Srinivas ujire

Joined ೨೩ ಏಪ್ರಿಲ್ ೨೦೧೫
ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಮುಚ್ಚದೆ ಇರುವ ಚರಂಡಿಗಳು,ಹಾಗೂ ಅವುಗಳಲ್ಲಿ ಉಂಟಾಗುವ,ಉತ್ಪತ್ತಿಯಾಗುವ ಕ್ರಿಮಿಗಳು ಕೀಟಗಳು,ಇವುಗಳಿಂದ ಪರಿಸರದಲ್ಲಿ ಉಂಟು ಮಾಡುವ ಭಯಾನಕ ರೋಗ ರುಜಿನಗಳಿಗೂ ಕಾರಣವಾಗಿರುವುದು ಮಾತ್ರವಲ್ಲ ಇವುಗಳಿಂದ ಉತ್ಪತ್ತಿಯಾಗುವ ಕೆಟ್ಟವಾಸನೆ(ದುರ್ನಾಥ)ಯ ಫಲವಾಗಿ ಪರಿಸರದಲ್ಲಿ ನಡೆದಾಡುವ ಸಾರ್ವಜನಿಕರ
ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅತಿಯಾಗಿ ವ್ಯಾಪಿಸಿಕೊಂಡಿರುವ ಈ ಭೀಕರ ಸಮಸ್ಯೆ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡುಬರುವುದು ಹೆಚ್ಚು.ಅಭಿವೃದ್ಧಿ ಹೊಂದದ ದೇಶಗಳಲ್ಲಂತೂ ಊರಿನ ಹೊಲಸನ್ನು ಈ ರೀತಿಯಾಗಿ ಬಿಡುಗಡೆ ಮಾಡುವುದು ಸರ್ವೇಸಾಮಾನ್ಯ; ಈ ಬಗೆಯಲ್ಲಿ ತ್ಯಾಜ್ಯ ಬಿಡುಗಡೆ ಮಾಡುವುದನ್ನು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಚೀನಾ,ಭಾರತ ಮತ್ತು ಇರಾನ್‌ಗಳೂ ರೂಢಿಸಿಕೊಂಡಿವೆ.
ಊರಿನ ಹೊಲಸು, ಜಿಗುಟು ರಾಡಿ, ಕಸ ಮತ್ತು ವಿಷಯುಕ್ತ ಪದಾರ್ಥಗಳನ್ನೂ ಚರಂಡಿಗೆ, ನೀರಿಗೆ ಎಸೆಯಲಾಗುತ್ತದೆ. ಊರಿನ ಹೊಲಸನ್ನು ಸಂಸ್ಕರಿಸಿದರೂ ಸಮಸ್ಯೆ ಮತ್ತೆ ಉದ್ಭವಿಸುತ್ತದೆ. ಸಂಸ್ಕರಣೆಯ ನಂತರ ದೊರೆಯುವ ಹೊಲಸು ಗಟ್ಟಿಗಳು ಅಥವಾ ಪುಡಿ ಪದಾರ್ಥವನ್ನು ಗುಂಡಿಗಳಲ್ಲಿ ತುಂಬಬೇಕು, ಇಲ್ಲವೇ ನೆಲದ ಮೇಲೆ ಹರಡ ಬೇಕು ಅಥವಾ ಸಮುದ್ರಕ್ಕೆ ಎಸೆಯಬೇಕು.[೮]
ಊರಿನ ಹೊಲಸಷ್ಟೇ ಅಲ್ಲದೇ ಜಮೀನುಗಳಿಂದ ಕೊಚ್ಚಿ ಹರಿದು ಬರುವ ಮಾಲಿನ್ಯ,ಚಂಡಮಾರುತದಿಂದ ಅಪ್ಪಳಿಸುವ ಭಾರೀ ಮಳೆಯಿಂದ ಹರಿದು ಬರುವ ಮಲಿನ ಪದಾರ್ಥ, ಮತ್ತು ಸರಕಾರ ಹಾಗೂ ಕೈಗಾರಿಕೆಗಳಿಂದ ರಾಸಾಯನಿಕ ತ್ಯಾಜ್ಯದ ಸುರಿತ-ಇವೆಲ್ಲವೂ ಜಲ ಮೂಲಿನ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳು.
 
ಭೂಮಿಯ ಪವಿತ್ರತೆ :- ವಿಶ್ವಕ್ಕೆ ಜಲ ಪೂರೈಕೆ ಮತ್ತು ವಿತರಣೆ :-
 
ಆಹಾರ ಮತ್ತು ನೀರು ಮಾನವನ ತಳ ಮಟ್ಟದ ಅವಶ್ಯಕತೆ. ವರ್ಷ 2002ರಿಂದ ಜಾಗತಿಕ ಮಟ್ಟದಲ್ಲಿ ಕಲೆಹಾಕಲಾಗಿರುವ ಅಂಕಿಅಂಶದ ಪ್ರಕಾರ ಪ್ರತಿ 10 ಮಂದಿಯಲ್ಲಿ:
ಅಂದಾಜು 5 ಜನರು ನೀರಿನ ಸಂಪರ್ಕ ಪಡೆದಿದ್ದಾರೆ (ತಮ್ಮ ಮನೆಯಲ್ಲಿ,ಅಂಗಳದಲ್ಲಿ ಅಥವಾ ಹೊಲದಲ್ಲಿ)
3 ಮಂದಿ ಸಂರಕ್ಷಿಸಲ್ಪಟ್ಟ ಬಾವಿ ಅಥವಾ ಬೀದಿ ನಲ್ಲಿಯಲ್ಲಿ ದೊರೆಯುವಂಥ ಇತರ ಸುಧಾರಿತ ಜಲ ಮೂಲವನ್ನು ಆಶ್ರಯಿಸಿದ್ದಾರೆ;
2 ಜನಕ್ಕೆ ಇಂಥ ಯಾವುದೇ ಸೇವೆ ಇಲ್ಲದೇ ವಂಚಿತರಾಗಿದ್ದಾರೆ;
10 ರಲ್ಲಿ 4 ಮಂದಿ ಸುಧಾರಿತ ಶೌಚಾಲಯ ಸೌಲಭ್ಯವಿಲ್ಲದೇ ಬದುಕುತ್ತಿದ್ದಾರೆ.[೩]
ವರ್ಷ 2002ರ ಭೂಶೃಂಗದಲ್ಲಿ ಪಾಲ್ಗೊಂಡ ಸರಕಾರಗಳು ಈ ಕೆಳಗಿನ ಕ್ರಿಯಾ ಯೋಜನೆಗೆ ಅಂಗೀಕಾರ ನೀಡಿದವು:
 
ವರ್ಷ 2015ರ ವೇಳೆಗೆ ಕುಡಿಯುವ ನೀರು ಸಿಕ್ಕದೇ ಪರದಾಡುತ್ತಿರುವ ಮಂದಿಗೆ ಸಮಪಾಲು ನೀಡುವುದು. ವಿಶ್ವ ಜಲ ಪೂರೈಕೆ ಮತ್ತು ಶುಚಿತ್ವದ ಮೌಲ್ಯ ಮಾಪನ ವರದಿ-2000 ([http:// www.who.int /water_sanitation _health/monitoring / globalassess/en/ ಗ್ಲೋಬಲ್ ವಾಟರ್ ಸಪ್ಲೈ ಅಂಡ್ ಸ್ಯಾನಿಟೇಷನ್ ರಿಪೋರ್ಟ್ ೨೦೦೦ = GWSSAR]) ಬಳಕೆದಾರನ ಮನೆ ಹಾಗೂ ಜಲ ಮೂಲದ ನಡುವಿನ ಅಂತರ ಒಂದು ಕಿಲೋಮೀಟರ್‌ ಒಳಗಿದ್ದು ಪ್ರತಿ ವ್ಯಕ್ತಿಗೆ ನಿತ್ಯವೂ ಕನಿಷ್ಠ 20 ಲೀಟರ್‌ ನೀರು "ಸಿಕ್ಕುವಂತಿರುವುದು ನ್ಯಾಯೋಚಿತ" ಎಂದು ವರದಿಯಲ್ಲಿ ವಿವರಿಸಲಾಗಿದೆ.
ಶೌಚಾಲಯದ ಮೂಲ ಸೌಕರ್ಯವಿಲ್ಲದ ಜನಕ್ಕೆ ಅದನ್ನು ಒದಗಿಸುವುದು. "ಶೌಚಾಲಯದ ಮೂಲ ಸೌಕರ್ಯ" ಖಾಸಗಿಯದೇ ಇರಬಹುದು ಅಥವಾ ಪಾಲುದಾರಿಕೆಯದ್ದೇ ಆಗಿರಬಹುದು, ಆದರೆ ಅದು ಮಾನವನ ಶರೀರದಿಂದ ಹೊರಬಂದಿರುವ ತ್ಯಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ.
ಸಂಪನ್ಮೂಲದ ಕೊರತೆ ಹಾಗೂ ಕ್ಷಿಪ್ರಗತಿಯಲ್ಲಿ ಏರುತ್ತಿರುವ ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಬಡದೇಶಗಳು 2025ರ ವೇಳೆಗೆ ನೀರಿನ ಕೊರತೆಯಿಂದ ನರಳುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ. ನಮ್ಮ ಮುಂದಿನ ಪೀಳಿಗೆ ಇಂಥಹ ಕಷ್ಟಗಳನ್ನು ಎದುರಿಸಬೇಕಾಗಿಬರಬಹುದು,ನೀರಿನ ಸಮಸ್ಯೆಯಿಂದ ಜನತೆ ತತ್ತರಗೊಳ್ಳಬಹುದು.ಇದಕ್ಕಾಗಿ ಭೂಮಿಯಲ್ಲಿನ ಅಂತರ್ಜಲ ಖಾಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇರುವುದು ಮಾತ್ರವಲ್ಲ ನೀರು ಮಳೆಗಾಲದಲ್ಲಿ ಹರಿದು ಅನಾವಶ್ಯಕವಾಗಿ ಸರಾಗವಾಗಿ ಸಮುದ್ರವನ್ನು ಸೇರುವುದನ್ನು ತಡೆಯುವ ಸಲುವಾಗಿ ಅಲ್ಲಲ್ಲಿ ಇಂಗು ಗುಂಡಿಗಳ ರಚನೆ, ಹೊಸ ಹೊಸ ತೋಡು, ಕೆರೆಗಳ ರಚನೆಯಿಂದ ಮಳೆಗಾಲದ ನೀರನ್ನು ರಕ್ಷಿಸಿ ಶೇಕರಿಸಿಡುವುದು,ಸಣ್ಣ ಹಾಗೂ ಮದ್ಯಮ ಪ್ರಮಾಣದ ಜಲಾಶಯ,ಅಣೆಕಟ್ಟುಗಳ ನಿರ್ಮಾಣ ಇವುಗಳ ಪಾತ್ರ ಮಹತ್ತರವಾಗಿದೆ ಮಾತ್ರವಲ್ಲ ಅನಿವಾರ್ಯವೂ ಆಗಲಿದೆ.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/844475" ಇಂದ ಪಡೆಯಲ್ಪಟ್ಟಿದೆ