Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೧ ನೇ ಸಾಲು:
 
ಭೂಮಿಯ ಕಂಪನದ ಕಾರಣಗಳು :-
 
ಬಹುತೇಕ ಭೂಕಂಪಗಳು ಸಂಭವಿಸುತ್ತವೆಯಾದರೂ, ಮಾನವನ ಚಟುವಟಿಕೆಯೂ ಸಹ ಭೂಕಂಪವನ್ನು ಉಂಟುಮಾಡಬಲ್ಲದು. ಈ ವಿದ್ಯಮಾನಕ್ಕೆ ನಾಲ್ಕು ಪ್ರಮುಖ ಕಾರಣಗಳು ಕೊಡುಗೆಯನ್ನು ನೀಡುತ್ತವೆ. ಅವುಗಳೆಂದರೆ, ಬೃಹತ್ ಅಣೆಕಟ್ಟುಗಳು ಹಾಗೂ ಕಟ್ಟಡಗಳನ್ನು ಕಟ್ಟುವುದು, ಬಾವಿಗಳನ್ನು ಕೊರೆಯುವುದು ಹಾಗೂ ಅವುಗಳಿಗೆ ದ್ರವಪದಾರ್ಥವನ್ನು ಸೇರಿಸುವುದು, ಮತ್ತು ಕಲ್ಲಿದ್ದಲು ಗಣಿಕಾರಿಕೆ ಹಾಗೂ ತೈಲ ನಿಕ್ಷೇಪಗಳಿಗಾಗಿ ಕೊರೆಯುವುದು. ಚೈನಾದ ಸಿಚುವಾನ್ ಪ್ರಾಂತ್ಯದಲ್ಲಿ ಮೇ ತಿಂಗಳಲ್ಲಿ ಸಂಭವಿಸಿದ 2008ರ ಸಿಚುವಾನ್ ಭೂಕಂಪ ಪ್ರಾಯಶಃ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಬಲ್ಲದು. ಈ ಕಂಪನದಿಂದಾಗಿ ೬೯,೨೨೭ ಸಾವುಗಳು ಸಂಭವಿಸಿದ್ದು, ಇದು ಇದುವರೆಗಿನ ಭೂಕಂಪಗಳ ಪೈಕಿ 19ನೇ ಅತ್ಯಂತ ಮಾರಣಾಂತಿಕ ಭೂಕಂಪವಾಗಿದೆ. ದೋಷದ ಒತ್ತಡವನ್ನು1,650 feet (503 m) ಝಿಪಿಂಗ್‌ಪು ಅಣೆಕಟ್ಟು ಹೊಯ್ದಾಡಿಸಿ ತಳ್ಳಿದೆ ಎಂದು ನಂಬಲಾಗಿದ್ದು, ಈ ಒತ್ತಡವೇ ಪ್ರಾಯಶಃ ಭೂಕಂಪದ ಶಕ್ತಿಯನ್ನು ಹೆಚ್ಚಿಸಿ, ಸದರಿ ದೋಷದ ಚಲನೆಯ ದರವನ್ನು ಉತ್ಕರ್ಷಿಸಿದೆ ಎಂದು ಭಾವಿಸಲಾಗಿದೆ.[೨೧] ಆಸ್ಟ್ರೇಲಿಯಾದ ಇತಿಹಾಸದಲ್ಲಿನ ಅತ್ಯಂತ ದೊಡ್ಡ ಭೂಕಂಪಕ್ಕೂ ಮಾನವನ ಪ್ರಚೋದನೆ ಇತ್ತು. ಕಲ್ಲಿದ್ದಲ ಗಣಿಕಾರಿಕೆ ಈ ಭೂಕಂಪಕ್ಕೆ ಕಾರಣವಾಗಿತ್ತು. ನ್ಯೂಕ್ಯಾಸಲ್ ನಗರವನ್ನು ಕಲ್ಲಿದ್ದಲು ಗಣಿಪ್ರದೇಶಗಳ ಬೃಹತ್ ವಿಭಾಗವೊಂದರ ಮೇಲೆ ಕಟ್ಟಲಾಗಿತ್ತು.ದೋಷವೊಂದರಿಂದ ಹುಟ್ಟಿದ ಭೂಕಂಪವು, ಗಣಿಕಾರಿಕೆ ಪ್ರಕ್ರಿಯೆಯಲ್ಲಿ ತೆಗೆದುಹಾಕಲ್ಪಟ್ಟ ಮಿಲಿಯಗಟ್ಟಲೆ ಕಲ್ಲುಬಂಡೆಗಳ ಕಾರಣದಿಂದ ಪುನಶ್ಚೇತನಗೊಂಡಿತು.
 
ಭೂಮಿಯ ಕಂಪನ ಧರ್ಮ ಮತ್ತು ನಂಬಿಕೆ:-
ಪುರಾಣ ಮತ್ತು ಧರ್ಮ
ನಾರ್ವೆ ಭಾಷೆಯ ಪುರಾಣದಲ್ಲಿ, ಭೂಕಂಪಗಳನ್ನು ಲೋಕಿ ದೇವರ ಬಿರುಸಾದ ಹೆಣಗಾಟ ಎಂಬಂತೆ ವಿವರಿಸಲಾಗಿತ್ತು. ಕಿರುಕುಳದ ಮತ್ತು ಸೆಣಸಾಟದ ದೇವರಾದ ಲೋಕಿಯು, ಸೌಂದರ್ಯ ಮತ್ತು ಜ್ಞಾನದ ದೇವರಾದ ಬಾಲ್ದ್‌ರ್‌ನನ್ನು ಕೊಂದಾಗ ಅವನನ್ನು ಗುಹೆಯೊಂದರಲ್ಲಿ ಬಂಧಿಸಿಟ್ಟು, ನಂಜನ್ನು ಕಕ್ಕುತ್ತಿರುವ ವಿಷಯುಕ್ತ ಸರ್ಪವೊಂದನ್ನು ಅವನ ತಲೆಯ ಮೇಲೆ ಇರಿಸುವ ಮೂಲಕ ಅವನನ್ನು ಶಿಕ್ಷಿಸಲಾಯಿತು. ಲೋಕಿಯ ಹೆಂಡತಿಯಾದ ಸೈಜಿನ್ ಅವನ ಪಕ್ಕದಲ್ಲಿ ನಿಂತು, ವಿಷವನ್ನು ಸಂಗ್ರಹಿಸಲು ಕೈನಲ್ಲಿ ಬೋಗುಣಿಯೊಂದನ್ನು ಹಿಡಿದುಕೊಂಡಿರುತ್ತಾಳೆ. ಆದರೆ ಅವಳು ಬೋಗುಣಿಯನ್ನು ಖಾಲಿಮಾಡಬೇಕಾಗಿ ಬಂದಾಗಲೆಲ್ಲಾ, ಲೋಕಿಯ ಮುಖದಮೇಲೆ ವಿಷವು ಜಿನುಗಿ, ಅದರಿಂದ ತಪ್ಪಿಸಿಕೊಳ್ಳಲು ಆತ ತಲೆಯನ್ನು ಎಳೆದುಕೊಳ್ಳಬೇಕಾಗಿ ಬರುವುದರಿಂದ ಹಾಗೂ ಆತನಿಗೆ ಕಟ್ಟಲಾಗಿರುವ ಕಟ್ಟುಗಳಿಂದ ಬಿಡಿಸಿಕೊಳ್ಳಲು ಬಡಿದಾಡುವುದರಿಂದ ಅದು ಭೂಮಿಯ ಕಂಪನಕ್ಕೆ ಕಾರಣವಾಗುತ್ತದೆ.[೩೫] ಗ್ರೀಕ್ ಪುರಾಣದಲ್ಲಿರುವಂತೆ, ಪಾಸಿಡಾನ್‌ ಭೂಕಂಪಗಳಿಗೆ ಕಾರಣನಾಗಿದ್ದ ಮತ್ತು ಅವುಗಳ ದೇವರಾಗಿದ್ದ.ಆತ ಕೆಟ್ಟ ಮನಸ್ಥಿತಿಯಲ್ಲಿದ್ದಾಗ, ನೆಲವನ್ನು ತ್ರಿಶೂಲವೊಂದರಿಂದ ಚುಚ್ಚುತ್ತಿದ್ದ. ಇದರಿಂದಾಗಿ ಭೂಕಂಪ ಮತ್ತು ಇತರ ವಿಕೋಪಗಳು ಉಂಟಾಗುತ್ತಿದ್ದವು. ಜನರನ್ನು ಶಿಕ್ಷಿಸಲು ಹಾಗೂ ಅವರ ಮೇಲೆ ಭಯವನ್ನು ಹೇರಲು ಆತ ಭೂಕಂಪವನ್ನು ಪ್ರತೀಕಾರದ ರೂಪದಲ್ಲಿಯೂ ಬಳಸಿಕೊಂಡ.[೩೬] ಜಪಾನೀಯರ ಪುರಾಣದಲ್ಲಿ, ನಮಝು (鯰) ಒಂದು ದೈತ್ಯ ಬೆಕ್ಕುಮೀನು ಆಗಿದ್ದು ಅದು ಭೂಕಂಪಗಳನ್ನು ಉಂಟುಮಾಡುತ್ತದೆ.ಭೂಮಿಯ ಅಡಿಯಲ್ಲಿನ ಕೆಸರಿನಲ್ಲಿ ನಮಝು ವಾಸಿಸುತ್ತದೆ. ಒಂದು ಕಲ್ಲನ್ನಿಟ್ಟುಕೊಂಡು ಮೀನನ್ನು ಅಂಕೆಯಲ್ಲಿಡುವ ದೇವರಾದ ಕಶಿಮಾ ಈ ನಮಝುವನ್ನು ರಕ್ಷಿಸುತ್ತದೆ. ಕಶಿಮಾ ತನ್ನ ರಕ್ಷಣಾ ಕಾಪನ್ನು ಕೆಳಗೆ ಬೀಳಿಸಿದಾಗ, ನಮಝು ಹೊಯ್ದಾಡಲು ಅಥವಾ ಬಡಿದಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬಿರುಸಾದ ಭೂಕಂಪಗಳು ಸಂಭವಿಸುತ್ತವೆ, ಮುಂತಾದ ನಂಬಿಕೆಗಳಿದ್ದವು.
"https://kn.wikipedia.org/wiki/ಸದಸ್ಯ:Srinivas_ujire" ಇಂದ ಪಡೆಯಲ್ಪಟ್ಟಿದೆ