ಅಕಾಡೆಮಿ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾದ ಆಸ್ಕರ್ ಪುರಸ್ಕಾರ
 
ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ ೧೯೨೭ ರಲ್ಲಿ ಸ್ಥಾಪನೆಯಾದ `ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ಸ್ ಆÀ್ಯಡ್ ಸೈನ್ಸ್'(AMPAS) ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲವಾಗಿದೆ. ಈ ಸಂಸ್ಥೆಯಿಂದಲೇ ಆಸ್ಕರ್ ಪುರಸ್ಕಾರವನ್ನು ಕೋಡಲಾರಂಭಿಸಿತು. ಚಲನಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆಸ್ಕರ್ ಪುರಸ್ಕಾರದ ಮೂದಲ ಸಮಾರಂಭವು ಮೇ-೧೬ ೧೯೨೯ರಂದು ಹಾಲಿವುಡ್ ರೂಸ್ವೆಲ್ಟ್ ಹೋಟಲಿನಲ್ಲಿ ೨೭೦ ಪ್ರೇಕ್ಷಕರ ಎದುರು ಜರುಗಿತು. ಆಸ್ಕರ್ ಸಮಯ ಕಳೆದಂತೆ ತನ್ನ ಚಾಪನ್ನು ವಿಶ್ವದೆಲ್ಲಡೆ ಪಸರಿಸುತ್ತಾ, ಅದರೂಟ್ಟಿಗೆ ಪ್ರಶಸ್ತಿಯ ವರ್ಗಗಳನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಮತ್ತು ನಟಿ, ಅತ್ಯತ್ತಮ ಚಿತ್ರಕಥೆ, ಅತ್ಯುತ್ತಮ ಆನಿಮೇಟಿಡ್ ವೈಶಿಷ್ಟ, ಅತ್ಯುತ್ತಮ ಕಿರುಚಿತ್ರ, ಹೀಗೆ ಪ್ರಸ್ತುತ ೨೪ ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
==ಆಸ್ಕರ್ ಸಂಕ್ಷೀಪ್ತ ಮಾಹಿತಿ==
ಇದು ಒಂಬತ್ತು ಅಕಾಡೆಮಿ ಪುರಸ್ಕಾರಗಳಲ್ಲಿ ಒಂದಾಗಿದೆ.ಆಸ್ಕರ್ ಕಿರುಪ್ರತಿಮೆ’ಯನ್ನು `ಅಕ್ಯಾಡೆಮಿ ಅವಾರ್ಡ್ ಆಫ ಮೆರಿಟ್’ ಎಂದು ಕರೆಯಲಾಗಿದೆ.ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರಧಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ [[ದೂರದರ್ಶನ]]ದ ಮೂಲಕ ನೇರಪ್ರಸಾರ ಮಾಡಲಾಗುತ್ತಿದ.ಇದರ ಸಂವಾದಿ ಪುರಸ್ಕಾರಗಳೆಂದರೆ (ಸಂಗೀತಕ್ಕೆ) [[ಗ್ರ್ಯಾಮಿ ಪುರಸ್ಕಾರ]], ‘ಟೆಲಿವಿಷನ್’ಗೆ [[ಎಮ್ಮಿ ಪುರಸ್ಕಾರ]] ಮತ್ತು (ರಂಗಕ್ಷೇತ್ರಕ್ಕೆ) [[ಟೋನಿ ಪುರಸ್ಕಾರ]].ಈ ಸಂಸ್ಥೆ ಸಿನಿಮಾ ಉದ್ಯಮದ ಬಗ್ಗೆ ಜನಾಭಿಪ್ರಾಯ ಸುಧಾರಿಸುವಂತೆ ಮಾಡುತ್ತದೆ.ಚಲನಚಿತ್ರ ಕ್ಷೇತ್ರದಲ್ಲಿ ಮಹತ್ತ್ವಪುರ್ಣ ಕೊಡುಗೆ ನೀಡಿದ ಗಣ್ಯರು ಇದರ ಸದಸ್ಯರಾಗಿರುತ್ತಾರೆ. ಇವರು AMPASನ ಆಡಳಿತ ಮಂಡಳಿಯ ಸದಸ್ಯರು.ಅನೇಕ ವರ್ಷಗಳ ಕಾಲ ಸೋಮವಾರ ರಾತ್ರಿ 9 ಗಂಟೆಗೆ (ಪೂರ್ವ ಪೆಸಿಫಿಕ್ ಕಾಲಮಾನ) ನಡೆಯುತ್ತಿದ್ದ ಸಮಾರಂಭವು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು, 1999ರಿಂದ ಈಚೆಗೆ ಭಾನುವಾರದಂದು ರಾತ್ರಿ 8.30 ಗಂಟೆಗೆ ನಡೆಯುತ್ತಿದೆ.
"https://kn.wikipedia.org/wiki/ಅಕಾಡೆಮಿ_ಪ್ರಶಸ್ತಿ" ಇಂದ ಪಡೆಯಲ್ಪಟ್ಟಿದೆ