ಅರಕಾಸಿಯೆಸಿ''' ಕುಟುಂಬಕ್ಕೆ ಸೇರಿದ ಸಸ್ಯ. [[ತಾಳೆ]] ಜಾತಿಗೆ ಸೇರಿದೆ. ಅಡಿಕೆಯನ್ನು [[ತಾಂಬೂಲ]]ದಲ್ಲಿ [[ವೀಳ್ಯದೆಲೆ]]ಯೊಂದಿಗೆ ತಿನ್ನಲು ಉಪಯೊಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ.
==ಅಡಿಕೆ ಮರ==
*ಅಡಿಕೆಯ ಮೂರು / ನಾಲ್ಕು ಅಡಿ ಎತ್ತರದ ಎರಡು ವರ್ಷದ ಸಸಿಯನ್ನು <big>।½×।½×।½</big> ಗುಂಡಿತೆಗೆದು ಎಂಟು ಅಡಿಗಳ ದೂರದಲ್ಲಿ 14,16 ಅಡಿ ಅಗಲದ ಪಾತಿ(ಬಣ್ಣ)ಗಳಲ್ಲಿ ಎರಡು ಸಾಲಿನಲ್ಲಿ ನೆಡಲಾಗುವುದು. ಅದು ಸುಮಾರು 5-6 ವರ್ಷಗಳಲ್ಲಿ 14-16 ಅಡಿಗಳ ಎತ್ತರ ಬೆಳೆದು ಚಿಕ್ಕ ಗೊನೆಯ ಫಸಲು ಕೊಡುವುದು; 10--12ವರ್ಷಗಳ ನಂತರ ಉತ್ತಮ ಫಸಲು ಬರುವುದು. ಅಡಿಕೆ ಮರವು ಸುಮಾರು 40--60ಅಡಿಗಳಷ್ಟು ಎತ್ತರ ಬೆಳೆಯುವುದು. ಅದು ಗಟ್ಟಿಯಾದ ನಾರಿನ ಎಳೆಗಳಿಂದ ಆಗಿದ್ದು ।½ ಅಡಿಯಿಂದ 2ಅಡಿ ಸುತ್ತಳತೆಯ ವರೆಗೂ ಇರುವುದು. ಅಡಿಕೆ ಕೊಯಿದು ಇಳಿಸುವುದು ಕಷ್ಟ; ಕೊಯಿಯುವವರುಕೊಯ್ಯುವವರು ಮರ ಹತ್ತಿ ಹತ್ತಿರದ ಮರದ ತುದಿಯನ್ನು ದೋಟಿಯಿಂದ ಎಳೆದು, ಕತ್ತಿಯಿಂದ ಕೊನೆಯ ಕಿವುರು(ತೊಟ್ಟು) ಕತ್ತರಿಸಿ ಕೈಯಿಂದ ಕೊನೆಯನ್ನು ಕಿತ್ತು ತೆಗೆದು ತಮ್ಮ ಸೊಂಟಕ್ಕೆ ಕಟ್ಟಿಕೊಂಡ ಹಗ್ಗದ ಮೇಲಿಂದ ಜಾರಿಸಿ ಕೆಳಕ್ಕೆ ಬಿಡುವರು. ಅದನ್ನು ಕೆಳಗೆ ಹಗ್ಗವನ್ನು ಹಿಡಿದುನಿಂತಿರುವವರು, ಎಚ್ಚರಿಕೆಯಿಂದ ಹಿಡಿದು ರಾಶಿ ಹಾಕುವರು. ಕೆಲವುಕಡೆ ಹಾಗೆಯೇ ಕೊನೆಯನ್ನು ನೆಲಕ್ಕೆ ಹಾಕುವರು.
*ಅಡಿಕೆ ಮರವು ತುಂಬಾ ಗಟ್ಟಿಯಾಗಿದ್ದು ಹಲವು ಉಪಯೋಗಗಳಿಗೆ ಬರುವುದು. ಮನೆ ಕಟ್ಟಲು ಹಿಂದೆ(ಈಗಲೂ)ಎರಡು ಹೋಳುಮಾಡಿದ ತುಂಡನ್ನು ಮನೆಯ ಮಾಡಿಗೆ(roof) ಪಕಾಶಿಯ(ರ್ಯಾಫ್ಟರ್-rafter) ಬದಲಿಗೆ ಬಳಸುವರು ಅದರ ಎರಡು ಇಂಚು ಸಿಗಿದ ಪಟ್ಟಿಯನ್ನು ಹಂಚುಹಾಕುವ ಅಥವಾ ಹುಲ್ಲು ಹೊದೆಸುವ ರೀಪು ಪಟ್ಟಿಗೆ ಬಳಸುವರು ; ಬೇಲಿಗೆ ಅಡ್ಡ ಪಟ್ಟಿಗೆ ಬಳಸುವರು. ಚಪ್ಪರ ಹಾಕಲು ಅಡಿಕೆ ಒಣಗಿಸುವ ಪಟ್ಟಿಗಳನ್ನು ಹತ್ತಿರ ಹತ್ತಿರ ಜೋಡಿಸಿದ ಚಪ್ಪರ(ಅಟ್ಟ) ಹಾಕಲು ಉಪಯೋಗಿಸುವರು. ಒಣಗಿ ಲಡ್ಡಾದರೆ ಸೌದೆ.
 
== ಅಡಿಕೆಯಲ್ಲಿ ವಿಧಗಳು ==
*[[ತಾಂಬೂಲ]]ದಲ್ಲಿ ಸೇವಿಸುವ ಅಡಿಕೆ ತಯಾರಿಸಲು ಅದಕ್ಕೆ ಅನೇಕ ಬಗೆಯ ಸಂಸ್ಕರಣೆ ಮಾಡಬೇಕಾಗುವುದು. ಒಂದು ಮರದಿಂದ ಕೊಯಿದ ಸಿಪ್ಪೆ ಸಹಿತ ಅಡಿಕೆ ಸುಮಾರು 2 -4 ಸೆಂ ಮೀ.ಉದ್ದ 3-4/5ಸೆಂ.ಮೀ. ಸುತ್ತಳತೆ ಇರುವುದು. ಮರದಿಂದ ಕೊಯಿದು ತಂದ ಹಸಿರು ಅಡಿಕೆಯನ್ನು ಸುಲಿದು ಬೇಯಿಸಿ 8-10 ದಿನ ಬಿಸಿಲಲ್ಲಿ ಒಣಗಿಸಿದರೆ ಕೆಂಪು ಅಡಿಕೆ ಸಿದ್ಧವಾಗುತ್ತದೆ. ಇದು ರಾಶಿ ಅಡಿಕೆ. ಅದರಲ್ಲಿ ಬೆಳೆದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ = ಬೆಟ್ಟೆ ಸಿಪ್ಪೆ ಪೂರ್ಣ ಬಿಡದ ಅಡಿಕೆ = ಕೆಂಪುಗೋಟು, ನೆರಿ-ನೆರಿ ಇರುವ ಬೆಳೆದ ಅಡಿಕೆ = ನುರಿಅಡಿಕೆ, ಸುರಿಟಿಕೊಂಡ ಎಳೆಯ ಅಡಿಕೆ = ಚಿಕಣಿ, ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ = ಆಪಿಅಡಿಕೆ, ಹೀಗೆ ಬೇರೆ ಬೇರೆ ವಿಧಗಳ ಅಡಿಕೆಯನ್ನು ಆಯ್ದು ಬೇರ್ಪಡಿಸಲಾಗುವುದು. ಶಿವಮೊಗ್ಗ ಮತ್ತು ಕೆಲವು ಕಡೆ ಎಳೆಹಸಿ ಅಡಿಕೆಯನ್ನು ಎರಡು ಅಥವಾ ನಾಲ್ಕೈದು ಸೀಳು ಮಾಡಿ ಬೇಯಿಸಿ ಒಣಗಿಸಲಾಗುವುದು; ಇದಕ್ಕೆ 'ಸರಕು' ಅಥವಾ ಹೋಳು ಅಡಿಕೆ ಎನ್ನುವರು. ಇದರಲ್ಲೂ ಬೇರೆ ಬೇರೆ ವಿಧಗಳನ್ನು ವಿಂಗಡಿಸಲಾಗುವುದು ಇದಕ್ಕೆ ಬೆಲೆ ಎಲ್ಲದಕ್ಕಿಂತ ಹೆಚ್ಚು.<ref>http://economictimes.indiatimes.com/topic/arecanut</ref>
೨,೭೫೬

edits

"https://kn.wikipedia.org/wiki/ವಿಶೇಷ:MobileDiff/844870" ಇಂದ ಪಡೆಯಲ್ಪಟ್ಟಿದೆ