Srinivas ujire

Joined ೨೩ ಏಪ್ರಿಲ್ ೨೦೧೫
ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಪುರಾಣ ಮತ್ತು ಧರ್ಮ
ನಾರ್ವೆ ಭಾಷೆಯ ಪುರಾಣದಲ್ಲಿ, ಭೂಕಂಪಗಳನ್ನು ಲೋಕಿ ದೇವರ ಬಿರುಸಾದ ಹೆಣಗಾಟ ಎಂಬಂತೆ ವಿವರಿಸಲಾಗಿತ್ತು. ಕಿರುಕುಳದ ಮತ್ತು ಸೆಣಸಾಟದ ದೇವರಾದ ಲೋಕಿಯು, ಸೌಂದರ್ಯ ಮತ್ತು ಜ್ಞಾನದ ದೇವರಾದ ಬಾಲ್ದ್‌ರ್‌ನನ್ನು ಕೊಂದಾಗ ಅವನನ್ನು ಗುಹೆಯೊಂದರಲ್ಲಿ ಬಂಧಿಸಿಟ್ಟು, ನಂಜನ್ನು ಕಕ್ಕುತ್ತಿರುವ ವಿಷಯುಕ್ತ ಸರ್ಪವೊಂದನ್ನು ಅವನ ತಲೆಯ ಮೇಲೆ ಇರಿಸುವ ಮೂಲಕ ಅವನನ್ನು ಶಿಕ್ಷಿಸಲಾಯಿತು. ಲೋಕಿಯ ಹೆಂಡತಿಯಾದ ಸೈಜಿನ್ ಅವನ ಪಕ್ಕದಲ್ಲಿ ನಿಂತು, ವಿಷವನ್ನು ಸಂಗ್ರಹಿಸಲು ಕೈನಲ್ಲಿ ಬೋಗುಣಿಯೊಂದನ್ನು ಹಿಡಿದುಕೊಂಡಿರುತ್ತಾಳೆ. ಆದರೆ ಅವಳು ಬೋಗುಣಿಯನ್ನು ಖಾಲಿಮಾಡಬೇಕಾಗಿ ಬಂದಾಗಲೆಲ್ಲಾ, ಲೋಕಿಯ ಮುಖದಮೇಲೆ ವಿಷವು ಜಿನುಗಿ, ಅದರಿಂದ ತಪ್ಪಿಸಿಕೊಳ್ಳಲು ಆತ ತಲೆಯನ್ನು ಎಳೆದುಕೊಳ್ಳಬೇಕಾಗಿ ಬರುವುದರಿಂದ ಹಾಗೂ ಆತನಿಗೆ ಕಟ್ಟಲಾಗಿರುವ ಕಟ್ಟುಗಳಿಂದ ಬಿಡಿಸಿಕೊಳ್ಳಲು ಬಡಿದಾಡುವುದರಿಂದ ಅದು ಭೂಮಿಯ ಕಂಪನಕ್ಕೆ ಕಾರಣವಾಗುತ್ತದೆ.[೩೫] ಗ್ರೀಕ್ ಪುರಾಣದಲ್ಲಿರುವಂತೆ, ಪಾಸಿಡಾನ್‌ ಭೂಕಂಪಗಳಿಗೆ ಕಾರಣನಾಗಿದ್ದ ಮತ್ತು ಅವುಗಳ ದೇವರಾಗಿದ್ದ.ಆತ ಕೆಟ್ಟ ಮನಸ್ಥಿತಿಯಲ್ಲಿದ್ದಾಗ, ನೆಲವನ್ನು ತ್ರಿಶೂಲವೊಂದರಿಂದ ಚುಚ್ಚುತ್ತಿದ್ದ. ಇದರಿಂದಾಗಿ ಭೂಕಂಪ ಮತ್ತು ಇತರ ವಿಕೋಪಗಳು ಉಂಟಾಗುತ್ತಿದ್ದವು. ಜನರನ್ನು ಶಿಕ್ಷಿಸಲು ಹಾಗೂ ಅವರ ಮೇಲೆ ಭಯವನ್ನು ಹೇರಲು ಆತ ಭೂಕಂಪವನ್ನು ಪ್ರತೀಕಾರದ ರೂಪದಲ್ಲಿಯೂ ಬಳಸಿಕೊಂಡ.[೩೬] ಜಪಾನೀಯರ ಪುರಾಣದಲ್ಲಿ, ನಮಝು (鯰) ಒಂದು ದೈತ್ಯ ಬೆಕ್ಕುಮೀನು ಆಗಿದ್ದು ಅದು ಭೂಕಂಪಗಳನ್ನು ಉಂಟುಮಾಡುತ್ತದೆ.ಭೂಮಿಯ ಅಡಿಯಲ್ಲಿನ ಕೆಸರಿನಲ್ಲಿ ನಮಝು ವಾಸಿಸುತ್ತದೆ. ಒಂದು ಕಲ್ಲನ್ನಿಟ್ಟುಕೊಂಡು ಮೀನನ್ನು ಅಂಕೆಯಲ್ಲಿಡುವ ದೇವರಾದ ಕಶಿಮಾ ಈ ನಮಝುವನ್ನು ರಕ್ಷಿಸುತ್ತದೆ. ಕಶಿಮಾ ತನ್ನ ರಕ್ಷಣಾ ಕಾಪನ್ನು ಕೆಳಗೆ ಬೀಳಿಸಿದಾಗ, ನಮಝು ಹೊಯ್ದಾಡಲು ಅಥವಾ ಬಡಿದಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬಿರುಸಾದ ಭೂಕಂಪಗಳು ಸಂಭವಿಸುತ್ತವೆ, ಮುಂತಾದ ನಂಬಿಕೆಗಳಿದ್ದವು.
 
ಮಹಾಭಾರತದಲ್ಲಿ ಭೂಮಿ ಮತ್ತು ಸೃಷ್ಟಿ:-
 
ಮಹಾಭಾರತದ ಈಗಿನ ಕಾವ್ಯವು ಸುಮಾರು ಕ್ರಿಪೂ 4000 ವರ್ಷಗಳ ಹಿಂದೆ ಬರಹರೂಪಕ್ಕೆ ಬಂದಿರಬೇಕೆಂದು ಇತಿಹಾಸಕಾರರು ತೀರ್ಮಾನಿಸಿದ್ದಾರೆ. ಮೂಲಮಹಾಭಾರತ ಪಾಠವು ಸುಮಾರು ಕ್ರಿ ಪೂ. ೮ /೯ ನೇ ಶತಮಾನದಲ್ಲಿ ರಚನೆಯಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಕ್ರಿಶ. ೩೦೦/೪೦೦ ರ ಗುಪ್ತರಕಾಲದಲ್ಲಿ ಈಗಿನ ತಿದ್ದಿದ ಗ್ರಂಥ ರಚನೆ ಯಾಗಿರಬಹುದೆಂಬುದು ಭಾಷಾತಜ್ಞರ ಅಭಿಪ್ರಾಯ. ಖಗೋಲ ವಿಜ್ಞಾನಿ ಆರ್ಯಭಟ್ಟರು (ಕ್ರಿ ಶ.೬ ನೇ ಶತಮಾನ) ಕಲಿಯುಗಾದಿಯನ್ನು ಕ್ರಿ.ಪೂ. ೩೧೦೨ ಫೆಬ್ರವರಿ ೧೮ ಎಂದು ನಿರ್ಧರಿಸಿದ್ದಾರೆ ಮಹಾಭಾರತಯುದ್ಧವು ಅದಕ್ಕಿಂತ ೫೦/೬೦ವರ್ಷಹಿಂದೆ ಆಗಿರಬೇಕು. ೨ನೇ ಪುಲಕೇಶಿಯ ಕಾಲದ ಐಹೊಳೆ ಶಾಸನದಲ್ಲಿ ಶಕ ೫೫೬= ಕಿಪೂ.೬೩೪ ಎಂದರೆ ಭಾರತ (ಕುರುಕ್ಷೇತ್ರ ಯುದ್ಧವು) ನಡೆದು ೩೭೩೫ ವರ್ಷಗಳಾದವೆಂದು ಹೇಳಿದೆ. ಖಗೋಲ ಶಾಸ್ರಜ್ಞರ ವೃದ್ಧ ವರ್ಗ, ವರಾಹಮಿಹಿರರು ಮತ್ತು ಹಿಂದಿನ ಇತಿಹಾಸ ಕಾರ ಕಲ್ಹಣ ರು ಆ ಯುದ್ಧವು ಕ್ರಿ ಪೂ ೨೪೪೯ ವರ್ಷದಲ್ಲಿ (೨೪೪೯+೨೦೧೨ = ೪೪೬೧ ವರ್ಷದ ಹಿಂದೆ) ಆಯಿತೆಂದು ಹೇಳುತ್ತಾರೆ. ಆದರೆ ಈಗಿನ ಇತಿಹಾಸ ಕಾರರು ಮಹಾಭಾರತ ಯುದ್ಧವು ಕ್ರಿ ಪೂ.೧೨ ನೇ ಶತಮಾನ ದಿಂದ ಕ್ರಿ ಪೂ. ೮ ನೇ ಶತಮಾನದ ನಡುವೆ ಕಬ್ಬಿಣ ಯುಗದ ಆರಂಭದಲ್ಲಿ ನಡೆದಿರಬೇಕೆಂದು ಅಭಿಪ್ರಾಯ ಪಡುತ್ತಾರೆ. (ವಿಕಿಪೀಡಿಯಾ ಇಂಗ್ಲಿಷ್- ಮಹಾಭಾರತ) ಹಿಂದೂ ಪಂಚಾಂಗಗಳ ಪ್ರಕಾರ ಕಲಿಯುಗ ಆರಂಭವಾಗಿ ೫೧೦೦ ವರ್ಷ ವಾಗಿದೆ
ಪ್ರಸಿದ್ಧವಾದ ೧೮ ಪುರಾಣಗಳು ಮಹಾಭಾರತ ಕಾವ್ಯ ಅಥವಾ ಇತಿಹಾಸಕ್ಕಿಂತ ಈಚೆಗೆ ರಚನೆಯಾದದ್ದೆಂದು ಇತಿಹಾಸಕಾರರ ಅಭಿಪ್ರಾಯ.
ಕಾಲ ಗಣನೆ ಸಂಪಾದಿಸಿ
ಕಾಲ ೧೯೭,೨೬,೪೯,೧೧೦ ವರ್ಷಗಳ ಹಿಂದೆ
(೨೦೦೯ ಕ್ಕೆ) ೧ ನೇ ಸ್ವಾಯಂಭೂ ಮನುವಿನ ಕಾಲ ? ದೇವಗಣ ಸೃಷ್ಟಿ (ಮಹಾಭಾರತ ಆದಿಪರ್ವ ಅದ್ಯಾಯ ೬೫ ಶ್ಲೋಕ ೨೫೭೪/೧೦) ರಿಂದ)
ಕಲ್ಪ ಆದಿ ಗತ:೧೯೭,೨೬,೪೯,೧೧೦ (ವರ್ಷಗಳ ಹಿಂದೆ)ಕಲಿ ಗತ ೫೧೧೦ವರ್ಷ (೨೦೦೯ಕ್ಕೆ) ಸೃಷ್ಟಿಯ ಆದಿ ಗತ:೧೯೫,೫೮,೮೫೨೧೦,; ವವಸ್ವತ ಮನು ಗತ : ೧,೮೬,೧೮,೮೫೦ (ಮೈಸೂರು ಪಂಚಾಂಗ ರೀತ್ಯಾ). ಇದು ಬ್ರಹ್ಮನ ದ್ವಿತೀಯ ಪರಾರ್ಧ (ಮಧ್ಯಾಹ್ನ ) ಶ್ವೇತ ವರಾಹ ಕಲ್ಪ ( ಅನೇಕ ಯುಗಗಳು ಮತ್ತು ಮನ್ವಂತರಗಳು) ಈಗ ವೈವಸ್ವತ ಮನ್ವಂತರ.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/843445" ಇಂದ ಪಡೆಯಲ್ಪಟ್ಟಿದೆ