ಚರ್ಚೆಪುಟ:ದ್ರೌಪದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
* ದ್ರೌಪದಿಯ ಈ ಕಥನ ಪರಂಪರೆಗೆ ಈಚಿನ ಸೇರ್ಪಡೆ ವೀರಪ್ಪ ಮೊಯಿಲಿ ಅವರ ಸಿರಿಮುಡಿ ಪರಿಕ್ರಮಣ ಮಹಾಕಾವ್ಯ. ಮೊಯಿಲಿ ಅವರು ಸಂಸ್ಕೃತ ಪಠ್ಯಗಳ ಜೊತೆಗೆ, ಭಾರತೀಯ ಭಾಷೆಗಳಲ್ಲಿ ರಚಿತವಾದ ಅನೇಕ ಪಠ್ಯಗಳನ್ನು ಅಭ್ಯಸಿಸಿ, ಮೌಖಿಕ ನಿರೂಪಣೆಗಳಿಗೆ ಕಿವಿಗೊಟ್ಟು, ಇವೆಲ್ಲಕ್ಕಿಂತ ಭಿನ್ನವಾದ ಮತ್ತು ಅನನ್ಯವಾದ ದ್ರೌಪದಿಯ ಪಾತ್ರಕಲ್ಪನೆಯೊಂದನ್ನು ಕೊಟ್ಟಿದ್ದಾರೆ. ಎಳವೆಯಲ್ಲಿಯೇ ಕಷ್ಣನನ್ನು ಮದುವೆಯಾಗಬಯಸಿದ ಆಕೆ ಯುಗಕ್ಷೇಮದ ಗುರಿಯೊಂದಿಗೆ ಅರ್ಜುನನ್ನು ಮದುವೆಯಾಗುವುದು, ಕರ್ಣನ ಬಗ್ಗೆ ಆಕೆಯಲ್ಲಿ ಮೂಡುವ ನವಿರಾದ ಭಾವನೆಗಳು, ನಾಡೊಂದರ ನಿರ್ಮಿತಿಯಲ್ಲಿ ಆಕೆ ವಹಿಸುವ ಪಾತ್ರ ಮೊದಲಾದುವುಗಳನ್ನು ಸಿರಿಮುಡಿ ಪರಿಕ್ರಮಣಹಂತ ಹಂತವಾಗಿ ದಾಖಲಿಸಿಸುತ್ತಾ ಹೋಗುತ್ತದೆ. 'ನಾರಿಯತ್ಯಾಚಾರ ಪುರುಷರ್ಗೆ ಹೆಮ್ಮೆಯೇ' ಎಂಬ ಪ್ರಶ್ನೆಯನ್ನು ಕೇಳುವ ಈ ಕಾವ್ಯವು ದ್ರೌಪದಿಯ ಮೂಲಕ ಭಾರತೀಯ ಮಹಿಳೆಯ ಶೋಷಣೆ, ಕ್ರಿಯಾಶೀಲತೆ, ಹೋರಾಟ, ಯುಗ ನಿರ್ಮಾಣದಲ್ಲಿ ಅವಳ ಪಾತ್ರ ಮತ್ತಿತರ ಅಂಶಗಳನ್ನು ಆಧುನಿಕ ಅರಿವಿನಲ್ಲಿ ಕಟ್ಟಿಕೊಡುತ್ತದೆ.
 
ಹೀಗೆ ದ್ರೌಪದಿಯು ಇವತ್ತು ಒಂದು ಪಾತ್ರವಾಗಿ ಉಳಿದಿಲ್ಲ. ಬದಲು ಪ್ರಶ್ನೆಯಾಗಿದ್ದಾಳೆ.
[[ಸದಸ್ಯ:Bschandrasgr]] :Bschandrasgr .[[ಬಿ.ಎಸ್ ಚಂದ್ರಶೇಖರ]]೨೮-೭-೨೦೧೪ ಸಾಗರ Bschandrasgr
"https://kn.wikipedia.org/wiki/ಚರ್ಚೆಪುಟ:ದ್ರೌಪದಿ" ಇಂದ ಪಡೆಯಲ್ಪಟ್ಟಿದೆ
Return to "ದ್ರೌಪದಿ" page.