"ಸೂರ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಕನಿಷ್ಠ ತಾಪ ವಲಯದ ಮೇಲೆ ೨,೦೦೦ ಕಿ.ಮೀ. ದಪ್ಪವಿರುವ ತೆಳುವಾದ ಒಂದು ಪದರವಿದೆ. [[:en:solar eclipse|ಸೂರ್ಯನ ಪೂರ್ಣ ಗ್ರಹಣ]]ದ ಆರಂಭ ಮತ್ತು ಅಂತ್ಯದಲ್ಲಿ ಬಣ್ಣದ ಹೊಳಪಿನಂತೆ ಕಾಣುವ ಈ ವಲಯಕ್ಕೆ ''ವರ್ಣಗೋಳ'' ಎಂದು ಹೆಸರು. ಈ ವಲಯದಲ್ಲಿ ತಾಪಮಾನವು ಎತ್ತರದೊಂದಿಗೆ ಹೆಚ್ಚಾಗಿ, ಸುಮಾರು ೧೦೦,೦೦೦-ಕೆ. ಗಳನ್ನು ತಲುಪುತ್ತದೆ.
 
[[:en:chromosphere|ವರ್ಣಗೋಳ]]ದ ಹೊರಗಿರುವ [[:en:solar transition region|ಪರಿವರ್ತನಾ ವಲಯ]]ದಲ್ಲಿ ತಾಪಮಾನವು ೧೦೦,೦೦೦ ಕೆ. ಯಿಂದ ಪ್ರಭಾವಲಯದ ತಾಪಮಾನದ ಹಾತಿರಕ್ಕೆಹತ್ತಿರ ಕ್ಕೆ (೧೦ ಲಕ್ಷ ಕೆ. ಗಳ ಬಳಿಗೆ) ಏರುತ್ತದೆ. ಹೆಚ್ಚಿನ ತಾಪಮಾನದಲ್ಲಿ ಈ ವಲಯದಲ್ಲಿರುವ [[:en:helium|ಹೀಲಿಯಂ]]ನ [[:en:ionization|ಅಯಾನೀಕರಣ]]ವಾಗಿ ಅದರ [[:en:phase transition|ರೂಪ ಪರಿವರ್ತನೆ]]ಯು ಉಂಟಾಗುವುದರಿಂದ, ತಾಪಮಾನದಲ್ಲಿ ಈ ರೀತಿಯ ಏರಿಕೆಯು ಉಂಟಾಗುತ್ತದೆ. ಪರಿವರ್ತನಾ ವಲಯವು ಒಂದು ಸ್ಥಿರವಾದ ಎತ್ತರದಲ್ಲಿರದೆ, ನಿರಂತರವಾದ ಗೊಂದಲದ ಚಲನೆಯಲ್ಲಿರುತ್ತದೆ. ಈ ವಲಯವು ಭೂಮಿಯ ಮೇಲ್ಮೈಯಿಂದ ಸುಲಭವಾಗಿ ಕಾಣುವುದಿಲ್ಲ. ಬಾಹ್ಯಾಕಾಶದಲ್ಲಿ ಸ್ಥಿತವಾಗಿದ್ದು, [[ಅತಿನೇರಳೆ]] ಕಿರಣಗಳನ್ನು ಗ್ರಾಹಿಸುವ ಉಪಕರಣಗಳಿಂದ ಈ ವಲಯವನ್ನು ನೋಡಬಹುದು.
 
ಸೂರ್ಯನಿಗಿಂತ ಬಹಳಷ್ಟು ಹೆಚ್ಚು ಗಾತ್ರವನ್ನು ಹೊಂದಿರುವ ಸೂರ್ಯನ ಹೊರ-ವಾಯುಮಂಡಲಕ್ಕೆ ಪ್ರಭಾವಲಯ ಎಂದು ಹೆಸರು. [[ಸೌರಮಂಡಲ]] ಮತ್ತು [[:en:heliosphere|ಸೌರಗೋಳ]]ವನ್ನು ವ್ಯಾಪಿಸುವ [[:en:solar wind|ಸೌರ ಮಾರುತ]]ದ ಜೊತೆ ಪ್ರಭಾವಲಯವು ಕ್ರಮೇಣವಾಗಿ ಒಂದಾಗುತ್ತದೆ (ಅಂದರೆ, ಇವೆರಡರ ನಡುವೆ ಸ್ಫುಟವಾದ ಯಾವುದೇ ಮಿತಿರೇಖೆಯಿಲ್ಲ). ಸೂರ್ಯನ ಮೇಲ್ಮೈ ಬಳಿಯಿರುವ ಕೆಳ ಪ್ರಭಾವಲಯವು ಸುಮಾರು ೧೦<sup>೧೪</sup> ಮೀ<sup>-೩</sup>−೧೦<sup>೧೬</sup> ಮೀ.<sup>-೩</sup> ನಷ್ಟು ಸಾಂದ್ರವಾಗಿದೆ (ಸಾಗರದ ಮಟ್ಟದಲ್ಲಿ ಭೂಮಿಯ ವಾಯುಮಂಡಲವು ಸುಮಾರು ೨×೧೦<sup>೨೫</sup> ಮೀ.<sup>−೩</sup> ನಷ್ಟು ಸಾಂದ್ರತೆಯನ್ನು ಹೊಂದಿದೆ) ಪ್ರಭಾವಲಯದ ತಾಪಮಾನವು ಹಲವು ಲಕ್ಷ ಕೆಲ್ವಿನ್‌ಗಳಷ್ಟು ಇರುತ್ತದೆ. ಪ್ರಭಾವಲಯದ ತಾಪಮಾನವನ್ನು ಯಶಸ್ವಿಯಾಗಿ ವಿವರಿಸುವ ಯಾವುದೇ ಸಿದ್ಧಾಂತವು ಇನ್ನೂ ಇಲ್ಲದಿದ್ದರೂ, ಪ್ರತ್ಯೇಕ ಕಾಂತಕ್ಷೇತ್ರ ವ್ಯವಸ್ಥೆಗಳ [[:en:magnetic reconnection|ಒಡನಾಟ]]ದಿಂದ ಸ್ವಲ್ಪ ಶಾಖೋತ್ಪತ್ತಿ ಆಗುತ್ತದೆಯೆಂದು ತಿಳಿದುಬಂದಿದೆ.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/842376" ಇಂದ ಪಡೆಯಲ್ಪಟ್ಟಿದೆ