ಆದಿ ಶಂಕರರು ಮತ್ತು ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೫ ನೇ ಸಾಲು:
=== ಮೀಮಾಂಸಕ ಮಂಡನ ಮಿಶ್ರರ ಭೇಟಿ :- ===
-------------------------------
ವೇದಗಳ ಅಂತಿಮ ತಾತ್ಪರ್ಯ ಅದ್ವೈತ ಸಿದ್ಧಾಂತವೆಂದು ಸಾಧಿಸಲು ಅಂದಿನಕಾಲದ ಅತ್ಯಂತ ಪ್ರಸಿದ್ಧ ಮೀಮಾಂಸ ಪಂಡಿತರಾದ, ಕರ್ಮವೇ ವೇದ ತಾತ್ಪರ್ಯವೆಂದು ಹೇಳುವ ಮಂಡನಮಿಶ್ರರನ್ನು ಕಾಣಲು ಮಾಹಿಷ್ಮತಿ ನಗರಕ್ಕೆ [ಇಂದಿನ ಬಿಹಾರದಲ್ಲಿರುವ ಮಹಿಷಿ ಬಂಗಾವನ್ ಸಹರ‍್ಸ] ಹೋದರು. ಅವರೊಡನೆ ಹದಿನೈದು ದಿನಗಳ ಕಾಲ ಸತತ ವಾದ ಮಾಡಿದರು. ಮಿಶ್ರರ ಪತ್ನಿ ಉಭಯ ಭಾರತಿಯೇ ನಿರ್ಣಾಯಕಿ. ಅವಳು ತನ್ನ ಪತಿ ಮಿಶ್ರರು ವಾದದಲ್ಲಿ ಸೋತಿರವುದಾಗಿ ತೀರ್ಪು ಕೊಟ್ಟಳು. ಆದರೆ ತನ್ನನ್ನೂ ಗೆಲ್ಲಬೇಕೆಂದು ಪಂಥವನ್ನು ಮಾಡಿದಳು. ಅವಳು ಕಾಮಸೂತ್ರದ ಮೇಲಿನ ಸಂಸಾರಿಕ ವಿಚಾರದಲ್ಲಿ ಪ್ರಶ್ನೆ ಗಳನ್ನು ಕೇಳಿದಳು. ಬಾಲ ಸಂನ್ಯಾಸಿಗಳಾದ ಶಂಕರರಿಗೆ ಉತ್ತರ ಗೊತ್ತಿರಲಿಲ್ಲ. ಆವರು ಆರು ತಿಂಗಳ ಸಮಯ ಕೇಳಿದರು. ಅದರಂತೆ ಅವರು ಅಕಾಲ-ಮರಣ ಹೊಂದಿದ ವಿಕ್ರಮ ರಾಜನ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿ, ಅವನ ಪತ್ನಿಯಿಂದ ಭಾರತಿ ಕೇಳಿದ ಪ್ರಶ್ನೆ ಗಳಿಗೆ ಉತ್ತರ ತಿಳಿದು, ತಮ್ಮ ವಾದ ಬರೆದರು. ಪುನಹ ತಮ್ಮ ದೇಹ ಸೇರಿ ಆ ಗ್ರಂಥವನ್ನು ಭಾರತಿ ದೇವಿಗೆ ಕೊಟ್ಟು ಉತ್ತರವನ್ನು ಕಂಡುಕೊಳ್ಳಲು ಹೇಳಿದರು . ಅವಳು ಆ ಉತ್ತರವನ್ನು ಒಪ್ಪಲು, ಮೊದಲೇ ಮಾಡಿಕೊಂಡ ನಿಯಮದಂತೆ ಮಂಡನ ಮಿಶ್ರರು ಸುರೇಶ್ವರಾಚಾರ್ಯರಂಬಸುರೇಶ್ವರಾಚಾರ್ಯರೆಂಬ ಹೆಸರಿನಲ್ಲಿ ಸಂನ್ಯಾಸಿಗಳಾಗಿ ಶಂಕರರ ಶಿಷ್ಯರಾದರು. ಉಭಯಭಾರತಿಯೂ ಅವರನ್ನು ಹಿಂಬಾಲಿಸಿದಳು. ಕೊನೆಗೆ ಶೃಂಗೇರಿಯ ಶಾರದಾ ಪೀಠದಲ್ಲಿ ನೆಲಸಿದಳೆಂದು ಪ್ರತೀತಿ ಇದೆ. ಮಂಡನಮಿಶ್ರರೇ ಮುಂದೆ ದಕ್ಷಿಣಾಮ್ನಾಯ ಶಂಕರ ಮಠದ ಶೃಂಗೇರಿಯ ಪೀಠಾಧಿಪತಿಗಳಾಗಿ ಶಂಕರರ ಗ್ರಂಥಗಳಿಗೆ ವಾರ್ತಿಕಗಳನ್ನು [ಟೀಕೆ] ಬರೆದು ವಾರ್ತಿಕಕಾರರೆನಿಸಿದರು.
*ಅವರು(ಶಂಕರರು) ಕಾಶಿ ಯಿಂದ ಮಹಾರಾಷ್ಟ್ರ ಕ್ಕೆ ಶಿಷ್ಯರೊಡನೆ ಪ್ರಯಾಣ ಮಾಡಿ, ಅಲ್ಲಿಂದ ಶ್ರೀಶೈಲಕ್ಕೆ ಹೋದರು.ಅಲ್ಲಿ ಅವರು ಶಿವಾನಂದಲಹರಿಯನ್ನು ರಚಿಸಿದರು. ಶ್ರೀಶೈಲದಲ್ಲಿ ಅಥವಾ ಶಂಕರರು ಶ್ರೀಶೈಲದಿಂದ ಗೋಕರ್ಣಕ್ಕೆ ಬರುವಾಗ ಒಬ್ಬ ಕಾಪಾಲಿಕನು ಅವರ ಒಪ್ಪಿಗೆಯನ್ನು ಹೇಗೋ ಪಡೆದು ಅವರನ್ನೇ ಬಲಿಕೊಡಬೇಕೆಂದು ಪ್ರಯತ್ನಿಸಿದನು. ಇದನ್ನು ತಿಳಿದ ಶಂಕರರ ಶಿಷ್ಯ ಪದ್ಮಪಾದರು ನರಸಿಂಹನನ್ನು ಪ್ರಾರ್ಥಿಸಲು, ಉಗ್ರ ನರಸಿಂಹನು ಪ್ರತ್ಯಕ್ಷನಾಗಿ ಶಂಕರರನ್ನು ಕಾಪಾಡಿದನು. ಆಗ ಶ್ರೀ ಶಂಕರರು ಲಕ್ಷ್ಮೀ ಮರಸಿಂಹ ಸ್ತೋತ್ರವನ್ನು ರಚಿಸಿ ನರಸಿಂಹನನ್ನು ಹಾಡಿ ಶಾಂತಗೊಳಿಸಿದರು.
*ಗೋಕರ್ಣದಲ್ಲಿ ಹರಿ-ಶಂಕರ ದೇವಾಲಯವನ್ನು ಸಂದರ್ಶಸಿ, ಕೊಲ್ಲೂರಿಗೆ ಬಂದು ಮೂಕಾಂಬಿಕೆಯನ್ನು ಸಂದರ್ಶಿಸಿದರು. ಕೊಲ್ಲೂರಿನಲ್ಲಿ ಒಬ್ಬ ಮೂಕ ನೆಂದುಮೂಕನೆಂದು ತಿಳಿದಿದ್ದ ಬಾಲಕನನ್ನು ಶಿಷ್ಯನಾಗಿ ಸ್ವೀಕರಿಸಿದರು. ಅವನು ಜನ್ಮಜಾತ ಪಂಡಿತನೂ ಜ್ಞಾನಿಯೂ ಆಗಿದ್ದ. ಅವನಿಗೆ ಹಸ್ತಾಮುಲಕಾಚಾರ್ಯನೆಂದು ನಾಮಕರಣ ಮಾಡಿದರು.
*ಮುಂದೆ ಅವರು ತಮ್ಮ ಪರಿವಾರದೊಡನೆ [ಶಿಷ್ಯರು ಮತ್ತು ಉಭಯ ಭಾರತಿ] ಶೃಂಗೇರಿ ಸೇರಿದರು. ಅಲ್ಲಿ ತೋಟಕಾಚಾರ್ಯನೆಂದು ಪ್ರಸಿದ್ಧನಾದ ತೋಟಕಾಚಾರ್ಯನನ್ನು ಶಿಷ್ಯನಾಗಿ ಸ್ವೀಕರಿಸಿದರು. ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿ ಸುರೇಶ್ವರಾಚಾರ್ಯ ರನ್ನು ಅಲ್ಲಿ ನೆಲೆಗೊಳಿಸಿ. ಕೇರಳಕ್ಕೆ ಹೋದರು. [ಕೇರಳದಲ್ಲಿ ಅವರ ತಾಯಿ ಅನಾರೋಗ್ಯದಿಂದ ತೀರಿಕೊಳ್ಳಲು ಆ ಊರಿನ ನಂಬೂದರಿ ಬ್ರಾಹ್ಮಣರು ಅಸಹಕಾರ ತೋರಿದ್ದರಿಂದ ಶಂಕರರೊಬ್ಬರೇ ಅಂತ್ಯಕ್ರಿಯೆ ನಡೆಸಿದರು ಎಂದು ಐತಿಹ್ಯವಿದೆ]. ಅಲ್ಲಿಂದ ಪುನಃ ತಮಿಳನಾಡು, ಕರ್ನಾಟಕ, ಕಾಶ್ಮೀರ, ನೇಪಾಲಗಳಿಗೆ ದಿಗ್ವಿಜಯ ಹೋಗಿ ಅಲ್ಲಿದ್ದ ಪಂಡಿತರನ್ನೆಲ್ಲಾ ಜಯಿಸಿ ಅದ್ವೈತ ತತ್ವದ ಪ್ರಚಾರ ಮಾಡಿದರು.
 
=== ದಿಗ್ವಿಜಯದ ವಿವರ ;- ===
-------------------------------