ಕೋಟೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಹೊರಗಿನ ಕೊಂಡಿಗಳು: ಕಂಟೆಂಟ್ ಯಾಡ್ ಮಾಡಲಾಗಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೧ ನೇ ಸಾಲು:
}}
[[File:Koteshwara.jpg|thumb|ಕೋಟೇಶ್ವರ]]
ಕೋಟೇಶ್ವರ ಗ್ರಾಮವು ಕರ್ನಾಟಕದ ಕರಾವಳಿಯ [[ಉಡುಪಿ]] ಜಿಲ್ಲೆಯ [[ಕುಂದಾಪುರ]] ತಾಲೂಕಿನಲ್ಲಿ ಇದೆ. ಈ ಗ್ರಾಮದ ವಿಸ್ತಾರವು ಸುಮಾರು ೩೬.೪೪೭ ಮೀಟರ್‌ನಷ್ಟು ಇದೆ. ಕೇವಲ ಒಂದೂವರೆ ಕಿ. ಮೀ. ದೂರದಲ್ಲಿ [[ಅರಬ್ಬೀ ಸಮುದ್ರ]], ಪೂರ್ವಕ್ಕೆ ಪಶ್ಚಿಮ ಘಟ್ಟಗಳ ಸಾಲು, ಉತ್ತರಕ್ಕೆ ತಾಲೂಕು ಕೇಂದ್ರ, ಕೋಟೇಶ್ವರದ ಸುತ್ತಮುತ್ತ ಹತ್ತಾರು ಗ್ರಾಮಗಳ ಸಮೂಹ ಮತ್ತು ಸಪ್ತಕ್ಷೇತ್ರಗಳಲ್ಲಿ ಒಂದೆಂಬ ಕೀರ್ತಿಯಿದೆ. ಉಡುಪಿ ಜಿಲ್ಲೆಯಲ್ಲಿ ತುಳು ಭಾಷೆಯ ಪ್ರಭುತ್ವವಿದ್ದರೂ ಈ ಕ್ಷೇತ್ರಕ್ಷೇತ್ರದ ಜನರು ವಿಶಿಷ್ಟ ಕನ್ನಡವಾದ 'ಕುಂದಗನ್ನಡ'ದಲ್ಲಿ ವ್ಯವಹರಿಸುತ್ತಾರೆ. ೨೦೦೭ರ ಜನ ಗಣತಿಯ ಪ್ರಕಾರ ಈ ಗ್ರಾಮದಲ್ಲಿ ಒಟ್ಟು ೨೧೧೦೦ ಜನಸಂಖ್ಯೆ ಇದೆ.<ref>http://www.karnatakaholidays.com/koteshwara.php www.karnatakaholidays.com/koteshwara.php</ref>
 
ಉಡುಪಿ ಜಿಲ್ಲೆಯ ಉತ್ತರ ತುದಿಯ ತಾಲ್ಲೂಕಿನ ಕೇಂದ್ರವಾದ ಕುಂದಾಪುರದಿಂದ ೪ ಕಿ.ಮೀ. ದೂರಕ್ಕಿರುವ ಪಟ್ಟಣವೇ ಇಂದು ಕೋಟೇಶ್ವರವೆಂಬ ಗ್ರಾಮ. ಕೋಟೇಶ್ವರ ಹದಿನಾಲ್ಕು ಗ್ರಾಮದ ಸಮುದಾಯದಿಂದ ರಚಿತವಾಗಿದೆ. ಅಂದಿನ ಕಾಲದಲ್ಲಿ ತೆಕ್ಕಟ್ಟೆ, ಕೊಮೆ, ಕೊರೋಡಿ, ಕುಂಭಾಶಿ, ಗೋಪಾಡಿ, ಮೂಡಗೋಪಾಡಿ, ಬೀಜಾಡಿ, ಹೊದ್ರಾಳಿ, ಕುಂಬ್ರಿ, ಬಡಾಕೆರೆ, ಮೂಡಹಂಗಳೂರು, ಹಂಗಳೂರು, ಕೋಣಿ, ಕಟ್ಗೆರೆಗಳೆಂಬ ಹದಿನಾಲ್ಕು ಗ್ರಾಮಗಳ ಒಕ್ಕೂಟವನ್ನು ಕೋಟೇಶ್ವರವೆಂದು ಕರೆಯಲಾಗುತ್ತದೆ. ಕೋಟೇಶ್ವರವನ್ನು ಧ್ವಜಪುರ ಎಂಬ ಹೆಸರಿನಲ್ಲೂ ಕರೆಯುತ್ತಾರೆ.
 
ಏಳು ಪ್ರದಕ್ಷಿಣವಿರುವ ಪ್ರಾಚೀನ ದೇವಾಲಯ, ಅತ್ಯಂತ ಸುಂದರವಾದ ಪಾವಟಿಗೆಯನ್ನು ಹೊಂದಿರುವ ನಾಲ್ಕುವರೆ ಎಕರೆ ಸ್ಥಳವನ್ನು ಕ್ರಮಿಸಿರುವ ಕೋಟಿತೀರ್ಥ (ಇದು [[ಕರಾವಳಿ]]ಯಲ್ಲಿಯೇ ಅತ್ಯಂತ ದೊಡ್ಡದಾದ ಪುಷ್ಖರಣಿಯೆಂಬ ಅಭಿದಾನ ಪಡೆದಿದೆ), ಐದು ಅಂತಸ್ತುಗಳಿಂದ ನಿರ್ಮಿತವಾಗಿರುವ ಬೃಹತ್ ಬ್ರಹ್ಮರಥ, ನೇರವಾದ ಅಗಲವಾದ ರಥಬೀದಿಯಿಂದ ಈ ಕ್ಷೇತ್ರ ಕಂಗೊಳಿಸುತ್ತದೆ. ಯತಿಗಳಾದ ಸೋದೆ ಮಠದ ಶ್ರೀ ವಾದಿರಾಜರ ಜನ್ಮಸ್ಥಳವಾದ ಹೂವಿನಕೆರೆ ಕೋಟೇಶ್ವರದಿಂದ ಕೇವಲ ಐದು ಕಿ. ಮೀ. ದೂರದಲ್ಲಿದೆ. ಇನ್ನೊಂದು ಪ್ರಸಿದ್ಧಪ್ರಸಿದ್ಧವಾದ ಆನೆಗುಡ್ಡೆ ಮಹಾಗಣಪತಿಯ ಸುಂದರ ದೇವಾಲಯವೂ ಇರುವುದು ಕೋಟೇಶ್ವರ ಕ್ಷೇತ್ರಕ್ಕೆ ಹೆಚ್ಚಿನ ಮೆರಗು ನೀಡಿದೆ.
 
==ಇತಿಹಾಸ==
ಸಪ್ತಕ್ಷೇತ್ರಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿದ ಕೋಟೇಶ್ವರ (ಧ್ವಜಪುರ) ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. [[ಪರಶುರಾಮ]] ಸೃಷ್ಠಿಯ ಪುರಾಣ ಪುಣ್ಯಕ್ಷೇತ್ರಗಳಲ್ಲಿ ಮಧ್ಯಮ ಕ್ಷೇತ್ರವೆಂದು ಕರೆಯುತ್ತಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲೇ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಪುರಾಣ ಕಾಲದಲ್ಲಿ ಧ್ವಜಪುರವೆಂದೂ ವರ್ತಮಾನದಲ್ಲಿ ಕೋಟೇಶ್ವರವೆಂದು ಪ್ರಸಿದ್ಧವಾಗಿದೆ. ಒಂದು ಕಾಲದಲ್ಲಿ ಕೋಟೇಶ್ವರದ ಪರಿಸರವು ಬಹಳ ಬರಗಾಲದಿಂದ ನಡುಗಿಹೋಗಿತ್ತು. ಆಗ ವಿಭಾಂಡ ಋಷಿಯ ಮುಖಂಡತ್ವದಲ್ಲಿ ಒಂದು ಕೋಟಿ ಮುನಿಗಳು ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾರೆ. ಆಗ ಪರಮೇಶ್ವರ ಇಲ್ಲಿ ಕೋಟಿ ಲಿಂಗಗಳ ರೂಪದಲ್ಲಿ ನೆಲೆ ನಿಂತು ಬರಗಾಲ ದೂರ ಮಾಡಿ ಜನರನ್ನು ರಕ್ಷಿಸುತ್ತಾನೆ. ಶಿವನು ಕೋಟಿಲಿಂಗಳಲ್ಲಿ ಐಕ್ಯನಾಗಿದ್ದರಿಂದ ಇಲ್ಲಿನ ಶಿವನನ್ನು ಶ್ರೀ ಕೋಟಿಲಿಂಗೇಶ್ವರನೆಂದು ಕರೆಯುತ್ತೇವೆ. ಆದ್ದರಿಂದ ಈ ಕ್ಷೇತ್ರವನ್ನು ಕೋಟೇಶ್ವರವೆಂದು ಕರೆಯುತ್ತಾರೆ.
"https://kn.wikipedia.org/wiki/ಕೋಟೇಶ್ವರ" ಇಂದ ಪಡೆಯಲ್ಪಟ್ಟಿದೆ