ಕ್ರಾಂತಿವೃತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
 
== ಕ್ರಾಂತಿವೃತ್ತ ಮತ್ತು ಸಮಭಾಜಕ ==
ಭೂಮಿಯ ಅಕ್ಷವು ಅದರ ಕಕ್ಷೀಯ ಪರಿಭ್ರಮಣೆಯ ಸಮತಳಕ್ಕೆ ಲಂಬವಾಗಿಲ್ಲ. ಹೀಗಾಗಿ, [[:en:equatorial plane|ಸಮಭಾಜಕದ ಸಮತಳ]]ವು ಕ್ರಾಂತಿವೃತ್ತದ ಸಮತಳಕ್ಕೆ ಸಮಾಂತರವಾಗಿಲ್ಲದೆ, ಸುಮಾರು ೨೩°೨೭' ಕೋನವನ್ನುಂಟುಮಾಡುತ್ತದೆ. ಈ ಕೋನಕ್ಕೆ [[:en:obliquity of the ecliptic|ಕ್ರಾಂತಿವೃತ್ತದ ಬಾಗು]] ಎಂದು ಹೆಸರು. ಖಗೋಳ ಗುಮ್ಮಟದೊಡನೆ ಸಮಭಾಜಕದ ಮತ್ತು ಕ್ರಾಂತಿವೃತ್ತದ ಸಮತಳಗಳ ಛೇದನಗಳು ಉಂಟುಮಾಡುವ [[:en:great circles|ಮಹಾವೃತ್ತ]]ಗಳಿಗೆ ಖಗೋಳ ವಿಷುವದ್ವೃತ್ತ ಮತ್ತು ಕ್ರಾಂತಿವೃತ್ತ ಎಂದು ಹೆಸರು. ಈ ಎರಡು ಸಮತಳಗಳ ಛೇದನ ರೇಖೆಯು ಒಂದು ವ್ಯಾಸದ ಮೇಲೆ ಎದುರುಬದಿರಾಗಿರುವ ಎರಡು ಬಿಂದುಗಳನ್ನು ಉಂಟುಮಾಡುತ್ತದೆ. ಈ ಬಿಂದುಗಳಿಗೆ [[ವಿಷುವ]] ಬಿಂದುಗಳೆಂದು ಹೆಸರು. ಸೂರ್ಯನು [[ದಕ್ಷಿಣ]]ದಿಂದ [[ಉತ್ತರ]]ಕ್ಕೆ ಹಾದುಹೋಗುವ ವಿಷುವಕ್ಕೆ [[ವಸಂತವಿಷುವ]] ಅಥವಾ [[:en:first point of Aries|ಮೇಷದ ಮೊದಲ ಬಿಂದು]] ಎಂದು ಹೆಸರು. ಸಾಮಾನ್ಯವಾಗಿ '''λ''' ಚಿಹ್ನೆಯಿಂದ ಸೂಚಿಸಲಾಗುವ ಕ್ರಾಂತಿವೃತ್ತದ [[ರೇಖಾಂಶ]]ವನ್ನು ೦°ಯ ಈ ಬಿಂದುವಿನಿಂದ ೩೬೦°ಯವರೆಗೆ [[ಪೂರ್ವ]]ದ ಕಡೆಗೆ ಅಳೆಯಲಾಗುತ್ತದೆ. ಸಾಮಾನ್ಯವಾಗಿ '''β''' ಚಿಹ್ನೆಯಿಂದ ಸೂಚಿಸಲಾಗುವ ಅಕ್ಷಾಂಶವನ್ನು ಉತ್ತರಕ್ಕೆ +೯೦° ಅಥವಾ ದಕ್ಷಿಣಕ್ಕೆ -೯೦°ವರೆಗೆ ಅಳೆಯಲಾಗುತ್ತದೆ. ಇದೇ ಛೇದನ ಬಿಂದುವು ವಿಷುವದ್ವೃತೀಯ ನಿರ್ದೇಶಕ ವ್ಯವಸ್ಥೆಯ ಮೂಲವನ್ನೂ ವ್ಯಾಖ್ಯಾನಿಸುತ್ತದೆ. ಈ ವ್ಯವಸ್ಥೆಯ ಅಕ್ಷಗಳಂದರೆಅಕ್ಷಗಳೆಂದರೆ: ೧. ಸಾಮಾನ್ಯವಾಗಿ '''α''' ಅಥವಾ ''R.A'' ಇಂದ ಸೂಚಿಸಲಾಗುವ [[ವಿಷುವದಂಶ]] - ಇದನ್ನು ಪೂರ್ವದೆಡೆಗೆ ೦ ಯಿಂದ ೨೪ ಘಂತೆಗಳವರೆಗೆಘಂಟೆಗಳವರೆಗೆ ಅಳೆಯಲಾಗುತ್ತದೆ. ೨. ಸಾಮಾನ್ಯವಾಗಿ '''δ''' ಚಿಹ್ನೆಯಿಂದ ಸೂಚಿಸಲಾಗುವ [[ಕ್ರಾಂತಿ]] - ಇದನ್ನು ಉತ್ತರಕ್ಕೆ +೯೦° ಮತ್ತು ದಕ್ಷಿಣಕ್ಕೆ -೯೦°ಯವರೆಗೆ ಅಳೆಯಲಾಗುತ್ತದೆ. ಸರಳ ಆವರ್ತನ ಸೂತ್ರಗಳನ್ನು ಬಳಸಿ α,δ ಮತ್ತು λ,βಗಳನ್ನು ಒಂದರಿಂದ ಇನ್ನೊಂದಕ್ಕೆ ಮಾರ್ಪಡಿಸಬಹುದು ([[:en:ecliptic coordinate system|ಕ್ರಾಂತಿವೃತ್ತೀಯ ನಿರ್ದೇಶಕ ವ್ಯವಸ್ಥೆ]]ಯನ್ನು ನೋಡಿ).
 
== ಕ್ರಾಂತಿವೃತ್ತ ಮತ್ತು ನಕ್ಷತ್ರಗಳು ==
"https://kn.wikipedia.org/wiki/ಕ್ರಾಂತಿವೃತ್ತ" ಇಂದ ಪಡೆಯಲ್ಪಟ್ಟಿದೆ